ಬಿಹಾರ ವಿಧಾನಸಭೆ ಚುನಾವಣೆಯ ಮತ ಎಣಿಕೆ ಪ್ರಕ್ರಿಯೆಯು ಇಂದು ಬೆಳಿಗ್ಗೆ ಪ್ರಾರಂಭವಾಗಿದೆ. ಬಿಹಾರದ ಅಧಿಕಾರ ಮತ್ತೆ ಬಿಜೆಪಿ-ಜೆಡಿಯು ಒಕ್ಕೂಟಕ್ಕೆ ಸೇರಲಿದೆಯೇ ಅಥವಾ ವಿರೋಧ ಪಕ್ಷಗಳ ಮಹಾಘಟಬಂಧನ್‌ಗೆ ಪಾಲಾಗಲಿದೆಯೇ ಎಂಬುದು ಇಂದು ಸಂಜೆಯೊಳಗೆ ಸ್ಪಷ್ಟವಾಗಲಿದೆ. ಹಲವು ಎಕ್ಸಿಟ್ ಪೋಲ್‌ಗಳು ಎನ್‌ಡಿಎ ಸುಲಭವಾಗಿ ಗೆಲ್ಲಲಿದೆ ಎಂದು ಹೇಳಿಕೊಂಡಿದೆ. 243 ಸ್ಥಾನಗಳಲ್ಲಿ 146 ಸ್ಥಾನಗಳನ್ನು ಪಡೆಯಬಹುದು, ಅಂದರೆ ಬಹುಮತಕ್ಕಿಂತ 24 ಸ್ಥಾನಗಳು ಅಧಿಕ ಪಡೆಯಬಹುದು ಎಂದು ಹೇಳಿದೆ. ವಿಪಕ್ಷಗಳ ಮಹಾಘಟನಬಂಧನ್ ಕೇವಲ 92 ಸ್ಥಾನಗಳನ್ನು ಪಡೆಯುವ ನಿರೀಕ್ಷೆಯಿದೆ ಎಂದು ಎನ್‌ಡಿಟಿವಿ ಸೇರಿದಂತೆ ಹಲವು ಎಕ್ಸಿಟ್ ಪೋಲ್‌ಗಳು ಹೇಳಿದೆ. ಆದರೆ ಆಕ್ಸಿಸ್ ಮೈ ಇಂಡಿಯಾ, ವೋಟ್ ವೈಬ್ ಮತ್ತು ಚಾಣಕ್ಯ ತಂತ್ರ ಸೇರಿದಂತೆ ಇನ್ನು ಕೆಲವು ಎಕ್ಸಿಟ್ ಪೋಲ್‌ಗಳು ಎನ್‌ಡಿಎ ಮತ್ತು ಮಹಾಘಟಬಂಧನ್ ನಡುವೆ ಜಿದ್ದಾಜಿದ್ದಿಯ ಸ್ಪರ್ಧೆ ಇರಲಿದೆ ಎಂದು ಹೇಳಿದೆ.
ಬಿಹಾರ ಚುನಾವಣೆ: ಎನ್‌ಡಿಎ ಮುನ್ನಡೆ
Date:




