ಗ್ರೀನ್‌ಲ್ಯಾಂಡ್‌ಅನ್ನು ತನ್ನ ವಶಕ್ಕೆ ಪಡೆಯಲು ಅಮೆರಿಕ ಯತ್ನಿಸುತ್ತಿದೆ. ಅಮೆರಿಕ ಧೋರಣೆಯನ್ನು ಹಲವು ರಾಷ್ಟ್ರಗಳು ವಿರೋಧಿಸಿವೆ. ಅವುಗಳಲ್ಲಿ ನ್ಯಾಟೋ ಸಮಸ್ಯ ರಾಷ್ಟ್ರಗಳೂ ಸೇರಿವೆ. ವಿರೋಧವನ್ನು ಹತ್ತಿಕ್ಕಲು ಮುಂದಾಗಿರುವ ಟ್ರಂಪ್, ತನ್ನ ಧೋರಣೆಗೆ ವಿರೋಧ ವ್ಯಕ್ತಪಡಿಸಿದ ಯುರೋಪಿನ ಎಂಟು ರಾಷ್ಟ್ರಗಳ ಮೇಲೆ 10% ಸುಂಕ ಹೇರಿರುವುದಾಗಿ ಘೋಷಿಸಿದ್ದಾರೆ.
ಶನಿವಾರ, ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಂಚಿಕೊಂಡಿರುವ ಟ್ರಂಪ್, “ಡೆನ್ಮಾರ್ಕ್, ನಾರ್ವೆ, ಸ್ವೀಡನ್, ಫ್ರಾನ್ಸ್, ಜರ್ಮನಿ, ಬ್ರಿಟನ್, ನೆದರ್‌ಲ್ಯಾಂಡ್ಸ್ ಹಾಗೂ ಫಿನ್‌ಲ್ಯಾಂಡ್ ಮೇಲೆ ಶೇ.10ರಷ್ಟು ಹೆಚ್ಚಿನ ತೆರಿಗೆ ಹೇರಲಾಗಿದೆ. ಹೊಸ ಸುಂಕವು ಫೆಬ್ರವರಿಯಿಂದ ಜಾರಿಗೆ ಬರಲಿದೆ” ಎಂದು ಹೇಳಿದ್ದಾರೆ.
ಅಲ್ಲದೆ, “ಜೂನ್ 1ರೊಳಗೆ ಗ್ರೀನ್‌ಲ್ಯಾಂಡ್ ಸಂಪೂರ್ಣವಾಗಿ ಅಮೆರಿಕ ವಶಕ್ಕೆ ಬಾರದಿದ್ದರೆ, ಈ ಸುಂಕವನ್ನು 25%ಗೆ ಹೆಚ್ಚಿಸಲಾಗುತ್ತದೆ” ಎಂದು ಬೆದರಿಕೆ ಹಾಕಿದ್ದಾರೆ.




