ಮಹಿಳಾ ಪ್ರೀಮಿಯರ್ ಲೀಗ್ 2026ರ (WPL 2026) ಮುಗಿದಿದ್ದು, ಈ ಬಾರಿಯೂ ಸ್ಮೃತಿ ಮಂಧಾನ ನೇತೃತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಚಾಂಪಿಯನ್ ಆಗಿದೆ. ಫೈನಲ್‌ನ ವಿಜೇತರು 6 ಕೋಟಿ ರೂ.ಗಳ ಬಹುಮಾನವನ್ನು ಪಡೆದಿದ್ದು, ಕಳೆದ ವರ್ಷದಷ್ಟೇ ಬಹುಮಾನ ಮೊತ್ತವನ್ನು ನೀಡಲಾಗಿದೆ. 2025ರ ಫೈನಲ್‌ನಲ್ಲಿ ಪ್ರಶಸ್ತಿ ಗೆದ್ದ ನಂತರ ಮುಂಬೈ ಇಂಡಿಯನ್ಸ್‌ಗೆ ನೀಡಲಾದ ಬಹುಮಾನದ ಹಣವೂ ಆರು ಕೋಟಿ ರೂಪಾಯಿ ಆಗಿತ್ತು. ಹಾಗೆಯೇ ಅದಕ್ಕೂ ಹಿಂದೆ ಆರ್‌ಸಿಬಿ ಗೆದ್ದಾಗಲೂ ಅಷ್ಟೇ ಮೊತ್ತವನ್ನು ನೀಡಲಾಗಿತ್ತು.

ಪತ್ರಕರ್ತೆ, 2019ರಿಂದ ಪತ್ರಿಕೋದ್ಯಮವೇ ಬದುಕು. ರಾಜಕೀಯ, ಬ್ಯುಜಿನೆಸ್ ಸುದ್ದಿಗಳಲ್ಲಿ ಆಸಕ್ತಿ.



