ಸಿಇಟಿ 2026 (KCET) ಅರ್ಜಿ ಸಲ್ಲಿಕೆ, ಶುಲ್ಕ ಪಾವತಿ ಅವಧಿಯನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರವು (KEA) ಅಧಿಕೃತವಾಗಿ ವಿಸ್ತರಿಸಿದೆ. ಸರ್ವರ್ ದಟ್ಟಣೆಯ ಸಮಸ್ಯೆಯಿಂದಾಗಿ ದಿನಾಂಕ ವಿಸ್ತರಿಸಲು ಹಲವು ವಿದ್ಯಾರ್ಥಿಗಳು ಮನವಿ ಮಾಡಿದ್ದರು. ಅರ್ಜಿ ಸಲ್ಲಿಸಲು ಫೆಬ್ರವರಿ 22, ಅರ್ಜಿ ಶುಲ್ಕ ಪಾವತಿಸಲು ಫೆಬ್ರವರಿ 24ರಂದು ಕೊನೆಯ ದಿನಾಂಕವಾಗಿದೆ. ಹಾಗೆಯೇ ಏಪ್ರಿಲ್ 23, 24 ಸಿಇಟಿ ಪರೀಕ್ಷಾ ದಿನಾಂಕಗಳಾಗಿವೆ. ಈ ಹಿಂದೆ ಅರ್ಜಿ ಸಲ್ಲಿಸಲು ಫೆಬ್ರವರಿ 17 ಕೊನೆಯ ದಿನಾಂಕವಾಗಿತ್ತು.

ಪತ್ರಕರ್ತೆ, 2019ರಿಂದ ಪತ್ರಿಕೋದ್ಯಮವೇ ಬದುಕು. ರಾಜಕೀಯ, ಬ್ಯುಜಿನೆಸ್ ಸುದ್ದಿಗಳಲ್ಲಿ ಆಸಕ್ತಿ.




