ಇರಾನ್ ಮೇಲೆ ಅಮೆರಿಕ ಮತ್ತು ಇಸ್ರೇಲ್ ದಾಳಿ ನಡೆಸಿದ ಬಳಿಕ ಪ್ರತೀಕಾರವಾಗಿ ಇರಾನ್, ಇಸ್ರೇಲ್ ಮತ್ತು ಗಲ್ಫ್ ರಾಷ್ಟ್ರಗಳಲ್ಲಿರುವ ಅಮೆರಿಕದ ಮಿಲಿಟರಿ ನೆಲೆಗಳ ಮೇಲೆ ದಾಳಿ ನಡೆಸಿದೆ. ಇದರಿಂದಾಗಿ ಸದ್ಯ ಜಾಗತಿಕವಾಗಿ ಉದ್ವಿಗ್ನತೆ ಉಂಟಾಗಿದ್ದು, ಇಂಧನ ಪೂರೈಕೆ ಸರಪಳಿಗೆ ಅಡ್ಡಿಯುಂಟಾಗಿದೆ. ಸೋಮವಾರ ತೈಲ ಬೆಲೆಗಳು ತೀವ್ರವಾಗಿ ಏರಿಕೆ ಕಂಡಿದೆ. ಪರ್ಷಿಯನ್ ಕೊಲ್ಲಿಯ ಕಿರಿದಾದ ಹಾರ್ಮುಜ್ ಜಲಸಂಧಿಯ ಮೂಲಕ ಪ್ರಯಾಣಿಸುವ ಎರಡು ಹಡಗುಗಳ ಮೇಲೆ ದಾಳಿ ನಡೆದಿದೆ. ಇತರೆಗಳಲ್ಲೂ ದಾಳಿಗಳು ನಡೆದಿದೆ. ಇದರಿಂದಾಗಿ ವಿಶ್ವದ ಇತರ ಭಾಗಗಳಿಗೆ ತೈಲವನ್ನು ರಫ್ತು ಮಾಡುವ ದೇಶಗಳಿಗೆ ಪೂರೈಕೆಗೆ ತೊಂದರೆ ಉಂಟಾಗಿದೆ. ಇಂಧನ ತಜ್ಞರ ಪ್ರಕಾರ, ಯುದ್ಧ ಇದೇ ರೀತಿ ಮುಂದುವರೆದರೆ ಕಚ್ಚಾ ತೈಲ ಮತ್ತು ಗ್ಯಾಸೋಲಿನ್ ಬೆಲೆಗಳು ಇನ್ನೂ ಅಧಿಕವಾಗಲಿದೆ.





