ಸೋಷಿಯಲ್ ಮೀಡಿಯಾಗಳಲ್ಲಿ ವ್ಯಾಪಕವಾಗಿ ದ್ವೇಷ ಹರಡುವುದರಲ್ಲೇ ಕುಖ್ಯಾತಿ ಪಡೆದಿರುವ ರಾಜಸ್ಥಾನದ ‘ಜೈಪುರ್ ಡೈಲಾಗ್ಸ್’ನ ನಿರ್ದೇಶಕನಿಗೆ ಕಾಂಗ್ರೆಸ್ ಲೋಕಸಭಾ ಟಿಕೆಟ್ ನೀಡಿದ್ದು, ದೇಶಾದ್ಯಂತ ವಿವಾದಕ್ಕೆ ಕಾರಣವಾದ ಬೆನ್ನಲ್ಲೇ, ಭಾನುವಾರ ಜೈಪುರ ಕ್ಷೇತ್ರದ ಅಭ್ಯರ್ಥಿಯನ್ನು ಬದಲಾಯಿಸಿದೆ.
ಕಾಂಗ್ರೆಸ್ ಸೇರಿದಂತೆ ಧರ್ಮಾಧಾರಿತ ದ್ವೇಷ ಹರಡುವ ಕೆಲಸ ಮಾಡುತ್ತಿರುವ thejaipurdialogues.comನ ಪಾಲುದಾರ ಹಾಗೂ ನಿರ್ದೇಶಕನೂ ಆಗಿರುವ ಸುನಿಲ್ ಶರ್ಮಾಗೆ ಜೈಪುರ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯನ್ನಾಗಿ ಕಾಂಗ್ರೆಸ್ ಆಯ್ಕೆ ಮಾಡಿತ್ತು. ಇದು ಭಾರೀ ಈಗ ವಿವಾದಕ್ಕೆ ಕಾರಣವಾಗಿತ್ತು. ಇದು ದೊಡ್ಡ ಸುದ್ದಿಯಾದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಹೈಕಮಾಂಡ್, ಸುನಿಲ್ ಶರ್ಮಾರನ್ನು ಬದಲಿಸಿದೆ. ಇವರ ಬದಲಿಗೆ ಈ ಕ್ಷೇತ್ರಕ್ಕೆ ನೂತನ ಕಾಂಗ್ರೆಸ್ ಅಭ್ಯರ್ಥಿಯಾಗಿ ಪ್ರತಾಪ್ ಸಿಂಗ್ ಖಚರಿಯಾವಾಸ್ ಅವರ ಹೆಸರನ್ನು ಪ್ರಕಟಿಸಿದೆ.
Breaking: After Social media outrage over Jaipur Dialogues Director Sunil Sharma, Congress changes its candidate and nominates Pratap Singh Khachariyawas from Jaipur. @kharge @RahulGandhi @priyankagandhi @kcvenugopalmp https://t.co/uFjacNVski pic.twitter.com/AY5Q6IXl17
— Mohammed Zubair (@zoo_bear) March 24, 2024
ಈ ನಡುವೆ ಸುದ್ದಿಗೋಷ್ಠಿ ಕರೆದು ಮಾತನಾಡಿರುವ ವಿವಾದಿತ ಅಭ್ಯರ್ಥಿ ಸುನಿಲ್ ಶರ್ಮಾ, ಮುಂದಿನ ಲೋಕಸಭಾ ಚುನಾವಣೆಯಲ್ಲಿ ನನಗೆ ಜೈಪುರ ಕ್ಷೇತ್ರದಿಂದ ನನಗೆ ಕಾಂಗ್ರೆಸ್ ಟಿಕೆಟ್ ನೀಡಲಾಗಿತ್ತು. ಆದರೆ ಕೆಲವರು ಕುತಂತ್ರ ಮಾಡಿದ್ದು, ನಾನು ‘ಜೈಪುರ್ ಡೈಲಾಗ್ಸ್’ನ ನಿರ್ದೇಶಕ ಎಂದು ಆರೋಪ ಹೊರಿಸಲಾಗಿದೆ. ಇದು ನನ್ನ ವಿರುದ್ಧದ ಷಡ್ಯಂತ್ರವಷ್ಟೇ. ನಾನು ‘ಜೈಪುರ್ ಡೈಲಾಗ್ಸ್’ನ ನಿರ್ದೇಶಕನಾಗಿಲ್ಲ. ಅದರಲ್ಲಿ ಕೇವಲ ಇಬ್ಬರಷ್ಟೇ ನಿರ್ದೇಶಕರಿದ್ದಾರೆ. ಆ ಇಬ್ಬರಲ್ಲಿ ನಾನಿಲ್ಲ. ಆದರೂ ನಾನು ಮುಂದಿನ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಉಮೇದುವಾರಿಕೆಯಿಂದ ಹಿಂದೆ ಸರಿಯುತ್ತೇನೆ” ಎಂದು ತಿಳಿಸಿದ್ದಾರೆ.
ಯಾರು ಈ ಸುನಿಲ್ ಶರ್ಮಾ?
ಸೋಷಿಯಲ್ ಮೀಡಿಯಾಗಳಲ್ಲಿ ವ್ಯಾಪಕವಾಗಿ ದ್ವೇಷ ಹರಡುವುದರಲ್ಲೇ ಕುಖ್ಯಾತಿ ಪಡೆದಿರುವ ರಾಜಸ್ಥಾನದ ‘ಜೈಪುರ್ ಡೈಲಾಗ್ಸ್’ನ ನಿರ್ದೇಶಕ ಎಂಬ ಆರೋಪ ಕಾಂಗ್ರೆಸ್ ಲೋಕಸಭಾ ಟಿಕೆಟ್ ಪಡೆದಿದ್ದ ಸುನಿಲ್ ಶರ್ಮಾ ಮೇಲಿತ್ತು.
— Sunil Sharma (@I_SunilSharma) March 24, 2024
ಈ ಬಗ್ಗೆ ಟ್ವೀಟ್ ಮೂಲಕ ಗಮನ ಸೆಳೆದಿದ್ದ ಆಲ್ಟ್ ನ್ಯೂಸ್ ಸಹಸಂಸ್ಥಾಪಕ, ದ್ವೇಷ ಹರಡುವವರ ವಿರುದ್ಧ ನಿರಂತರ ಬೇಟೆಯಾಡುತ್ತಿರುವ ಮುಹಮ್ಮದ್ ಝುಬೈರ್, “ಜೈಪುರ್ ಡೈಲಾಗ್ಸ್ನ ಪಾಲುದಾರ ಹಾಗೂ ನಿರ್ದೇಶಕ ಸುನೀಲ್ ಶರ್ಮಾ ಅವರಿಗೆ ಕಾಂಗ್ರೆಸ್ ಟಿಕೆಟ್ ನೀಡಿದೆ. ಆಹಾ. ಇದು ಅದ್ಭುತವೇ ಸರಿ” ಎನ್ನುವ ಮೂಲಕ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಕಾಂಗ್ರೆಸ್ ಮುಖಂಡರಾದ ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಅವರನ್ನು ಟ್ಯಾಗ್ ಮಾಡಿದ್ದರು. ಈ ಟ್ವೀಟ್ನ ಬಳಿಕ ಕಾಂಗ್ರೆಸ್ನ ಹಿರಿಯ ಮುಖಂಡ ಶಶಿ ತರೂರ್ ಕೂಡ ಪಕ್ಷದ ಮುಖಂಡರ ನಡೆಯನ್ನೇ ಪ್ರಶ್ನಿಸಿದ್ದರು.
Wow! So Congress has given a ticket to Sunil Sharma, Partner and Director of @JaipurDialogues.
Hello @kharge @RahulGandhi @priyankagandhi, This handle @JaipurDialogues is one of the most hateful X handles. Most content against religion and Congress. pic.twitter.com/1Nk04nFeF4
— Mohammed Zubair (@zoo_bear) March 23, 2024
ಝುಬೈರ್ ಅವರು ಹಂಚಿಕೊಂಡಿರುವ ವೀಡಿಯೋದಲ್ಲಿ ರಾಜಸ್ಥಾನ್ ಚೌಕ್ ಎಂಬ ಡಿಜಿಟಲ್ ಮೀಡಿಯಾದ ವರದಿಗಾರರೊಬ್ಬರು ಸುನಿಲ್ ಶರ್ಮಾ ಅವರನ್ನು ಜೈಪುರ್ ಡೈಲಾಗ್ಸ್ ಬಗ್ಗೆ ಪ್ರಶ್ನಿಸಿದ್ದಕ್ಕೆ, ಸುನಿಲ್ ಶರ್ಮಾ ಕ್ಯಾಮೆರಾದಿಂದ ತಪ್ಪಿಸಿಕೊಂಡು ಹೋಗುವುದು ದೃಶ್ಯಗಳಲ್ಲಿ ಸೆರೆಯಾಗಿತ್ತು.
ಇದನ್ನು ಓದಿದ್ದೀರಾ? ರಾಜಸ್ಥಾನ | ನಿರಂತರ ದ್ವೇಷ ಹರಡುವ ‘ಜೈಪುರ್ ಡೈಲಾಗ್ಸ್’ನ ನಿರ್ದೇಶಕನಿಗೆ ಕಾಂಗ್ರೆಸ್ ಟಿಕೆಟ್!
‘ಜೈಪುರ್ ಡೈಲಾಗ್ಸ್’ ಬಲಪಂಥೀಯ ವಿಚಾರಧಾರೆ, ದ್ವೇಷವನ್ನು ವೆಬ್ಸೈಟ್ ಸೇರಿದಂತೆ ಸೋಷಿಯಲ್ ಮೀಡಿಯಾಗಳಲ್ಲಿ ಹಂಚುವಲ್ಲಿ ಕುಖ್ಯಾತಿ ಪಡೆದಿದೆ. ಇವರ ಯೂಟ್ಯೂಬ್ ಚಾನೆಲ್ ಸುಮಾರು 14 ಲಕ್ಷ Subcribers ಅನ್ನು ಕೂಡ ಹೊಂದಿದೆ. ಇದಕ್ಕೆ ಐವರು ನಿರ್ದೇಶಕರಿದ್ದು, ಅದರಲ್ಲಿ ಸುನಿಲ್ ಶರ್ಮಾ ಕೂಡ ಒಬ್ಬರು ಎಂಬುದೇ ವಿವಾದಕ್ಕೆ ಕಾರಣವಾಗಿತ್ತು.





