ನನ್ನ ಮತ | ಕೋಮುವಾದಿ ಶಕ್ತಿಗಳನ್ನು ಹತ್ತಿಕ್ಕಲು ಇರುವ ಏಕೈಕ ಮಾರ್ಗ ಮತದಾನ

Date:

'ನನ್ನ ಮತ' ಅಂಕಣದಲ್ಲಿ ಚುನಾವಣೆ ಮುಗಿಯುವವರೆಗೂ ವಿವಿಧ ಕ್ಷೇತ್ರಗಳ ಪ್ರಮುಖ ವ್ಯಕ್ತಿಗಳ ಅಭಿಪ್ರಾಯ ಪ್ರಕಟವಾಗುತ್ತದೆ. ಇಲ್ಲಿದೆ ಹಿರಿಯ ಸಾಹಿತಿ ಎಲ್ ಎನ್ ಮುಕುಂದರಾಜು ಅವರ ಅಭಿಪ್ರಾಯ.
  1. ಮತ ಚಲಾವಣೆ ಎಷ್ಟು ಮುಖ್ಯ?

ದೇಶದ ಪ್ರಜೆಗಳಿಗೆ ಸಂವಿಧಾನ ಕೊಟ್ಟ ಬಹುದೊಡ್ಡ ಶಕ್ತಿಯೇ ಮತದಾನ. ದೇವರು ಧರ್ಮದ ಹೆಸರಿನಲ್ಲಿ ಕೋಮುವಾದಿ ಶಕ್ತಿಗಳು ಇಂದು ಸಂವಿಧಾನ ನಾಶಕ್ಕೆ ಮುಂದಾಗಿವೆ. ಅವುಗಳನ್ನು ಹತ್ತಿಕ್ಕಲು ನಮಗಿರುವ ಏಕೈಕ ಮಾರ್ಗ ಮತ ಚಲಾವಣೆ.

  1. ಈ ಬಾರಿಯ ಚುನಾವಣೆ ಏಕೆ ಮುಖ್ಯ?

ಕಳೆದ 70 ವರ್ಷಗಳಿಂದ ಈ ದೇಶದ ಹಿರಿಯರು ಸಂಪಾದಿಸಿದ ಎಲ್ಲ ಸಂಪತ್ತನ್ನು ಡಬ್ಬಲ್ ಇಂಜಿನ್ ಸರ್ಕಾರ ಪರಭಾರೆ ಮಾಡುತ್ತಿದೆ. ಈ ಚುನಾವಣೆಯಲ್ಲಿ ಮತದಾರರು ಕಣ್ಣು ಮುಚ್ಚಿ ಕುಳಿತರೆ, ಇಡೀ ದೇಶವೇ ಹರಾಜಾಗುವ ಸಾಧ್ಯತೆ ಇದೆ.

  1. ಬರಲಿರುವ ಸರ್ಕಾರ ಹೇಗಿರಬೇಕೆಂದು ಬಯಸುವಿರಿ?

ಪರಂಪರಾಗತವಾಗಿ ಕನ್ನಡಿಗರು ಸಹನಶೀಲ ಹಾಗೂ ಸೌಹಾರ್ದ ಪ್ರಿಯರು. ಜಾತಿ, ಮತ, ಧರ್ಮಗಳ ಭಿನ್ನವಿಲ್ಲದೆ, ಎಲ್ಲರೂ ಕೂಡಿ ಸರ್ವ ಜನಾಂಗದ ಶಾಂತಿಯ ತೋಟವನ್ನು ಕಟ್ಟುವ ಗುಣವುಳ್ಳವರು. ಇದು ಪ್ರಜಾಪ್ರಭುತ್ವದ ಮೂಲ ಧೋರಣೆ. ಪ್ರಜೆಗಳ ಈ ಆಶಯವನ್ನು ಕಾರ್ಯಗತಗೊಳಿಸುವ ಸರ್ಕಾರವೇ ನಮ್ಮ ಆಯ್ಕೆ.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ನನ್ನ ಮತ | ಅಧಿಕಾರ ವಂಚಿತರಿಗೆ ರಾಜಕೀಯ ಸ್ಥಾನಮಾನ ನೀಡುವಂಥ ಸರ್ಕಾರ ಬರಬೇಕು

ʼನನ್ನ ಮತʼ ಅಂಕಣದಲ್ಲಿ ಚುನಾವಣೆ ಮುಗಿಯುವವರೆಗೂ ವಿವಿಧ ಕ್ಷೇತ್ರಗಳ ಪ್ರಮುಖ ವ್ಯಕ್ತಿಗಳ...

ನನ್ನ ಮತ | ದ್ವೇಷ ಬೆಳೆಸುವವರನ್ನು ಸೋಲಿಸುವ ದೃಷ್ಟಿಯಿಂದ ಮತದಾನ ಮುಖ್ಯ

‘ನನ್ನ ಮತ’ ಅಂಕಣದಲ್ಲಿ ಚುನಾವಣೆ ಮುಗಿಯುವವರೆಗೂ ವಿವಿಧ ಕ್ಷೇತ್ರದ ಪ್ರಮುಖ ವ್ಯಕ್ತಿಗಳ...

ನನ್ನ ಮತ | ಸಂವಿಧಾನದ ಉಳಿವಿಗೆ, ಪ್ರಜಾಸತ್ತೆಯ ರಕ್ಷಣೆಗೆ ಮತದಾನ ಮಾಡೋಣ

ʼನನ್ನ ಮತʼ ಅಂಕಣದಲ್ಲಿ ಚುನಾವಣೆ ಮುಗಿಯುವವರೆಗೂ ವಿವಿಧ ಕ್ಷೇತ್ರದ ಪ್ರಮುಖ ವ್ಯಕ್ತಿಗಳ...

ನನ್ನ ಮತ | ಅಧಿಕಾರರಹಿತ ದಮನಿತರಲ್ಲಿ ಆತ್ಮವಿಶ್ವಾಸ ತುಂಬುವ ತಾಯ್ತನದ ಸರಕಾರ ಬರಬೇಕಿದೆ

ʼನನ್ನ ಮತʼ ಅಂಕಣದಲ್ಲಿ ಚುನಾವಣೆ ಮುಗಿಯುವವರೆಗೂ ವಿವಿಧ ಕ್ಷೇತ್ರಗಳ ಪ್ರಮುಖ ವ್ಯಕ್ತಿಗಳ...