ನನ್ನ ಮತ | ಅಧಿಕಾರ ವಂಚಿತರಿಗೆ ರಾಜಕೀಯ ಸ್ಥಾನಮಾನ ನೀಡುವಂಥ ಸರ್ಕಾರ ಬರಬೇಕು

Date:

ʼನನ್ನ ಮತʼ ಅಂಕಣದಲ್ಲಿ ಚುನಾವಣೆ ಮುಗಿಯುವವರೆಗೂ ವಿವಿಧ ಕ್ಷೇತ್ರಗಳ ಪ್ರಮುಖ ವ್ಯಕ್ತಿಗಳ ಅಭಿಪ್ರಾಯಗಳು ಪ್ರಕಟವಾಗುತ್ತವೆ. ಇಲ್ಲಿದೆ ಸಾಮಾಜಿಕ ಹಕ್ಕುಗಳ ಹೋರಾಟಗಾರ್ತಿ ಅಕ್ಕೈ ಪದ್ಮಶಾಲಿ ಅವರ ಅಭಿಪ್ರಾಯ

ಮತ ಚಲಾವಣೆ ಎಷ್ಟು ಮುಖ್ಯ?
ಬದುಕುವುದು ಎಷ್ಟು ಮುಖ್ಯವೋ, ಉಸಿರಾಡುವುದು ಎಷ್ಟು ಮುಖ್ಯವೋ ಅದಕ್ಕಿಂತ ಹತ್ತು ಪಟ್ಟು ಮುಖ್ಯ ಮತ ಚಲಾವಣೆ ಮಾಡೋದು. ಕಳೆದ ಹತ್ತು ವರ್ಷಗಳಿಂದ ಎಲ್ಲೆಡೆ ದ್ವೇಷ ಅಸಹನೆ, ಅಸಮಾನತೆ, ಹಿಂಸೆ ಕಾಣುತ್ತಿದ್ದೇವೆ. ಅದನ್ನು ಬದಲಾವಣೆ ಮಾಡಲು ಮತ ಚಲಾವಣೆ ಮುಖ್ಯ

ಈ ಬಾರಿ ಚುನಾವಣೆ ಏಕೆ ಮುಖ್ಯ?
ಪೌರತ್ವ ಕಾಯ್ದೆ, ಕೃಷಿ ತಿದ್ದುಪಡಿ ಕಾಯ್ದೆ, ಮತಾಂತರ ನಿಷೇಧ ಕಾಯ್ದೆಯಿಂದ ಹಿಡಿದು ಚಳವಳಿಗಾರರ ಹತ್ಯೆ, ಮಹಿಳೆಯರ ಮೇಲಿನ ದೌರ್ಜನ್ಯ, ಲೈಂಗಿಕ ಅಲ್ಪಸಂಖ್ಯಾತರ ಕಡೆಗಣನೆ ಮುಂತಾದ ಘಾತುಕ ಘಟನೆಗಳಿಗೆ ಸಾಕ್ಷಿಯಾದ ಕೇಂದ್ರ ಸರ್ಕಾರವನ್ನು ಮುಂದಿನ ವರ್ಷ ಮಣಿಸುವ ನಿಟ್ಟಿನಲ್ಲಿ ಈ ಚುನಾವಣೆ ಮುಖ್ಯ ಬಹಳ ಮುಖ್ಯ.

ಬರಲಿರುವ ಸರ್ಕಾರ ಹೇಗಿರಬೇಕೆಂದು ಬಯಸುವಿರಿ?
ಈಗಿನ ಕೋಮುಶಕ್ತಿಗಳ ಸರ್ಕಾರದಲ್ಲಿ ಜಾರಿಗೆ ತಂದ ಜನವಿರೋಧಿ ನೀತಿ, ಕಾಯ್ದೆಗಳನ್ನು ಕಸದ ಬುಟ್ಟಿಗೆ ಹಾಕುವ ಸರ್ಕಾರ ಬರಬೇಕು. ಜನಗಳು ನಿಟ್ಟುಸಿರು ಬಿಟ್ಟು ಬದುಕುವಂತಾಗಬೇಕು. ಸೌಹಾರ್ದತೆಯನ್ನು ಸಂಭ್ರಮಿಸುವ, ಆರ್ಥಿಕ ಸಬಲೀಕರಣ ನೀತಿ ಜಾರಿಗೆ ತರುವ, ಹೊಸ ಯುವಕರಿಗೆ ಅದರಲ್ಲೂ ಅಧಿಕಾರ ವಂಚಿತರಾದವರಿಗೆ ರಾಜಕೀಯ ಉನ್ನತ ಸ್ಥಾನಮಾನ ನೀಡುವಂಥ ಸರ್ಕಾರ ಬರಬೇಕು.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ನನ್ನ ಮತ | ಮಹಿಳಾಪರ, ಜನಪರ, ಮಾನವೀಯತೆಯ ಪರವಾಗಿರುವ ಸರ್ಕಾರ ನಮಗೆ ಬೇಕು

'ನನ್ನ ಮತʼ ಅಂಕಣದಲ್ಲಿ ಚುನಾವಣೆ ಮುಗಿಯುವವರೆಗೂ ವಿವಿಧ ಕ್ಷೇತ್ರಗಳ ಪ್ರಮುಖ ವ್ಯಕ್ತಿಗಳ...

ನನ್ನ ಮತ | ದ್ವೇಷ ಬೆಳೆಸುವವರನ್ನು ಸೋಲಿಸುವ ದೃಷ್ಟಿಯಿಂದ ಮತದಾನ ಮುಖ್ಯ

‘ನನ್ನ ಮತ’ ಅಂಕಣದಲ್ಲಿ ಚುನಾವಣೆ ಮುಗಿಯುವವರೆಗೂ ವಿವಿಧ ಕ್ಷೇತ್ರದ ಪ್ರಮುಖ ವ್ಯಕ್ತಿಗಳ...

ನನ್ನ ಮತ | ಸಂವಿಧಾನದ ಉಳಿವಿಗೆ, ಪ್ರಜಾಸತ್ತೆಯ ರಕ್ಷಣೆಗೆ ಮತದಾನ ಮಾಡೋಣ

ʼನನ್ನ ಮತʼ ಅಂಕಣದಲ್ಲಿ ಚುನಾವಣೆ ಮುಗಿಯುವವರೆಗೂ ವಿವಿಧ ಕ್ಷೇತ್ರದ ಪ್ರಮುಖ ವ್ಯಕ್ತಿಗಳ...

ನನ್ನ ಮತ | ಅಧಿಕಾರರಹಿತ ದಮನಿತರಲ್ಲಿ ಆತ್ಮವಿಶ್ವಾಸ ತುಂಬುವ ತಾಯ್ತನದ ಸರಕಾರ ಬರಬೇಕಿದೆ

ʼನನ್ನ ಮತʼ ಅಂಕಣದಲ್ಲಿ ಚುನಾವಣೆ ಮುಗಿಯುವವರೆಗೂ ವಿವಿಧ ಕ್ಷೇತ್ರಗಳ ಪ್ರಮುಖ ವ್ಯಕ್ತಿಗಳ...