ಮಾಲಿನ್ಯಕ್ಕೆ ಒಂದೇ ವರ್ಷದಲ್ಲಿ 17 ಲಕ್ಷ ಜನರು ಬಲಿ: ವರದಿ

Date:

ಮಾಲಿನ್ಯದಿಂದಾಗಿ 2022ದಲ್ಲಿ ಭಾರತದಲ್ಲಿ ಒಟ್ಟು 17 ಲಕ್ಷಕ್ಕೂ ಹೆಚ್ಚು ಸಾವುಗಳು ಸಂಭವಿಸಿವೆ. ಪ್ರಮುಖವಾಗಿ ಮಾನವನಿಂದ ಉಂಟಾಗುವ ಪಿಎಂ2.5 ಮಾಲಿನ್ಯವು (ಗಾಳಿಯಲ್ಲಿ ತೇಲುವ ಸೂಕ್ಷ್ಮ ಕಣಗಳು) ಈ ಸಾವುಗಳಿಗೆ ಪ್ರಮುಖ ಕಾರಣವಾಗಿದೆ ಎಂದು ‘ದಿ ಲ್ಯಾನ್ಸೆಟ್ ಜರ್ನಲ್’ ಪ್ರಕಟಿಸಿರುವ ವರದಿ ಹೇಳಿದೆ.

‘ಕೌಂಟ್‌ಡೌನ್ ಆನ್ ಹೆಲ್ತ್ ಅಂಡ್ ಕ್ಲೈಮೇಟ್ ಚೇಂಜ್‌’ ಹೆಸರಿನ ವರದಿ ಪ್ರಕಾರ, ಮಾಲಿನ್ಯದಿಂದ ಸಂಭವಿಸುವ ಸಾವುಗಳ ಸಂಖ್ಯೆ 2010ಕ್ಕೆ ಹೋಲಿಸಿದರೆ, 2022ರ ವೇಳೆಗೆ 38% ಹೆಚ್ಚಾಗಿದೆ. ಒಟ್ಟು 17 ಲಕ್ಷ ಸಾವುಗಳಲ್ಲಿ 44% ಸಾವುಗಳಿಗೆ ಪಳೆಯುಳಿಕೆ ಇಂಧನಗಳ ಬಳಕೆಯೇ ಕಾರಣವಾಗಿದೆ. ರಸ್ತೆ ಸಾರಿಗೆಗಾಗಿನ ಪೆಟ್ರೋಲ್ ಬಳಕೆಯಿಂದ 2.69 ಲಕ್ಷ ಸಾವುಗಳು ಸಂಭವಿಸಿವೆ.

ಭಾರತದಲ್ಲಿ ರಸ್ತೆ ಸಾರಿಗೆಗಳ ಪೈಕಿ ಸುಮಾರು 96% ಸಾರಿಗೆಗಳು ಶಕ್ತಿಗಾಗಿ ಪಳೆಯುಳಿಕೆ ಇಂಧನಗಳನ್ನೇ ಅವಲಂಬಿಸಿವೆ. ವಿದ್ಯುತ್ ಮೇಲಿನ ಅವಲಂಬಿಕೆ ಕೇವಲ 0.3% ಮಾತ್ರವೇ ಇದೆ. ಪಳೆಯುಳಿಕೆ ಇಂಧನಗಳ ಮೇಲಿನ ಅತಿಯಾದ ಅವಲಂಬನೆ ಮತ್ತು ಹವಾಮಾನ ಬದಲಾವಣೆಯನ್ನು ನಿಯಂತ್ರಿಸುವಲ್ಲಿನ ವಿಫಲತೆಯು ಜನರ ಜೀವನ, ಆರೋಗ್ಯ ಹಾಗೂ ಜೀವನೋಪಾಯದ ಮೇಲೆ ಪರಿಣಾಮ ಬೀರುತ್ತಿವೆ. ಮಾನವ ಜೀವ ಹಾನಿಗೂ ಕಾರಣವಾಗುತ್ತಿವೆ ಎಂದು ವರದಿ ಹೇಳಿದೆ.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ ರಾಷ್ಟ್ರೀಯವಾದ?

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ...

ಅಸ್ಸಾಂ ಚುನಾವಣೆ: ಕಾಂಗ್ರೆಸ್ ಸೇರಿದ ಮಾಜಿ ಸಚಿವೆ ನಂದಿತಾ ಗೋರ್ಲೋಸಾ ಯಾರು?

ಅಸ್ಸಾಂ ವಿಧಾನಸಭಾ ಚುನಾವಣೆಗೆ (ಏಪ್ರಿಲ್ 9 ರಂದು ಒಂದೇ ಹಂತದಲ್ಲಿ ಮತದಾನ)...

ಡಾಲರ್ V/s ಯುವಾನ್: ಕೊಲ್ಲಿ ಯುದ್ಧ ಕರೆನ್ಸಿ ಯುದ್ಧವಾಗಿ ಮಾರ್ಪಾಡಾಗುತ್ತಿದೆಯೇ?

ಅಕಸ್ಮಾತ್ ಈ ಯುದ್ಧ ಮುಂದುವರೆದರೆ, ಕೆಲವು ದೇಶಗಳು ಡಾಲರ್ ಬದಲಿಗೆ ಯುವಾನ್...

ರಾಜ್ಯಸಭೆಗೆ ಸದಾನಂದಗೌಡರ ಪರ ಬಿಎಸ್‌ವೈ ; ದೇವೇಗೌಡರ ಪರ ಹೆಚ್‌ಡಿಕೆ ಲಾಬಿ

ಕೇಂದ್ರ ಉಕ್ಕು ಮತ್ತು ಭಾರಿ ಕೈಗಾರಿಕೆ ಸಚಿವ ಹೆಚ್‌.ಡಿ ಕುಮಾರಸ್ವಾಮಿ ನವದೆಹಲಿಯಲ್ಲಿ...