ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ಬಿಡುಗಡೆ ಮಾಡಿದ ಬ್ಯಾಂಕ್ ರಜಾದಿನಗಳ ಕ್ಯಾಲೆಂಡರ್ 2024 ರ ಪ್ರಕಾರ, ಜುಲೈ ತಿಂಗಳಲ್ಲಿ ಭಾರತದ ಬ್ಯಾಂಕ್‌ಗಳಿಗೆ 12 ದಿನ ರಜೆಗಳಿವೆ. ಈ ಬ್ಯಾಂಕ್ ರಜಾದಿನಗಳಲ್ಲಿ ರಾಜ್ಯ ರಜಾದಿನಗಳು, ಎರಡನೇ ಮತ್ತು ನಾಲ್ಕನೇ ಶನಿವಾರ ಹಾಗೂ ಭಾನುವಾರಗಳೂ ಸೇರಿವೆ.
ಜುಲೈ ತಿಂಗಳಿನ ಒಟ್ಟು 31 ದಿನಗಳಲ್ಲಿ 19 ದಿನಗಳು ಮಾತ್ರವೇ ಬ್ಯಾಂಕ್‌ಗಳು ಕಾರ್ಯನಿರ್ವಹಿಸಲಿದ್ದು, 12 ದಿನಗಳು ಮುಚ್ಚಿರುತ್ತವೆ. ಗ್ರಾಹಕರು ತಮ್ಮ ಬ್ಯಾಂಕಿಂಗ್ ಕೆಲಸಗಳಿಗೆ ಆನ್‌ಲೈನ್ ಬ್ಯಾಂಕಿಂಗ್ ಸೇವೆಗಳಾದ ನೆಟ್ ಬ್ಯಾಂಕಿಂಗ್, ಎಟಿಎಂಗಳು, ಮೊಬೈಲ್ ಅಪ್ಲಿಕೇಶನ್‌ಗಳು ಮತ್ತು ಬ್ಯಾಂಕ್ ವೆಬ್‌ಸೈಟ್‌ಗಳನ್ನು ಬಳಸಬೇಕಾಗುತ್ತದೆ.
ಪ್ರಸ್ತುತ ಜೂನ್ ತಿಂಗಳಲ್ಲಿ ಬಕ್ರೀದ್, ಮಹಾರಾಣಾ ಪ್ರತಾಪ್ ಜಯಂತಿ ಹಾಗೂ ವಾರಾಂತ್ಯದ ರಜೆಗಳು ಸೇರಿ ಇಟ್ಟು 10 ದಿನಗಳ ಕಾಲ ಬ್ಯಾಂಕ್‌ಗಳನ್ನು ಮುಚ್ಚಲಾಗಿತ್ತು ಎಂಬುದು ಗಮನಾರ್ಹ.
2024ರ ಜುಲೈನಲ್ಲಿ ಬ್ಯಾಂಕ್ ರಜಾದಿನಗಳ ಪಟ್ಟಿ;
3 ಜುಲೈ 2024: ಬೆಹ್ ದಿಯೆಂಕ್ಲಾಮ್ (ಮೇಘಾಲಯ)
6 ಜುಲೈ 2024: MHIP ದಿನ (ಮಿಜೋರಾಂ)
7 ಜುಲೈ: ಭಾನುವಾರ (ಎಲ್ಲ ರಾಜ್ಯಗಳು)
8 ಜುಲೈ 2024: ಕಾಂಗ್ (ರಥಜಾತ್ರೆ) (ಮಣಿಪುರ)
9 ಜುಲೈ 2024: ದ್ರುಕ್ಪಾ ತ್ಶೆ-ಜಿ (ಸಿಕ್ಕಿಂ)
13 ಜುಲೈ 2024: ಎರಡನೇ ಶನಿವಾರ (ಎಲ್ಲ ರಾಜ್ಯಗಳು)
14 ಜುಲೈ 2024: ಭಾನುವಾರ (ಎಲ್ಲ ರಾಜ್ಯಗಳು)
16 ಜುಲೈ 2024: ಹರೇಲಾ (ಉತ್ತರಾಖಂಡ)
17 ಜುಲೈ 2024: ಮೊಹರಂ/ಅಶೂರ/ಯು ಟಿರೋಟ್ ಸಿಂಗ್ ಡೇ (ಪಶ್ಚಿಮ ಬಂಗಾಳ, ಉತ್ತರ ಪ್ರದೇಶ, ಮಹಾರಾಷ್ಟ್ರ, ನವದೆಹಲಿ, ಬಿಹಾರ, ಜಾರ್ಖಂಡ್, ಛತ್ತೀಸ್‌ಗಢ, ಹಿಮಾಚಲ ಪ್ರದೇಶ, ಜಮ್ಮು ಮತ್ತು ಕಾಶ್ಮೀರ, ಮೇಘಾಲಯ, ರಾಜಸ್ಥಾನ, ಆಂಧ್ರ ಪ್ರದೇಶ, ತೆಲಂಗಾಣ, ತಮಿಳುನಾಡು , ಮಿಜೋರಾಂ, ಕರ್ನಾಟಕ, ಮಧ್ಯಪ್ರದೇಶ, ತ್ರಿಪುರ)
21 ಜುಲೈ 2024: ಭಾನುವಾರ (ಎಲ್ಲ ರಾಜ್ಯಗಳು)
27 ಜುಲೈ 2024: ನಾಲ್ಕನೇ ಶನಿವಾರ (ಎಲ್ಲ ರಾಜ್ಯಗಳು)
28 ಜುಲೈ 2024: ಭಾನುವಾರ (ಎಲ್ಲ ರಾಜ್ಯಗಳು)




