1,500 ಆಲಿವ್ ರಿಡ್ಲೆ ಆಮೆಗಳ ಸಾವು; ಮೀನುಗಾರಿಕಾ ಬಲೆಗಳೇ ಕಾರಣ ಎಂದ ತಜ್ಞರು

Date:

ಒಡಿಶಾದ ಗಹಿರ್ಮಠ ಸಮುದ್ರ ಸಂರಕ್ಷಿತ ಪ್ರದೇಶದ ಹುಕಿತೋಲಾದಿಂದ ಏಕಕುಲ ಬೀಚ್‌ವರೆಗಿನ ಸುಮಾರು 15 ಕಿ.ಮೀ. ಕರಾವಳಿಯುದ್ದಕ್ಕೂ ಸುಮಾರು 1,500 ಆಲಿವ್ ರಿಡ್ಲೆ ಆಮೆಗಳ ಕಳೇಬರಗಳು ಕಂಡುಬಂದಿವೆ. ಮೀನುಗಾರಿಕಾ ಬಲೆಗಳಲ್ಲಿ ಸಿಲುಕಿಕೊಂಡಿದ್ದರಿಂದ ಈ ಆಮೆಗಳು ಮೃತಪಟ್ಟಿರಬಹುದು ಎಂದು ಪರಿಸರವಾದಿಗಳು ಹೇಳುತ್ತಿದ್ದಾರೆ.

ಗಹಿರ್ಮಠ ಪ್ರದೇಶ ಸಮುದ್ರ ಆಮೆಗಳು ಮತ್ತು ಮ್ಯಾಂಗ್ರೋವ್ ಸಂರಕ್ಷಣಾ ಸಮಿತಿಯ ಕಾರ್ಯದರ್ಶಿ ಹೇಮಂತ್ ರಾವತ್ ಹೇಳುವಂತೆ; “ಅನೇಕ ಕಳೇಬರಗಳು ಸಮುದ್ರದಿಂದ ದಡಕ್ಕೆ ತೇಲಿಬಂದಿವೆ. ಕಳೇಬರಗಳ ಮೇಲೆ ಗಾಯಗಳ ಗುರುತುಗಳಿವೆ. ಇದು ಅವು ಟ್ರಾಲ್ ಬಲೆಗಳು ಅಥವಾ ಗಿಲ್ ನೆಟ್‌ಗಳಲ್ಲಿ ಸಿಲುಕಿಕೊಂಡು ಸಾವನ್ನಪ್ಪಿವೆ ಎಂಬುದನ್ನು ಸೂಚಿಸುತ್ತದೆ.”

“ಒಡಿಶಾ ಸಮುದ್ರ ಮೀನುಗಾರಿಕೆ ನಿಯಂತ್ರಣ ಕಾಯ್ದೆ 1982ರ ಪ್ರಕಾರ, ಟ್ರಾಲರ್‌ಗಳು ಕರಾವಳಿಯಿಂದ 5 ಕಿ.ಮೀ.ಗಿಂತ ದೂರದಲ್ಲಿ ಮೀನುಗಾರಿಕೆ ಮಾಡಬೇಕು. ಸಮುದ್ರ ಸಂರಕ್ಷಿತ ಪ್ರದೇಶದ ವ್ಯಾಪ್ತಿಯಲ್ಲಿ ಕರಾವಳಿಯಿಂದ 20 ಕಿ.ಮೀ.ಗಿಂತ ಆಚೆ ಕಾರ್ಯಾಚರಣೆ ನಡೆಸಬೇಕು. ಆದರೆ, ನೂರಾರು ಟ್ರಾಲರ್‌ಗಳು ಈ ನಿಯಮಗಳನ್ನು ಉಲ್ಲಂಘಿಸಿ ಕರಾವಳಿಯ ಸಮೀಪದಲ್ಲೇ ಮೀನುಗಾರಿಕೆ ನಡೆಸುತ್ತಿವೆ. ಇದರಿಂದಾಗಿ ಆಮೆಗಳು ಬಲೆಯಲ್ಲಿ ಸಿಲುಕಿಕೊಳ್ಳುತ್ತಿವೆ” ಎಂದು ರಾವತ್ ಆರೋಪಿಸಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಅಧಿಕಾರಿಗಳು ಆಮೆಗಳ ಸಾವಿನ ಸಂಖ್ಯೆಯನ್ನು ಕಡಿಮೆ ವರದಿ ಮಾಡುತ್ತಿದ್ದಾರೆ ಎಂದೂ ಅವರು ದೂರಿದ್ದಾರೆ. “ಅರಣ್ಯ ಮತ್ತು ವನ್ಯಜೀವಿ ಇಲಾಖೆಯ ಅಧಿಕಾರಿಗಳು ಆಗಾಗ್ಗೆ ಮೃತಪಟ್ಟ ಆಮೆಗಳ ಸಂಖ್ಯೆಯನ್ನು ಕಡಿಮೆ ಮಾಡಿ ತೋರಿಸುತ್ತಾರೆ. ಪ್ರತಿ ವರ್ಷ ಇಷ್ಟು ದೊಡ್ಡ ಸಂಖ್ಯೆಯಲ್ಲಿ ಆಮೆಗಳು ಸಾಯುತ್ತಿರುವುದು ಈ ಅಳಿವಿನಂಚಿನಲ್ಲಿರುವ ಸಮುದ್ರ ಪ್ರಭೇದದ ಸಂತತಿಯ ಮೇಲೆ ಭೀಕರ ಪರಿಣಾಮ ಬೀರಲಿದೆ” ಎಂದು ಹೇಳಿದ್ದಾರೆ.

ಈ ಲೇಖನ ಓದಿದ್ದೀರಾ?: ‘ಆಲಿವ್ ರಿಡ್ಲೆ’ ಆಮೆಗಳ ಸಂತಾನೋತ್ಪತ್ತಿ ಸಮಯ; ಒಡಿಶಾ ಸಮುದ್ರ ತೀರದಲ್ಲಿ ‘ಆಪರೇಷನ್ ಒಲಿವಿಯಾ’ ಜಾರಿ!

“ಟ್ರಾಲರ್‌ಗಳಲ್ಲಿ ‘ಟರ್ಟಲ್ ಎಕ್ಸ್‌ಕ್ಲೂಡರ್ ಡಿವೈಸಸ್’ (TEDs) ಅಳವಡಿಸಿದರೆ ಆಲಿವ್ ರಿಡ್ಲೆ ಆಮೆಗಳ ಪ್ರಾಣಾಪಾಯವನ್ನು ಕಡಿಮೆ ಮಾಡಬಹುದು. ಇದು ಮೀನುಗಾರಿಕಾ ಬಲೆಯ ಒಳಗೆ ಅಳವಡಿಸುವ ಸಣ್ಣ ಹೆಚ್ಚುವರಿ ಬಲೆ ಅಥವಾ ಲೋಹದ ಗ್ರಿಡ್ ಆಗಿದ್ದು, ಬಲೆಯಲ್ಲಿ ಸಿಕ್ಕಿಬಿದ್ದ ಆಮೆಗಳು ಹೊರಹೋಗಲು ಅನುವು ಮಾಡಿಕೊಡುತ್ತದೆ. ಮೀನುಗಳು ಬಲೆಯಲ್ಲೇ ಉಳಿಯುತ್ತವೆ. ಆದರೆ, ಟ್ರಾಲರ್ ಬಲೆಗಳಲ್ಲಿ TEDಗಳ ಬಳಕೆಯನ್ನು ಜಾರಿಗೊಳಿಸುವಲ್ಲಿ ಯಾವುದೇ ಪ್ರಗತಿಯಾಗಿಲ್ಲ” ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಗಹಿರ್ಮಠ ಅರಣ್ಯ ವಲಯ ಅಧಿಕಾರಿ ಕಪಿಲೇಂದ್ರ ಪ್ರಧಾನ್ ಮಾತನಾಡಿ, “ನವೆಂಬರ್ 1ರಿಂದ ಸಮುದ್ರ ಸಂರಕ್ಷಿತ ಪ್ರದೇಶದೊಳಗೆ ಅಕ್ರಮವಾಗಿ ಮೀನುಗಾರಿಕೆ ನಡೆಸುತ್ತಿದ್ದ 345 ಮೀನುಗಾರರನ್ನು ನಾವು ಬಂಧಿಸಿದ್ದೇವೆ. ಪಶ್ಚಿಮ ಬಂಗಾಳದ ಎರಡು ಮತ್ತು ಆಂಧ್ರಪ್ರದೇಶದ ಎರಡು ದೋಣಿಗಳು ಸೇರಿದಂತೆ ಒಟ್ಟು 38 ನೌಕೆಗಳನ್ನು ವಶಪಡಿಸಿಕೊಳ್ಳಲಾಗಿದೆ” ಎಂದು ತಿಳಿಸಿದ್ದಾರೆ.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ತಮಿಳುನಾಡು ಚುನಾವಣೆ | ಎಐಎಡಿಎಂಕೆ 178, ಬಿಜೆಪಿ 27 ಕ್ಷೇತ್ರಗಳಲ್ಲಿ ಸ್ಪರ್ಧೆ

ಈ ಬಾರಿಯ ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಗೆದ್ದು ಅಧಿಕಾರಕ್ಕೇರಲೇ ಬೇಕೆಂದು ಪಣ...

ಮಧ್ಯಪ್ರಾಚ್ಯ ಸಂಘರ್ಷ | ಕದನ ವಿರಾಮ ಎಂದ ಟ್ರಂಪ್; ಮಾತುಕತೆ ನಡೆದಿಲ್ಲವೆಂದ ಇರಾನ್

ಮಧ್ಯಪ್ರಾಚ್ಯದಲ್ಲಿ ಉಲ್ಬಣಗೊಳ್ಳುತ್ತಿರುವ ಸಂಘರ್ಷವನ್ನು ಕೊನೆಗಾಣಿಸಲು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್ ನಾನಾ...

ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಬ್ಯಾಲೆಟ್ ಪೇಪರ್ ಬಳಕೆ; ವಿಧಾನಸಭೆಯಲ್ಲಿ ಮಸೂದೆ ಅಂಗೀಕಾರ

ರಾಜ್ಯದ ಸ್ಥಳೀಯ ಸಂಸ್ಥೆಗಳ ಚುನಾವಣಾ ಪ್ರಕ್ರಿಯೆಯಲ್ಲಿ ಬದಲಾವಣೆ ತರಲು ರಾಜ್ಯ ಸರ್ಕಾರ...

ಪ್ರಧಾನಿ ಮೋದಿ ಅಮೆರಿಕಕ್ಕೆ 100% ಶರಣಾಗಿದ್ದಾರೆ: ರಾಹುಲ್ ಗಾಂಧಿ

ಪಶ್ಚಿಮ ಏಷ್ಯಾದಲ್ಲಿನ ಯುದ್ಧದ ಪರಿಸ್ಥಿತಿ ಮತ್ತು ದೇಶದ ಆರ್ಥಿಕ ನೀತಿಗಳ ಕುರಿತು...