ವಾಣಿಜ್ಯ ಬಳಕೆಯ 19 ಕೆ.ಜಿ. ತೂಕದ ಸಿಲಿಂಡರ್ ದರವನ್ನು 62 ರೂ. ಏರಿಕೆ ಮಾಡಲಾಗಿದೆ. ಸದ್ಯ ಸಿಲಿಂಡರ್ ಬೆಲೆ ದೆಹಲಿಯಲ್ಲಿ 1,802 ರೂ. ಆಗಿದೆ. 5 ಕೆ.ಜಿ. ಫ್ರೀ ಟ್ರೇಡ್ ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆ 15 ರೂ. ಹೆಚ್ಚಾಗಿದೆ, ಆದರೆ 14.2 ಕೆ.ಜಿ. ಸಿಲಿಂಡರ್ ದರದಲ್ಲಿ ಬದಲಾವಣೆಯಾಗಿಲ್ಲ.
ಸೆ.1, ಅ.1 ಮತ್ತು ಈಗ ನ.1 ರಂದು ಬೆಲೆ ಏರಿಕೆ ಮಾಡಲಾಗಿದೆ. ಗೃಹ ಬಳಕೆ ಸಿಲಿಂಡರ್‌ಗಳ ದರದಲ್ಲಿ ಯಾವುದೇ ಬದಲಾವಣೆ ಆಗಿಲ್ಲ. ದೆಹಲಿ, ಮುಂಬೈ , ಕೋಲ್ಕತ್ತಾ ಚೆನ್ನೈ ನಗರಗಳಲ್ಲಿ ದರ ಏರಿಕೆ ಮಾಡಲಾಗಿದ್ದು, ಇಂದಿನಿಂದಲೇ ಜಾರಿಗೆ ಬರಲಿದೆ.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಬೇಲೆಕೇರಿ ಬಹುಕೋಟಿ ಹಗರಣದತ್ತ ಮಾಧ್ಯಮಗಳ ಮೌನವೇಕೆ?
ಜಾಗತಿಕ ಮಾರುಕಟ್ಟೆಯಲ್ಲಿ ಇಂಧನ ದರ ಏರಿಕೆ ಹಾಗೂ ವಿದೇಶಿ ವಿನಿಮಯ ದರಕ್ಕೆ ಅನುಗುಣವಾಗಿ ಸರ್ಕಾರಿ ಸ್ವಾಮ್ಯದ ತೈಲ ಮಾರಾಟ ಕಂಪನಿಗಳು, ಪ್ರತಿ ಮಾಸಿಕವು ದರ ಪರಿಷ್ಕರಣೆ ಮಾಡುತ್ತವೆ.
ಬೆಂಗಳೂರಿನಲ್ಲಿ ಇಂದು ವಾಣಿಜ್ಯ ಬಳಕೆ 19 ಕೆ.ಜಿ. ಸಿಲಿಂಡರ್ ದರ ₹1,879 ಆಗಿದೆ. 47 ಕೆ.ಜಿ. ವಾಣಿಜ್ಯ ಸಿಲಿಂಡರ್ ದರ ₹4,695 ಆಗಿದೆ. ಗೃಹ ಬಳಕೆಯ ಸಿಲಿಂಡರ್ ದರದಲ್ಲಿ ಬದಲಾವಣೆಯಾಗಿಲ್ಲ. 14.2 ಕೆ.ಜಿ ಸಿಲಿಂಡರ್ ಬೆಲೆ ₹805 ಹಾಗೂ 5 ಕೆ.ಜಿ. ಸಿಲಿಂಡರ್ ದರ ₹300 ಇದೆ.





