25 ಪುರುಷರನ್ನು ವಿವಾಹವಾಗಿ ವಂಚಿಸಿದ 23 ವರ್ಷದ ಯುವತಿ; ಬಂಧನ

Date:

ಸರಣಿ ವಿವಾಹ ಮಾಡಿಕೊಂಡು 25 ಪುರುಷರನ್ನು ವಂಚಿಸಿರುವ ಆರೋಪದ ಮೇಲೆ 23 ವರ್ಷದ ಯುವತಿಯನ್ನು ರಾಜಸ್ಥಾನ ಪೊಲೀಸರು ಭೋಪಾಲ್‌ನಲ್ಲಿ ಬಂಧಿಸಿದ್ದಾರೆ. ಬಂಧಿತ ಯುವತಿಯನ್ನು ಉತ್ತರ ಪ್ರದೇಶದ ಮಹಾರಾಜ್‌ಗಂಜ್ ಮೂಲದ ಅನುರಾಧ ಪಾಸ್ವಾನ್ ಎಂದು ಗುರುತಿಸಲಾಗಿದೆ.

ರಾಜಸ್ಥಾನದ ಸವಾಯಿ ಮಾಧೋಪುರದಲ್ಲಿ ವಿಷ್ಣು ಶರ್ಮಾ ಮತ್ತು ಅವರ ಕುಟುಂಬವನ್ನು ಆರೋಪಿ ಯುವತಿ ವಚಿಸಿ, ಪರಾರಿಯಾದ ಬಳಿಕ ಆಕೆಯ ವಂಚನೆ ಪ್ರಕರಣಗಳು ಬೆಳಕಿಗೆ ಬಂದಿವೆ. ವಿಷ್ಣು ಶರ್ಮಾ ನೀಡಿದ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು, ಆಕೆಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಇದನ್ನು ಓದಿದ್ದೀರಾ? 200 ವರ್ಷಗಳ ಹಿಂದೆ ವರದಕ್ಷಿಣೆ ವಿರುದ್ಧ ಆದೇಶ ಹೊರಡಿಸಿದ್ದ ದಕ್ಷಿಣ ಭಾರತದ ರಾಣಿ

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಪೊಲೀಸ್‌ ದೂರು ದಾಖಲಿಸಿದ್ದ ವಿಷ್ಣು, “ಪಪ್ಪು ಮೀನಾ ಎಂಬಾಕೆ ಮದುವೆ ಬ್ರೋಕರ್‌ ಆಗಿರುವುದಾಗಿ ಹೇಳಿಕೊಂಡು ತಮ್ಮನ್ನು ಭೇಟಿ ಮಾಡಿದ್ದರು. ಆರೋಪಿ ಅನುರಾಧಳೊಂದಿಗೆ ವಿವಾಹ ನಿಶ್ಚಯವಾಗುವಂತೆ ಮಾಡಿದಳು. ಏಪ್ರಿಲ್ 19ರಂದು ಅನುರಾಧ ಮತ್ತು ನಾನು ಸ್ಥಳೀಯ ನ್ಯಾಯಾಲಯದಲ್ಲಿ ವಿವಾಹವಾಗಿದ್ದವು. ಆದರೆ, ಕೆಲವೇ ದಿನಗಳಲ್ಲಿ ಆಕೆ ನಮ್ಮನ್ನು ವಂಚಿಸಿ, ನಗದು, ಆಭರಣಗಳನ್ನು ದೋಚಿ ಪರರಾಗಿದ್ದಾಳೆ” ಎಂದು ಹೇಳಿದ್ದಾರೆ.

“ಸಾಮಾನ್ಯವಾಗಿ ಆಕೆಯ ಗ್ಯಾಂಗ್ ಸದಸ್ಯರು ಮದುವೆಯಾದ 5-7 ದಿನಗಳೊಳಗೆ ರಾತ್ರಿ ವೇಳೆ ಆಕೆಯನ್ನು ಕರೆದುಕೊಂಡು ಹೋಗುತ್ತಿದ್ದರು. ಆದರೆ, ನಾನು ಫಾಸ್ಟ್‌-ಫುಡ್‌ ಅಂಗಡಿ ನಡೆಸುತ್ತಿದ್ದು, ರಾತ್ರಿ 10:30ರ ಬಳಿಕ ಮನೆಗೆ ಬರುತ್ತಿದ್ದೆ, ಊಟ ಮಾಡಿ, ಟಿವಿ ನೋಡಿ ಮಲಗುವುದರಲ್ಲಿ ತಡ ರಾತ್ರಿ ಆಗುತ್ತಿತ್ತು. ಹೀಗಾಗಿ, ಅವರಿಗೆ, ಆಕೆಯನ್ನು ಕರೆದೊಯ್ಯುವುದು ಆಕೆಯ ತಂಡಕ್ಕೆ ಕಷ್ಟವಾಗಿತ್ತು. ನಮ್ಮನ್ನು ವಂಚಿಸಿ, ಮನೆಯಲ್ಲಿದ್ದ ನಗದು, ಆಭರಣ ದೋಚಿ ಪರಾರಿಯಾಗಲು ಆಕೆಗೆ 13 ದಿನಗಳು ಬೇಕಾಯಿತು. ಅಂದು ರಾತ್ರಿ, ಆಹಾರದಲ್ಲಿ ಏನೋ ಅಮಲು ಪದಾರ್ಥ ಬೆರೆಸಿದ್ದಳು. ನಾವೆಲ್ಲ ನಿದ್ದೆಹೋದ ಆಕೆ ಪರರಾಗಿದ್ದಾಳೆ” ಎಂದು ವಿಷ್ಣು ವಿವರಿಸಿದ್ದರು.

ಪ್ರಕರಣದ ಬಗ್ಗೆ ಪ್ರತಿಕ್ರಿಯಿಸಿರುವ ಸಹಾಯಕ ಸಬ್-ಇನ್ಸ್‌ಪೆಕ್ಟರ್ ಮೀತಾ ಲಾಲ್ ಯಾದವ್, “ಮೇ 3ರಂದು ವಂಚನೆಗೆ ಸಂಬಂಧಿಸಿದಂತೆ ಆರೋಪಿ ಯುವತಿ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ. ನಾವು ಆಕೆಯ ವಿಳಾಸವನ್ನು ಪತ್ತೆ ಮಾಡಿ, ಭೋಪಾಲ್‌ಗೆ ತೆರಳಿದ್ದೆವು. ಆದರೆ, ಆ ವಿಳಾಸ ನಕಲಿಯಾಗಿತ್ತು. ಆದಾಗ್ಯೂ, ಆಕೆಯ ಪತ್ತೆಗಾಗಿ ನಮ್ಮ ತಂಡ ಭೋಪಾಲ್‌ನಲ್ಲಿಯೇ ನೆಲೆಸಿತ್ತು. ಅಂತಿಮವಾಗಿ ಆಕೆಯನ್ನು ಹಿಡಿಯುವಲ್ಲಿ ಯಶಸ್ವಿಯಾಗಿದ್ದೇವೆ” ಎಂದು ಹೇಳಿದ್ದಾರೆ.

ಇದನ್ನು ಓದಿದ್ದೀರಾ? ಹನಿಟ್ರ್ಯಾಪ್ | ಕರ್ನಾಟಕ ರಾಜಕಾರಣ ಕಂಡ ‘ಗಲೀಜುಗಾಥೆ’ಗಳ ಸರಮಾಲೆ

“ಆಕೆಯ ತಂಡವನ್ನು ಹಿಡಿಯಲು ನಮ್ಮ ತಂಡದ ಕಾನ್‌ಸ್ಟೆಬಲ್ ಒಬ್ಬರು ವಧುವಿನ ಹುಡುಕಾಟದಲ್ಲಿ ಇರುವುದಾಗಿ ಸುಳ್ಳು ಹೇಳಿಕೊಂಡು ಭೋಪಾಲ್‌ನಲ್ಲಿ ಉಳಿದಿದ್ದರು. ಕೊನೆಗೆ ವ್ಯಕ್ತಿಯೊಬ್ಬರು ಅನುರಾಧಾ ಫೋಟೋ ತೋರಿಸಿ ವಿವಾಹ ಮಧ್ಯಸ್ಥಿಕೆ ನಡೆಸಿದರು. ಅದಾದ ಬಳಿಕ ಆಕೆಯನ್ನು ಹುಡುಕಿದೆವು. ಆಕೆ ಐದು-ಏಳು ದಿನಗಳ ಹಿಂದಷ್ಟೇ ಗಬ್ಬರ್ ಎಂಬ ವ್ಯಕ್ತಿಯನ್ನು ವಿವಾಹವಾಗಿದ್ದಳು. ಆತನಿಗೂ ಕೂಡಾ ವಂಚಿಸುವ ಸಂಚು ರೂಪಿಸಿದ್ದಳು” ಎಂದು ವಿವರಿಸಿದ್ದಾರೆ.

ವಿಚಾರಣೆ ವೇಳೆ, ಈವೆರೆಗೆ 25 ಪುರುಷರನ್ನು ಮದುವೆಯಾಗಿ ವಂಚಿಸಿರುವುದಾಗಿ ಆರೋಪಿ ಯುವತಿ ಮತ್ತು ಆಕೆಯ ತಂಡ ಒಪ್ಪಿಕೊಂಡಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಭಾನುವಾರ ಸಂಜೆ ಭೋಪಾಲ್‌ನಲ್ಲಿ ಆಕೆಯನ್ನು ಬಂಧಿಸಲಾಗಿದ್ದು, ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಸದ್ಯ ಪೊಲೀಸರು ಆಕೆಯ ಸಹಚರರ ಹುಡುಕಾಟ ನಡೆಸುತ್ತಿದ್ದಾರೆ.

WhatsApp Image 2025 11 17 at 3.21.17 PM
ಈ ದಿನ ಡೆಸ್ಕ್
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ ರಾಷ್ಟ್ರೀಯವಾದ?

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ...

ಅಸ್ಸಾಂ ಚುನಾವಣೆ: ಕಾಂಗ್ರೆಸ್ ಸೇರಿದ ಮಾಜಿ ಸಚಿವೆ ನಂದಿತಾ ಗೋರ್ಲೋಸಾ ಯಾರು?

ಅಸ್ಸಾಂ ವಿಧಾನಸಭಾ ಚುನಾವಣೆಗೆ (ಏಪ್ರಿಲ್ 9 ರಂದು ಒಂದೇ ಹಂತದಲ್ಲಿ ಮತದಾನ)...

ಡಾಲರ್ V/s ಯುವಾನ್: ಕೊಲ್ಲಿ ಯುದ್ಧ ಕರೆನ್ಸಿ ಯುದ್ಧವಾಗಿ ಮಾರ್ಪಾಡಾಗುತ್ತಿದೆಯೇ?

ಅಕಸ್ಮಾತ್ ಈ ಯುದ್ಧ ಮುಂದುವರೆದರೆ, ಕೆಲವು ದೇಶಗಳು ಡಾಲರ್ ಬದಲಿಗೆ ಯುವಾನ್...

ರಾಜ್ಯಸಭೆಗೆ ಸದಾನಂದಗೌಡರ ಪರ ಬಿಎಸ್‌ವೈ ; ದೇವೇಗೌಡರ ಪರ ಹೆಚ್‌ಡಿಕೆ ಲಾಬಿ

ಕೇಂದ್ರ ಉಕ್ಕು ಮತ್ತು ಭಾರಿ ಕೈಗಾರಿಕೆ ಸಚಿವ ಹೆಚ್‌.ಡಿ ಕುಮಾರಸ್ವಾಮಿ ನವದೆಹಲಿಯಲ್ಲಿ...