ಇಂಡಿಗೋ ಬಿಕ್ಕಟ್ಟು ಏಳನೇ ದಿನಕ್ಕೆ ಕಾಲಿಟ್ಟಿದ್ದು, ಸೋಮವಾರ ದೆಹಲಿ ಮತ್ತು ಬೆಂಗಳೂರು ವಿಮಾನ ನಿಲ್ದಾಣಗಳಿಂದ ಹಾರಬೇಕಾಗಿದ್ದ ಸುಮಾರು 250ಕ್ಕೂ ಅಧಿಕ ವಿಮಾನಗಳು ರದ್ದಾಗಿದೆ.
ಹೈದರಾಬಾದ್‌ನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (RGIA) ಈವರೆಗೆ 77 ಇಂಡಿಗೋ ವಿಮಾನಗಳು ರದ್ದಾಗಿವೆ. ಹೈದರಾಬಾದ್‌ಗೆ ಆಗಮಿಸುವ 38, ನಿರ್ಗಮಿಸುವ 39 ವಿಮಾಗಳು ರದ್ದಾಗಿವೆ ಎಂದು ವಿಮಾನ ನಿಲ್ದಾಣ ಅಧಿಕಾರಿಗಳು ದೃಢಪಡಿಸಿದ್ದಾರೆ. ಇನ್ನು ಇಂಡಿಗೋ ಕಾರ್ಯಾಚರಣೆಯ ಸಮಸ್ಯೆಯು ಮುಂಬೈನ ಛತ್ರಪತಿ ಶಿವಾಜಿ ಮಹಾರಾಜ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿಯೂ ಪರಿಣಾಮ ಬೀರಿದೆ.
ಇದನ್ನು ಓದಿದ್ದೀರಾ? ಇಂಡಿಗೋ ಬಿಕ್ಕಟ್ಟು: ಸಂಕಷ್ಟಕ್ಕೆ ಒಳಗಾದ ಪ್ರಯಾಣಿಕ ಹೇಳುವುದೇನು?
ಇನ್ನು ಇಂಡಿಗೋ ಸಿಇಒ ಪೀಟರ್ ಎಲ್ಬರ್ಸ್ ಮತ್ತು ಸಿಒಒ–ಅಕೌಂಟೆಬಲ್ ಮ್ಯಾನೇಜರ್ ಇಸಿಡ್ರೊ ಪೋರ್ಕ್ವೆರಾಸ್‌ಗೆ ನೀಡಲಾಗಿದ್ದ ಶೋಕಾಸ್ ನೋಟಿಸ್‌ಗಳಿಗೆ ಉತ್ತರಿಸಲು ಗಡುವನ್ನು ವಿಸ್ತರಿಸಲಾಗಿದೆ. ಡಿಜಿಸಿಎ 24 ಗಂಟೆಗಳ ಒಳಗೆ ಉತ್ತರಿಸುವಂತೆ ತಿಳಿಸಿತ್ತು, ಆದರೆ ಗಡುವು ವಿಸ್ತರಿಸಿದ್ದು ಸೋಮವಾರ ಸಂಜೆ ಆರು ಗಂಟೆಯೊಳಗೆ ಉತ್ತರಿಸುವಂತೆ ಹೇಳಿದೆ.
ನಾಗರಿಕ ವಿಮಾನಯಾನ ನಿರ್ದೇಶನಾಲಯ (ಡಿಜಿಸಿಎ) ಒಂದು ವಾರ ವಿಶ್ರಾಂತಿ ನಿಯಮವನ್ನು ಜಾರಿ ಮಾಡಿದ ಬಳಿಕ ಇಂಡಿಗೋದಲ್ಲಿ ಪೈಲಟ್‌ಗಳ ಸಮಸ್ಯೆ ಉಂಟಾಗಿದೆ ಎಂದು ಇಂಡಿಗೋ ಹೇಳಿಕೊಂಡಿತ್ತು. ಇದಾದ ಬೆನ್ನಲ್ಲೇ ಡಿಜಿಸಿಎ ಈ ಆದೇಶವನ್ನು ವಾಪಸ್ ಪಡೆದುಕೊಂಡಿದೆ. ಆದರೆ ಪರಿಸ್ಥಿತಿ ಸಹಜ ಸ್ಥಿತಿಗೆ ಮರಳಲು ಕಾಲವಕಾಶ ಬೇಕು ಎಂದು ಇಂಡಿಗೋ ಹೇಳಿಕೊಂಡಿದೆ.





