ತರಗತಿಯಲ್ಲಿ ನೀಡಲಾಗಿದ್ದ ‘ಹೋಮ್ ವರ್ಕ್’ಅನ್ನು ಪೂರ್ಣಗೊಳಿಸಿದೇ ಬಂದಿದ್ದ 2ನೇ ತರಗತಿ ವಿದ್ಯಾರ್ಥಿಗೆ ಶಿಕ್ಷಕನೊಬ್ಬ 150 ಛಡಿಯೇಟುಗಳನ್ನು ಬಾರಿಸಿರುವ ಅಮಾನವೀಯ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.
ಉತ್ತರ ಪ್ರದೇಶದ ಗೊಂಡಾ ಜಿಲ್ಲೆಯ ಕರ್ನೈಲ್‌ಗಂಜ್‌ನಲ್ಲಿರುವ ಎಂಆರ್‌ಜಿ ಖಾಸಗಿ ಶಾಲೆಯಲ್ಲಿ ಘಟನೆ ನಡೆದಿದೆ. ಬಾಲಕನ ಮೇಲೆ ಅಮಾನುಷ ಕ್ರೌರ್ಯ ಮೆರೆದ ಶಿಕ್ಷಕನನ್ನು ಪ್ರಖರ ಸಿಂಗ್ ಎಂದು ಹೆಸರಿಸಲಾಗಿದೆ.
ಶಿಕ್ಷಕ ಎಸಗಿದ ಕ್ರೌರ್ಯದಿಂದಾಗಿ, ಬಾಲಕನ ಕಾಲುಗಳಿಗೆ ತೀವ್ರ ಗಾಯಗಳಾಗಿವೆ. ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಬಾಲಕನ ತಂದೆ ಪೊಲೀಸ್ ಟಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಆರೋಪಿ ಶಿಕ್ಷಕನ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ನಡೆಸುತ್ತಿದ್ದಾರೆ. ಶಿಕ್ಷಕ ಪ್ರಖರ ಸಿಂಗ್‌ಅನ್ನು ಶಾಲಾ ಆಡಳಿತವು ಸೇವೆಯಿಂದ ವಜಾಗೊಳಿಸಿದೆ.




