ರಾಜ್ಯಸಭೆಯ 31 ಸಂಸದರು ಶತಕೋಟ್ಯಧಿಪತಿಗಳು: ಶೇ.32 ಮಂದಿ ಮೇಲಿದೆ ಕ್ರಿಮಿನಲ್ ಪ್ರಕರಣಗಳು

Date:

ರಾಜ್ಯಸಭೆಯಲ್ಲಿ 31 ಸದಸ್ಯರು ಅಂದರೆ ಒಟ್ಟು ಸದಸ್ಯರಲ್ಲಿ ಸುಮಾರು ಶೇಕಡ 14ರಷ್ಟು ಸಂಸದರು ಕೋಟ್ಯಂತರ ರೂಪಾಯಿಗಳ ಆಸ್ತಿಯನ್ನು ಘೋಷಿಸಿಕೊಂಡಿದ್ದಾರೆ. ಸುಮಾರು ಶೇ.31ರಷ್ಟು ಮಂದಿ ತಮ್ಮ ಮೇಲೆ ಕ್ರಿಮಿನಲ್ ಪ್ರಕರಣಗಳಿವೆ ಎಂದು ಘೋಷಿಸಿಕೊಂಡಿದ್ದಾರೆ.

ಅಸೋಸಿಯೇಷನ್ ​​ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ (ADR) 37 ಹೊಸದಾಗಿ ಆಯ್ಕೆಯಾದ ಸದಸ್ಯರು ಸೇರಿದಂತೆ 233 ಸಂಸದರಲ್ಲಿ 229 ಸದಸ್ಯರು ಸಲ್ಲಿಸಿದ ಅಫಿಡವಿಟ್‌ಗಳ ವಿಶ್ಲೇಷಣೆ ಮಾಡಿದೆ. ಈ ವಿಶ್ಲೇಷಣಾ ವರದಿ ಪ್ರಕಾರ ಆಡಳಿತಾರೂಢ ಬಿಜೆಪಿಯ ಆರು ಸಂಸದರು, ಕಾಂಗ್ರೆಸ್‌ನ ಐವರು, ವೈಎಸ್‌ಆರ್ ಕಾಂಗ್ರೆಸ್ ಪಕ್ಷದ (YSRCP) ನಾಲ್ವರು, ಆಮ್ ಆದ್ಮಿ ಪಕ್ಷ (ಎಎಪಿ) ಮತ್ತು ಭಾರತ ರಾಷ್ಟ್ರ ಸಮಿತಿಯ (BRS) ತಲಾ ಇಬ್ಬರು ಸದಸ್ಯರು ಕೋಟ್ಯಧಿಪತಿಗಳಾಗಿದ್ದಾರೆ. ಇದಲ್ಲದೆ, ರಾಷ್ಟ್ರೀಯತಾವಾದಿ ಕಾಂಗ್ರೆಸ್ ಪಕ್ಷದ (ಎನ್‌ಸಿಪಿ) ಮೂವರು ಸಂಸದರು 100 ಕೋಟಿ ರೂ.ಗಿಂತ ಹೆಚ್ಚಿನ ಆಸ್ತಿಯನ್ನು ಹೊಂದಿದ್ದಾರೆ.

ಇದನ್ನು ಓದಿದ್ದೀರಾ? ಕೇರಳ | ಶೇ.70ರಷ್ಟು ಶಾಸಕರ ಮೇಲಿದೆ ಕ್ರಿಮಿನಲ್ ಪ್ರಕರಣ: ಅರ್ಧಕ್ಕಿಂತ ಅಧಿಕ ಮಂದಿ ಕೋಟ್ಯಧಿಪತಿಗಳು!

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಇನ್ನು 229 ಸಂಸದರಲ್ಲಿ, 73 ಮಂದಿ ಅಂದರೆ ಶೇ.32ರಷ್ಟು ಸಂಸದರು ಕ್ರಿಮಿನಲ್ ಪ್ರಕರಣಗಳನ್ನು ಘೋಷಿಸಿಕೊಂಡಿದ್ದಾರೆ. 36 (ಶೇ. 16) ಮಂದಿ ಗಂಭೀರ ಆರೋಪಗಳನ್ನು ಎದುರಿಸುತ್ತಿದ್ದಾರೆ. ಓರ್ವ ಸಂಸದರ ಮೇಲೆ ಕೊಲೆ, ನಾಲ್ವರ ಕೊಲೆ ಯತ್ನ ಮತ್ತು ಮೂವರು ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ಗಂಭೀರ ಆರೋಪಗಳಿವೆ.

99 ಬಿಜೆಪಿ ಸಂಸದರಲ್ಲಿ 27, 28 ಕಾಂಗ್ರೆಸ್ ಸಂಸದರಲ್ಲಿ 12, ತೃಣಮೂಲ ಕಾಂಗ್ರೆಸ್‌ನ 13 ಸಂಸದರಲ್ಲಿ 4 ಮತ್ತು ಎಎಪಿಯ 10 ಸಂಸದರಲ್ಲಿ ನಾಲ್ವರು ಕ್ರಿಮಿನಲ್ ಪ್ರಕರಣಗಳನ್ನು ಘೋಷಿಸಿಕೊಂಡಿದ್ದಾರೆ. ಹೆಚ್ಚುವರಿಯಾಗಿ, ಸಿಪಿಐ(ಎಂ) ಮತ್ತು ಬಿಆರ್‌ಎಸ್‌ನ ತಲಾ ಮೂವರು ಸಂಸದರು ಸಹ ಕ್ರಿಮಿನಲ್ ಪ್ರಕರಣಗಳ ಇರುವುದಾಗಿ ಘೋಷಿಸಿಕೊಂಡಿದ್ದಾರೆ.

ರಾಜ್ಯಸಭಾ ಸಂಸದರ ಸರಾಸರಿ ಘೋಷಿತ ಆಸ್ತಿ 120.69 ಕೋಟಿ ರೂಪಾಯಿ ಆಗಿದೆ. ಬಿಜೆಪಿಯ ಸಂಸದರು 28.29 ಕೋಟಿ ರೂ., ಕಾಂಗ್ರೆಸ್‌ ಸಂಸದರು 28.61 ಕೋಟಿ ರೂ., ಟಿಎಂಸಿ ಸಂಸದರು 7.70 ಕೋಟಿ ರೂ. ಮತ್ತು ಎಎಪಿ ಸಂಸದರು 574.09 ಕೋಟಿ ರೂ. ಆಸ್ತಿ ಹೊಂದಿರುವುದಾಗಿ ಹೇಳಿದ್ದಾರೆ. ವೈಎಸ್‌ಆರ್‌ಸಿಪಿ ಸಂಸದರು 522.63 ಕೋಟಿ ರೂ., ಸಮಾಜವಾದಿ ಪಕ್ಷದ ಸಂಸದರು 399.71 ಕೋಟಿ ರೂ., ಬಿಜು ಜನತಾದಳದ ಸಂಸದರು 105.63 ಕೋಟಿ ರೂ. ಮತ್ತು ಡಿಎಂಕೆಯ ಸಂಸದರು 11.90 ಕೋಟಿ ರೂ. ಆಸ್ತಿ ಹೊಂದಿದ್ದಾರೆ.

ಇನ್ನು ಬಿಆರ್‌ಎಸ್ ಸಂಸದ ಬಂಡಿ ಪಾರ್ಥ ಸಾರಧಿ ಅವರು 5,300 ಕೋಟಿ ರೂ.ಗೂ ಹೆಚ್ಚು ಆಸ್ತಿಯನ್ನು ಘೋಷಿಸಿಕೊಂಡಿದ್ದಾರೆ. ಎಎಪಿಯ ರಾಜಿಂದರ್ ಗುಪ್ತಾ 5,053 ಕೋಟಿ ರೂ. ಮತ್ತು ವೈಎಸ್‌ಆರ್‌ಸಿಪಿಯ ಅಲ್ಲಾ ಅಯೋಧ್ಯಾ ರಾಮಿ ರೆಡ್ಡಿ 2,577 ಕೋಟಿ ರೂ.ಗೂ ಹೆಚ್ಚು ಆಸ್ತಿಯನ್ನು ಹೊಂದಿದ್ದಾರೆ. ಎಎಪಿ ಸಂಸದ ಸಂತ ಬಲ್ಬೀರ್ ಸಿಂಗ್ ಅವರು ಕೇವಲ 3 ಲಕ್ಷ ರೂ. ಆಸ್ತಿಯನ್ನು ಹೊಂದಿರುವ ಅತ್ಯಂತ ಕಡಿಮೆ ಶ್ರೀಮಂತರಾಗಿದ್ದಾರೆ. ನಂತರ ಮಣಿಪುರದ ಮಹಾರಾಜ ಸನಾಜೋಬಾ ಲೈಶೆಂಬಾ ಸುಮಾರು 5 ಲಕ್ಷ ರೂ. ಮತ್ತು ಟಿಎಂಸಿ ಸಂಸದ ಪ್ರಕಾಶ್ ಚಿಕ್ ಬರೈಕ್ ಸುಮಾರು 9 ಲಕ್ಷ ರೂ. ಆಸ್ತಿ ಹೊಂದಿದ್ದಾರೆ.

WhatsApp Image 2025 11 17 at 3.21.17 PM
ಈ ದಿನ ಡೆಸ್ಕ್
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ತಮಿಳುನಾಡು ಚುನಾವಣೆ | ಎಐಎಡಿಎಂಕೆ 178, ಬಿಜೆಪಿ 27 ಕ್ಷೇತ್ರಗಳಲ್ಲಿ ಸ್ಪರ್ಧೆ

ಈ ಬಾರಿಯ ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಗೆದ್ದು ಅಧಿಕಾರಕ್ಕೇರಲೇ ಬೇಕೆಂದು ಪಣ...

ಮಧ್ಯಪ್ರಾಚ್ಯ ಸಂಘರ್ಷ | ಕದನ ವಿರಾಮ ಎಂದ ಟ್ರಂಪ್; ಮಾತುಕತೆ ನಡೆದಿಲ್ಲವೆಂದ ಇರಾನ್

ಮಧ್ಯಪ್ರಾಚ್ಯದಲ್ಲಿ ಉಲ್ಬಣಗೊಳ್ಳುತ್ತಿರುವ ಸಂಘರ್ಷವನ್ನು ಕೊನೆಗಾಣಿಸಲು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್ ನಾನಾ...

ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಬ್ಯಾಲೆಟ್ ಪೇಪರ್ ಬಳಕೆ; ವಿಧಾನಸಭೆಯಲ್ಲಿ ಮಸೂದೆ ಅಂಗೀಕಾರ

ರಾಜ್ಯದ ಸ್ಥಳೀಯ ಸಂಸ್ಥೆಗಳ ಚುನಾವಣಾ ಪ್ರಕ್ರಿಯೆಯಲ್ಲಿ ಬದಲಾವಣೆ ತರಲು ರಾಜ್ಯ ಸರ್ಕಾರ...

ಪ್ರಧಾನಿ ಮೋದಿ ಅಮೆರಿಕಕ್ಕೆ 100% ಶರಣಾಗಿದ್ದಾರೆ: ರಾಹುಲ್ ಗಾಂಧಿ

ಪಶ್ಚಿಮ ಏಷ್ಯಾದಲ್ಲಿನ ಯುದ್ಧದ ಪರಿಸ್ಥಿತಿ ಮತ್ತು ದೇಶದ ಆರ್ಥಿಕ ನೀತಿಗಳ ಕುರಿತು...