ದೆಹಲಿಯ ಅಬಕಾರಿ ನೀತಿ ಹಗರಣಕ್ಕೆ ಸಂಬಂಧಿಸಿ ಬಂಧಿತರಾಗಿ, ಸದ್ಯ ಜಾಮೀನಿನಲ್ಲಿ ಬಿಡುಗಡೆಗೊಂಡಿರುವ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಜೈಲಿನಿಂದ ಹೊರಬಂದ ನಂತರ ಶನಿವಾರ ನಡೆಸಿದ ಮೊದಲ ಪತ್ರಿಕಾಗೋಷ್ಠಿಯಲ್ಲಿ ನೀಡಿರುವ ಹೇಳಿಕೆಯೊಂದು ಸದ್ಯ ರಾಷ್ಟ್ರಮಟ್ಟದಲ್ಲಿ ಬಿಜೆಪಿ ಮತ್ತು ಆಮ್ ಆದ್ಮಿ ಪಾರ್ಟಿಯ ನಡುವೆ ವಾಕ್ಸಮರಕ್ಕೂ ಕಾರಣವಾಗಿದೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ್ದ ಅರವಿಂದ್ ಕೇಜ್ರಿವಾಲ್, “ಬಿಜೆಪಿಯವರು ಇಂಡಿಯಾ ಮೈತ್ರಿಕೂಟದ ಪ್ರಧಾನಿ ಅಭ್ಯರ್ಥಿ ಯಾರು ಎಂದು ಪ್ರಶ್ನಿಸುತ್ತಾರೆ. ನಾನು ಬಿಜೆಪಿಯವರಿಗೆ ನಿಮ್ಮ ಪ್ರಧಾನಿ ಯಾರು ಎಂದು ಕೇಳಬಯಸುತ್ತೇನೆ. ಯಾಕೆಂದರೆ ಸೆಪ್ಟೆಂಬರ್ 17ರಂದು ಪ್ರಧಾನಿ ನರೇಂದ್ರ ಮೋದಿ 75ನೇ ವರ್ಷಕ್ಕೆ ಕಾಲಿಡುತ್ತಿದ್ದಾರೆ. 75 ವರ್ಷದ ನಂತರ ರಾಜಕೀಯ ನಿವೃತ್ತಿಯಾಗುವಂತೆ ಬಿಜೆಪಿಯೇ ನಿಯಮ ಮಾಡಿಕೊಂಡಿದೆ” ಎಂದಿದ್ದರು.
देखिये Amit Shah कैसे Narendra Modi को Politics से रिटायर होने को कह रहे हैं 👇 pic.twitter.com/sfJLDTaAe2
— AAP (@AamAadmiParty) May 11, 2024
ಇದಕ್ಕೆ ಉತ್ತರಿಸಿದ್ದ ಕೇಂದ್ರ ಗೃಹ ಸಚಿವ ಅಮಿತ್ ಶಾ, “75 ವರ್ಷ ದಾಟಿದರೂ ಮೋದಿಯವರೇ ಪ್ರಧಾನಿಯಾಗಿ ಮುಂದುವರಿಯಲಿದ್ದಾರೆ. ಬಿಜೆಪಿಯ ಸಂವಿಧಾನದಲ್ಲಿ 75 ವರ್ಷದ ನಂತರ ರಾಜಕೀಯ ನಿವೃತ್ತಿಯಾಗುವಂತಹ ಯಾವುದನ್ನೂ ಉಲ್ಲೇಖಿಸಲಾಗಿಲ್ಲ. ಭವಿಷ್ಯದಲ್ಲಿ ಪ್ರಧಾನಿಯಾಗಿ ಮತ್ತೊಮ್ಮೆ ಆಯ್ಕೆಯಾಗಿ ಮೋದಿಯವರೇ ದೇಶವನ್ನು ಮುನ್ನಡೆಸಲಿದ್ದಾರೆ. ಬಿಜೆಪಿಯಲ್ಲಿ ಈ ಬಗ್ಗೆ ಯಾವುದೇ ಗೊಂದಲವಿಲ್ಲ. ಸುಮ್ಮನೆ ಗೊಂದಲ ಸೃಷ್ಟಿಸಲಾಗುತ್ತಿದೆ” ಎಂದು ತಿಳಿಸಿದ್ದರು.
🔥 BREAKING
AAP release video proof and exposes Amit Shah 😂
Amit Shah in 2018 said, “Leaders above 75 years of age will not be given any responsibility”
Kejriwal was right. pic.twitter.com/lbt0WvJAvB
— Roshan Rai (@RoshanKrRaii) May 11, 2024
ಈ ಹೇಳಿಕೆಗೆ ತಿರುಗೇಟು ನೀಡಿರುವ ಆಮ್ ಆದ್ಮಿ ಪಕ್ಷವು, ಖುದ್ದು ಅಮಿತ್ ಶಾ ಅವರೇ 2018ರಲ್ಲಿ ನೀಡಿದ್ದ ಸಾರ್ವಜನಿಕ ಹೇಳಿಕೆಯನ್ನು ಟ್ವೀಟ್ ಮಾಡಿದ್ದು, “ಅಮಿತ್ ಶಾ ಅವರೇ, ಇದು ನೀವೇ ನೀಡಿದ್ದ ಹೇಳಿಕೆ” ಎಂದು ಹಳೆಯ ವಿಡಿಯೋವನ್ನು ಹಂಚಿಕೊಂಡಿದೆ.
ಅಲ್ಲದೇ, ಅಮಿತ್ ಶಾ ಅವರ ಇನ್ನೊಂದು ವಿಡಿಯೋವನ್ನು ಹಂಚಿಕೊಂಡಿದ್ದು, ಅದರಲ್ಲಿ, “60 ವರ್ಷಗಳ ನಂತರ ರಾಜಕೀಯ ಮಾಡಬಾರದು, ಸಮಾಜ ಸೇವೆ ಮಾಡಬೇಕು” ಎಂದಿರುವುದು ಕಾಣಬಹುದು.
अमित शाह खुद कह रहे हैं प्रधानमंत्री मोदी को अब रिटायर हो जाना चाहिए💯👇
“60 साल के बाद राजनीति नहीं करनी चाहिए, समाज सेवा करनी चाहिए”
अब यही बात BJP Modi पर लागू क्यों नहीं करती जो 75 साल की उम्र में भी सत्ता छोड़ने को तैयार नहीं है। pic.twitter.com/jdJ4WGg1cM
— AAP (@AamAadmiParty) May 11, 2024
ಈ ನಡುವೆ ಪತ್ರಕರ್ತ, ಆಲ್ಟ್ನ್ಯೂಸ್ನ ಮುಹಮ್ಮದ್ ಝುಬೇರ್ ಕೂಡ ಟ್ವೀಟ್ ಮಾಡಿದ್ದು, 75 ವರ್ಷದ ನಂತರ ಬಿಜೆಪಿಯಲ್ಲಿ ನಿವೃತ್ತಿ ವಿಚಾರದ ಬಗ್ಗೆ 2016ರಲ್ಲಿ ಗುಜರಾತ್ನ ಮಾಜಿ ಸಿಎಂ ಆನಂದಿಬೆನ್ ಪಟೇಲ್ ನೀಡಿದ್ದ ಹೇಳಿಕೆಯನ್ನು ಹಂಚಿಕೊಳ್ಳುವ ಮೂಲಕ, ಬಿಜೆಪಿಗೆ ಟಾಂಗ್ ನೀಡಿದ್ದಾರೆ.
Former Gujarat CM Anandiben Patel in 2016 : pic.twitter.com/UZDoKg3d1X
— Mohammed Zubair (@zoo_bear) May 11, 2024





