ದೇಶದಲ್ಲಿ ಆಕಸ್ಮಿಕ ಸಾವು ಪ್ರಮಾಣ ಶೇ.70ರಷ್ಟು ಏರಿಕೆ: ಸಾರ್ವಕಾಲಿಕ ಗರಿಷ್ಠ ಮಟ್ಟಕ್ಕೆ ಜಿಗಿತ!

Date:

'ಈ ದಿನ' ಸಂಶೋಧನಾ ತಂಡ ಸಂಗ್ರಹಿಸಿದ ದತ್ತಾಂಶದ ಪ್ರಕಾರ ದೇಶದಲ್ಲಿ ಆಕಸ್ಮಿಕ ಸಾವು ಪ್ರಮಾಣ ಶೇ.70ರಷ್ಟು ಏರಿಕೆಯಾಗಿದೆ. ಶೇ.40ಕ್ಕೂ ಅಧಿಕ ಸಾವುಗಳಿಗೆ ರಸ್ತೆ ಅಪಘಾತಗಳೇ ಕಾರಣವಾಗಿದೆ.

ದೇಶದಲ್ಲಿ ಕಳೆದೆರಡು ದಶಕಗಳಲ್ಲಿ ಸಾರಿಗೆ, ಮೂಲಸೌಕರ್ಯ ವ್ಯವಸ್ಥೆಯಲ್ಲಿ ಸಾಕಷ್ಟು ಬದಲಾವಣೆಗಳಾಗಿವೆ. ಮೆಟ್ರೋ, ರೈಲು, ವಿಮಾನ ಮೊದಲಾದ ಸಾರಿಗೆ ವ್ಯವಸ್ಥೆಯಲ್ಲಿ ಅಗಾಧವಾದ ಬೆಳವಣಿಗೆ ಕಂಡುಬಂದಿದೆ. ಕೈಗಾರಿಕೋದ್ಯಮ, ಪ್ರವಾಸೋದ್ಯಮ ಮೊದಲಾದವೂ ಕ್ಷಿಪ್ರವಾಗಿ ಬೆಳವಣಿಗೆಯಾಗಿದೆ. ಈ ಅಭಿವೃದ್ಧಿಗಳ ಜತೆಗೆ ದೇಶದಲ್ಲಿ ಆಕಸ್ಮಿಕ ಸಾವು ಪ್ರಕರಣಗಳೂ ಹೆಚ್ಚಾಗುತ್ತಿದೆ. 2000ರಿಂದ ಈವರೆಗೆ ಆಕಸ್ಮಿಕ ಸಾವು ಪ್ರಕರಣಗಳೂ ಬರೋಬ್ಬರಿ ಶೇ.70ರಷ್ಟು ಏರಿಕೆಯಾಗಿದೆ.

‘ಈ ದಿನ’ ಸಂಶೋಧನಾ ತಂಡವು ದೇಶದಲ್ಲಿ 2000ರಿಂದ 2024ರವರೆಗಿನ ಆಕಸ್ಮಿಕ ಸಾವು ಪ್ರಕರಣಗಳ ಡೇಟಾವನ್ನು ಸಂಗ್ರಹಿಸಿದೆ. ಈ ದತ್ತಾಂಶದ ಪ್ರಕಾರ ದೇಶದಲ್ಲಿ ವರದಿಯಾಗಿರುವ ಎಲ್ಲಾ ಆಕಸ್ಮಿಕ ಸಾವುಗಳಲ್ಲಿ ಶೇ.40ಕ್ಕೂ ಅಧಿಕ ಸಾವುಗಳಿಗೆ ರಸ್ತೆ ಅಪಘಾತಗಳೇ ಕಾರಣವಾಗಿದೆ. ಇದನ್ನು ಹೊರತುಪಡಿಸಿದ್ದಂತೆ ಅಸ್ವಾಭಾವಿಕ ಸಾವುಗಳೂ(ಆತ್ಮಹತ್ಯೆ, ಹೃದಾಯಾಘಾತ, ಕಟ್ಟಡದಿಂದ ಬಿದ್ದು ಸಾವು, ಪ್ರಾಣಿ ದಾಳಿ) ಹೆಚ್ಚಾಗಿದೆ.

ಇದನ್ನು ಓದಿದ್ದೀರಾ? ರಾಜ್ಯದಲ್ಲಿ ಹೆಚ್ಚಾದ ರಸ್ತೆ ಅಪಘಾತ ಪ್ರಕರಣಗಳು: ಏರುತ್ತಲೇ ಸಾಗಿದೆ ಸಾವಿನ ಪ್ರಮಾಣ

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

2020ರಲ್ಲಿ ಮೂರು-ನಾಲ್ಕು ತಿಂಗಳು ಕೋವಿಡ್ ಲಾಕ್‌ಡೌನ್ ಇದ್ದ ಕಾರಣದಿಂದಾಗಿ ರಸ್ತೆ ಅಪಘಾತ, ಇತರೆ ಆಕಸ್ಮಿಕ ಸಾವು ಪ್ರಮಾಣವು ಕೊಂಚ ಇಳಿಕೆಯಾಗಿದೆಯೇ ಹೊರತು, ಉಳಿದಂತೆ ನಿರಂತರವಾಗಿ ಏರುಗತಿಯಲ್ಲೇ ಸಾಗಿದೆ. ‘ಈ ದಿನ’ ಸಂಶೋಧನಾ ತಂಡ ಕಲೆಹಾಕಿದ ಈ ದತ್ತಾಂಶವು ದೇಶದಲ್ಲಿ ಅಭಿವೃದ್ಧಿಯ ಜೊತೆಗೆ ಕೇಂದ್ರ, ರಾಜ್ಯ ಸರ್ಕಾರಗಳು ಇಂತಹ ಸಾವು ಪ್ರಮಾಣವನ್ನು ತಡೆಗಟ್ಟುವಲ್ಲಿ ಗಮನಹರಿಸಬೇಕಾದ ಅನಿವಾರ್ಯತೆಯನ್ನು ಒತ್ತಿಹೇಳುತ್ತದೆ.

2000ರಲ್ಲಿ ಸರಿಸುಮಾರು 320,000 ಆಕಸ್ಮಿಕ ಸಾವು ಸಂಭವಿಸಿದೆ. 2005ರ ವೇಳೆಗೆ ಮೂಲಭೂತ ಸೌಕರ್ಯ ಮತ್ತು ವಾಹನ ಖರೀದಿ ಪ್ರಮಾಣ ಹೆಚ್ಚಾಗುತ್ತಿದ್ದಂತೆ ಆಕಸ್ಮಿಕ ಸಾವು ಸರಿಸುಮಾರು 385,000ಕ್ಕೆ ಏರಿಕೆಯಾಗಿದೆ. 2010ರಲ್ಲಿ 435,000, 2015ರಲ್ಲಿ 475,000, 2019ರಲ್ಲಿ 495,000(ಕೋವಿಡ್ ಪೂರ್ವಾವಧಿ) ಆಕಸ್ಮಿಕ ಸಾವು ದಾಖಲಾಗಿವೆ. ಆದರೆ ಕೋವಿಡ್ ಲಾಕ್‌ಡೌನ್ ಸಂದರ್ಭದಲ್ಲಿ(2020) ಆಕಸ್ಮಿಕ ಸಾವು ಪ್ರಮಾಣ 375,000ಕ್ಕೆ ಇಳಿಕೆಯಾಗಿದೆ. ಇದಾದ ಒಂದು ವರ್ಷದಲ್ಲೇ 2021ರಲ್ಲಿ 450,000 ಮಂದಿ ಆಕಸ್ಮಿಕ ಸಾವಿಗೀಡಾಗಿದ್ದಾರೆ. 2022ರಲ್ಲಿ 477,000 ಮಂದಿ, 2023ರಲ್ಲಿ 490,000 ಮಂದಿ, 2024ರಲ್ಲಿ 500,000ಕ್ಕೂ ಅಧಿಕ ಮಂದಿ ಆಕಸ್ಮಿಕವಾಗಿ ಮೃತಪಟ್ಟಿದ್ದು, ಸಾವಿನ ಪ್ರಮಾಣವು ಸಾರ್ವಕಾಲಿಕ ಗರಿಷ್ಠ ಮಟ್ಟಕ್ಕೆ ಏರಿಕೆಯಾಗಿದೆ.

ಆಕಸ್ಮಿಕ ಸಾವಿಗೆ ಪ್ರಮುಖ ಕಾರಣಗಳೇನು?

ದೇಶದಲ್ಲಿ ಆಕಸ್ಮಿಕ ಸಾವಿಗೆ ರಸ್ತೆ ಅಪಘಾತಗಳೂ ಒಂದು ಪ್ರಮುಖ ಕಾರಣವಾಗಿದ್ದು ಒಟ್ಟು ಆಕಸ್ಮಿಕ ಸಾವಿನಲ್ಲಿ ಸುಮಾರು ಶೇ.35-40ರಷ್ಟು ರಸ್ತೆ ಅಪಘಾತ ಸಾವೇ ಆಗಿದೆ. 2000ಕ್ಕೆ ಹೋಲಿಸಿದರೆ ಸದ್ಯ ರಸ್ತೆ ಅಪಘಾತ ಪ್ರಕರಣಗಳು ದುಪ್ಪಟ್ಟಾಗಿದೆ. ಅತಿ ವೇಗವಾಗಿ ವಾಹನ ಚಾಲನೆ, ಮದ್ಯಪಾನ ಮಾಡಿ ವಾಹನ ಚಾಲನೆ, ಸೀಟ್‌ಬೆಲ್ಟ್-ಹೆಲ್ಮೆಟ್ ಧರಿಸದಿರುವುದು, ರಸ್ತೆ ಅವ್ಯವಸ್ಥೆ, ವಾಹನ ಪ್ರಮಾಣ ಹೆಚ್ಚಳ ರಸ್ತೆ ಅಪಘಾತ ಮತ್ತು ಸಾವು ಪ್ರಮಾಣ ಹೆಚ್ಚಳಕ್ಕೆ ಕಾರಣವಾಗಿದೆ.

India road accident
ದೇಶದಲ್ಲಿ 2000ರಿಂದ 2024ರವರೆಗೆ ರಸ್ತೆ ಅಪಘಾತದಿಂದಾಗಿ ಉಂಟಾದ ಸಾವು ಪ್ರಮಾಣ

2022ರಲ್ಲಿ ಸುಮಾರು 40 ಸಾವಿರ ಸಾವು ಕಟ್ಟಡದಿಂದ ಬಿದ್ದು ಅಥವಾ ಕುಸಿದು ಸಂಭವಿಸಿದೆ. 15,000 ಮಂದಿ ವಿಷಪ್ರಾಶನದಿಂದ ಮೃತಪಟ್ಟರೆ, 13,000 ನೀರಿನಲ್ಲಿ ಮುಳುಗಿ ಅಥವಾ ಮಳೆ ಅನಾಹುತದಿಂದ ಸಾವನ್ನಪ್ಪಿದ್ದಾರೆ. ಸರಿಸುಮಾರು ಹತ್ತು ಸಾವಿರ ಮಂದಿ ಬೆಂಕಿ ಅವಘಡದಿಂದ, 8 ಸಾವಿರ ಮಂದಿ ವಿದ್ಯುತ್ ಅವಘಡದಿಂದ ಮೃತಪಟ್ಟಿದ್ದಾರೆ. 20,792 ಮಂದಿ ರೈಲು ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ.

ದೇಶದಲ್ಲಿ ರಸ್ತೆ ಅಪಘಾತ ಸಾವು, ಕಟ್ಟಡದಿಂದ ಬಿದ್ದು ಸಾವು, ವಿಷಪ್ರಾಶನ ಪ್ರಕರಣಗಳು ಭಾರಿ ಪ್ರಮಾಣದಲ್ಲಿ ಹೆಚ್ಚಾಗುತ್ತಿವೆ. ಅಗ್ನಿ ಅವಘಡ, ನೀರಿನಲ್ಲಿ ಮುಳುಗಿ ಸಾವನ್ನಪ್ಪುವ ಪ್ರಮಾಣಗಳೂ ಕೊಂಚ ಏರಿಕೆ ಕಂಡಿವೆ. ಆದರೆ ಮಹತ್ತರವಾಗಿ ಪ್ರವಾಹ, ಮಿಂಚಿನಂತಹ ನೈಸರ್ಗಿಕ ವಿಕೋಪಗಳಿಂದ ಸಾವು ಪ್ರಕರಣಗಳೂ ಅಗಾಧ ಪ್ರಮಾಣದಲ್ಲಿ ಹೆಚ್ಚಾಗಿದೆ. ಆದರೆ ಒಟ್ಟು ಆಕಸ್ಮಿಕ ಸಾವು ಪ್ರಮಾಣದಲ್ಲಿ ನೈಸರ್ಗಿಕ ಸಾವು ಕಡಿಮೆ ಪ್ರಮಾಣದಲ್ಲಿದೆ.

18ರಿಂದ 45 ವಯಸ್ಸಿನವರೇ ಅಧಿಕ ಆಕಸ್ಮಿಕ ಸಾವಿಗೆ ಬಲಿ

ಒಟ್ಟಾರೆಯಾಗಿ ಆಕಸ್ಮಿಕ ಸಾವು ಪ್ರಮಾಣದಲ್ಲಿ ಸುಮಾರು ಶೇ. 70ರಷ್ಟು ಪುರುಷರೇ ಆಗಿದ್ದಾರೆ. ಕಟ್ಟಡ ನಿರ್ಮಾಣ, ಕಾರ್ಖಾನೆ, ವಾಹನ ಚಾಲನೆಯಂತಹ ಕಾರ್ಯಗಳನ್ನು ಸದ್ಯ ಪುರುಷರೇ ಹೆಚ್ಚಾಗಿ ಮಾಡುತ್ತಿರುವುದು ಇದಕ್ಕೆ ಕಾರಣವಾಗಿರಬಹುದು. ಆದರೆ ಆತಂಕಕಾರಿಯೆಂದರೆ ಈ ಆಕಸ್ಮಿಕ ಸಾವಿಗೆ ಹೆಚ್ಚಾಗಿ ಯುವಜನರೇ ಬಲಿಯಾಗುತ್ತಿರುವುದು. ಹೌದು ‘ಈ ದಿನ ಸಂಶೋಧನಾ ತಂಡ’ ಸಂಗ್ರಹಿಸಿದ ಡೇಟಾ ಪ್ರಕಾರ ಒಟ್ಟು ಆಕಸ್ಮಿಕ ಸಾವಿನಲ್ಲಿ ಸುಮಾರು ಶೇ.60ರಷ್ಟು 18ರಿಂದ 45 ವರ್ಷದವರೇ ಆಗಿದ್ದಾರೆ. ದೇಶದ ಅಭಿವೃದ್ಧಿಗೆ ಹೆಚ್ಚಿನ ಕೊಡುಗೆಯನ್ನು ನೀಡುವ ಈ ವಯೋಮಿತಿಯವರ ಸಾವು ಆಯಾ ಕುಟುಂಬಕ್ಕೆ ಮಾತ್ರವಲ್ಲದೆ ದೇಶಕ್ಕೂ ಆಗುವ ನಷ್ಟ.

ರಾಜ್ಯವಾರು ಆಕಸ್ಮಿಕ ಸಾವು ಪ್ರಕರಣಗಳು

ಮಧ್ಯಪ್ರದೇಶ, ತಮಿಳುನಾಡು, ಉತ್ತರ ಪ್ರದೇಶ, ಮಹಾರಾಷ್ಟ್ರ, ಕರ್ನಾಟಕದಲ್ಲಿ ಅಧಿಕ ಆಕಸ್ಮಿಕ ಸಾವು ಪ್ರಕರಣಗಳು ದಾಖಲಾಗಿವೆ. ಅಧಿಕ ವಾಹನ ಸಂಚಾರ, ಅವೈಜ್ಞಾನಿಕವಾಗಿ ರಸ್ತೆ ನಿರ್ಮಾಣ, ಕೈಗಾರಿಕೋದ್ಯಮಗಳ ಬೆಳವಣಿಗೆಯೇ ಈ ಆಕಸ್ಮಿಕ ಸಾವುಗಳಿಗೆ ಕಾರಣ ಎನ್ನಬಹುದು. ಇನ್ನು ನಾಗಲ್ಯಾಂಡ್, ಸಿಕ್ಕಿಂ, ಮಿಜೋರಾಂಗಳಲ್ಲಿ ಕಡಿಮೆ ಆಕಸ್ಮಿಕ ಸಾವು ಪ್ರಕರಣಗಳು ದಾಖಲಾಗುತ್ತಿವೆ. ಈ ರಾಜ್ಯಗಳು ಹೆಚ್ಚಾಗಿ ಅಭಿವೃದ್ಧಿ ಹೊಂದಿರದೆ ಇರುವುದೂ ಇದಕ್ಕೆ ಕಾರಣವಾಗಿರಬಹುದು.

ಒಟ್ಟಾರೆಯಾಗಿ ದೇಶದಲ್ಲಿ ಕೈಗಾರೀಕರಣ, ಸಾರಿಗೆ ವ್ಯವಸ್ಥೆ, ಮೂಲಭೂತ ಸೌಕರ್ಯಗಳು ಅಭಿವೃದ್ಧಿಯಾದಷ್ಟು ಇದಕ್ಕೆ ಕೊಂಡಿಯಾಗಿರುವ ಜನರೂ ಬಲಿಯಾಗುತ್ತಿದ್ದಾರೆ. ಇದಕ್ಕೆ ಅಕ್ರಮ, ಅವ್ಯವಹಾರ, ಭ್ರಷ್ಟಾಚಾರ, ಮಾನಸಿಕ ಒತ್ತಡ ಮೊದಲಾದವುಗಳೂ ಕಾರಣ ಎಂದರೆ ತಪ್ಪಾಗಲಾರದು. ಅವೈಜ್ಞಾನಿಕವಾಗಿ ಕಟ್ಟಡ-ರಸ್ತೆ ನಿರ್ಮಾಣ ಮಾಡುವುದರ ಹಿಂದೆ ಹಣ ಕಬಳಿಸುವ ಉದ್ದೇಶವಿದೆ. ಆದರೆ ಇದಕ್ಕೆ ಬಲಿಯಾಗುವುದು ಆ ರಸ್ತೆಯಲ್ಲೇ ವಾಹನ ಚಲಾಯಿಸುವ ಜನ ಸಾಮಾನ್ಯರು. ಈ ಎಲ್ಲಾ ಅಭಿವೃದ್ಧಿಯಾಗಿ ಆಗುವ ಪರಿಸರ ಅಸಮತೋಲನದಿಂದಾಗಿ ಪ್ರವಾಹ ಮೊದಲಾದವುದಕ್ಕೆ ಮತ್ತೆ ಬಲಿಯಾಗುವುದು ಜನ ಸಾಮಾನ್ಯರೇ.

ಬದಲಾವಣೆಗೆ ತಕ್ಕುದಾಗಿ ಜನರ ಕೆಲಸದೊತ್ತಡವೂ ಹೆಚ್ಚಾಗಿದೆ. ಇದು ನೇರವಾಗಿ ಮಾನಸಿಕ ನೆಮ್ಮದಿ, ಆರೋಗ್ಯದ ಮೇಲೆ ಪ್ರಭಾವ ಬೀರಿದೆ. ಇದೂ ದೇಶದಲ್ಲಿ ಆತ್ಮಹತ್ಯೆ ಪ್ರಕರಣಗಳು ಹೆಚ್ಚಾಗಲು ಪರೋಕ್ಷ ಕಾರಣ ಎಂದರೆ ತಪ್ಪಾಗಲಾರದು. ಇನ್ನು ಇವೆಲ್ಲವುದಕ್ಕೂ ಮುಖ್ಯವಾಗಿ ಸರ್ಕಾರದ ಪಾತ್ರವನ್ನೂ ವಿಶ್ಲೇಷಿಸುವುದು ಮುಖ್ಯ. ದೇಶ ಎಷ್ಟು ಮುಂದುವರೆದರೂ ಕಟ್ಟಡ ನಿರ್ಮಾಣ ಮೊದಲಾದ ಕೆಲಸ ಮಾಡುವ ಕಾರ್ಮಿಕರಿಗೆ ಇಂದಿಗೂ ಸುರಕ್ಷತೆಯಿಲ್ಲ. ಈ ಸಾವುಗಳಿಗೆ ಯಾರು ಹೊಣೆ? ಅಷ್ಟಕ್ಕೂ ಸರ್ಕಾರ ಮಾತ್ರವಲ್ಲ ಇಲ್ಲಿ ಜನರ ಹೊಣೆಗಾರಿಕೆಯೂ ಇದೆ. ಜನರೂ ಎಚ್ಚರದಿಂದಿರಬೇಕು. ಸರ್ಕಾರವೂ ತನ್ನ ಜವಾಬ್ದಾರಿ ಮರೆಯಬಾರದು.

ದತ್ತಾಂಶ: ಸಂಜು ಎನ್‌ ಜೆ, ಈದಿನ ರಿಸರ್ಚ್ ಟೀಮ್

WhatsApp Image 2025 11 17 at 4.20.34 PM
+ posts

ಪತ್ರಕರ್ತೆ, 2019ರಿಂದ ಪತ್ರಿಕೋದ್ಯಮವೇ ಬದುಕು. ರಾಜಕೀಯ, ಬ್ಯುಜಿನೆಸ್‌ ಸುದ್ದಿಗಳಲ್ಲಿ ಆಸಕ್ತಿ.

WhatsApp Image 2025 12 30 at 12.53.05 e1767182607658
Sanju N J

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಪ್ರಧಾನಿ ಮೋದಿ ಅಮೆರಿಕಕ್ಕೆ 100% ಶರಣಾಗಿದ್ದಾರೆ: ರಾಹುಲ್ ಗಾಂಧಿ

ಪಶ್ಚಿಮ ಏಷ್ಯಾದಲ್ಲಿನ ಯುದ್ಧದ ಪರಿಸ್ಥಿತಿ ಮತ್ತು ದೇಶದ ಆರ್ಥಿಕ ನೀತಿಗಳ ಕುರಿತು...

‘ಟ್ರಂಪ್ ನಿಯಂತ್ರಣದಲ್ಲಿ ಮೋದಿ’: ಲೋಕಸಭೆಯ ಭಾಷಣದಲ್ಲಿ ಅಮೆರಿಕದ ಬಗ್ಗೆ ಮೌನಕ್ಕೆ ರಾಹುಲ್ ವಾಗ್ದಾಳಿ

ಮಧ್ಯಪ್ರಾಚ್ಯ ಬಿಕ್ಕಟ್ಟಿನ ಕುರಿತು ಭಾರತದ ನಿಲುವಿನ ಬಗ್ಗೆ ರಾಜಕೀಯ ವಾಗ್ದಾಳಿ ಸೋಮವಾರ...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ ರಾಷ್ಟ್ರೀಯವಾದ?

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ...

18 ಸಾವಿರ ಕೋಟಿ ರೂ. ದಾಟಿದ ದೇಶದ ಕ್ರೀಡಾ ಅರ್ಥವ್ಯವಸ್ಥೆ; ಕ್ರಿಕೆಟ್ ದರ್ಬಾರಿನಲ್ಲಿ ಸೊರಗಿದ ಇತರ ಆಟಗಳು

ಐಪಿಎಲ್‌ನಲ್ಲಿ ಕೇವಲ ಬೆಂಚ್ ಕಾಯುವ ಸಾಮಾನ್ಯ ಕ್ರಿಕೆಟ್ ಆಟಗಾರನೊಬ್ಬ ಕೋಟ್ಯಾಧಿಪತಿಯಾಗಿ ಐಷಾರಾಮಿ...