ಅಲೆಮಾರಿಗಳಿಗೆ ಶೇ.1ರಷ್ಟು ಮೀಸಲಾತಿಗೆ ತಾತ್ವಿಕ ಒಪ್ಪಿಗೆ; ದೆಹಲಿ ಹೋರಾಟಕ್ಕೆ ಹಂಗಾಮಿ ಅಂತ್ಯ

Date:

“ದಯವಿಟ್ಟು ಕರ್ನಾಟಕಕ್ಕೆ ವಾಪಸ್‌ ಬನ್ನಿ, ಸಮಸ್ಯೆ ಬಗೆಹರಿಸುತ್ತೇವೆ” ಎಂದು ಸಚಿವ ಎಚ್‌.ಸಿ.ಮಹದೇವಪ್ಪ ಅವರು ಅಲೆಮಾರಿಗಳಲ್ಲಿ ಕೋರಿದ್ದಾರೆ. ಹೀಗಾಗಿ ಪ್ರತಿಭಟನೆಯನ್ನು ಕೈಬಿಟ್ಟು ಕರ್ನಾಟಕಕ್ಕೆ ಮರಳಲು ಅಲೆಮಾರಿಗಳು ಒಪ್ಪಿದ್ದಾರೆ.

ದೆಹಲಿಯಲ್ಲಿ ಎರಡು ವಾರಗಳಿಂದ ನಿರಂತರ ಹೋರಾಟ ಮಾಡುತ್ತಿರುವ ಕರ್ನಾಟಕದ ಅಲೆಮಾರಿ ಮತ್ತು ಅತಿ ಸೂಕ್ಷ್ಮ ಸಮುದಾಯಗಳಲ್ಲಿ ಹೊರ ಭರವಸೆ ಮೂಡಿದೆ. ಒಳಮೀಸಲಾತಿ ಹಂಚಿಕೆಯಲ್ಲಿ ಆಗಿರುವ ಅನ್ಯಾಯ ಪ್ರಶ್ನಿಸಿ, ದೆಹಲಿಯಲ್ಲಿ ಹೋರಾಟಕ್ಕೆ ಕೂತಿದ್ದ ಅಲೆಮಾರಿಗಳ ಕೂಗು ಆಲಿಸಲು ಕಾಂಗ್ರೆಸ್‌ ನಾಯಕರು ಮುಂದಾಗಿದ್ದಾರೆ. ವಿಧಾನಪರಿಷತ್‌ ಕಾಂಗ್ರೆಸ್‌ ಸದಸ್ಯ ಬಿ.ಕೆ.ಹರಿಪ್ರಸಾದ್‌ ಮಧ್ಯಸ್ಥಿಕೆಯಲ್ಲಿ ನಡೆದ ಮಾತುಕತೆ ಫಲಪ್ರದವಾಗಿದೆ ಎಂದು ಕರ್ನಾಟಕದ ಅಸ್ಪೃಶ್ಯ ಅಲೆಮಾರಿ ಸಮುದಾಯಗಳ ಮಹಾಒಕ್ಕೂಟ ತಿಳಿಸಿದೆ.

ಶೇ. 1ರಷ್ಟು ಮೀಸಲಾತಿ, ಪ್ರತ್ಯೇಕ ಅಭಿವೃದ್ಧಿ ನಿಗಮ ಹಾಗೂ ವಿಶೇಷ ಆರ್ಥಿಕ ಪ್ಯಾಕೇಜ್‌ಗೆ ಕರ್ನಾಟಕ ಸರ್ಕಾರದಿಂದ ತಾತ್ವಿಕ ಒಪ್ಪಿಗೆ ಸಿಕ್ಕಿದೆ. ಪ್ರಕ್ರಿಯೆಯ ಕುರಿತು ಅಂತಿಮ ತೀರ್ಮಾನ ತೆಗೆದುಕೊಳ್ಳಲು ದೀಪಾವಳಿ ಮುಗಿದ ಕೂಡಲೇ ಮುಖ್ಯಮಂತ್ರಿ ಸಿದ್ದರಾಮಮಯ್ಯ, ಕಾಂಗ್ರೆಸ್‌ ನಾಯಕರಾದ ರಣ್‌ದೀಪ್‌ ಸುರ್ಜೇವಾಲ, ಬಿ.ಕೆ. ಹರಿಪ್ರಸಾದ್‌ ಮತ್ತು ಎಚ್.‌ ಸಿ ಮಹದೇವಪ್ಪನವರ ಸಮ್ಮುಖದಲ್ಲಿ ಅಲೆಮಾರಿ ಸಮುದಾಯದ ಮುಖಂಡರ ಜೊತೆ ಮಾತುಕತೆ ನಡೆಯಲಿದೆ. ಸಚಿವ ಎಚ್.ಸಿ.ಮಹದೇವಪ್ಪನವರು ಭರವಸೆ ನೀಡಿದ್ದು, “ದಯವಿಟ್ಟು ಕರ್ನಾಟಕಕ್ಕೆ ವಾಪಸ್‌ ಬನ್ನಿ, ಸಮಸ್ಯೆ ಬಗೆಹರಿಸುತ್ತೇವೆ” ಎಂದು ಕೋರಿದ್ದಾರೆ. ಹೀಗಾಗಿ ಪ್ರತಿಭಟನೆಯನ್ನು ಕೈಬಿಟ್ಟು ಕರ್ನಾಟಕಕ್ಕೆ ಮರಳಲು ಅಲೆಮಾರಿಗಳು ಒಪ್ಪಿದ್ದಾರೆ.

1002188542

ಅಂತಿಮವಾಗಿ ಕಳೆದ 14 ದಿನಗಳಿಂದ ದೆಹಲಿಯಲ್ಲಿ ನಡೆಯುತ್ತಿದ್ದ ಅಲೆಮಾರಿ ಸಮುದಾಯದ ಹೋರಾಟ ಪರಿಹಾರದ ಕಡೆ ಮುಖಮಾಡುವ ಹಂತಕ್ಕೆ ಬಂದು ತಲುಪಿದೆ. ಅಕ್ಟೋಬರ್‌ 2ಕ್ಕೆ ದೆಹಲಿ ತಲುಪಿದ ಅಲೆಮಾರಿ ಸಮುದಾಯದ ಸುಮಾರು 600 ಜನ ಪ್ರತಿನಿಧಿಗಳು ಹಾಗೂ ಕಲಾವಿದರು ದೆಹಲಿಯ ಜಂತರ್‌ ಮಂತರಿನಲ್ಲಿ ಪ್ರತಿಭಟಿಸಿದ್ದಲ್ಲದೆ, ತಮ್ಮ ಪಾರಂಪರಿಕ ವೇಷಭೂಷಣಗಳಿಂದ ಗಮನ ಸೆಳೆದರು. ಕಾಂಗ್ರೆಸ್‌ ಕಚೇರಿಯ ಮುಂದೆ ಪ್ರತಿಭಟನೆ ನಡೆಸಿದ್ದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಇದನ್ನೂ ಓದಿರಿ: ನಿಮ್ಮ ಮಕ್ಕಳು ಆರ್‌ಎಸ್‌ಎಸ್‌ಗೆ ಹೋಗ್ತಾರಾ? ಎಚ್ಚರ, ಈ ಕೃತಿಗಳು ಹೇಳುವ ಸತ್ಯಗಳೇ ಬೇರೆ!

ಎಐಸಿಸಿ ಪರವಾಗಿ ಅಲೆಮಾರಿ ನಿಯೋಗವನ್ನು ಭೇಟಿ ಮಾಡಿದ್ದ ಅಭಿಷೇಕ್‌ ದತ್ತ ಅವರು, “ರಾಹುಲ್‌ ಗಾಂಧಿ ಅವರು ದೇಶದಲ್ಲಿಲ್ಲ, ಕಾಂಗ್ರೆಸ್‌ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಅವರು ಆಸ್ಪತ್ರೆಯಲ್ಲಿದ್ದಾರೆ. ಕರ್ನಾಟಕದ ಅಲೆಮಾರಿಗಳ ಈ ಸಮಸ್ಯೆಯನ್ನು ನಾವು ಅವರ ಗಮನಕ್ಕೆ ತರುತ್ತೇವೆ. ನೀವು ಕರ್ನಾಟಕಕ್ಕೆ ವಾಪಸ್‌ ಹೊರಡಿ” ಎಂದು ಕೇಳಿಕೊಂಡಿದ್ದರು. ಆದರೆ ಅಂದು ಸಂಜೆ ಅಂಬೇಡ್ಕರ್‌ ಭವನದಲ್ಲಿ ನಡೆದ ಅಲೆಮಾರಿ ಸಮುದಾಯದ 59 ಜನಜಾತಿಗಳ ಸಭೆಯು ಹೋರಾಟವನ್ನು ಮುಂದುವರಿಸಲು ನಿರ್ಧರಿಸಿತು. ʼಸರ್ಕಾರದ ಕಡೆಯಿಂದ ಸ್ಪಷ್ಟ ತೀರ್ಮಾನ ಹೊರಬರುವ ತನಕ ದೆಹಲಿ ಬಿಡುವ ಮಾತೇ ಇಲ್ಲʼ ಎಂದು ಸಭೆ ತೀರ್ಮಾನ ತೆಗೆದುಕೊಂಡಿತ್ತು. ಅಂದಿನಿಂದ 15.10.2025ರವರೆಗೆ ಅಲೆಮಾರಿ ಪ್ರತಿನಿಧಿಗಳ ತಂಡವು AICC ಕಚೇರಿಯ ಆವರಣದಲ್ಲಿ ನಿರಂತರ ಧರಣಿ ಸತ್ಯಾಗ್ರವನನ್ನು ಮುಂದುವರೆಸಿತ್ತು. ಕಾಂಗ್ರೆಸ್ ಹೈಕಮಾಂಡ್‌ನ ಅನೇಕ ಮುಖಂಡರುಗಳನ್ನು ಕಂಡು ಅಲೆಮಾರಿ ಸಮುದಾಯಗಳ ಸಮಸ್ಯೆಗಳನ್ನು ಮನವರಿಕೆ ಮಾಡಿಸುವ ಪ್ರಯತ್ನ ನಡೆಸಲಾಗಿತ್ತು.

ದಲಿತ, ಹಿಂದುಳಿದ ಹಾಗೂ ಅಲ್ಪಸಂಖ್ಯಾತ ಸಮುದಾಯಗಳ ರಾಷ್ಟ್ರೀಯ ಘಟಕಗಳಿಗೆ  ಮೇಲುಸ್ತುವಾರಿಯಾಗಿರುವ ಕೆ. ರಾಜು ಅವರು ಈ ಮಧ್ಯೆ ಕರ್ನಾಟಕದ ಅನೇಕ ಸಚಿವರುಗಳ ಜೊತೆ ಮಾತುಕತೆ ನಡೆಸಿದರು. ಬಿ.ಕೆ. ಹರಿಪ್ರಸಾದ್‌ ಅವರನ್ನು ಮಧ್ಯಸ್ತಿಕೆ ವಹಿಸಿ ಈ ಸಮಸ್ಯೆಗೆ ಪರಿಹಾರ ಹುಡುಕಬೇಕೆಂದು ಕೋರಿದ್ದರು. ಮಂಗಳವಾರ ಚಂಡೀಘಡದಲ್ಲಿ ರಾಹುಲ್‌ ಗಾಂಧಿಯವರನ್ನು ಭೇಟಿಯಾಗಿದ್ದ ಬಿ.ಕೆ. ಹರಿಪ್ರಸಾದ ಅವರು ಸಮಸ್ಯೆಯನ್ನು ಬಗೆಹರಿಸಲು ದೆಹಲಿಯ ಎಐಸಿಸಿ ಕಚೇರಿಗೆ ವಾಪಸ್‌ ಬಂದಿದ್ದರು. ಇಂದು (ಬುಧವಾರ) ಬೆಳಗ್ಗೆ ಬೆಳಿಗ್ಗೆ 11 ಗಂಟೆಗೆ ಅಲೆಮಾರಿ ಪ್ರತಿನಿಧಿಗಳ ತಂಡವನ್ನು ಮಾತುಕತೆಗೆ ಕರೆದಿದ್ದರು.

ಎಐಸಿಸಿಯ ಇನ್ಚಾರ್ಜ್‌ ಕಾರ್ಯದರ್ಶಿಯಾಗಿರುವ ಮತ್ತು ಎಂಎಲ್‌ಸಿಯೂ ಆಗಿರುವ ಆರತಿ ಕೃಷ್ಣ ಅವರು ಹಾಜರಿದ್ದರು. “ಇಂದು ದೆಹಲಿಗೆ ಬರಬೇಕಿದ್ದ ರಾಹುಲ್‌ ಗಾಂಧಿ ಅವರು ಅವರ ತಾಯಿಯವರ ಆರೋಗ್ಯ ಏರುಪೇರಾದ್ದರಿಂದ ಶಿಮ್ಲಾಗೆ ಹೋಗಿದ್ದು, ಸಮಸ್ಯೆಯನ್ನು ಬಗೆಹರಿಸುವಂತೆ ನಮಗೆ ಸೂಚಿಸಿದ್ದಾರೆ. ತಡಮಾಡದೆ ಪರಿಹಾರದ ಕುರಿತು ಚರ್ಚಿಸೋಣ. ಸಮಸ್ಯೆ ಬಗೆಹರಿಯದಿದ್ದರೆ ರಾಹುಲ್‌ ಗಾಂಧಿ ಅವರ ಜೊತೆ ಸಭೆ ನಿಗದಿ ಮಾಡೋಣ” ಎಂದು ಎಐಸಿಸಿ ಪ್ರತಿನಿಧಿಗಳು ತಿಳಿಸಿದರು.

1002188543

ಅಲೆಮಾರಿ ಸಮುದಾಯದ ನಿಯೋಗವು ತಮ್ಮ ಹಕ್ಕೊತ್ತಾಯಗಳನ್ನು ತಿಳಿಸಿತು. ಪರಿಶಿಷ್ಟ ಜಾತಿಗಳ ಮೀಸಲಾತಿ ವರ್ಗೀಕರಣದಲ್ಲಿ ʼಎʼ ಕೆಟಗರಿಯಡಿ ಶೇ. 1ರಷ್ಟು ಪ್ರತ್ಯೇಕ ಮೀಸಲಾತಿ, 49 ಅಲೆಮಾರಿ ಸಮುದಾಯಗಳಿಗೆ ಸೀಮಿತವಾದ ಪ್ರತ್ಯೇಕ ಅಭಿವೃದ್ಧಿ ನಿಗಮ ಹಾಗೂ ಅಲೆಮಾರಿ ಸಮುದಾಯದ ಅಭಿವೃದ್ಧಿಗೆ ಪರಿಣಾಮಕಾರಿ ಪ್ಯಾಕೇಜ್‌ ಜಾರಿಗೆ ತರಬೇಕು ಎಂಬ ಆಗ್ರಹಗಳನ್ನು ಮುಂದಿಟ್ಟಿತು. ಬಿ.ಕೆ. ಹರಿಪ್ರಸಾದ್‌ ಅವರು ಅಲ್ಲಿಂದಲೇ ಕೆ. ರಾಜು, ಗುರುದೀಪ್‌ ಸಪ್ಪಾಲ್‌, ವೇಣುಗೋಪಾಲ್‌, ಸುರ್ಜೆವಾಲ ಹಾಗೂ ಎಚ್.‌ ಸಿ. ಮಹದೇವಪ್ಪ ಅವರಿಗೆ ಫೋನ್‌ ಕಾಲ್‌ ಮಾಡಿ ಕೂಲಂಕಷವಾಗಿ ಚರ್ಚಿಸಿದರು.

ಚರ್ಚೆಯು ಉತ್ತಮ ಫಲಿತಾಂಶವನ್ನು ನೀಡಿದ್ದು, ಅಲೆಮಾರಿ ಸಮುದಾಯಕ್ಕೆ ಶೇ. 1 ಪ್ರತ್ಯೇಕ ಮೀಸಲಾತಿ ನೀಡಲು ಕರ್ನಾಟಕ ಸರ್ಕಾರಕ್ಕೆ ತಾತ್ವಿಕ ಒಪ್ಪಿಗೆ ಇದೆ. ಇದರ ಪ್ರಕ್ರಿಯೆ ಹೇಗೆ ಎಂಬ ಕುರಿತು ಮಾತ್ರ ಸಭೆಯಲ್ಲಿ ಚರ್ಚಿಸಿಕೊಳ್ಳಬೇಕಿದೆ. ವಿಶೇಷ ಪ್ಯಾಕೇಜ್‌ ಮತ್ತು 49 ಅಲೆಮಾರಿ ಸಮುದಾಯಗಗಳಿಗೆ ಸೀಮಿತವಾದ ಪ್ರತ್ಯೇಕ ಅಭಿವೃದ್ಧಿ ನಿಗಮವನ್ನೂ ಮಾಡಲು ಸರ್ಕಾರ ಬದ್ಧವಿದೆ. ಇವೆಲ್ಲವುಗಳ ಕುರಿತು ಕುಲಂಕಷವಾಗಿ ಚರ್ಚಿಸಿ ಅಂತಿಮ ತೀರ್ಮಾನ ತೆಗೆದುಕೊಳ್ಳಲು ಎಐಸಿಸಿ ಕಡೆಯಿಂದ ಬಿ.ಕೆ. ಹರಿಪ್ರಸಾದ್‌, ಕೆ. ರಾಜು ಹಾಗೂ ಸುರ್ಜೆವಾಲರು ಸಹ ಇರುವಂತೆ ಕರ್ನಾಟಕ ಸರ್ಕಾರದ ಜೊತೆ ದೀಪಾವಳಿ ನಂತರದ ಮೊದಲ ವಾರದಲ್ಲೇ ಸಭೆ ನಿಗದಿ ಮಾಡಲಾಗುತ್ತಿದೆ. ಸಭೆ ವ್ಯವಸ್ಥೆ ಮಾಡುವ ಹೊಣೆಗಾರಿಕೆ ಬಿ.ಕೆ. ಹರಿಪ್ರಸಾದ್‌ ವಹಿಸಿಕೊಂಡಿದ್ದಾರೆ. ನಿಯೋಗದ ಜೊತೆ ಫೋನಿನಲ್ಲಿ ಮಾತನಾಡಿದ ಎಚ್.‌ ಸಿ. ಮಹದೇವಪ್ಪನವರು, “ದಯವಿಟ್ಟು ವಾಪಾಸ್‌ ಬನ್ನಿ. ಖಂಡಿತ ಅಲೆಮಾರಿ ಸಮುದಾಯಗಳ ಸಮಸ್ಯೆ ಬಗೆಹರಿಸಿಕೊಡುತ್ತೇವೆ” ಎಂದು ಕೇಳಿಕೊಂಡಿದ್ದಾರೆ.

ಇದನ್ನೂ ಓದಿರಿ: ದಾವಣಗೆರೆ | ಮುಖ್ಯ ನ್ಯಾಯಾಧೀಶರ ಮೇಲೆ ಹಲ್ಲೆ ಪ್ರಯತ್ನ ಖಂಡಿಸಿ ವಕೀಲನ ಗಡೀಪಾರಿಗೆ ದಸಂಸ ಆಗ್ರಹ

ಈ ಹಿನ್ನೆಲೆಯಲ್ಲಿ ದೆಹಲಿಯಲ್ಲಿ ನಡೆಯುತ್ತಿರುವ ಧರಣಿಯನ್ನು ಅಂತ್ಯಗೊಳಿಸಿ ಕರ್ನಾಟಕಕ್ಕೆ ವಾಪಾಸ್‌ ಆಗಲು ಕರ್ನಾಟಕ ಅಸ್ಪ್ರಶ್ಯ ಅಲೆಮಾರಿ ಸಮುದಾಯಗಳ ಮಹಾ ಒಕ್ಕೂಟ ತೀರ್ಮಾನಿಸಿದೆ. “ಕೊಟ್ಟ ಮಾತಿನಂತೆ ಕರ್ನಾಟಕ ಸರ್ಕಾರ ಹಾಗೂ ಎಐಸಿಸಿ ಮುಖಂಡರು ನಡೆದುಕೊಳ್ಳುತ್ತಾರೆ ಎಂದು ವಿಶ್ವಾಸವಿದೆ. ಒಂದು ವೇಳೆ ನಮ್ಮ ನಿರೀಕ್ಷೆ ಹುಸಿಯಾದರೆ ಮತ್ತೆ ದೆಹಲಿಗೆ ಬರುವುದು ಖಚಿತ. ಸಮುದಾಯದ ನೋವನ್ನು ಕೇಳಿಸಿಕೊಳ್ಳಲು ರಾಹುಲ್‌ ಗಾಂಧಿ ಅವರು ಭೇಟಿಗೆ ಸಮಯ ನೀಡಲೇಬೇಕು” ಎಂದು ಒಕ್ಕೂಟ ತಿಳಿಸಿದೆ.

ಈ ಸುದೀರ್ಘ ದೆಹಲಿ ಹೋರಾಟಕ್ಕೆ, ಸಕಲ ಬೆಂಬಲ ಮತ್ತು ಸಹಾಯ ಮಾಡಿದ ದೆಹಲಿಯ ಸಮಾನ ಮನಸ್ಕ ಸಂಘಟನೆಯ ಎಲ್ಲಾ ಪ್ರತಿನಿಧಿಗಳಿಗೆ ಒಕ್ಕೂಟ ಧನ್ಯವಾದ ತಿಳಿಸಿದೆ. ಇಂದು ನಡೆದ ಮಾತುಕತೆಯಲ್ಲಿ ಅಲೆಮಾರಿ ಸಮುದಾಯದ ಪರವಾಗಿ ಎ.ಎಸ್.‌ ಪ್ರಭಾಕರ್‌, ಮಂಜುನಾಥ್‌ ದಾಯತ್ಕರ್, ಬಸವರಾಜ್‌ ನಾರಾಯಣಕರ್, ಚಾವಡಿ ಲೋಕೇಶ್‌, ಮಂಡ್ಯ ರಾಜಣ್ಣ, ಸಂದೀಪ್‌ ಕುಮಾರ್‌ ದಾಸರ್‌, ಶರಣಪ್ಪ ಚನ್ನದಾಸರ್‌, ಸಿಂಧೊಳ್ಳು ಸಮುದಾಯದ ಹನುಮಂತು ಮುಂತಾದವರು ಭಾಗವಹಿಸಿದ್ದರು. ಪರಿಶಿಷ್ಟ ಜಾತಿಗಳ ಒಳ ಮೀಸಲಾತಿ ಹೋರಾಟ ಸಮಿತಿಯ ರಾಜ್ಯ ಸಂಚಾಲಕರಾದ ಕರಿಯಪ್ಪ ಗುಡಿಮನಿ, ಕರ್ನಾಟಕ ಜನಶಕ್ತಿಯ ಅಧ್ಯಕ್ಷರಾದ ನೂರ್‌ ಶ್ರೀಧರ್‌ ಹಾಗೂ ಎದ್ದೇಳು ಕರ್ನಾಟಕದ ತಾರಾ ರಾವ್‌ ಚರ್ಚೆಯಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದರು.

WhatsApp Image 2025 11 17 at 3.21.17 PM
ಈ ದಿನ ಡೆಸ್ಕ್
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಪುದುಚೆರಿ ಚುನಾವಣೆ | ‘ಇಂಡಿಯಾ’ ಗೊಂದಲ ನಿವಾರಣೆ: ಕಾಂಗ್ರೆಸ್ 16, ಡಿಎಂಕೆ 14 ಕ್ಷೇತ್ರಗಳಲ್ಲಿ ಸ್ಪರ್ಧೆ

ಪುದುಚೆರಿಯ 'ಇಂಡಿಯಾ' ಮೈತ್ರಿಕೂಟದ ಪ್ರಮುಖ ಪಕ್ಷಗಳಾದ ಡಿಎಂಕೆ ಮತ್ತು ಕಾಂಗ್ರೆಸ್‌ ಪಕ್ಷಗಳ...

ತಮಿಳುನಾಡು ಚುನಾವಣೆ | ಎಐಎಡಿಎಂಕೆ 178, ಬಿಜೆಪಿ 27 ಕ್ಷೇತ್ರಗಳಲ್ಲಿ ಸ್ಪರ್ಧೆ

ಈ ಬಾರಿಯ ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಗೆದ್ದು ಅಧಿಕಾರಕ್ಕೇರಲೇ ಬೇಕೆಂದು ಪಣ...

ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಬ್ಯಾಲೆಟ್ ಪೇಪರ್ ಬಳಕೆ; ವಿಧಾನಸಭೆಯಲ್ಲಿ ಮಸೂದೆ ಅಂಗೀಕಾರ

ರಾಜ್ಯದ ಸ್ಥಳೀಯ ಸಂಸ್ಥೆಗಳ ಚುನಾವಣಾ ಪ್ರಕ್ರಿಯೆಯಲ್ಲಿ ಬದಲಾವಣೆ ತರಲು ರಾಜ್ಯ ಸರ್ಕಾರ...

ಪ್ರಧಾನಿ ಮೋದಿ ಅಮೆರಿಕಕ್ಕೆ 100% ಶರಣಾಗಿದ್ದಾರೆ: ರಾಹುಲ್ ಗಾಂಧಿ

ಪಶ್ಚಿಮ ಏಷ್ಯಾದಲ್ಲಿನ ಯುದ್ಧದ ಪರಿಸ್ಥಿತಿ ಮತ್ತು ದೇಶದ ಆರ್ಥಿಕ ನೀತಿಗಳ ಕುರಿತು...