ತೈಲ ಮಾರುಕಟ್ಟೆ ಕಂಪನಿಗಳು ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆ ಏರಿಕೆಯನ್ನು ಘೋಷಿಸಿದೆ. ಇಂದಿನಿಂದಲೇ ಈ ಬೆಲೆ ಏರಿಕೆಗಳು ಜಾರಿಗೆ ಬರುತ್ತದೆ. ಈ ತಿಂಗಳ ಆರಂಭದಲ್ಲಿ ದಸರಾ ಮತ್ತು ದೀಪಾವಳಿಯಂತರ ಪ್ರಮುಖ ಹಬ್ಬಗಳಿವೆ. ಈ ನಡುವೆ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್ ದರ ಮತ್ತಷ್ಟು ಹೆಚ್ಚಿಸಲಾಗಿದೆ.
19 ಕೆಜಿಯ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್ ಬೆಲೆ 48.50 ರೂಪಾಯಿಯಷ್ಟು ಏರಿಸಲಾಗಿದೆ. ಆದರೆ ದೇಶೀಯ ಎಲ್‌ಪಿಜಿ ಸಿಲಿಂಡರ್ ಬೆಲೆ ಸ್ಥಿರವಾಗಿದೆ. ಗೃಹ ಬಳಕೆಯ ಎಲ್‌ಪಿಜಿ ಸಿಲಿಂಡರ್‌ನ ಬೆಲೆ 803 ರೂಪಾಯಿ ಆಗಿದೆ. ಇನ್ನು 5 ಕೆಜಿ ಫ್ರೀ ಟ್ರೇಡ್ ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆಯೂ 12 ರೂಪಾಯಿ ಹೆಚ್ಚಾಗಿದೆ.
ಇದನ್ನು ಓದಿದ್ದೀರಾ? ವಾಣಿಜ್ಯ ಸಿಲಿಂಡರ್ ಬೆಲೆ 30 ರೂ. ಇಳಿಕೆ
19 ಕೆಜಿಯ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ನ ಬೆಲೆ ಈಗ ದೆಹಲಿಯಲ್ಲಿ 1,691.50 ರೂಪಾಯಿಯಿಂದ 1,740 ರೂಪಾಯಿಗೆ ಏರಿಕೆಯಾಗಿದೆ. ಬೆಂಗಳೂರಿನಲ್ಲಿ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ನ ಬೆಲೆ 48.50 ರೂಪಾಯಿ ಹೆಚ್ಚಾಗಿ 1,818 ರೂಪಾಯಿಗೆ ತಲುಪಿದೆ.
ಈ ಬೆಲೆ ಏರಿಕೆಯು ವಾಣಿಜ್ಯ ಸಿಲಿಂಡರ್ ಅನ್ನು ಅವಲಂಬಿಸಿರುವ ರೆಸ್ಟೋರೆಂಟ್‌ಗಳು, ಹೋಟೆಲ್‌ಗಳು ಮತ್ತು ಇತರ ವ್ಯವಹಾರಗಳ ಮೇಲೆ ನೇರ ಪರಿಣಾಮ ಬೀರಲಿದೆ. ಇದರಿಂದಾಗಿ ವಿವಿಧ ವಲಯಗಳಲ್ಲಿಯೂ ನಿರ್ವಹಣಾ ವೆಚ್ಚವು ಅಧಿಕವಾಗುವ ಸಾಧ್ಯತೆಯಿದೆ.
ಇನ್ನು ಕಳೆದ ತಿಂಗಳು ಸೆಪ್ಟೆಂಬರ್ 1ರಂದು 19 ಕೆಜಿ ಸಿಲಿಂಡರ್‌ಗಳ ಬೆಲೆಯನ್ನು 39 ರೂಪಾಯಿ ಹೆಚ್ಚಿಸಲಾಗಿದೆ.





