ಎಐ ಯುಗ | ಉದ್ಯೋಗ ಸೃಷ್ಟಿಯಾಗದಿದ್ದರೆ, ಅಸಮಾನತೆ ಹೆಚ್ಚುತ್ತದೆ: ಆರ್ಥಿಕ ಸಲಹೆಗಾರ ನಾಗೇಸ್ವರನ್ ಎಚ್ಚರಿಕೆ

Date:

“ಭಾರತದಂತಹ ದೇಶಗಳಲ್ಲಿ ಶಿಕ್ಷಣ ಮತ್ತು ಕೌಶಲ್ಯ ಅಭಿವೃದ್ಧಿಗೆ ತಕ್ಷಣದ ಮತ್ತು ದೊಡ್ಡ ಮಟ್ಟದ ಒತ್ತು ನೀಡದಿದ್ದರೆ, AIಯ ವೇಗವಾದ ಬಳಕೆಯಿಂದ ಉದ್ಯೋಗಗಳು ಕಡಿತವಾಗಿ ಸಾಮಾಜಿಕ ಹಾಗೂ ಆರ್ಥಿಕ ಅಸ್ಥಿರತೆಯನ್ನು ಸೃಷ್ಟಿಸುವ ಅಪಾಯ ಇದೆ” – ಇದು ಭಾರತದ ಮುಖ್ಯ ಆರ್ಥಿಕ ಸಲಹೆಗಾರ ವಿ. ಅನಂತ ನಾಗೇಸ್ವರನ್ ಅವರ ಹೇಳಿಕೆ.

ದೆಹಲಿಯಲ್ಲಿ ನಡೆಯುತ್ತಿರುವ ‘ಇಂಡಿಯಾ AI ಇಂಪ್ಯಾಕ್ಟ್ ಸಮಿಟ್-2026’ರಲ್ಲಿ ‘ಎಂಪ್ಲಾಯಬಿಲಿಟಿ ಇನ್ ದಿ ಏಜ್ ಆಫ್ AI’ ವಿಚಾರದ ಕುರಿತು ಅವರು ವರ್ಚುವಲ್‌ನಲ್ಲಿ ಮಾತನಾಡಿದರು. ಕೃತಕ ಬುದ್ಧಿಮತ್ತೆ (AI) ವೇಗ, ಶಿಕ್ಷಣ, ಕೌಶಲ್ಯ ಅಭಿವೃದ್ಧಿ ಹಾಗೂ ಉದ್ಯೋಗದ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿದರು.

“AIಯ ಪರಿಣಾಮವು ಸ್ವಯಂಚಾಲಿತವಾಗಿ ಅಥವಾ ‘ಡ್ರಿಫ್ಟ್’ ಮೂಲಕ ನಡೆಯುವಂತಿಲ್ಲ. ಇದು ರಾಜಕೀಯ ಇಚ್ಛಾಶಕ್ತಿ, ರಾಜ್ಯದ ಸಾಮರ್ಥ್ಯ ಮತ್ತು ರಾಷ್ಟ್ರೀಯ ಬದ್ಧತೆಯೊಂದಿಗೆ ಸ್ಪಷ್ಟವಾಗಿ ನಿರ್ದೇಶಿಸಬೇಕು. ಭಾರತದಲ್ಲಿ ಪ್ರತಿ ವರ್ಷ ಕನಿಷ್ಠ 80 ಲಕ್ಷ ಉದ್ಯೋಗಗಳನ್ನು ಸೃಷ್ಟಿಸಬೇಕು ಎಂಬುದು ದೊಡ್ಡ ಸವಾಲು. ಆದರೆ, ಇಂದು ಕೇವಲ ಸಣ್ಣ ಭಾಗದ ಯುವಜನರಿಗೆ ಮಾತ್ರ ಔಪಚಾರಿಕ ಕೌಶಲ್ಯ ತರಬೇತಿ ಇದೆ. ಇದು ರಚನಾತ್ಮಕ ದೌರ್ಬಲ್ಯ” ಎಂದು ಹೇಳಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

“AIಯನ್ನು ಸರಿಯಾಗಿ ನಿರ್ವಹಿಸದಿದ್ದರೆ ಅಥವಾ ‘ನಿಖರ’ಗೊಳಿಸದಿದ್ದರೆ, AI ಉದ್ಯೋಗಗಳನ್ನು ವೇಗವಾಗಿ ಕಡಿತಗೊಳಿಸುತ್ತದೆ. ಉತ್ಪಾದಕತೆ ಹೆಚ್ಚಾದರೂ ಉದ್ಯೋಗ ಸೃಷ್ಟಿಯಾಗದಿದ್ದರೆ, ಭಾರತ ತನ್ನ ಜನಸಂಖ್ಯಾ ಅವಕಾಶ ಮತ್ತು ಮಾನವ ಶಕ್ತಿವನ್ನು ಕಳೆದುಕೊಳ್ಳುತ್ತದೆ. ಅಸಮಾನತೆ ಹೆಚ್ಚಾಗುತ್ತದೆ. ನಾವು ಕೇವಲ ಅವಕಾಶವನ್ನು ಕಳೆದುಕೊಳ್ಳುವುದು ಮಾತ್ರವಲ್ಲ, ಅನಿವಾರ್ಯವಾದ ಸಾಮಾಜಿಕ ಮತ್ತು ಆರ್ಥಿಕ ಅಸ್ಥಿರತೆಯನ್ನು ಸೃಷ್ಟಿಸುತ್ತೇವೆ. ಇದು ಅನಿವಾರ್ಯ ಸಾಮಾಜಿಕ ಮತ್ತು ಆರ್ಥಿಕ ಅಸ್ಥಿರತೆ ಹೆಚ್ಚಿಸುತ್ತದೆ” ಎಂದು ಎಚ್ಚರಿಕೆ ನೀಡಿದ್ದಾರೆ.

“AI – ಮಾನವ ಸಮೃದ್ಧಿಯನ್ನು ಬಲಪಡಿಸಬಹುದು ಅಥವಾ ಅದನ್ನು ಕುಗ್ಗಿಸಬಹುದು. ಇದು ಆಕಸ್ಮಿಕವಲ್ಲ, ನೀತಿ ನಿರ್ಧಾರಗಳ ಮೇಲೆ ಅವಲಂಬಿತವಾಗಿದೆ. ಭಾರತ AIಯನ್ನು ಸರಿಯಾಗಿ ಬಳಸಿದರೆ, ಮಾನವ ಸಮೃದ್ಧಿ ಮತ್ತು ಯಂತ್ರ ಬುದ್ಧಿಮತ್ತೆ ಮೂಲಕ ವಿಶ್ವದ ಮೊದಲ ದೊಡ್ಡ ವ್ಯವಸ್ಥೆಯಾಗಿ ಮಾರ್ಪಡಬಹುದು. ಇದಕ್ಕಾಗಿ ಶಿಕ್ಷಣದಲ್ಲಿ ಸುಧಾರಣೆ, ಮೂಲಭೂತ ಕೌಶಲ್ಯಗಳ ಬಲಪಡಿಸುವಿಕೆ, ದೊಡ್ಡ ಮಟ್ಟದ ಕೌಶಲ್ಯ ತರಬೇತಿ, ಕಾರ್ಮಿಕ ಸೇವಾ ಕ್ಷೇತ್ರಗಳ ವಿಸ್ತರಣೆ ಹಾಗೂ ನಿಯಮಾವಳಿಗಳ ತೊಡಕುಗಳನ್ನು ನಿವಾರಿಸುವುದು ಅತ್ಯಗತ್ಯ” ಎಂದು ಸಲಹೆ ನೀಡಿದ್ದಾರೆ.

ಈ ಲೇಖನ ಓದಿದ್ದೀರಾ?: ಆಂಧ್ರ ಚುನಾವಣೆಯಲ್ಲಿ ಮಹಾಮೋಸದ ಸಾಧ್ಯತೆ!- ಪರಕಾಲ ಪ್ರಭಾಕರ್ ಆಸ್ಫೋಟಕ ವಿಶ್ಲೇಷಣೆ

ಅವರ ಹೇಳಿಕೆಗಳು ಭಾರತದ ಪ್ರಸ್ತುತ ನಿರುದ್ಯೋಗ ಪರಿಸ್ಥಿತಿ ಮತ್ತು ಎಐ ಪ್ರಭಾವಿತ ಭವಿಷ್ಯದಲ್ಲಿ ಎದುರಾಗಬಹುದಾದ ಸವಾಲುಗಳನ್ನು ಆಧರಿಸಿವೆ. ಭಾರತದ ಜನಸಂಖ್ಯಾ ರಚನೆಯಲ್ಲಿ ಯುವಜನರು ಹೆಚ್ಚಿನ ಸಂಖ್ಯೆಯಲ್ಲಿದ್ದು, ಮಾನವ ಶಕ್ತಿಯ ಬಳಕೆಗೆ ದೊಡ್ಡ ಅವಕಾಶವಿದೆ. ಆದರೆ, ಪ್ರಧಾನಿ ಮೋದಿ ಅವರು 2014ರಲ್ಲಿ ವರ್ಷಕ್ಕೆ 2 ಕೋಟಿ ಉದ್ಯೋಗ ಸೃಷ್ಟಿಸುವಾಗಿ ಹೇಳಿದ್ದವರು, ತಮ್ಮ ಅಧಿಕಾರಾವಧಿಯ 10 ವರ್ಷಗಳಲ್ಲಿ ಕೇವಲ 1.45 ಕೋಟಿ ಉದ್ಯೋಗಗಳನ್ನೇ ಸೃಷ್ಟಿಸಿದ್ದಾರೆ. ಪ್ರಸ್ತುತ ಪರಿಸ್ಥಿತಿಗೆ ಅನುಗುಣವಾಗಿ ವಾರ್ಷಿಕ 80 ಲಕ್ಷ ಉದ್ಯೋಗ ಸೃಷ್ಟಿಯ ಅಗತ್ಯತೆ ಇದೆ ಎಂದು ತಜ್ಞರು ಹೇಳುತ್ತಿದ್ದಾರೆ. ಆದರೆ, ಮೋದಿ ಆಡಳಿತದಲ್ಲಿ ಉದ್ಯೋಗ ಸೃಷ್ಟಿಯು ಹಿಮ್ಮುಖ ಚಲನೆಯಲ್ಲಿದೆ.

ಈಗ, ಎಐ ಇಡೀ ಜಗತ್ತನ್ನು ವ್ಯಾಪಿಸುತ್ತಿದೆ. ಪರಿಣಾಮ, ಉದ್ಯೋಗಗಳ ಸ್ವರೂಪಗಳು ಬದಲಾಗುತ್ತಿವೆ. ಮಾತ್ರವಲ್ಲ, ಗಣನೀಯವಾಗಿ ಉದ್ಯೋಗಗಳು ಕಡಿತಗೊಳ್ಳುತ್ತಿವೆ. ಬೃಹತ್ ಕಂಪನಿಗಳು ‘ಲೇಯ್-ಆಫ್‌’ ಹೆಸರಿನಲ್ಲಿ ತಮ್ಮ ಉದ್ಯೋಗಿಗಳನ್ನು ಹೊರಗಟ್ಟುತ್ತಿದ್ದಾರೆ. ಸಾಮೂಹಿಕ ವಜಾಗೊಳಿಸುವಿಕೆಗೆ ಕಡಿವಾಣ ಹಾಕದಿದ್ದರೆ, ಮಾನವ ಶಕ್ತಿಯ ಬಳಕೆಗಾಗಿ ಉದ್ಯೋಗಗಳನ್ನು ಸೃಷ್ಟಿಸದಿದ್ದರೆ, ನಿರುದ್ಯೋಗ, ಅಸಮಾನತೆ ಹಾಗೂ ಸಾಮಾಜಿಕ ಅಶಾಂತಿ ತೀವ್ರಗೊಳ್ಳುವ ಸಾಧ್ಯತೆಗಳಿವೆ ಎಂದು ‘ವರ್ಲ್ಡ್ ಎಕನಾಮಿಕ್ ಫೋರಂ’ ಎಚ್ಚರಿಸಿದೆ. ಈಗಾಗಲೇ, ಶ್ರೀಲಂಕಾ, ಬಾಂಗ್ಲಾದೇಶ, ನೇಪಾಳದಂತಹ ನೆರೆಯ ರಾಷ್ಟ್ರಗಳು ‘ಜನ್-ಝಡ್’ ಪ್ರತಿಭಟನೆಗಳನ್ನು ಎದುರಿಸಿವೆ. ಆಡಳಿತಗಳೇ ಬುಡಮೇಲಾಗಿವೆ. ಇದು, ಭಾರತದ ಕೇಂದ್ರ ಸರ್ಕಾರವನ್ನು ಎಚ್ಚರಿಸುವ ಎಚ್ಚರಿಕೆಯ ಗಂಟೆಯೂ ಆಗಿದೆ. ಭಾರತವು ಶಿಕ್ಷಣ, ಉದ್ಯೋಗ ಹಾಗೂ ಕೌಶಲ್ಯಕ್ಕೆ ದೊಡ್ಡ ಹೂಡಿಕೆ ಮಾಡದಿದ್ದರೆ, ಭಾರತವು ಅಸಮಾನತೆಗೆ ತುತ್ತಾಗಿ, ಯುವಜನರು ಬೀದಿಗಿಳಿಯುವ ದಿನಗಳು ದೂರವಿಲ್ಲ!

WhatsApp Image 2023 06 13 at 1.10.34 PM e1686642227658
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ ರಾಷ್ಟ್ರೀಯವಾದ?

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ...

ಅಸ್ಸಾಂ ಚುನಾವಣೆ: ಕಾಂಗ್ರೆಸ್ ಸೇರಿದ ಮಾಜಿ ಸಚಿವೆ ನಂದಿತಾ ಗೋರ್ಲೋಸಾ ಯಾರು?

ಅಸ್ಸಾಂ ವಿಧಾನಸಭಾ ಚುನಾವಣೆಗೆ (ಏಪ್ರಿಲ್ 9 ರಂದು ಒಂದೇ ಹಂತದಲ್ಲಿ ಮತದಾನ)...

ಡಾಲರ್ V/s ಯುವಾನ್: ಕೊಲ್ಲಿ ಯುದ್ಧ ಕರೆನ್ಸಿ ಯುದ್ಧವಾಗಿ ಮಾರ್ಪಾಡಾಗುತ್ತಿದೆಯೇ?

ಅಕಸ್ಮಾತ್ ಈ ಯುದ್ಧ ಮುಂದುವರೆದರೆ, ಕೆಲವು ದೇಶಗಳು ಡಾಲರ್ ಬದಲಿಗೆ ಯುವಾನ್...

ರಾಜ್ಯಸಭೆಗೆ ಸದಾನಂದಗೌಡರ ಪರ ಬಿಎಸ್‌ವೈ ; ದೇವೇಗೌಡರ ಪರ ಹೆಚ್‌ಡಿಕೆ ಲಾಬಿ

ಕೇಂದ್ರ ಉಕ್ಕು ಮತ್ತು ಭಾರಿ ಕೈಗಾರಿಕೆ ಸಚಿವ ಹೆಚ್‌.ಡಿ ಕುಮಾರಸ್ವಾಮಿ ನವದೆಹಲಿಯಲ್ಲಿ...