AI ಉದ್ಯೋಗ | ಮೋದಿಯವರ ಭರವಸೆಯೇ ಬೇರೆ, ಗ್ರಾಮೀಣ ಭಾರತದ ವಾಸ್ತವವೇ ಬೇರೆ!

Date:

ಕೃತಕ ಬುದ್ಧಿಮತ್ತೆ (AI)ಯ ಕ್ಷಿಪ್ರ ಬೆಳವಣಿಗೆಯಿಂದ ಯುವಕರಲ್ಲಿ ಉದ್ಯೋಗ ಕಳೆದುಕೊಳ್ಳುವ ಭೀತಿ ಹೆಚ್ಚುತ್ತಿರುವ ನಡುವೆಯೂ, ಪ್ರಧಾನಿ ನರೇಂದ್ರ ಮೋದಿ ಈ ಕುರಿತು ಸ್ಪಷ್ಟನೆಯೊಂದನ್ನು ನೀಡಿದ್ದಾರೆ. ನವದೆಹಲಿಯಲ್ಲಿ ನಡೆಯುತ್ತಿರುವ India AI Impact Summit 2026ರಲ್ಲಿ ಸುದ್ದಿ ಸಂಸ್ಥೆಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಅವರು, “ಭಯಕ್ಕೆ ಅತ್ಯುತ್ತಮ ಪರಿಹಾರ ಸಿದ್ಧತೆ” ಎಂದು ಹೇಳಿದ್ದಾರೆ.

“AI ಕಾರಣದಿಂದ ಕೆಲವು ಉದ್ಯೋಗಗಳು ಮರುರೂಪ ಪಡೆಯಬಹುದಾದರೂ, ತಂತ್ರಜ್ಞಾನದಿಂದ ಹೊಸ ಅವಕಾಶಗಳು ಮತ್ತು ಉದ್ಯೋಗಗಳೂ ಸೃಷ್ಟಿಯಾಗುತ್ತವೆ. ಇತಿಹಾಸದಲ್ಲಿ ಎಲ್ಲಿಯೂ ತಂತ್ರಜ್ಞಾನ ಉದ್ಯೋಗಗಳನ್ನು ನಾಶಪಡಿಸಿಲ್ಲ, ಅವುಗಳ ಸ್ವರೂಪವನ್ನು ಮಾತ್ರ ಬದಲಿಸಿದೆ. ಡಿಜಿಟಲ್ ಪರಿವರ್ತನೆ ಭಾರತದಲ್ಲಿ ಹೊಸ ತಾಂತ್ರಿಕ ಉದ್ಯೋಗಗಳಿಗೆ ದಾರಿ ಮಾಡಿಕೊಡಲಿದೆ” ಎಂಬುದು ಅವರ ವಿಶ್ವಾಸ.

AI ಆಧಾರಿತ ಭವಿಷ್ಯಕ್ಕೆ ಯುವಕರನ್ನು ಸಿದ್ಧಗೊಳಿಸಲು ಸರ್ಕಾರ ಕೌಶಲ್ಯಾಭಿವೃದ್ಧಿ ಮತ್ತು ಮರು-ಕೌಶಲ್ಯ (ಸ್ಕಿಲ್ಲಿಂಗ್, ರೀ-ಸ್ಕಿಲ್ಲಿಂಗ್) ಮೇಲೆ ವಿಶೇಷ ಗಮನ ಹರಿಸಿದೆ. ಜಗತ್ತಿನಲ್ಲೇ ಅತ್ಯಂತ ಮಹತ್ವಾಕಾಂಕ್ಷೆಯ ಕೌಶಲ್ಯಾಭಿವೃದ್ಧಿ ಯೋಜನೆಗಳನ್ನು ಭಾರತ ಆರಂಭಿಸಿದೆ. ʼಆತ್ಮನಿರ್ಭರ ಭಾರತʼ ದೃಷ್ಟಿಕೋನದಲ್ಲಿ ಭಾರತ ಕೇವಲ ತಂತ್ರಜ್ಞಾನ ಬಳಕೆದಾರನಾಗದೇ, ತಂತ್ರಜ್ಞಾನ ನಿರ್ಮಾತೃವಾಗಬೇಕು ಎಂಬುದು ಸರ್ಕಾರದ ಗುರಿ. AI ಕ್ಷೇತ್ರದಲ್ಲಿ ಭಾರತ ಜಾಗತಿಕವಾಗಿ ಅಗ್ರ ಮೂರು ರಾಷ್ಟ್ರಗಳ ಪೈಕಿ ಒಂದಾಗಬೇಕೆಂಬುದು ತಮ್ಮ ಕನಸಾಗಿದೆ. ಈ ನಿಟ್ಟಿನಲ್ಲಿ India AI Mission ಪ್ರಮುಖ ಪಾತ್ರ ವಹಿಸುತ್ತಿದೆ ಎಂದು ಹೇಳಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

AI ಅನ್ನು ಉದ್ಯೋಗ ಕಸಿಯುವ ಅಪಾಯವನ್ನಾಗಿ ಅಲ್ಲ, ಬದಲಾಗಿ ಅವಕಾಶಗಳ ಸಾಧನವಾಗಿ ನೋಡಬೇಕು. ಭಾರತೀಯ AI ಮಾದರಿಗಳು ಜಗತ್ತಿನಾದ್ಯಂತ ವಿವಿಧ ಭಾಷೆಗಳಲ್ಲಿ ಸೇವೆ ನೀಡಲಿದ್ದು, AI ಸ್ಟಾರ್ಟ್‌ಅಪ್‌ಗಳು ಲಕ್ಷಾಂತರ ಉದ್ಯೋಗಗಳನ್ನು ಸೃಷ್ಟಿಸುವ ಸಾಧ್ಯತೆ ಇದೆ ಎಂದಿದ್ದಾರೆ. ಜತೆಗೆ,  AI ದುರುಪಯೋಗದ ಅಪಾಯಗಳನ್ನೂ ಪ್ರಧಾನಿ ಒಪ್ಪಿಕೊಂಡಿದ್ದಾರೆ. ಡೀಪ್‌ಫೇಕ್‌ಗಳು, ಡಿಜಿಟಲ್ ಅಪರಾಧಗಳು ಹಾಗೂ ಭದ್ರತಾ ಸವಾಲುಗಳ ಹಿನ್ನೆಲೆಯಲ್ಲಿ ಕಟ್ಟುನಿಟ್ಟಿನ ನಿಯಂತ್ರಣ ಅಗತ್ಯವಿದೆ. ಈ ಹಿನ್ನೆಲೆಯಲ್ಲಿ ಸಾಮಾಜಿಕ ಜಾಲತಾಣಗಳು ಆಕ್ಷೇಪಾರ್ಹ ವಿಷಯಗಳನ್ನು ಮೂರೇ ಗಂಟೆಗಳಲ್ಲಿ ತೆಗೆದುಹಾಕಬೇಕು ಹಾಗೂ AI ಮೂಲಕ ಸೃಷ್ಟಿಸಿದ ವಿಷಯಗಳಿಗೆ ಗುರುತು ಹಾಕುವುದು ಕಡ್ಡಾಯ ಎಂದು ತಿದ್ದುಪಡಿ ಮಾಡಿದ ಐಟಿ ನಿಯಮಗಳನ್ನು ಉಲ್ಲೇಖಿಸಿದ್ದಾರೆ.

image 2026 02 18T184537.401

ಭಾರತವನ್ನು ತಂತ್ರಜ್ಞಾನ ಕ್ಷೇತ್ರದ ದಿಗ್ಗಜನನ್ನಾಗಿ ಮಾಡಬೇಕು, ವಿಶ್ವದ ಅಗ್ರಗಣ್ಯ ದೇಶಗಳ ಸಾಲಿನಲ್ಲಿ ಭಾರತ ನಿಲ್ಲಬೇಕು ಎನ್ನುವ ಪ್ರಧಾನಿ ಮೋದಿಯವರ ಕನಸು ನಿಜಕ್ಕೂ ಆಶಾದಾಯಕ ಪ್ರೇರಣೆ. ಆದರೆ ಈ ಭರವಸೆಯ ಸಂದೇಶದ ಹಿಂದಿನ ಅಸಲಿ ಆತಂಕವನ್ನು ಮರೆಮಾಚಲಾಗದು.

AI ಹೊಸ ತಂತ್ರಜ್ಞಾನವಾಗಿ ಕೆಲವು ಕ್ಷೇತ್ರಗಳಲ್ಲಿ ಹೊಸ ಉದ್ಯೋಗಗಳನ್ನು ಸೃಷ್ಟಿಸುತ್ತಿರುವುದು ಸತ್ಯ. ಡೇಟಾ ಅನಾಲಿಟಿಕ್ಸ್, AI ಎಂಜಿನಿಯರಿಂಗ್, ಸಾಫ್ಟ್‌ವೇರ್ ಅಭಿವೃದ್ಧಿ, ಆರೋಗ್ಯ, ಕೃಷಿ ತಂತ್ರಜ್ಞಾನ, ಸ್ಟಾರ್ಟ್‌ಅಪ್‌ಗಳಂತಹ ಕ್ಷೇತ್ರಗಳಲ್ಲಿ ಅವಕಾಶಗಳು ಹೆಚ್ಚಾಗುತ್ತಿವೆ. ಇತಿಹಾಸದಲ್ಲಿಯೂ ತಂತ್ರಜ್ಞಾನ ಬದಲಾವಣೆಗಳು ಉದ್ಯೋಗಗಳ ಸ್ವರೂಪವನ್ನು ಬದಲಿಸಿವೆಯೇ ಹೊರತು ಸಂಪೂರ್ಣವಾಗಿ ನಾಶಮಾಡಿಲ್ಲ ಎಂಬ ಉದಾಹರಣೆಗಳೂ ಅಧ್ಯಯನಕ್ಕೆ ಸಿಗುತ್ತವೆ. ಆದರೆ, ಸಮಸ್ಯೆ ಇರುವುದು ಅಲ್ಲಲ್ಲ.

ಎಐ ಸೃಷ್ಟಿಸುತ್ತಿರುವ ಈ ಹೊಸ ಉದ್ಯೋಗ ಪಡೆಯಲು ಭಾರತ ದೇಶದ ಎಲ್ಲಾ ನಿರುದ್ಯೋಗಿ ಯುವಕ-ಯುವತಿಯರಿಗೆ ಸಾಧ್ಯವೇ? ಖಂಡಿತ ಇಲ್ಲ. ಭಾರತದಲ್ಲಿ ಬಹುಸಂಖ್ಯಾತ ಯುವಕರು ಗ್ರಾಮೀಣ ಹಿನ್ನೆಲೆಯವರು, ಸಾಮಾನ್ಯ ಪದವಿದಾರರು ಜತೆಗೆ ಕಡಿಮೆ ಕೌಶಲ್ಯ ಹೊಂದಿರುವವರು. AI ಕ್ಷೇತ್ರಕ್ಕೆ ಅಗತ್ಯವಿರುವ ಉನ್ನತ ತಾಂತ್ರಿಕ ಜ್ಞಾನ, ಇಂಗ್ಲಿಷ್ ಭಾಷಾ ಪ್ರಾವೀಣ್ಯ, ನಿರಂತರ ತರಬೇತಿ ಬಹುತೇಕರಿಗೆ ಇನ್ನೂ ನುಂಗಲಾರದ ತುತ್ತು.

ಇದಕ್ಕೆ ವಿರುದ್ಧವಾಗಿ, AI ಈಗಾಗಲೇ ಡೇಟಾ ಎಂಟ್ರಿ, ಬ್ಯಾಕ್‌ಆಫೀಸ್ ಕೆಲಸಗಳು, ಕಾಲ್‌ಸೆಂಟರ್, ಕಂಟೆಂಟ್ ರೈಟಿಂಗ್ ಕೆಲಸಗಳು ಮತ್ತು ಅಕೌಂಟಿಂಗ್‌ನಂತಹ ಉದ್ಯೋಗಗಳನ್ನು ತಾನೇ ಮಾಡುತ್ತಿದೆ. ಅಂದರೆ, ಹೊಸ ಉದ್ಯೋಗಗಳು ಸೃಷ್ಟಿಯಾಗುವ ವೇಗಕ್ಕಿಂತ, ಹಳೆಯ ಉದ್ಯೋಗಗಳನ್ನು ಕಳೆದುಕೊಳ್ಳುತ್ತಿರುವ ವೇಗ ಹೆಚ್ಚಾಗಿದೆಯಲ್ಲವೇ?

ಸರ್ಕಾರ ಕೌಶಲ್ಯಾಭಿವೃದ್ಧಿ (ಸ್ಕಿಲ್ಲಿಂಗ್, ರೀ-ಸ್ಕಿಲ್ಲಿಂಗ್) ಕಡೆ ಹೆಚ್ಚಿನ ಗಮನ ಹರಿಸಲಾಗುತ್ತಿದೆ ಎನ್ನುತ್ತಿದೆ. ಆದರೆ ವಾಸ್ತವದಲ್ಲಿ:

  • ಎಲ್ಲ ಯುವಕರಿಗೂ AI ತರಬೇತಿ ನೀಡುವುದು ಸಾಧ್ಯವಿಲ್ಲ
  • ಎಲ್ಲರೂ ಟೆಕ್ ವೃತ್ತಿಪರರಾಗಲು ಸಾಧ್ಯವಿಲ್ಲ
  • ಮಾರುಕಟ್ಟೆ ಇಷ್ಟು ಪ್ರಮಾಣದ AI ಉದ್ಯೋಗಗಳನ್ನು ಸೃಷ್ಟಿಸುವುದಿಲ್ಲ

ಹೀಗಾಗಿ ʼAI ಎಲ್ಲರಿಗೂ ಉದ್ಯೋಗ ಕೊಡುತ್ತದೆʼ ಎಂಬ ಮಾತು ವಾಸ್ತವಕ್ಕೆ ತೀರಾ ದೂರ.

ಹಾಗಾದರೆ AI ಆಧಾರಿತ ಆರ್ಥಿಕತೆಯಲ್ಲಿ ಕಡಿಮೆ ಕೌಶಲ್ಯ ಹೊಂದಿರುವ ಯುವಕರ ಗತಿಯೇನು? ಕೃಷಿ, ನಿರ್ಮಾಣ, ಸಣ್ಣ ಕೈಗಾರಿಕೆಗಳು, ಸೇವಾ ಕ್ಷೇತ್ರಗಳಲ್ಲಿ ಮಾನವ ಕೆಲಸಕ್ಕೆ ಯಾವ ರೀತಿ ಭದ್ರತೆ ನೀಡಲಾಗುತ್ತದೆ? ಈ ಪ್ರಶ್ನೆಗಳಿಗೆ ಇನ್ನೂ ಸ್ಪಷ್ಟ ನೀತಿ ಉತ್ತರಗಳು ಕಾಣುತ್ತಿಲ್ಲ.

ಇದನ್ನೂ ಓದಿ: ಪ್ರೀಮಿಯಂ ಲೇಖನ | ಲೈಂಗಿಕ ಗುರುತು ಪಾಶ್ಚಾತ್ಯವಲ್ಲ, ವಾಸ್ತವ; ಇದಕ್ಕೆ ಪುರಾಣಗಳೇ ಸಾಕ್ಷಿ

AI ಒಂದು ಅವಕಾಶವೂ ಹೌದು, ಅಪಾಯವೂ ಹೌದು. ಅದು ಕೆಲವರಿಗೆ ಉನ್ನತ ಉದ್ಯೋಗ ನೀಡಬಹುದು. ಆದರೆ ಬಹುಸಂಖ್ಯಾತರನ್ನು ಉದ್ಯೋಗದ ಅನಿಶ್ಚಿತತೆಗೆ ದೂಡುವ ಸಾಧ್ಯತೆಯೂ ಇದೆ. ನಿರುದ್ಯೋಗ ನಿವಾರಣೆ AI ಒಂದರ ಮೂಲಕ ಸ್ವಯಂಸಿದ್ಧವಾಗಿ ಆಗುವುದಿಲ್ಲ. ಅದಕ್ಕೆ ಸಮಗ್ರ ಶಿಕ್ಷಣ ಸುಧಾರಣೆ, ಮಾನವಕೇಂದ್ರಿತ ಉದ್ಯೋಗ ನೀತಿಗಳು ಮತ್ತು ಸಾಮಾಜಿಕ ಭದ್ರತಾ ನಿಯಮಗಳು ಅಗತ್ಯ.

AIನಲ್ಲಿ ಭವಿಷ್ಯವಿದೆ ಎಂಬುದು ನಿಜ. ಆದರೆ ಎಲ್ಲರ ಭವಿಷ್ಯ AI ಯಲ್ಲಿಲ್ಲ. ಪ್ರಧಾನಿ ನೀಡಿರುವ ಆಶಾವಾದ ರಾಜಕೀಯವಾಗಿ ಸಮರ್ಥನೆಯಾಗಬಹುದು. ಆದರೆ ಸಾಮಾಜಿಕ ಮತ್ತು ಆರ್ಥಿಕ ವಾಸ್ತವಿಕತೆ ಇದಕ್ಕಿಂತ ಹೆಚ್ಚು ಸಂಕೀರ್ಣವಾಗಿದೆ. AI ಏಕಕಾಲಕ್ಕೆ ಸಮಸ್ಯೆಗಳಿಗೆ ಪರಿಹಾರ ಹಾಗೂ ಹೊಸ ಸವಾಲುಗಳ ಬಾಗಿಲು. ಈ ಸಂಕೀರ್ಣತೆಯನ್ನು ಅರ್ಥ ಮಾಡಿಕೊಳ್ಳಲು ಸರ್ಕಾರದಿಂದ ಭರವಸೆ, ಕನಸುಗಳಷ್ಟೇ ಸಾಲದು, ಅದಕ್ಕೆ ಪೂರಕವಾಗಿ ಯುವಕರಿಗೆ ತಾಂತ್ರಿಕ ತರಬೇತಿ ನೀಡಬೇಕು. ಉನ್ನತ ಮಟ್ಟದ ತಂತ್ರಜ್ಞಾನದೊಡಗೂಡಿ ಕೆಲಸ ಮಾಡಲು ಅವರನ್ನು ಅಣಿಗೊಳಿಸಬೇಕು. ಭಾರತದ ವಿಶ್ವದ ಅಗ್ರಗಣ್ಯ ದೇಶಗಳ ಸಾಲಿನಲ್ಲಿ ಎಲ್ಲಾ ರೀತಿಯಲ್ಲೂ ಗುರುತಿಸಿಕೊಳ್ಳಲು ಸಾಧ್ಯವಾಗುವುದು ಆಗಲೇ!

WhatsApp Image 2025 05 16 at 6.54.26 PM
Sub Editor at Eedina.com |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ ರಾಷ್ಟ್ರೀಯವಾದ?

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ...

84.56 ಲಕ್ಷ ಕೋಟಿ ರೂ. ನಷ್ಟದ ಅಮೆರಿಕ – ಇರಾನ್ ಸಂಘರ್ಷದಲ್ಲಿ ನಿಜಕ್ಕೂ ಗೆದ್ದವರಾರು?

ಅಮೆರಿಕದ ಬಹುಕೋಟಿ ಡಾಲರ್ ವೆಚ್ಚದ 'ಪೇಟ್ರಿಯಾಟ್' ಮತ್ತು 'ಥಾಡ್' ಕ್ಷಿಪಣಿ ನಿರೋಧಕ...

ಅಸ್ಸಾಂ ಚುನಾವಣೆ: ಕಾಂಗ್ರೆಸ್ ಸೇರಿದ ಮಾಜಿ ಸಚಿವೆ ನಂದಿತಾ ಗೋರ್ಲೋಸಾ ಯಾರು?

ಅಸ್ಸಾಂ ವಿಧಾನಸಭಾ ಚುನಾವಣೆಗೆ (ಏಪ್ರಿಲ್ 9 ರಂದು ಒಂದೇ ಹಂತದಲ್ಲಿ ಮತದಾನ)...

ಡಾಲರ್ V/s ಯುವಾನ್: ಕೊಲ್ಲಿ ಯುದ್ಧ ಕರೆನ್ಸಿ ಯುದ್ಧವಾಗಿ ಮಾರ್ಪಾಡಾಗುತ್ತಿದೆಯೇ?

ಅಕಸ್ಮಾತ್ ಈ ಯುದ್ಧ ಮುಂದುವರೆದರೆ, ಕೆಲವು ದೇಶಗಳು ಡಾಲರ್ ಬದಲಿಗೆ ಯುವಾನ್...