ಗುಜರಾತ್‌ನ ಅಹಮದಾಬಾದ್‌ನಲ್ಲಿ ಸಂಭವಿಸಿದ ಏರ್ ಇಂಡಿಯಾ ಬೋಯಿಂಗ್ 787-8 ವಿಮಾನ ದುರಂತದಲ್ಲಿ ಪ್ರಯಾಣಿಸುತ್ತಿದ್ದ 242 ಪ್ರಯಾಣಿಕರಲ್ಲಿ ಓರ್ವ ಮಾತ್ರ ಬದುಕಿದ್ದಾನೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.
ಆಸನದ ಸಂಖ್ಯೆ 11ಎನಲ್ಲಿ ಪ್ರಯಾಣಿಸುತ್ತಿದ್ದ ರಮೇಶ್ ಎಂಬಾತ ಪವಾಡ ಸದೃಶ್ಯದಿಂದ ಬದುಕುಳಿದಿದ್ದು, ಆತನೊಬ್ಬನೆ ಯಾರ ಬೆಂಬಲವಿಲ್ಲದೆ ನಡೆದುಕೊಂಡು ಆಸ್ಪತ್ರೆಗೆ ತೆರಳಿದ್ದಾನೆ. ಆತ ತೆರಳುತ್ತಿದ್ದ ದೃಶ್ಯಗಳು ಎಲ್ಲಡೆ ವೈರಲ್ ಆಗಿವೆ.
ವಿಮಾನದಲ್ಲಿ 232 ಪ್ರಯಾಣಿಕರು ಹಾಗೂ 10 ವಿಮಾನಯನ ಸಿಬ್ಬಂದಿ ಇದ್ದ ವಿಮಾನ ಲಂಡನ್‌ಗೆ ತೆರಳುತ್ತಿದ್ದ ಸಂದರ್ಭದಲ್ಲಿ ತಾಂತ್ರಿಕ ದೋಷದಿಂದ ಅಹಮದಾಬಾದ್‌ನ ಮೇಘಾನಿ ಪ್ರದೇಶದ ಬಿಜೆ ಮೆಡಿಕಲ್ ಕಾಲೇಜಿನ ಹಾಸ್ಟೆಲ್‌ನ ಮೇಲೆ ಬಿದ್ದಿದೆ.
ದುರಂತದಲ್ಲಿ ಹಾಸ್ಟೆಲ್‌ನಲ್ಲಿದ್ದ 7 ವೈದ್ಯಕೀಯ ವಿದ್ಯಾರ್ಥಿಗಳು ಮೃತಪಟ್ಟಿದ್ದಾರೆ ಎಂದು ಹೇಳಲಾಗಿದೆ.ಮಧ್ಯಾಹ್ನ ಊಟದ ಸಮಯದಲ್ಲಿ ಮೆಡಿಕಲ್ ಕಾಲೇಜ್ ಕ್ಯಾಂಟೀನ್ ಕಟ್ಟಡಕ್ಕೆ ವಿಮಾನ ಬಡಿದಿದೆ. ಈ ಪರಿಣಾಮ ಮೆಡಿಕಲ್ ಕಾಲೇಜಿನ ಅಡುಗೆ ಮನೆಗೆ ಬೆಂಕಿ ಹೊತ್ತಿಕೊಂಡು ಗೋಡೆಗಳು ಛಿದ್ರ ಛಿದ್ರಗೊಂಡಿದೆ.
ದುರಂತದಲ್ಲಿ ಬಿಜೆಪಿ ನಾಯಕ, ಮಾಜಿ ಮುಖ್ಯಮಂತ್ರಿ ವಿಜಯ್ ರೂಪಾನಿ ಸೇರಿದಂತೆ 241 ಜನರು ಮೃತಪಟ್ಟಿದ್ದಾರೆ ಎಂದು ಅಹಮದಾಬಾದ್ ನಗರ ಪೊಲೀಸ್ ಕಮಿಷನರ್ ಮಾಹಿತಿ ನೀಡಿದ್ದಾರೆ.
ಇದನ್ನು ಓದಿದ್ದೀರಾ? ಗುಜರಾತ್‌ನಲ್ಲಿ ಏರ್ ಇಂಡಿಯಾ ವಿಮಾನ ಪತನ; Photo and Video gallery
ಅಹಮದಾಬಾದ್ ವಿಮಾನ ನಿಲ್ದಾಣದ ಬಳಿ ನಡೆದ ವಿಮಾನದ ಅಪಘಾತಕ್ಕೆ ಸಂಬಂಧಿಸಿದಂತೆ ಎಲ್ಲಾ ವಿವರಗಳನ್ನು ಸಂಘಟಿಸಲು ನಾಗರಿಕ ವಿಮಾನಯಾನ ಸಚಿವಾಲಯದಲ್ಲಿ ಕಾರ್ಯಾಚರಣಾ ನಿಯಂತ್ರಣ ಕೊಠಡಿಯನ್ನು ಸಕ್ರಿಯಗೊಳಿಸಲಾಗಿದೆ. ಅದಕ್ಕಾಗಿ 011-24610843, 9650391859 ದೂರವಾಣಿ ಸಂಖ್ಯೆಯನ್ನು ತೆರೆಯಲಾಗಿದೆ.





