ಏರ್ ಇಂಡಿಯಾ ವಿಮಾನದ ಗ್ರಾಹಕರಿಗೆ ನೀಡಿದ ಊಟದಲ್ಲಿ ಬ್ಲೇಡ್ ಪತ್ತೆ

Date:

ಏರ್‌ ಇಂಡಿಯಾ ವಿಮಾನದಲ್ಲಿ ಪ್ರಯಾಣಿಸಿದ ಪ್ರಯಾಣಿಕರೊಬ್ಬರಿಗೆ ನೀಡಿದ ಆಹಾರದಲ್ಲಿ ಲೋಹದ ಬ್ಲೇಡ್‌ ಪತ್ತೆಯಾಗಿದೆ.

ಜೂನ್‌ 9 ರಂದು ಪತ್ರಕರ್ತ ಮ್ಯಾಥ್ಯೋಸ್‌ ಪೌಲ್‌ ಅವರು ಏರ್‌ ಇಂಡಿಯಾ ವಿಮಾನ 175ರಲ್ಲಿ ಬೆಂಗಳೂರಿನಿಂದ ಅಮೆರಿಕಾದ ಸ್ಯಾನ್‌ ಪ್ರಾನ್ಸಿಸ್ಕೋಗೆ ಪ್ರಯಾಣಿಸುತ್ತಿದ್ದಾಗ ಅವರಿಗೆ ನೀಡಿದ ಊಟದಲ್ಲಿ ಲೋಹದ ಬ್ಲೇಡ್‌ ಪತ್ತೆಯಾಗಿದೆ.

ಪೌಲ್‌ ಅವರು ತಮಗಾದ ಆಘಾತಕಾರಿ ಅನುಭವದ ಬಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

“ನನಗೆ ನೀಡದ ಆಹಾರವನ್ನು ಸೇವಿಸಿ ಆಗಿಯುವ ಎರಡು ಅಥವಾ ಮೂರು ಸೆಕೆಂಡ್‌ ಸಂದರ್ಭದಲ್ಲಿ ಏನೋ ಇದೆ ಎಂಬುದನ್ನು ಅರಿತುಕೊಂಡೆ. ತಕ್ಷಣದಲ್ಲಿ ನಾನದನ್ನು ಉಗಿದಾಗ ಅದು ಲೋಹದ ವಸ್ತುವಾಗಿತ್ತು. ಅದೃಷ್ಟವಶಾತ್ ಯಾವುದೇ ಹಾನಿ ಸಂಭವಿಸಲಿಲ್ಲ. ಖಂಡಿತವಾಗಿ ಇದರ ತಪ್ಪಿನ ಹೊಣೆ ಏರ್‌ ಇಂಡಿಯಾ ಕ್ಯಾಟರಿಂಗ್‌ ಸೇವೆಯವರದ್ದಾದರೂ ಆದರೆ ಈ ಘಟನೆಯು ನಾನು ಏರ್‌ ಇಂಡಿಯಾ ಮೇಲೆ ಹೊಂದಿರುವ ಘನತೆಗೆ ಕಳಂಕ ತಂದಿದೆ. ಒಂದು ವೇಳೆ ಈ ಮೆಟಲ್‌ ವಸ್ತುವನ್ನು ಮಗು ಸೇವಿಸಿದ್ದರೆ ಏನಾಗುತ್ತಿತ್ತು” ಎಂದು ಪೌಲ್‌ ಅವರು ಎಕ್ಸ್‌ನಲ್ಲಿ ತಿಳಿಸಿದ್ದಾರೆ.

ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ನೀಟಾಗಿಲ್ಲ ಎನ್ನುವುದು ಗೊತ್ತಿದ್ದೂ ಭಂಡತನ ಮೆರೆದ ಬಿಜೆಪಿ

“ಮೊದಲ ಚಿತ್ರವು ನಾನು ಆಹಾರ ಸೇವಿಸುವಾಗ ಉಗಿದ ಮೆಟಲ್‌ ಚಿತ್ರದ್ದಾಗಿದ್ದರೆ ಎರಡನೇ ಚಿತ್ರ ನನ್ನ ಆಹಾರ ಸೇವಿಸುವುದಕ್ಕಿಂತ ಮುಂಚಿನ ಇರುವ ಆಹಾರದ್ದಾಗಿದೆ. ಯಾವುದೇ ವಿಮಾನದಲ್ಲಿ ಬ್ಲೇಡ್‌ ಪತ್ತೆಯಾಗುವುದು ಅಪಾಯಕಾರಿಯಾಗಿದೆ. ಇದು ನನ್ನ ನಾಲಿಗೆಯನ್ನು ಕತ್ತರಿಸುತ್ತಿತ್ತು” ಎಂದು ಏರ್‌ ಇಂಡಿಯಾಗೆ ಟ್ಯಾಗ್‌ ಮಾಡಿದ್ದಾರೆ.

ಈ ಆರೋಪ ಮಾಡಿದ ಕೆಲವು ದಿನಗಳ ನಂತರ ಪೌಲ್‌ ಅವರಿಗೆ ಪ್ರತಿಕ್ರಿಯೆ ನೀಡಿರುವ ಏರ್‌ ಇಂಡಿಯಾ ಘಟನೆಯ ಪರಿಹಾರವಾಗಿ ವಿಶ್ವದ ಯಾವುದೇ ಪ್ರದೇಶಗಳಿಗೆ ಉಚಿತ ಬ್ಯಸಿನೆಸ್‌ ಕ್ಲಾಸ್‌ ಪ್ರಯಾಣ ನೀಡುವುದಾಗಿ ಹೇಳಿದೆ. ಇದನ್ನು ಲಂಚ ಎಂದು ಕರೆದಿರುವ ಪೌಲ್‌ ಅವರು ನಿರಾಕರಿಸಿದ್ದಾರೆ.

ಏರ್‌ ಇಂಡಿಯಾ ಟಾಟಾ ಗ್ರೂಪ್‌ ಒಡೆತನದ ಸಂಸ್ಥೆಯಾಗಿದ್ದು, ಘಟನೆಯ ನಂತರ ಸಂಸ್ಥೆಯ ಗ್ರಾಹಕ ಸೇವಾ ಮುಖ್ಯ ಕಾರ್ಯ ನಿರ್ವಹಣ ಅಧಿಕಾರಿ ರಾಜೇಶ್‌ ದೋಗ್ರಾ ಅವರು ಊಟದಲ್ಲಿ ವಿದೇಶಿ ವಸ್ತು ಇದ್ದಿದ್ದನ್ನು ದೃಢೀಕರಿಸಿದ್ದಾರೆ.

“ ನಮ್ಮ ಕ್ಯಾಟರಿಂಗ್‌ ಪಾಲುದಾರರು ನೀಡಿರುವ ಆಹಾರದಲ್ಲಿ ತರಕಾರಿ ಸಂಸ್ಕರಿಸುವ ಯಂತ್ರ ಪತ್ತೆಯಾಗಿರುವುದನ್ನು ನಾವು ತನಿಖೆಗೆ ಒಳಪಡಿಸುತ್ತೇವೆ. ನಾವು ನಮ್ಮ ಪಾಲುದಾರರೊಂದಿಗೆ ಸಂಸ್ಕರಣೆಯನ್ನು ಪರಿಶೀಲಿಸುವುದು, ವಿಶೇಷವಾಗಿ ಘನ ತರಕಾರಿಗಳನ್ನು ಕತ್ತರಿಸಿದ ನಂತರ ಸುರಕ್ಷತಾ ಕ್ರಮಗಳನ್ನು ಬಲಪಡಿಸುವುದಕ್ಕೆ ಮತ್ತಷ್ಟು ಆದ್ಯತೆ ನೀಡುತ್ತೇವೆ” ಎಂದು ರಾಜೇಶ್ ದೋಗ್ರಾ ತಿಳಿಸಿದ್ದಾರೆ.

ಏರ್‌ ಇಂಡಿಯಾ ವಿಮಾನದಲ್ಲಿ ಅಸ್ವಚ್ಛತೆ ಕ್ಯಾಬಿನ್‌ಗಳು, ಕಾರ್ಯ ನಿರ್ವಹಿಸದ ಯಂತ್ರಗಳು ಹಾಗೂ ಕಳಪೆ ಗುಣಮಟ್ಟದ ಆಹಾರಗಳು ಪತ್ತೆಯಾಗಿರುವ ಬಗ್ಗೆ ದೂರುಗಳು ವರದಿಯಾಗಿವೆ.

WhatsApp Image 2025 11 17 at 3.21.17 PM
ಈ ದಿನ ಡೆಸ್ಕ್
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ ರಾಷ್ಟ್ರೀಯವಾದ?

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ...

ಅಸ್ಸಾಂ ಚುನಾವಣೆ: ಕಾಂಗ್ರೆಸ್ ಸೇರಿದ ಮಾಜಿ ಸಚಿವೆ ನಂದಿತಾ ಗೋರ್ಲೋಸಾ ಯಾರು?

ಅಸ್ಸಾಂ ವಿಧಾನಸಭಾ ಚುನಾವಣೆಗೆ (ಏಪ್ರಿಲ್ 9 ರಂದು ಒಂದೇ ಹಂತದಲ್ಲಿ ಮತದಾನ)...

ಡಾಲರ್ V/s ಯುವಾನ್: ಕೊಲ್ಲಿ ಯುದ್ಧ ಕರೆನ್ಸಿ ಯುದ್ಧವಾಗಿ ಮಾರ್ಪಾಡಾಗುತ್ತಿದೆಯೇ?

ಅಕಸ್ಮಾತ್ ಈ ಯುದ್ಧ ಮುಂದುವರೆದರೆ, ಕೆಲವು ದೇಶಗಳು ಡಾಲರ್ ಬದಲಿಗೆ ಯುವಾನ್...

ರಾಜ್ಯಸಭೆಗೆ ಸದಾನಂದಗೌಡರ ಪರ ಬಿಎಸ್‌ವೈ ; ದೇವೇಗೌಡರ ಪರ ಹೆಚ್‌ಡಿಕೆ ಲಾಬಿ

ಕೇಂದ್ರ ಉಕ್ಕು ಮತ್ತು ಭಾರಿ ಕೈಗಾರಿಕೆ ಸಚಿವ ಹೆಚ್‌.ಡಿ ಕುಮಾರಸ್ವಾಮಿ ನವದೆಹಲಿಯಲ್ಲಿ...