ವಿಮಾನಗಳ ಟಿಕೆಟ್ ರವು 35-39 ಸಾವಿರ ರೂ.ಗಳಿಗೆ ಏರಿಕೆಯಾಗಲು ಹೇಗೆ ಸಾಧ್ಯ. ಇಂಡಿಗೋ ಬಿಕ್ಕಟ್ಟಿನಿಂದ ಉಂಟಾಗಿರುವ ಅವ್ಯವಸ್ಥೆಯ ಸಂದರ್ಭಗಳನ್ನು ನಿಭಾಯಿಸಲು ಯಾವ ರೀತಿಯ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಕೇಂದ್ರ ಸರ್ಕಾರವನ್ನು ದೆಹಲಿ ಹೈಕೋರ್ಟ್ ಪ್ರಶ್ನಿಸಿದೆ. ಟಿಕೆಟ್ ದರಗಳು ಯದ್ವಾತದ್ವಾ ಏರಿಕೆಯಾಗುತ್ತಿದ್ದರೂ, ಅದನ್ನು ತಡೆಯುವಲ್ಲಿ ಸರ್ಕಾರ ಯಾಕೆ ವಿಫಲವಾಗಿದೆ ಎಂದು ತರಾಟೆಗೆ ತೆಗೆದುಕೊಂಡಿದೆ.
“ಇಂಡಿಗೋ ಸಂಸ್ಥೆಯ ಬಿಕ್ಕಟ್ಟಿನ ಪರಿಸ್ಥಿತಿ ಏಕೆ ಸಂಭವಿಸಿತು? ಇಂಡಿಗೋ ವಿಮಾನಕ್ಕೆ ಟಿಕೆಟ್ ಬುಕ್ ಮಾಡಿದ್ದ ಪ್ರಯಾಣಿಕರಿಗೆ ಸಹಾಯ ಮಾಡಲು ಯಾವ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ?” ಎಂದು ಹೈಕೋರ್ಟ್ ಪ್ರಶ್ನಿಸಿದೆ.
“ಬಿಕ್ಕಟ್ಟು ಇರುವ ಸಮಯದಲ್ಲಿ ಇತರ ವಿಮಾನಯಾನ ಸಂಸ್ಥೆಗಳು ಲಾಭ ಪಡೆಯಲು ಅನುಮತಿಸಲು ಹೇಗೆ ಸಾಧ್ಯ? ವಿಮಾನ ಪ್ರಯಾಣದ ಟಿಕೆಟ್‌ಗಳ ಬೆಲೆ35-39 ಸಾವಿರದವರೆಗೆ ಏರಿಕೆಯಾಗುವುದು ಹೇಗೆ? ಇತರ ವಿಮಾನಯಾನ ಸಂಸ್ಥೆಗಳು ದುಬಾರಿ ಟಿಕೆಟ್ ಮಾರಾಟಲು ಮಾಡಲು ಹೇಗೆ ಪ್ರಾರಂಭಿಸಿದವು? ಎಂಬುದೇ ಗಂಭೀರ ಪ್ರಶ್ನೆಯಾಗಿದೆ” ಎಂದು ನ್ಯಾಯಮೂರ್ತಿ ಗೆಡೆಲಾ ಹೇಳಿದ್ದಾರೆ.
ಹೈಕೋರ್ಟ್ ಪ್ರಶ್ನೆಗೆ ಉತ್ತರಿಸಿದ ಹೆಚ್ಚುವರಿ ಸಾಲಿಸಿಟರ್ ಜನರಲ್, “ವಿಮಾನಯಾನ ಸಂಸ್ಥೆಗೆ (ಇಂಡಿಗೋ) ಈಗಾಗಲೇ ಶೋ-ಕಾಸ್ ನೋಟಿಸ್ ನೀಡಲಾಗಿದೆ. ಸಂಸ್ಥೆಯು ಕ್ಷಮೆಯಾಚಿಸಿದೆ” ಎಂದು ಹೇಳಿದ್ದಾರೆ.
ಆದಾಗ್ಯೂ, “ವಿಮಾನ ನಿಲ್ದಾಣಗಳಲ್ಲಿ ಸಿಲುಕಿಕೊಂಡಿರುವ ಪ್ರಯಾಣಿಕರಿಗೆ ನೀಡಲಾದ ಅಗತ್ಯ ನೆರವು ಮತ್ತು ಪ್ರಯಾಣಕ್ಕೆ ಒದಗಿಸುವ ವ್ಯವಸ್ಥೆಗಳ ಕುರಿತು ವಿವರಿಸುವಂತೆ ಸರ್ಕಾರಕ್ಕೆ ಸೂಚಿಸಿದ ಪೀಠವು, “ಪರಿಸ್ಥಿತಿ ಈ ಹಂತವನ್ನು ತಲುಪಲು ನೀವು ಅವಕಾಶ ಮಾಡಿಕೊಟ್ಟಿದ್ದೀರಿ” ಎಂದು ಅಸಮಾಧಾನ ವ್ಯಕ್ತಪಡಿಸಿದೆ.




