ಎಟಿಎಂ ಕಾರ್ಡ್‌ನ ಹಣ ದೋಚಲು ಹೊಸ ರೀತಿಯ ವಂಚಕರ ಪ್ರವೇಶ

Date:

ಒಂದು ವಾರದ ಹಿಂದಷ್ಟೆ ಎಟಿಎಂ ಯಂತ್ರವನ್ನು ಹಾಳುಗೆಡವಿ ಜನರಿಗೆ ಮೋಸ ಮಾಡಿದ್ದ ಮೂವರನ್ನು ದೆಹಲಿ ಪೊಲೀಸರು ಬಂಧಿಸಿದ್ದರು.

ಪೊಲೀಸರ ಮಾಹಿತಿಯ ಪ್ರಕಾರ ವಂಚಕರು ಎಟಿಎಂ ಕಾರ್ಡ್‌ ಸ್ವೈಪ್‌ ಮಾಡುವ ರೀಡರ್‌ ಅನ್ನು ಹಾಳು ಮಾಡಿ ಹಣ ದೊಚಿದ್ದರು.

ವಂಚಕರು ಮೋಸ ಮಾಡುವ ವಿಧಾನ

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಮೊದಲಿಗೆ ವಂಚಕರು ಎಟಿಎಂ ಯಂತ್ರದಲ್ಲಿ ಕಾರ್ಡ್‌ ರೀಡ್‌ ಮಾಡುವ ಭಾಗವನ್ನು ಕಾರ್ಡ್‌ ವಾಪಸ್‌ ಬರದ ರೀತಿ ಹಾಳು ಮಾಡಿರುತ್ತಾರೆ

ಗ್ರಾಹಕರು ಹಣ ಪಡೆಯಲು ಎಂಟಿಎಂ ಕೇಂದ್ರದೊಳಗೆ ಪ್ರವೇಶಿಸಿ ಎಟಿಎಂ ಯಂತ್ರದಲ್ಲಿನ ಕಾರ್ಡ್‌ ರೀಡಿಂಗ್‌ನಲ್ಲಿ ಹಣ ಸ್ವೈಪ್‌ ಮಾಡಿದಾಗ ಕಾರ್ಡ್‌ ಯಂತ್ರದೊಳಗೆ ಸಿಲುಕಿಕೊಳ್ಳುತ್ತದೆ

ಎಟಿಎಂ ಬಳಿಯಲ್ಲೇ ಇದ್ದು ಹಣ ಪಡೆಯುವ ಹಾಗೆ ಎಟಿಎಂ ಕೇಂದ್ರದೊಳಗೆ ಪ್ರವೇಶಿಸುವ ವಂಚಕರು ಯಂತ್ರದಲ್ಲಿ ಕಾರ್ಡ್‌ ಸಿಲುಕಿರುವುದನ್ನು ತೆಗೆಯಲು ಸಹಾಯ ಮಾಡುವಂತೆ ನಟಿಸಿ ಪಿನ್‌ ನಂಬರ್‌ಅನ್ನು ಪಡೆಯುತ್ತಾರೆ

ಪಿನ್‌ ನಂಬರ್‌ಅನ್ನು ಪಡೆದ ವಂಚಕರು, ಯಂತ್ರದಲ್ಲಿ ಸಂಖ್ಯೆಗಳನ್ನು ಒತ್ತಿದವರಂತೆ ನಟಿಸುತ್ತಾರೆ. ಸಮಸ್ಯೆ ಸರಿಯಾಗಿಲ್ಲ ತಾವು ಬ್ಯಾಂಕ್‌ ಸಿಬ್ಬಂದಿಯನ್ನು ಭೇಟಿ ಮಾಡಿ ಎಂದು ಗ್ರಾಹಕರಿಗೆ ಹೇಳಿ ಕಳುಹಿಸುತ್ತಾರೆ

ಗ್ರಾಹಕರು ತೆರಳಿದ ನಂತರ, ವಂಚಕರು ಯಂತ್ರದೊಳಗೆ ಸಿಲುಕಿದ ಕಾರ್ಡ್‌ಅನ್ನು ಪಡೆದುಕೊಂಡು ಹಣವನ್ನು ವಿತ್‌ಡ್ರಾ ಮಾಡಿಕೊಳ್ಳುತ್ತಾರೆ

ಈ ಸುದ್ದಿ ಓದಿದ್ದೀರಾ? ಎಟಿಎಂ ಕಾರ್ಡ್ ಬಳಸದೆಯೇ, ಇನ್ನು ಮುಂದೆ ಯುಪಿಐ ಬಳಸಿ ನಗದು ವಿತ್ ಡ್ರಾ ಮಾಡಬಹುದು

ಗ್ರಾಹಕರು ವಂಚಕರಿಂದ ರಕ್ಷಿಸಿಕೊಳ್ಳುವುದು ಹೇಗೆ?

ಗ್ರಾಹಕರು ಎಟಿಎಂ ಯಂತ್ರಕ್ಕೆ ಕಾರ್ಡ್‌ ಹಾಕುವ ಮುನ್ನ ಯಂತ್ರವನ್ನು ಎಚ್ಚರಿಕೆಯಿಂದ ಪರಿಶೀಲಿಸಬೇಕು. ಯಂತ್ರವು ಹಾಳಾಗಿದೆಯೆ,ಸ್ವೈಪ್‌ ಮಾಡುವ ಭಾಗಗಳು ದುರಸ್ಥಿಯ ರೀತಿಯಲ್ಲಿವೆಯೆ ಅಥವಾ ಅನುಮಾನಸ್ಪದ ರೀತಿಯಲ್ಲಿ ವೈರ್‌ಗಳು, ಸಲಕರಣೆಯನ್ನು ಜೋಡಿಸಲಾಗಿದೆಯೆ ಎಂಬುದನ್ನು ಪರಿಶೀಲಿಸಿ.

ಎಟಿಎಂ ಪಿನ್‌ ಅನ್ನು ಒತ್ತುವ ಸಂದರ್ಭದಲ್ಲಿ ನಿಮ್ಮ ಕೈಅನ್ನು ನಂಬರ್‌ ಮೇಲೆ ಅಡ್ಡ ಇಟ್ಟು ಒತ್ತಿರಿ. ಇದು ಗುಪ್ತ ಕ್ಯಾಮರಾಗಳಿಂದ ನಿಮ್ಮ ಪಿನ್‌ ಸಂಖ್ಯೆಗಳನ್ನು ರಕ್ಷಿಸುತ್ತದೆ

ಬ್ಯಾಂಕ್‌ ಬಳಿಯಿರುವ ಎಟಿಎಂ ಯಂತ್ರಗಳು ಅಥವಾ ಸಿಸಿಟಿವಿಗಳಿರುವ ಎಟಿಎಂ ಯಂತ್ರಗಳನ್ನು ಬಳಸಿ

ಬ್ಯಾಂಕ್‌ ಸ್ಟೇಟ್‌ಮೆಂಟ್‌ಗಳು ಹಾಗೂ ವಹಿವಾಟುಗಳನ್ನು ಪರಿಶೀಲಿಸಿ. ಎಲ್ಲ ವಹಿವಾಟುಗಳು ಸರಿಯಾಗಿವೆ ಎಂದು ಖಚಿತಪಡಿಸಿಕೊಳ್ಳಿ

ಮೋಸದ ವಹಿವಾಟುಗಳನ್ನು ತಡೆಯಲು ನಿಯಮಿತವಾಗಿ ನಿಮ್ಮ ಮೊಬೈಲ್‌ನ ಎಸ್‌ಎಂಎಸ್‌ ಸಂದೇಶವನ್ನು ಪರೀಕ್ಷಿಸುತ್ತಿರಿ

WhatsApp Image 2025 11 17 at 3.21.17 PM
ಈ ದಿನ ಡೆಸ್ಕ್
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ ರಾಷ್ಟ್ರೀಯವಾದ?

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ...

ಅಸ್ಸಾಂ ಚುನಾವಣೆ: ಕಾಂಗ್ರೆಸ್ ಸೇರಿದ ಮಾಜಿ ಸಚಿವೆ ನಂದಿತಾ ಗೋರ್ಲೋಸಾ ಯಾರು?

ಅಸ್ಸಾಂ ವಿಧಾನಸಭಾ ಚುನಾವಣೆಗೆ (ಏಪ್ರಿಲ್ 9 ರಂದು ಒಂದೇ ಹಂತದಲ್ಲಿ ಮತದಾನ)...

ಡಾಲರ್ V/s ಯುವಾನ್: ಕೊಲ್ಲಿ ಯುದ್ಧ ಕರೆನ್ಸಿ ಯುದ್ಧವಾಗಿ ಮಾರ್ಪಾಡಾಗುತ್ತಿದೆಯೇ?

ಅಕಸ್ಮಾತ್ ಈ ಯುದ್ಧ ಮುಂದುವರೆದರೆ, ಕೆಲವು ದೇಶಗಳು ಡಾಲರ್ ಬದಲಿಗೆ ಯುವಾನ್...

ರಾಜ್ಯಸಭೆಗೆ ಸದಾನಂದಗೌಡರ ಪರ ಬಿಎಸ್‌ವೈ ; ದೇವೇಗೌಡರ ಪರ ಹೆಚ್‌ಡಿಕೆ ಲಾಬಿ

ಕೇಂದ್ರ ಉಕ್ಕು ಮತ್ತು ಭಾರಿ ಕೈಗಾರಿಕೆ ಸಚಿವ ಹೆಚ್‌.ಡಿ ಕುಮಾರಸ್ವಾಮಿ ನವದೆಹಲಿಯಲ್ಲಿ...