ತನ್ನ ಗುಡಿಸಲನ್ನು ಜೆಸಿಬಿ ಕೆಡವುದಕ್ಕೂ ಮುನ್ನ ಶಾಲಾ ಪುಸ್ತಕ ಎದೆಗಪ್ಪಿಕೊಂಡು ಓಡಿದ ಬಾಲಕಿ: ವಿಡಿಯೋ ವೈರಲ್

Date:

ಉತ್ತರ ಪ್ರದೇಶದ ಅಂಬೇಡ್ಕರ್ ನಗರ ಜಿಲ್ಲೆಯ ಜಲಾಲ್‌ಪುರದಲ್ಲಿ ಏಳು ವರ್ಷದ ಬಾಲಕಿಯ ಮನೆಯನ್ನು ಬುಲ್ಡೋಜರ್ ಮೂಲಕ ಕೆಡವುತ್ತಿರುವಾಗ, ಬಾಲಕಿಯು ತನ್ನ ಪುಸ್ತಕ ಮತ್ತು ಶಾಲಾ ಬ್ಯಾಗನ್ನು ಎದೆಗಪ್ಪಿಕೊಂಡು ಓಡಿದ್ದು, ಈ ದೃಶ್ಯಗಳು ಸೋಷಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿದೆ.

ಉತ್ತರ ಪ್ರದೇಶದ ಜಲಾಲ್‌ಪುರದ ಅನನ್ಯಾ ಎಂಬ ಹುಡುಗಿಯ ದೃಶ್ಯಗಳು ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಹರಿದಾಡಿದ್ದು, ತನ್ನ ಶಿಕ್ಷಣ ಮುಂದುವರಿಸುವುದಕ್ಕಾಗಿ ಹುಡುಗಿಯ ಪರಿಶ್ರಮಕ್ಕೆ ವ್ಯಾಪಕ ಶ್ಲಾಘನೆ ವ್ಯಕ್ತವಾಗಿದೆ.

ಜನರು ಗುಡಿಸಲುಗಳನ್ನು ಕೆಡವುವ ಮೊದಲು ಅವುಗಳಿಂದ ಅಗತ್ಯ ವಸ್ತುಗಳನ್ನು ಸ್ಥಳಾಂತರಿಸುತ್ತಿದ್ದರು. ಅನನ್ಯಾ ತನ್ನ ಪುಸ್ತಕಗಳ ಬಗ್ಗೆ ನೆನಪಾಗಿ ಪಕ್ಕದಲ್ಲಿನ ಗುಡಿಸಲನ್ನು ನೆಲಸಮ ಮಾಡುವಾಗ ತನ್ನ ಶಾಲಾ ಚೀಲ ಮತ್ತು ಪುಸ್ತಕಗಳೊಂದಿಗೆ ಗುಡಿಸಲಿನಿಂದ ಹೊರಗೆ ಓಡುತ್ತಿರುವುದು ಮೊಬೈಲ್‌ನಲ್ಲಿ ಸೆರೆಯಾಗಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ವಿದ್ಯಾರ್ಥಿನಿ ಅನನ್ಯಾ ಉತ್ತರ ಪ್ರದೇಶದ ಅಂಬೇಡ್ಕರ್ ನಗರ ಜಿಲ್ಲೆಯ ಜಲಾಲ್‌ಪುರದವರು. ಸ್ಥಳೀಯ ಆಡಳಿತವು ಭೂ ಅತಿಕ್ರಮಣ ಆರೋಪ ಹೊರಿಸಿ ಈ ಪ್ರದೇಶದಲ್ಲಿ ಹಲವಾರು ಮನೆಗಳನ್ನು ಕೆಡವಿತ್ತು. ಪೊಲೀಸ್ ಅಧಿಕಾರಿಗಳ ನೆರವಿನೊಂದಿಗೆ ಉಪ ಜಿಲ್ಲಾ ಮ್ಯಾಜಿಸ್ಟ್ರೇಟ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಲಾಯಿತು. ಬುಲ್ಡೋಜರ್ ಬಳಸಿದಾಗ ಹಲವಾರು ಅಸಹಾಯಕ ಸ್ಥಳೀಯರು ಅಳುವುದು ಮತ್ತು ಕಿರುಚುವುದು ವಿಡಿಯೋದಲ್ಲಿ ಸೆರೆಯಾಗಿದೆ.

ಅನನ್ಯಾ ಹಳ್ಳಿಯ ಪ್ರಾಥಮಿಕ ಶಾಲೆಯಲ್ಲಿ ಕಲಿಯುತ್ತಿರುವ ಒಂದನೇ ತರಗತಿಯ ವಿದ್ಯಾರ್ಥಿನಿಯಾಗಿದ್ದು, ವೀಡಿಯೊ ದೃಶ್ಯಗಳು ವೈರಲಾದ ಬಳಿಕ, ಯುಪಿಯ ಯೋಗಿ ಸರ್ಕಾರದ ವಿರುದ್ಧ ವ್ಯಾಪಕ ಟೀಕೆಗಳು ವ್ಯಕ್ತವಾಗಿವೆ. ಇಂತಹ ಕ್ರಮಗಳ ಮೂಲಕ ಅನನ್ಯಾ ಅವರಂತಹ ಅನೇಕ ಮಕ್ಕಳ ಕನಸುಗಳನ್ನು ಸರ್ಕಾರ ನಾಶಮಾಡಿದೆ ಎಂದು ಸಾಮಾಜಿಕ ಮಾಧ್ಯಮ ಬಳಕೆದಾರರು ಟೀಕಿಸುತ್ತಿದ್ದಾರೆ. ಜೆಸಿಬಿ ಮೂಲಕ ಶಿಕ್ಷಣದ ಹಕ್ಕನ್ನು ಸಹ ನಿರಾಕರಿಸಲಾಗುತ್ತಿದೆ ಎಂಬ ಟೀಕೆಯನ್ನೂ ಕೂಡ ಮಾಡುತ್ತಿದ್ದಾರೆ. ಸುಪ್ರೀಂ ಕೋರ್ಟ್‌ನ ಕಟ್ಟುನಿಟ್ಟಿನ ಎಚ್ಚರಿಕೆಗಳ ಹೊರತಾಗಿಯೂ ಯುಪಿ ಸರ್ಕಾರ ಬುಲ್ಡೋಜರ್ ರಾಜ್ ವಿರುದ್ಧ ತನ್ನ ಕ್ರಮವನ್ನು ಮುಂದುವರೆಸಿದೆ.

ಈ ವಿಡಿಯೋ ವೈರಲ್ ಆದ ಬಳಿಕ ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಹಾಕಿರುವ ಸಮಾಜವಾದಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಖಿಲೇಶ್ ಯಾದವ್, ಅಂಬೇಡ್ಕರ್ ನಗರದ ಆಡಳಿತಾಧಿಕಾರಿಯೊಬ್ಬರು ತಮ್ಮ ಹೆಮ್ಮೆಯನ್ನು ಪ್ರದರ್ಶಿಸಲು ಜನರ ಗುಡಿಸಲುಗಳನ್ನು ಕೆಡವುತ್ತಿದ್ದಾರೆ. ಈ ಮಧ್ಯೆಯೇ ಓರ್ವ ಪುಟ್ಟ ಹುಡುಗಿ ತನ್ನ ಭವಿಷ್ಯವನ್ನು ರೂಪಿಸಿಕೊಳ್ಳುವ ಪುಸ್ತಕಗಳನ್ನು ಉಳಿಸಿಕೊಳ್ಳಲು ಓಡಿ ಹೋಗುವಂತೆ ಮಾಡಲಾಗಿದೆ. ‘ಬೇಟಿ ಬಚಾವೋ, ಬೇಟಿ ಪಡಾವೋ’ ಎಂದು ಹೇಳುವವರು ಇದೇ ಬಿಜೆಪಿಯವರು. ಇದು ವಿಪರ್ಯಾಸ ಎಂದು ಬರೆದಿದ್ದಾರೆ.

ಪುಟ್ಟ ಬಾಲಕಿಯ ಶಿಕ್ಷಣಾಸಕ್ತಿಯನ್ನು ಗಮನಿಸಿದ ಅಂಬೇಡ್ಕರ್ ನಗರ ಜಿಲ್ಲೆಯ ಸಮಾಜವಾದಿ ಪಕ್ಷದ ಮಾಜಿ ಜಿಲ್ಲಾಧ್ಯಕ್ಷ ಮತ್ತು ಫೈಜಾಬಾದ್ ಜಿಲ್ಲಾ ಸಹಕಾರಿ ಬ್ಯಾಂಕಿನ ಮಾಜಿ ಅಧ್ಯಕ್ಷ ರಾಮ್ ಶಕಲ್ ಯಾದವ್ ಅವರು, ಬಾಲಕಿಗೆ ಮುಂದಿನ ಸಿಬಿಎಸ್‌ಇ ಮಂಡಳಿಯಿಂದ ಇಂಟರ್ಮೀಡಿಯೇಟ್‌ವರೆಗೆ ಉಚಿತ ಶಿಕ್ಷಣ ಮತ್ತು ವಸತಿ ಒದಗಿಸುವುದಾಗಿ ಘೋಷಿಸಿದ್ದಾರೆ.

ಉತ್ತರ ಪ್ರದೇಶದ ಸ್ಥಳೀಯ ಪತ್ರಕರ್ತ ಅನಿಲ್ ಅವರೊಂದಿಗೆ ಮಾತನಾಡಿದ ಪುಟ್ಟ ಬಾಲಕಿ ಅನನ್ಯಾ, “ನಮ್ಮ ಮನೆಯನ್ನು ಕೆಡವಿದಾಗ ನನಗೆ ನನ್ನ ಪುಸ್ತಕಗಳ ಬಗ್ಗೆ ಆತಂಕವಾಯಿತು. ಅದಕ್ಕಾಗಿ ಓಡಿ ಹೋಗಿ, ಸಂಗ್ರಹಿಸಿಟ್ಟೆ. ಯಾಕೆಂದರೆ ನನಗೆ ಅದು ನಷ್ಟವಾಗುತ್ತಿದ್ದಲ್ಲಿ ಮುಂದೆ ತರಗತಿಗಳಿಗೆ ಹೋಗುವುದಕ್ಕೆ ಹಾಗೂ ಶಿಕ್ಷಣ ಪಡೆಯುವುದಕ್ಕೆ ಸಾಧ್ಯವಾಗುವುದಿಲ್ಲ ಎಂದು ಗೊತ್ತಿತ್ತು” ಎಂದು ತಿಳಿಸಿದ್ದಾರೆ.

ಪತ್ರಕರ್ತ ಅನಿಲ್ ಅವರು ಅನನ್ಯಾ ಕುಟುಂಬಕ್ಕೆ ಆರ್ಥಿಕ ನೆರವು ನೀಡುವಂತೆ ಸೋಷಿಯಲ್ ಮೀಡಿಯಾ ಮೂಲಕ ಕೋರಿಕೊಂಡಿದ್ದು, ಅನನ್ಯಾಳ ತಾಯಿಯ ಬ್ಯಾಂಕ್ ಖಾತೆಯ ವಿವರವನ್ನು ಹಂಚಿಕೊಂಡಿದ್ದಾರೆ. ಹಲವಾರು ಮಂದಿ ನೆಟ್ಟಿಗರು ಆರ್ಥಿಕ ನೆರವನ್ನು ಕಳುಹಿಸುತ್ತದ್ದಾರೆ.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ ರಾಷ್ಟ್ರೀಯವಾದ?

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ...

ಅಸ್ಸಾಂ ಚುನಾವಣೆ: ಕಾಂಗ್ರೆಸ್ ಸೇರಿದ ಮಾಜಿ ಸಚಿವೆ ನಂದಿತಾ ಗೋರ್ಲೋಸಾ ಯಾರು?

ಅಸ್ಸಾಂ ವಿಧಾನಸಭಾ ಚುನಾವಣೆಗೆ (ಏಪ್ರಿಲ್ 9 ರಂದು ಒಂದೇ ಹಂತದಲ್ಲಿ ಮತದಾನ)...

ಡಾಲರ್ V/s ಯುವಾನ್: ಕೊಲ್ಲಿ ಯುದ್ಧ ಕರೆನ್ಸಿ ಯುದ್ಧವಾಗಿ ಮಾರ್ಪಾಡಾಗುತ್ತಿದೆಯೇ?

ಅಕಸ್ಮಾತ್ ಈ ಯುದ್ಧ ಮುಂದುವರೆದರೆ, ಕೆಲವು ದೇಶಗಳು ಡಾಲರ್ ಬದಲಿಗೆ ಯುವಾನ್...

ರಾಜ್ಯಸಭೆಗೆ ಸದಾನಂದಗೌಡರ ಪರ ಬಿಎಸ್‌ವೈ ; ದೇವೇಗೌಡರ ಪರ ಹೆಚ್‌ಡಿಕೆ ಲಾಬಿ

ಕೇಂದ್ರ ಉಕ್ಕು ಮತ್ತು ಭಾರಿ ಕೈಗಾರಿಕೆ ಸಚಿವ ಹೆಚ್‌.ಡಿ ಕುಮಾರಸ್ವಾಮಿ ನವದೆಹಲಿಯಲ್ಲಿ...