ಗೋವಾದಲ್ಲಿರುವ ಬಿಐಟಿಎಸ್ ಪಿಲಾನಿ ಕ್ಯಾಂಪಸ್‌ನಲ್ಲಿ 2ನೇ ವರ್ಷದ ವಿದ್ಯಾರ್ಥಿಯೊಬ್ಬರು ಹಾಸ್ಟೆಲ್‌ನ ಕೊಠಡಿಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆಂದು ಶಂಕಿಸಲಾಗಿದೆ. ಆದಾಗ್ಯೂ, ಕ್ಯಾಂಪಸ್‌ನಲ್ಲಿ ಕಳೆದ 10 ತಿಂಗಳಲ್ಲಿ ನಡೆದಿರುವ 5ನೇ ಸಾವು ಪ್ರಕರಣ ಇದಾಗಿದೆ.
ಪೊಲೀಸ್ ಮೂಲಗಳ ಪ್ರಕಾರ, ವಿದ್ಯಾರ್ಥಿಯ ಮೃತದೇಹವು ಹಾಸ್ಟೆಲ್ ಕೋಣೆಯ ಹಾಸಿಗೆ ಮೇಲೆ ಪತ್ತೆಯಾಗಿದೆ. ಆತನ ದೇಹದ ಮೇಲೆ ಯಾವುದೇ ಗಾಯದ ಗುರುತುಗಳಿಲ್ಲ. ಪೊಲೀಸರು ತಿನಿಖೆ ನಡೆಸುತ್ತಿದ್ದಾರೆ. ಮರಣೋತ್ತರ ಪರೀಕ್ಷೆಯ ನಂತರ ಸಾವಿಗೆ ಕಾರಣವೇನು ಎಂಬುದು ಗೊತ್ತಾಗಲಿದೆ ಎಂದು ಹೇಳಿದ್ದಾರೆ.
ಅವರು ಖಿನ್ನತೆಗೆ ಒಳಗಾಗಿದ್ದರು. ಅದಕ್ಕಾಗಿ, ಖಿನ್ನತೆ ನಿವಾರಣೆಗೆ ಚಿಕಿತ್ಸೆ ಮತ್ತು ಔಷಧ ತೆಗೆದುಕೊಳ್ಳುತ್ತಿದ್ದರು ಎಂದು ಹೇಳಲಾಗಿದೆ.
“ಅವರ ಸಾವು ಇದು ಆತ್ಮಹತ್ಯೆ ಪ್ರಕರಣವೇ ಎಂದು ಖಚಿತವಾಗಿಲ್ಲ. ಯಾವುದೇ ಡೆತ್‌ನೋಟ್ ಪತ್ತೆಯಾಗಿಲ್ಲ. ಪ್ರಾಥಮಿಕ ತನಿಖೆಯ ಪ್ರಕಾರ, ವಿದ್ಯಾರ್ಥಿಯ ಸಂಗಾತಿ ಕೆಲವು ತಿಂಗಳ ಹಿಂದೆ ಹೈದರಾಬಾದ್‌ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು. ವಿದ್ಯಾರ್ಥಿಯ ಕುಟುಂಬವೂ ಕೂಡ ಇತ್ತೀಚೆಗಷ್ಟೇ ಗೋವಾಕ್ಕೆ ಸ್ಥಳಾಂತರಗೊಂಡಿತ್ತು” ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಕಳೆದ ವರ್ಷ ವಿದ್ಯಾರ್ಥಿಯು ಬಿಐಟಿಎಸ್ ಹೈದರಾಬಾದ್ ಕ್ಯಾಂಪಸ್‌ನಲ್ಲಿ ಪ್ರವೇಶ ಪಡೆದಿದ್ದರು. ಬಳಿಕ, 2025ರಲ್ಲಿ ಗೋವಾ ಗೋವಾ ಕ್ಯಾಂಪಸ್‌ಗೆ ವರ್ಗಾವಣೆ ಪಡೆದು ಇಂಟಿಗ್ರೇಟೆಡ್ ಎಂಎಸ್ಸಿ ಭೌತಶಾಸ್ತ್ರ ವಿಭಾಗದಲ್ಲಿ ಅಧ್ಯಕ್ಷಯ ನಡೆಸುತ್ತಿದ್ದರು.
ಕಳೆದ ತಿಂಗಳು, ಇದೇ ಕ್ಯಾಂಪಸ್‌ನಲ್ಲಿ 20 ವರ್ಷದ ವಿದ್ಯಾರ್ಥಿಯೊಬ್ಬ ತನ್ನ ಹಾಸ್ಟೆಲ್ ಕೋಣೆಯಲ್ಲಿ ಶವವಾಗಿ ಪತ್ತೆಯಾಗಿದ್ದರು. ಇನ್ನು, 2024ರ ಡಿಸೆಂಬರ್‌ನಿಂದ 2025ರ ಮೇ ನಡುವೆ ಮೂರು ಆತ್ಮಹತ್ಯೆ ಪ್ರಕರಣಗಳು ನಡೆದಿದ್ದವು. ಆ ಸಮಯದಲ್ಲಿ, ಸಂಸ್ಥೆಯು ಆಂತರಿಕ ತನಿಖೆಗೆ ಮುಂದಾಗಿತ್ತು. ಆದಾಗ್ಯೂ, ಕ್ಯಾಂಪಸ್‌ನಲ್ಲಿ ಸಾವಿನ ಪ್ರಕರಣಗಳು ಮುಂದುವರೆದಿವೆ.




