ಸಿಜೆಐ ಗವಾಯಿ ಹಲ್ಲೆಗೆ ಯತ್ನ; ಬರಗೂರು ಖಂಡನೆ

Date:

ಸುಪ್ರೀಂಕೋರ್ಟಿನ ಮುಖ್ಯ ನ್ಯಾಯಮೂರ್ತಿ ಬಿ ಆರ್ ಗವಾಯಿ ಅವರ ಮೇಲೆ ಶೂ ಎಸೆಯಲು ಯತ್ನಿಸಿದ ಘಟನೆಯನ್ನು ಬಂಡಾಯ ಸಾಹಿತಿ ಬರಗೂರು ರಾಮಚಂದ್ರಪ್ಪ ತೀವ್ರವಾಗಿ ಖಂಡಿಸಿದ್ದಾರೆ.

ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದ ಅವರು, “ಸುಪ್ರೀಂಕೋರ್ಟಿನ ಮುಖ್ಯ ನ್ಯಾಯಾಧೀಶರಾದ ಬಿ ಆರ್ ಗವಾಯಿ ಅವರ ಮೇಲೆ ಶೂ ಎಸೆಯಲು ಯತ್ನಿಸಿದ ಘಟನೆಯನ್ನು ನಾನು ವೈಯಕ್ತಿಕವಾಗಿ ಮತ್ತು ರಾಜ್ಯ ಬಂಡಾಯ ಸಾಹಿತ್ಯ ಸಂಘಟನೆಯ ಪರವಾಗಿ ಖಂಡಿಸುತ್ತೇನೆ.

ಹಿರಿಯ ವಕೀಲರೊಬ್ಬರು ಹೀಗೆ ಮುಖ್ಯನ್ಯಾಯಾಧೀಶರ ಮೇಲೆ ಶೂ ಎಸೆದ ಪ್ರಕರಣವು ವೈಯಕ್ತಿಕ ಅಸಹನೆ ಮಾತ್ರವಾಗಿರದೆ, ದೇಶದಲ್ಲಿ ಆವರಿಸಿಕೊಳ್ಳುತ್ತಿರುವ ಅಮಾನವೀಯ ಧಾರ್ಮಿಕ ಮೂಲಭೂತವಾದದ ಒಂದು ಸಂಕೇತವಾಗಿದೆ. ಧರ್ಮದ ಹೆಸರಿನಲ್ಲಿ ನೈಜ ಧಾರ್ಮಿಕತೆಗೆ ಧಕ್ಕೆ ತರುವ ಇಂತಹ ಕೃತ್ಯಗಳನ್ನು ಯಾರೇ ಮಾಡಿದರೂ ಖಂಡಿಸಬೇಕು. ಅದರಲ್ಲೂ ಸಂವಿಧಾನದ ಆಶಯಗಳಿಗೆ ನಿಷ್ಠರಾಗಲೇಬೇಕಾದ ವಕೀಲರು ನ್ಯಾಯಾಲಯದ ಕಾರ್ಯ ಕಲಾಪದ ಸಂದರ್ಭವನ್ನೇ ಆಯ್ಕೆ ಮಾಡಿಕೊಂಡು ಶೂ ಎಸೆದದ್ದು ಮನುವಾದಿ ವಿಕೃತಿಯ ಪ್ರತೀಕವಾಗಿದೆ. ಸೌಹಾರ್ದತೆ ಮತ್ತು ಸಮಾನತೆಗಳ ಪರಂಪರೆಯುಳ್ಳ ಭಾರತದಲ್ಲಿ ಇಂತಹ ದ್ವೇಷ ಮತ್ತು ಅಸಹಿಷ್ಣುತೆಯ ಕೃತ್ಯಗಳು ನಡೆಯುವುದು ಧಾರ್ಮಿಕವೂ ಅಲ್ಲ, ನೈತಿಕವೂ ಅಲ್ಲ, ಕಾನೂನಾತ್ಮಕವೂ ಅಲ್ಲ. ಆದ್ದರಿಂದ ಇಂತಹ ಕೃತ್ಯಗಳನ್ನು ನಿರ್ದಿಷ್ಟ ಧರ್ಮ, ಪಕ್ಷ, ಪಂಥಗಳನ್ನು ಮೀರಿ ಮಾನವೀಯವಾದವರೆಲ್ಲರೂ ಖಂಡಿಸಬೇಕು; ಶಿಕ್ಷೆಯಾಗಬೇಕು.

ಈ ಕೃತ್ಯ ನಡೆದಾಗ ವಿಚಲಿತರಾಗದೆ ಕಾರ್ಯಕಲಾಪಗಳನ್ನು ಮುಂದುವರೆಸುವ ಮೂಲಕ ಮುತ್ಸದ್ಧಿತನವನ್ನು ತೋರಿದ ಮುಖ್ಯ ನ್ಯಾಯಾಮೂರ್ತಿ ಬಿ ಆರ್ ಗವಾಯಿಯವರ ನಡೆ ಅಭಿನಂದನೀಯವಾದುದು” ಎಂದು ಹೇಳಿದ್ದಾರೆ.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಪುದುಚೆರಿ ಚುನಾವಣೆ | ‘ಇಂಡಿಯಾ’ ಗೊಂದಲ ನಿವಾರಣೆ: ಕಾಂಗ್ರೆಸ್ 16, ಡಿಎಂಕೆ 14 ಕ್ಷೇತ್ರಗಳಲ್ಲಿ ಸ್ಪರ್ಧೆ

ಪುದುಚೆರಿಯ 'ಇಂಡಿಯಾ' ಮೈತ್ರಿಕೂಟದ ಪ್ರಮುಖ ಪಕ್ಷಗಳಾದ ಡಿಎಂಕೆ ಮತ್ತು ಕಾಂಗ್ರೆಸ್‌ ಪಕ್ಷಗಳ...

ತಮಿಳುನಾಡು ಚುನಾವಣೆ | ಎಐಎಡಿಎಂಕೆ 178, ಬಿಜೆಪಿ 27 ಕ್ಷೇತ್ರಗಳಲ್ಲಿ ಸ್ಪರ್ಧೆ

ಈ ಬಾರಿಯ ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಗೆದ್ದು ಅಧಿಕಾರಕ್ಕೇರಲೇ ಬೇಕೆಂದು ಪಣ...

ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಬ್ಯಾಲೆಟ್ ಪೇಪರ್ ಬಳಕೆ; ವಿಧಾನಸಭೆಯಲ್ಲಿ ಮಸೂದೆ ಅಂಗೀಕಾರ

ರಾಜ್ಯದ ಸ್ಥಳೀಯ ಸಂಸ್ಥೆಗಳ ಚುನಾವಣಾ ಪ್ರಕ್ರಿಯೆಯಲ್ಲಿ ಬದಲಾವಣೆ ತರಲು ರಾಜ್ಯ ಸರ್ಕಾರ...

ಪ್ರಧಾನಿ ಮೋದಿ ಅಮೆರಿಕಕ್ಕೆ 100% ಶರಣಾಗಿದ್ದಾರೆ: ರಾಹುಲ್ ಗಾಂಧಿ

ಪಶ್ಚಿಮ ಏಷ್ಯಾದಲ್ಲಿನ ಯುದ್ಧದ ಪರಿಸ್ಥಿತಿ ಮತ್ತು ದೇಶದ ಆರ್ಥಿಕ ನೀತಿಗಳ ಕುರಿತು...