ಪ್ರಯಾಣ ಆರಂಭಿಸಬೇಕಿದ್ದ 24 ಗಂಟೆಗಳ ಒಳಗೆ ರದ್ದಾದ ವಿಮಾನಗಳಿಂದಾಗಿ ತೊಂದರೆಗೆ ಸಿಲುಕಿಕೊಂಡಿದ್ದ ಗ್ರಾಹಕರಿಗೆ (ಪ್ರಯಾಣಿಕರು) ಪರಿಹಾರವಾಗಿ ಒಟ್ಟು 500 ಕೋಟಿ ರೂ.ಗಳಿಗೂ ಹೆಚ್ಚು ಹಣವನ್ನು ಪಾವತಿಸಲಾಗುತ್ತದೆ ಎಂದು ಇಂಡಿಗೋ ಹೇಳಿಕೊಂಡಿದೆ.
‘ಎಕ್ಸ್’ನಲ್ಲಿ ಹೇಳಿಕೆ ಬಿಡುಗಡೆ ಮಾಡಿರುವ ಇಂಡಿಗೋ, “ಪರಿಹಾರ/ಮರುಪಾವತಿ ಪ್ರಕ್ರಿಯೆಯನ್ನು ಸಾಧ್ಯವಾದಷ್ಟು ಪಾರದರ್ಶಕ, ಸುಲಭ ಮತ್ತು ತೊಂದರೆರಹಿತವಾಗಿ ಪೂರ್ಣಗೊಳಿಸುವುದು ನಮ್ಮ ಗುರಿಯಾಗಿದೆ. ನಮ್ಮ ಪ್ರಸ್ತುತ ಅಂದಾಜಿನ ಪ್ರಕಾರ, ಹಾರಾಟ ಆರಂಭವಾಗುವ 24 ಗಂಟೆಗಳ ಒಳಗೆ ವಿಮಾನಗಳು ರದ್ದಾದ ಗ್ರಾಹಕರಿಗೆ ಮತ್ತು/ಅಥವಾ ಕೆಲವು ವಿಮಾನ ನಿಲ್ದಾಣಗಳಲ್ಲಿ ಸಿಲುಕಿಕೊಂಡ ಗ್ರಾಹಕರಿಗೆ ಭರಿಸಬೇಕಿರುವ ಪರಿಹಾರ ಮೊತ್ತವು 500 ಕೋಟಿ ರೂ.ಗಳನ್ನು ಮೀರಲಿದೆ” ಎಂದು ಹೇಳಿದ್ದಾಎರ.
“ಡಿಸೆಂಬರ್ 3, 4 ಹಾಗೂ 5ರಂದು ವಿಮಾನ ನಿಲ್ದಾಣಗಳಲ್ಲಿ ಗ್ರಾಹಕರು ಸಿಲುಕಿಕೊಂಡು, ತೀವ್ರ ಪರಿಣಾಮ ಎದುರಿಸಿದ್ದಾರೆ. ಆ ಎಲ್ಲ ಪ್ರಯಾಣಿಕರನ್ನು ಗುರುತಿಸುವ ಪ್ರಕ್ರಿಯೆ ನಡೆಯುತ್ತಿದೆ. ಪರಿಹಾರವನ್ನು ಸರಾಗವಾಗಿ ವಿತರಿಸಲು ಜನವರಿಯಲ್ಲಿ ಎಲ್ಲ ಗ್ರಾಹಕರನ್ನು ತಲುಪುತ್ತೇವೆ. ತ್ವರಿತವಾಗಿ ಮರುಪಾವತಿ ಮಾಡಲು ಬದ್ದರಾಗಿದ್ದೇವೆ” ಎಂದು ಹೇಳಿದೆ.
— IndiGo (@IndiGo6E) December 12, 2025
“ಶುಕ್ರವಾರ ದೇಶಾದ್ಯಂತ 2,000ಕ್ಕೂ ಹೆಚ್ಚು ಇಂಡಿಗೋ ವಿಮಾನಗಳು ಹಾರಾಟ ನಡೆಸಿವೆ. ಕಳದೆ ವಾರದಿಂದ ಸಂಸ್ಥೆಯು ದೈನಂದಿನ ಕಾರ್ಯಕ್ಷಮತೆ ಸುಧಾರಿಸಿದೆ. ಕಳೆದ ನಾಲ್ಕು ದಿನಗಳಿಂದ ನಿರಂತರ ಕಾರ್ಯಾಚರಣೆಯ ಸಾಮಾನ್ಯವಾಗಿಯೂ, ಸ್ಥರತೆಯಿಂದಲೇ ಸಾಗುತ್ತಿದೆ. ನಮ್ಮ ಎಲ್ಲ 138 ಕಾರ್ಯಾಚರಣೆ ತಾಣಗಳು ಮಾನದಂಡಗಳ ಪ್ರಕಾರ ಸಮಯಕ್ಕೆ ಸರಿಯಾಗಿ ಕಾರ್ಯ ನಿರ್ವಹಿಸುತ್ತಿವೆ” ಎಂದು ಇಂಡಿಗೋ ತಿಳಿಸಿದೆ.




