ಉತ್ತರ ಪ್ರದೇಶದ ಅಯೋಧ್ಯೆ – ಬೆಂಗಳೂರು ವಿಮಾನಯಾನಕ್ಕೆ ಕೇಂದ್ರ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಚಾಲನೆ ಇಂದು(ಜ.17) ಚಾಲನೆ ನೀಡಿದರು.
ಅಯೋಧ್ಯೆ ಮತ್ತು ಬೆಂಗಳೂರು, ಅಯೋಧ್ಯೆಯಿಂದ ಕೋಲ್ಕತ ಸಂಪರ್ಕಿಸುವ ವಿಮಾನಯಾನಕ್ಕೆ ಚಾಲನೆ ನೀಡಲಾಗಿದೆ. ಅಯೋಧ್ಯೆಯಿಂದ ಬೆಂಗಳೂರಿಗೆ ಹಾರಾಡುವ ಮೊದಲ ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನಕ್ಕೆ ಸಚಿವರು ಹಸಿರು ನಿಶಾನೆ ತೋರಿದರು.
ಆಯಾ ವಿಮಾನಗಳು ಸದ್ಯ ವಾರಕ್ಕೆ 3 ಬಾರಿ ಹಾರಾಟ ನಡೆಸಲಿದ್ದು, ಮುಂದಿನ ದಿನಗಳಲ್ಲಿ ಹೆಚ್ಚಾಗಲಿದೆ ಎಂದು ಜ್ಯೋತಿರಾದಿತ್ಯ ಸಿಂಧಿಯಾ ಮಾಹಿತಿ ನೀಡಿದರು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಗಾಂಧಿ ಪ್ರಣೀತ ರಾಮನೇ ಬೇರೆ; ಮೋದಿ ರಾಮನೇ ಬೇರೆ
ಏರ್ ಇಂಡಿಯಾ ಎಕ್ಸ್‌ಪ್ರೆಸ್ ಲಖನೌ ಮತ್ತು ವಾರಣಾಸಿಯಿಂದ ದೇಶೀಯ ಮತ್ತು ವಿದೇಶಿ ವಿಮಾನ ಸೇವೆಯನ್ನು ಒದಗಿಸಲಾಗುವುದು. ಇದೇ ಮಾರ್ಚ್ 1 ರಿಂದ ಹೈದರಾಬಾದ್‌ನಿಂದ ವಾರಣಾಸಿಗೆ ವಿಮಾನ ಸಂಪರ್ಕ ಕಲ್ಪಿಸುತ್ತೇವೆ ಎಂದು ಸಿಂಧಿಯಾ ಹೇಳಿದರು.
ಟಿಕೆಟ್ ದರ
ಇಂದು ಚಾಲನೆ ಸಿಕ್ಕಿರುವ ವಿಮಾನ ವಾರದಲ್ಲಿ ಮೂರು ಬಾರಿ ಅಯೋಧ್ಯೆಯಿಂದ ಬೆಂಗಳೂರು ನಡುವೆ ಹಾರಾಡಲಿದೆ. ಏರ್ ಇಂಡಿಯಾ ಎಕ್ಸ್‌ಪ್ರೆಸ್‌ನಲ್ಲಿ ಬೆಂಗಳೂರಿನಿಂದ ಅಯೋಧ್ಯೆವರೆಗೆ ವಿಮಾನ ಟಿಕೆಟ್ ದರ 10 ಸಾವಿರ ರೂಪಾಯಿಯಿಂದ 20 ಸಾವಿರ ರೂಪಾಯಿ ತನಕ ಇದೆ. ಅಯೋಧ್ಯೆ ರಾಮಮಂದಿರ ಉದ್ಘಾಟನೆ ಹಿನ್ನೆಲೆಯಲ್ಲಿ ವಿಮಾನ ಟಿಕೆಟ್ ದರಲ್ಲಿ ಭಾರೀ ಏರಿಕೆಯಾಗಿದೆ. ಜನವರಿ 20ಕ್ಕೂ ಮುನ್ನವೇ ಎಲ್ಲ ವಿಮಾನಗಳ ಟಿಕೆಟ್ ಈಗಾಗಲೇ ಬುಕ್ ಆಗಿವೆ.





