ಮುರ್ಶಿದಾಬಾದ್‌ನಲ್ಲಿ ‘ಬಾಬರಿ ಮಸೀದಿ’: ಕಬೀರ್ ನಡೆ ಬಿಜೆಪಿ ಚುನಾವಣಾ ತಂತ್ರ!

Date:

ಹುಮಾಯೂನ್ ಕಬೀರ್ ಅವರು ಬೆಲ್ಡಂಗಾದ ರೇಜಿನಗರ್‌ನಲ್ಲಿ ನಿರ್ಮಿಸಲು ಉದ್ದೇಶಿಸಿರುವ ಮಸೀದಿಯನ್ನು ಅಯೋಧ್ಯೆಯ ಬಾಬರಿ ಮಸೀದಿಗೆ ಪರ್ಯಾಯವೆಂದು ಹೇಳುತ್ತಿದ್ದಾರೆ. 300 ಕೋಟಿ ರೂ. ವೆಚ್ಚದಲ್ಲಿ ಉದ್ದೇಶಿತ ಮಸೀದಿಯ ಜೊತೆಗೆ ಆಸ್ಪತ್ರೆ, ಗೆಸ್ಟ್ ಹೌಸ್ ಹಾಗೂ ಸಭಾಂಗಣವನ್ನೂ ನಿರ್ಮಿಸುವುದಾಗಿ ಘೋಷಿಸಿದ್ದಾರೆ.

ಅಯೋಧ್ಯೆಯ ಬಾಬರಿ ಮಸೀದಿ ಧ್ವಂಸಗೊಂಡ 33ನೇ ವರ್ಷಾಚರಣೆಯ ದಿನವಾದ, 2025ರ ಡಿಸೆಂಬರ್ 6ರಂದು ಪಶ್ಚಿಮ ಬಂಗಾಳದ ಮುರ್ಶಿದಾಬಾದ್‌ನ ಬೆಲ್ಡಂಗಾದಲ್ಲಿ ಹೊಸ ಬಾಬರಿ ಮಸೀದಿ ನಿರ್ಮಾಣಕ್ಕೆ ಅಡಿಗಲ್ಲು ಹಾಕಲಾಗಿದೆ. ಬಿಜೆಪಿ ತೊರೆದು ಟಿಎಂಸಿ ಸೇರಿರುವ ಮತ್ತು ಟಿಎಂಸಿಯಿಂದಲೂ ಅಮಾನತುಗೊಂಡಿರುವ ಶಾಸಕ ಹುಮಾಯೂನ್ ಕಬೀರ್ ಅವರು ‘ಬಾಬರಿ ಮಸೀದಿ ಶೈಲಿಯ’ ಮಸೀದಿ ನಿರ್ಮಾಣಕ್ಕೆ ಅಡಿಗಲ್ಲು ಹಾಕಿದ್ದಾರೆ. ಮಸೀದಿ ನಿರ್ಮಾಣಕ್ಕೆ ಅಡಿಗಲ್ಲು ಹಾಕಿದ ಮೂರೇ ದಿನಗಳಲ್ಲಿ ಬರೋಬ್ಬರಿ 2.5 ಕೋಟಿ ರೂ. ಹಣ ಹರಿದುಬಂದಿದೆ. ಕಬೀರ್ ಅವರ ಈ ಧೋರಣೆಯು ಮುಸ್ಲಿಂ ಮತಗಳನ್ನು ವಿಪಕ್ಷಗಳಿಂದ ಬೇರೆಡೆಗೆ ತಿರುಗಿಸುವ ಬಿಜೆಪಿಯ ಚುನಾವಣಾ ತಂತ್ರದ ಭಾಗವೇ ಎಂಬ ಅನುಮಾನವನ್ನು ಹುಟ್ಟುಹಾಕಿದೆ.

ಪಶ್ಚಿಮ ಬಂಗಾಳದಲ್ಲಿ 2026ರಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದೆ. ಆಡಳಿತಾರೂಢ ಮಮತಾ ಬ್ಯಾನರ್ಜಿ ನೇತೃತ್ವದ ಟಿಎಂಸಿಯಿಂದ ಅಧಿಕಾರ ಕಸಿದುಕೊಳ್ಳಲು ಬಿಜೆಪಿ ಹವಣಿಸುತ್ತಿದೆ. ಅದಕ್ಕಾಗಿಯೇ, ಬಂಗಾಳ ಕವಿ ಬಂಕಿಮ ಚಂದ್ರ ಚಟರ್ಜಿ ಬರೆದ ‘ವಂದೇ ಮಾತರಂ’ ಗೀತೆಯನ್ನು ಚರ್ಚೆಗೆ ತಂದಿರುವ ಬಿಜೆಪಿ, ಬಂಗಾಳಿಗರನ್ನು ಸೆಳೆಯಲು ಯತ್ನಿಸುತ್ತಿದೆ. ಮುಂದುವರೆದು ಮುಸ್ಲಿಂ ಮತಗಳನ್ನು ವಿಪಕ್ಷಗಳಿಂದ (ಟಿಎಂಸಿ, ಕಾಂಗ್ರೆಸ್‌) ಚದುರಿಸಲು ಕಬೀರ್‌ ಅವರನ್ನು ಬಳಸಿಕೊಳ್ಳುತ್ತಿದೆ ಎಂದೂ ಹೇಳಲಾಗುತ್ತಿದೆ.

ಕಬೀರ್ ಅವರ ಧೋರಣೆಗಳು ಮುಸ್ಲಿಂ ಸಮುದಾಯದಲ್ಲಿ ಧ್ರುವೀಕರಣವನ್ನು ದಟ್ಟಗೊಳಿಸುತ್ತವೆ. ಕಬೀರ್ ಅವರು ಬಂಗಾಳದಲ್ಲಿ ಮತ್ತೊಬ್ಬ ಓವೈಸಿ ಅಥವಾ ಬದ್ರುದ್ದೀನ್ ಅಜ್ಮಲ್ ಆಗಿ ಬೆಳೆಯಬಹುದು. ಮುಸ್ಲಿಂ ಮತಗಳನ್ನು ಧ್ರುವೀಕರಿಸಬಹುದು. ಮಾತ್ರವಲ್ಲದೆ, ಇದೇ ಕಾರಣಕ್ಕಾಗಿ ಹಿಂದು ಮತಗಳೂ ಕೂಡ ಬಿಜೆಪಿ ಎಡೆಗೆ ಕ್ರೋಡೀಕರಣಗೊಳ್ಳಬಹುದು ಎಂಬ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ. ಇದೇ ಹೊತ್ತಿನಲ್ಲಿ ಕಬೀರ್ ಅವರನ್ನು ಪಕ್ಷದಿಂದ ಟಿಎಂಸಿ ಅಮಾನತುಗೊಳಿಸಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಹುಮಾಯೂನ್ ಕಬೀರ್ ಅವರು ಬೆಲ್ಡಂಗಾದ ರೇಜಿನಗರ್‌ನಲ್ಲಿ ನಿರ್ಮಿಸಲು ಉದ್ದೇಶಿಸಿರುವ ಮಸೀದಿಯನ್ನು ಅಯೋಧ್ಯೆಯ ಬಾಬರಿ ಮಸೀದಿಗೆ ಪರ್ಯಾಯವೆಂದು ಹೇಳುತ್ತಿದ್ದಾರೆ. 300 ಕೋಟಿ ರೂ. ವೆಚ್ಚದಲ್ಲಿ ಉದ್ದೇಶಿತ ಮಸೀದಿಯ ಜೊತೆಗೆ ಆಸ್ಪತ್ರೆ, ಗೆಸ್ಟ್ ಹೌಸ್ ಹಾಗೂ ಸಭಾಂಗಣವನ್ನೂ ನಿರ್ಮಿಸುವುದಾಗಿ ಘೋಷಿಸಿದ್ದಾರೆ. ‘ಇದು ಮುಸ್ಲಿಮರ ವಾಗ್ದಾನ: ಬಾಬರಿ ಮಸೀದಿ ನಿರ್ಮಾಣವಾಗುತ್ತದೆ’ ಎಂದಿದ್ದಾರೆ.

ಮುರ್ಶಿದಾಬಾದ್‌ನ ಕೋಮು ಸೂಕ್ಷ್ಮ ಪ್ರದೇಶದಲ್ಲಿ ಮಸೀದಿ ನಿರ್ಮಾಣಕ್ಕೆ ಕಬೀರ್ ಅಡಿಗಲ್ಲು ಹಾಕಿದ್ದಾರೆ. ಈ ಮಸೀದಿ ನಿರ್ಮಾಣಕ್ಕೆ ಹರಿದುಬರುತ್ತಿರುವ ಹಣವು ಹೊಸ ದಾಖಲೆಯನ್ನು ಸೃಷ್ಟಿಸುತ್ತಿದೆ. ಡಿಸೆಂಬರ್ 6ರಿಂದ 9ರವರೆಗೆ 57 ಲಕ್ಷ ರೂ. ನಗದು ಮತ್ತು 2.47 ಕೋಟಿ ರೂ. ಆನ್‌ಲೈನ್ ಮೂಲಕ ಸಂಗ್ರಹವಾಗಿದೆ. ಭಾರತದ ಉದ್ಯಮಿಗಳು ಮತ್ತು ಮುಸ್ಲಿಮ್ ಸಮುದಾಯವು ಹಣವನ್ನು ನೀಡುತ್ತಿದೆ ಎಂದು ಕಬೀರ್ ಹೇಳಿದ್ದಾರೆ.

ಈ ಹಣ ಹರಿವು ಮುಸ್ಲಿಂ ಸಮುದಾಯದ ಭಾವನಾತ್ಮಕ ಬೆಂಬಲವನ್ನು ತೋರುತ್ತದೆ. ಆದರೆ, ಇದು ಮುಂದಿನ ಚುನಾವಣೆಯ ಮೇಲೆ ಹಲವು ಆಯಾಮಗಳಲ್ಲಿ ಪ್ರಭಾವ ಬೀರುವ ಸಾಧ್ಯತೆಗಳಿವೆ. 2016ರಿಂದ ನಿರಂತರವಾಗಿ ಪಕ್ಷಾಂತರ ಮಾಡುತ್ತಲೇ ಇರುವ ಕಬೀರ್ ಅವರ ರಾಜಕೀಯ ಜೀವನಕ್ಕೆ ಬಹುದೊಡ್ಡ ತಿರುವನ್ನೂ ನೀಡಲಿದೆ.

ಕಬೀರ್ ಅವರು 2016ರಲ್ಲಿ ಕಾಂಗ್ರೆಸ್‌ನಿಂದ ಟಿಎಂಸಿಗೆ ಮತ್ತು 2019ರಲ್ಲಿ ಟಿಎಂಸಿಯಿಂದ ಬಿಜೆಪಿಗೆ ಹೋಗಿದ್ದರು. 2019ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಿ ಸೋತಿದ್ದ ಕಬೀರ್, 2021ರಲ್ಲಿ ಮರಳಿ ಟಿಎಂಸಿ ಸೇರಿದ್ದರು. ಅಂದಿನ ವಿಧಾನಸಭಾ ಚುನಾವಣೆಯಲ್ಲಿ ಭಾರತಪುರ ಕ್ಷೇತ್ರದಲ್ಲಿ ಟಿಎಂಸಿಯಿಂದ ಕಣಕ್ಕಿಳಿದು ಗೆದ್ದಿದ್ದರು. ಇದೀಗ, ಅವರನ್ನು ಟಿಎಂಸಿ ಹೊರಹಾಕಿದೆ. ಅವರು ಡಿಸೆಂಬರ್ 22ರಂದು ಹೊಸ ಪಕ್ಷ ಘೋಷಿಸುವುದಾಗಿಯೂ, 2026ರ ಚುನಾವಣೆಯಲ್ಲಿ ಕನಿಷ್ಠ 135 ಸ್ಥಾನಗಳಲ್ಲಿ ಸ್ಪರ್ಧಿಸುವುದಾಗಿಯೂ ಹೇಳಿಕೊಂಡಿದ್ದಾರೆ. ಮುಂದಿನ ಚುನಾವಣೆಯಲ್ಲಿ ಟಿಎಂಸಿಯಿಂದ ಮುಸ್ಲಿಂ ಮತಗಳನ್ನು ಚದುರಿಸಿ, ‘ಕಿಂಗ್‌ಮೇಕರ್’ ಆಗಬೇಕೆಂಬ ಗುರಿ ಹೊಂದಿದ್ದಾರೆ.  

ಪ್ರಸ್ತುತ ವಿದ್ಯಮಾನಗಳು ಕಬೀರ್ ಅವರು ಮತ್ತೊಬ್ಬ ಅಸಾದುದ್ದೀನ್ ಓವೈಸಿ (ಹೈದರಾಬಾದ್) ಮತ್ತು ಬದ್ರುದ್ದೀನ್ ಅಜ್ಮಲ್ (ಅಸ್ಸಾಂ) ಆಗಿ ಬಂಗಾಳದಲ್ಲಿ ಬೆಳೆಯಬಹುದು ಎಂದು ಹೇಳಲಾಗುತ್ತಿದೆ. ಓವೈಸಿ ಅವರು ಎಐಎಂಐಎಂ ಪಕ್ಷವನ್ನು ಕಟ್ಟುವ ಮೂಲಕ, ತೆಲಂಗಾಣ ರಾಜಕಾರಣದಲ್ಲಿ ಪ್ರಭಾವ ಬೀರಿದ್ದಾರೆ. ತಮ್ಮ ಪಕ್ಷವನ್ನು ವಿವಿಧ ರಾಜ್ಯಗಳಿಗೂ ವಿಸ್ತರಿಸಿ, ಚುನಾವಣಾ ಫಲಿತಾಂಶಗಳ ಮೇಲೆ ಪ್ರಭಾವ ಬೀರಿದ್ದಾರೆ. ಕಳೆದ ಲೋಕಸಭಾ ಚುನಾವಣೆಯಲ್ಲಿ ಬಂಗಾಳದಲ್ಲಿಯೂ ಎಐಎಂಐಐಂ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದರಿಂದ, ಬಿಜೆಪಿ ಅನುಕೂಲವಾಯಿತು ಎಂದು ವಿಮರ್ಶಕರು ಹೇಳುತ್ತಾರೆ. ಅಂತೆಯೇ, ಅಜ್ಮಲ್‌ ಅವರ ಎಐಯುಡಿಎಫ್‌ ಕೂಡ ಅಸ್ಸಾಂ ರಾಜಕಾರಣದಲ್ಲಿ ಪ್ರಭಾವ ಬೀರಿದೆ. ಮುಸ್ಲಿಂ ಮತಗಳನ್ನು ವಿಪಕ್ಷಗಳಿಂದ ಚದುರಿಸಿ, ಬಿಜೆಪಿ ಗೆಲುವಿಗೆ ಅವಕಾಶ ಮಾಡಿಕೊಟ್ಟಿದೆ. ಇದೀಗ, ಓವೈಸಿ ಮತ್ತು ಅಜ್ಮಲ್ ಹಾದಿಯಲ್ಲಿ ಕಬೀರ್ ಸಾಗುವಂತೆ ಕಾಣುತ್ತಿದ್ದಾರೆ.

ಬಂಗಾಳದ ಒಟ್ಟು ಜನಸಂಖ್ಯೆಯಲ್ಲಿ ಸುಮಾರು 30% ಮುಸ್ಲಿಮರಿದ್ದಾರೆ. ಬಂಗಾಳ ಚುನಾವಣಾ ಫಲಿತಾಂಶದ ಮೇಲೆ ಪ್ರಬಲ ಪ್ರಭಾವ ಬೀರುತ್ತಾರೆ. ಸದ್ಯಕ್ಕೆ, ಬಂಗಾಳದ ಮುಸ್ಲಿಮರು ಟಿಎಂಸಿ ಜೊತೆಗಿದ್ದಾರೆ. ಬಿಜೆಪಿಯ ಕೋಮು ರಾಜಕಾರಣವನ್ನು ಎದುರಿಸಲು ಟಿಎಂಸಿಯೇ ಪ್ರಬಲ ಪಕ್ಷವೆಂದು ನೋಡುತ್ತಿದ್ದಾರೆ. ಆದರೆ, ಕಬೀರ್ ಅವರ ಧೋರಣೆ ಮತ್ತು ಹೊಸ ಪಕ್ಷ ಘೋಷಣೆಯು ಮುಸ್ಲಿಂ ಮತಗಳ ಒಡಕಿಗೆ ಕಾರಣವಾಗುವುದರಲ್ಲಿ ಸಂದೇಹವಿಲ್ಲ.

ಈ ಲೇಖನ ಓದಿದ್ದೀರಾ?: ಇಂಡಿಗೋ ವಿಮಾನ ಸಂಚಾರ ಅಸ್ತವ್ಯಸ್ತ- ಧೂಮಪರದೆಯ ಹಿಂದಿನ ಅಸಲು ಕಾರಣವೇನು? ಏರ್‌ಬಸ್ ತಂತ್ರಾಂಶ ದೋಷವೇ?

ಕಬೀರ್ ಘೋಷಿಸುತ್ತಿರುವ ‘ಬಾಬರಿ ಮಸೀದಿ’ ನಿರ್ಮಾಣವು ಮುಸ್ಲಿಮರನ್ನು ಭಾವನಾತ್ಮಕವಾಗಿ ಆಕರ್ಷಿಸುತ್ತದೆ. ಇದರಿಂದ, ಮುಸ್ಲಿಮರಲ್ಲಿ ಒಂದಷ್ಟು ಭಾಗವು ಟಿಎಂಸಿಯಿಂದ ಕಬೀರ್ ಎಡೆಗೆ ವಾಲುವ ಸಾಧ್ಯತೆಗಳು ದಟ್ಟವಾಗಿವೆ. ಹೀಗಾಗಿಯೇ, ಕಬೀರ್ ಅವರನ್ನು ಬಿಜೆಪಿ ಏಜೆಂಟ್‌ ಎಂದು ಟಿಎಂಸಿ ಕರೆದಿದೆ. ಟಿಎಂಸಿ ನಾಯಕ ಫಿರ್ಹಾದ್ ಹಕೀಮ್ ಅವರು ‘ಕಬೀರ್ ಅವರ ಧೋರಣೆಯು ಬಿಜೆಪಿಯ ಮತ ಧ್ರುವೀಕರಣದ ತಂತ್ರ’ ಎಂದು ಟೀಕಿಸಿದ್ದಾರೆ.

ಕಬೀರ್ ಅವರ ಮಸೀದಿ ನಿರ್ಮಾಣ ಘೋಷಣೆ ಮತ್ತು ಹೊಸ ಪಕ್ಷ ಸ್ಥಾಪನೆಯು 2026ರ ಬಂಗಾಳ ಚುನಾವಣೆಯಲ್ಲಿ ಬಿಜೆಪಿಗೆ ಲಾಭ ಒದಗಿಸಲಿದೆ. ಒಂದೆಡೆ, ಕಬೀರ್ ಅವರು ಮುಸ್ಲಿಂ ಮತಗಳನ್ನು ವಿಪಕ್ಷಗಳಿಂದ ಚದುರಿಸಿ ತಮ್ಮತ್ತ ಧ್ರುವೀಕರಿಸಿದರೆ, ಮತ್ತೊಂದೆಡೆ ಅದೇ ಮಸೀದಿ ನಿರ್ಮಾಣದ ವಿಷಯವು ಬಿಜೆಪಿಯತ್ತ ಹಿಂದು ಮತಗಳನ್ನು ಮತ್ತಷ್ಟು ಕ್ರೋಡೀಕರಿಸಲಿದೆ. ಇದು ಬಿಜೆಪಿಯ ‘ಒಂದೇ ಕಲ್ಲಿನಲ್ಲಿ ಎರಡು ಹಕ್ಕಿ ಹೊಡೆಯುವ’ ತಂತ್ರವೆಂದು ವಿಶ್ಲೇಷಕರು ಹೇಳುತ್ತಾರೆ.

2021ರ ಚುನಾವಣೆಯಲ್ಲಿ ಒಂಗಾಳದ ಒಟ್ಟು 294 ವಿಧಾನಸಭಾ ಕ್ಷೇತ್ರಗಳ ಪೈಕಿ ಟಿಎಂಸಿ 215 ಸ್ಥಾನಗಳೊಂದಿಗೆ ಭರ್ಜರಿ ಗೆಲುವು ಕಂಡರೆ, ಬಿಜೆಪಿ ಕೇವಲ 77 ಸ್ಥಾನಗಳನ್ನು ಗೆದ್ದಿತ್ತು. ಮೋದಿ ಅಲೆ, ಸುವೇಂದು ಅಧಿಕಾರಿ ಪಕ್ಷಾಂತರದ ಹೊರತಾಗಿಯೂ ಬಿಜೆಪಿ ಅತೀ ಹೆಚ್ಚು ಸ್ಥಾನಗಳನ್ನು ಗೆಲ್ಲಲು ಸಾಧ್ಯವಾಗಲಿಲ್ಲ. ಟಿಎಂಸಿಯ ಅಭೂತಪೂರ್ವ ಗೆಲುವಿಗೆ ಮುಸ್ಲಿಂ ಮತಗಳ ಒಗ್ಗಟ್ಟು ಮುಖ್ಯ ಕಾರಣವಾಗಿತ್ತು. ಆದ್ದರಿಂದ, ಬಿಜೆಪಿಗೆ ಮುಸ್ಲಿಂ ಮತಗಳನ್ನು ಒಡೆಯುವುದು ಅಗತ್ಯವಾಗಿದೆ. ಅದಕ್ಕೆ ಕಬೀರ್ ದಾಳವಾಗಲಿದ್ದಾರೆ. ಕಬೀರ್ ನಡೆಯು ಮುಸ್ಲಿಂ ಮತಗಳನ್ನು ವಿಭಜಿಸಿ, ಬಿಜೆಪಿಗೆ ಲಾಭ ಮಾಡಿಕೊಡಲಿದೆ ಎಂದು ರಾಜಕೀಯ ವಿಶ್ಲೇಷಕ ಬಿಸ್ವಜಿ ದಾಸ್ ಹೇಳಿದ್ದಾರೆ.

ಹುಮಾಯೂನ್ ಕಬೀರ್ ಅವರ ಧೋರಣೆಯು ಬಂಗಾಳದ ರಾಜಕೀಯದಲ್ಲಿ ಬಿಜೆಪಿ ಪರವಾಗಿ ಹೊಸ ಮಜಲನ್ನು ಸೃಷ್ಟಿಸುವ ಅಪಾಯವಿದೆ. ಕಬೀರ್ ಹೊಸ ಪಕ್ಷದತ್ತ ಮುಸ್ಲಿಮರು ಆಕರ್ಷಿತರಾದರೆ, 2026ರ ಚುನಾವಣಾ ಫಲಿತಾಂಶದಲ್ಲಿ ಅತಂತ್ರ ವಿಧಾನಸಭೆ ಸೃಷ್ಟಿಯಾಗಬಹುದು ಎಂಬು ರಾಜಕೀಯ ವಿಶ್ಲೇಷಕರು ಭವಿಷ್ಯ ನುಡಿದಿದ್ದಾರೆ.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಪ್ರಧಾನಿ ಮೋದಿ ಅಮೆರಿಕಕ್ಕೆ 100% ಶರಣಾಗಿದ್ದಾರೆ: ರಾಹುಲ್ ಗಾಂಧಿ

ಪಶ್ಚಿಮ ಏಷ್ಯಾದಲ್ಲಿನ ಯುದ್ಧದ ಪರಿಸ್ಥಿತಿ ಮತ್ತು ದೇಶದ ಆರ್ಥಿಕ ನೀತಿಗಳ ಕುರಿತು...

‘ಟ್ರಂಪ್ ನಿಯಂತ್ರಣದಲ್ಲಿ ಮೋದಿ’: ಲೋಕಸಭೆಯ ಭಾಷಣದಲ್ಲಿ ಅಮೆರಿಕದ ಬಗ್ಗೆ ಮೌನಕ್ಕೆ ರಾಹುಲ್ ವಾಗ್ದಾಳಿ

ಮಧ್ಯಪ್ರಾಚ್ಯ ಬಿಕ್ಕಟ್ಟಿನ ಕುರಿತು ಭಾರತದ ನಿಲುವಿನ ಬಗ್ಗೆ ರಾಜಕೀಯ ವಾಗ್ದಾಳಿ ಸೋಮವಾರ...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ ರಾಷ್ಟ್ರೀಯವಾದ?

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ...

18 ಸಾವಿರ ಕೋಟಿ ರೂ. ದಾಟಿದ ದೇಶದ ಕ್ರೀಡಾ ಅರ್ಥವ್ಯವಸ್ಥೆ; ಕ್ರಿಕೆಟ್ ದರ್ಬಾರಿನಲ್ಲಿ ಸೊರಗಿದ ಇತರ ಆಟಗಳು

ಐಪಿಎಲ್‌ನಲ್ಲಿ ಕೇವಲ ಬೆಂಚ್ ಕಾಯುವ ಸಾಮಾನ್ಯ ಕ್ರಿಕೆಟ್ ಆಟಗಾರನೊಬ್ಬ ಕೋಟ್ಯಾಧಿಪತಿಯಾಗಿ ಐಷಾರಾಮಿ...