ದೇಶದ ಪ್ರಮುಖ ಸಾರ್ವಜನಿಕ ವಲಯದ ಬ್ಯಾಂಕ್‌ಗಳಲ್ಲಿ ಒಂದಾದ ಬ್ಯಾಂಕ್ ಆಫ್ ಬರೋಡಾ, ರಿಲಯನ್ಸ್ ಕಮ್ಯುನಿಕೇಷನ್ಸ್ ಲಿಮಿಟೆಡ್ (ಆರ್‌ಕಾಮ್) ಮತ್ತು ಅದರ ಹಿಂದಿನ ನಿರ್ದೇಶಕ ಅನಿಲ್ ಅಂಬಾನಿ ಅವರ ಸಾಲ ಖಾತೆಗಳನ್ನು ‘ವಂಚನೆ’ ಎಂದು ಘೋಷಿಸಿದೆ. ಈ ಬಗ್ಗೆ ವಿನಿಮಯ ದಾಖಲೆಯಲ್ಲಿ ಉಲ್ಲೇಖಿಸಿದೆ.
ಒಂದು ಕಾಲದಲ್ಲಿ ಪ್ರಮುಖ ಟೆಲಿಕಾಂ ಕಂಪನಿ ಮತ್ತು ಅದರ ಹಿಂದಿನ ನಿರ್ದೇಶಕರ ಬಗ್ಗೆ ವಂಚನೆ ತನಿಖೆ ನಡೆಯುತ್ತಿದೆ. ಪ್ರಸ್ತುತ ದಿವಾಳಿತನ ಮತ್ತು ದಿವಾಳಿತನ ಸಂಹಿತೆ (ಐಬಿಸಿ), 2016 ರ ಅಡಿಯಲ್ಲಿ ಆರ್‌ಕಾಮ್ ಕಾರ್ಪೊರೇಟ್ ದಿವಾಳಿತನ ಪರಿಹಾರ ಪ್ರಕ್ರಿಯೆಗೆ (ಸಿಐಆರ್‌ಪಿ) ಒಳಗಾಗುತ್ತಿದೆ.
ಇದನ್ನು ಓದಿದ್ದೀರಾ? ವಿದೇಶಿ ವಿನಿಮಯ ಉಲ್ಲಂಘನೆ ಪ್ರಕರಣ | ಅನಿಲ್ ಅಂಬಾನಿ ಪತ್ನಿ ಟೀನಾ ಅಂಬಾನಿ ಇಡಿ ವಿಚಾರಣೆಗೆ ಹಾಜರು
ಆರ್‌ಕಾಮ್ ಪ್ರಸ್ತುತ ಪರಿಹಾರ ವೃತ್ತಿಪರ ಅನೀಶ್ ನಿರಂಜನ್ ನಾನವಟಿ ಅವರ ನಿಯಂತ್ರಣದಲ್ಲಿದೆ. ಅನಿಲ್ ಅಂಬಾನಿ ಕಂಪನಿಯ ನಿರ್ದೇಶಕರಾಗಿಲ್ಲ. “ಆರ್‌ಕಾಮ್‌ನ ಕಾರ್ಯನಿರ್ವಾಹಕ ನಿರ್ದೇಶಕ ಅಥವಾ ಪ್ರಮುಖ ವ್ಯವಸ್ಥಾಪಕರಲ್ಲ. ಕಂಪನಿಯ ದೈನಂದಿನ ಕಾರ್ಯಾಚರಣೆಗಳು ಅಥವಾ ನಿರ್ಧಾರ ತೆಗೆದುಕೊಳ್ಳುವಲ್ಲಿ ಯಾವುದೇ ಪಾತ್ರವನ್ನು ಅನಿಲ್ ಅಂಬಾನಿ ಹೊಂದಿಲ್ಲ” ಎಂದು ಅವರ ವಕ್ತಾರರು ಈಗಾಗಲೇ ಹೇಳಿಕೊಂಡಿದ್ದಾರೆ.
“ಅನಿಲ್ ಡಿ. ಅಂಬಾನಿ 2006ರಲ್ಲಿ ಪ್ರಾರಂಭವಾದಾಗಿನಿಂದ 2019ರಲ್ಲಿ ಮಂಡಳಿಗೆ ರಾಜೀನಾಮೆ ನೀಡುವವರೆಗೆ ಆರ್‌ಕಾಮ್ ಮಂಡಳಿಯಲ್ಲಿ ಕಾರ್ಯನಿರ್ವಾಹಕೇತರ ನಿರ್ದೇಶಕರಾಗಿ ಮಾತ್ರ ಸೇವೆ ಸಲ್ಲಿಸಿದ್ದರು. 10 ವರ್ಷಗಳಿಗೂ ಹೆಚ್ಚು ಕಾಲದ ಅತಿಯಾದ ವಿಳಂಬದ ನಂತರ, ಕೆಲವು ಸಾಲದಾತರು ಈಗ ಅಂಬಾನಿಯನ್ನು ಗುರಿಯಾಗಿಸಿಕೊಂಡು ವಿಚಾರಣೆಯನ್ನು ಪ್ರಾರಂಭಿಸಿದೆ” ಎಂದು ವಕ್ತಾರರು ಹೇಳಿದ್ದಾರೆ.
ಆದ್ದರಿಂದ ಬ್ಯಾಂಕ್ ಆಫ್ ಬರೋಡಾದ ಕ್ರಮದ ಕುರಿತು ಆರ್‌ಕಾಮ್ ಕಾನೂನು ಸಲಹೆಯನ್ನು ಪಡೆಯುತ್ತಿದೆ. ಅನಿಲ್ ಅಂಬಾನಿ ಅವರ ಸಂಸ್ಥೆಯ ವಿರುದ್ಧ ಸಾಲ ವಂಚನೆ ಕುರಿತು ಈಗಾಗಲೇ ಜಾರಿ ನಿರ್ದೇಶನಾಲಯ (ಇಡಿ) ತನಿಖೆ ನಡೆಸುತ್ತಿದೆ. ರಿಲಯನ್ಸ್ ಹೌಸಿಂಗ್ ಫೈನಾನ್ಸ್, ಆರ್‌ಕಾಮ್ ಮತ್ತು ರಿಲಯನ್ಸ್ ಕಮರ್ಷಿಯಲ್ ಫೈನಾನ್ಸ್‌ಗೆ ನೀಡಿದ ಸಾಲಗಳಿಗೆ ಸಂಬಂಧಿಸಿದಂತೆ ಇಡಿ 12-13 ಬ್ಯಾಂಕ್‌ಗಳಿಂದ ವಿವರಗಳನ್ನು ಕೋರಿದೆ. ಅಂದಾಜು ಮೊತ್ತ ಸುಮಾರು 17,000 ಕೋಟಿ ರೂ. ವಂಚನೆ ತನಿಖೆ ನಡುವೆ ಬ್ಯಾಂಕ್ ಆಫ್ ಬರೋಡಾ ಅನಿಲ್ ಅಂಬಾನಿ, ರಿಲಯನ್ಸ್ ಕಮ್ಯುನಿಕೇಷನ್ಸ್ ಸಾಲ ಖಾತೆಗಳನ್ನು ವಂಚನೆ ಖಾತೆ ಎಂದು ಗುರುತಿಸಿದೆ.





