WB SIR | ಸುವೇಂದು ನಂದಿಗ್ರಾಮಕ್ಕಿಂತ ಮಮತಾರ ಭಬಾನಿಪುರದಲ್ಲಿ 4 ಪಟ್ಟು ಹೆಚ್ಚು ಮತದಾರರು ಔಟ್!

Date:

ಪಶ್ಚಿಮ ಬಂಗಾಳದಲ್ಲಿ ನಡೆಯುತ್ತಿರುವ ಎಸ್‌ಐಆರ್ ಪ್ರಕ್ರಿಯೆಯಲ್ಲಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಪ್ರತಿನಿಧಿಸುವ ಭಬಾನಿಪುರ ಕ್ಷೇತ್ರವು ಅತೀ ಹೆಚ್ಚು ಮತದಾರರನ್ನು ಹೊರಹಾಕಲಾದ ಕ್ಷೇತ್ರಗಳಲ್ಲಿ ಒಂದಾಗಿದೆ. ಭಬಾನಿಪುರದಲ್ಲಿನ ಹೊರಹಾಕುವಿಕೆಯು ವಿಪಕ್ಷ ನಾಯಕ, ಬಿಜೆಪಿ ಮುಖಂಡ ಸುವೇಂದು ಅಧಿಕಾರಿ ಅವರ ನಂದಿಗ್ರಾಮ ಕ್ಷೇತ್ರಕ್ಕಿಂತ ನಾಲ್ಕು ಪಟ್ಟು ಹೆಚ್ಚಿದೆ ಎಂಬುದು ಚುನಾವಣಾ ಆಯೋಗದ ದತ್ತಾಂಶದಿಂದ ತಿಳಿದುಬಂದಿದೆ.

ಆಯೋಗವು ಶುಕ್ರವಾರ ಕ್ಷೇತ್ರವಾರು ದತ್ತಾಂಶ ಬಿಡುಗಡೆ ಮಾಡಿದೆ. ರಾಜ್ಯಾದ್ಯಂತ ಹಲವೆಡೆ ಭಾರೀ ಸಂಖ್ಯೆಯಲ್ಲಿ ಮತದಾರರನ್ನು ಹೊರಗಿಡಲಾಗಿದೆ ಎಂಬುದನ್ನು ದತ್ತಾಂಶವು ಸೂಚಿಸುತ್ತಿದೆ. ಮುಂದಿನ ವಾರ ಬಿಡುಗಡೆಯಾಗಲಿರುವ ಕರಡು ಪಟ್ಟಿಗೂ ಮುನ್ನ ಈ ದತ್ತಾಂಶಗಳು ರಾಜಕೀಯ ಚರ್ಚೆಯನ್ನು ಹುಟ್ಟುಹಾಕಿವೆ.

ಮಮತಾ ಅವರ ಭದ್ರಕೋಟೆ ಭಬಾನಿಪುರದಲ್ಲಿ 2025ರ ಜನವರಿಯಲ್ಲಿ ಪಟ್ಟಿ ಮಾಡಲಾದ ಒಟ್ಟು 2,06,295 ಮತದಾರರಲ್ಲಿ 44,787 ಮತದಾರರನ್ನು ಅಳಿಸಲಾಗಿದೆ. ಆದರೆ, 2022ರಲ್ಲಿ ಟಿಎಂಸಿಗೆ ರಾಜಕೀಯ ಬುನಾದಿ ಹಾಕಿಕೊಟ್ಟ ಮತ್ತು ಸುವೇಂದು ಅವರ ಭದ್ರಕೋಟೆಯಾಗಿರುವ ನಂದಿಗ್ರಾಮದಲ್ಲಿನ ಒಟ್ಟು 2,78,212 ಮತದಾರರಲ್ಲಿ 10,599 ಮತದಾರರನ್ನು ಪಟ್ಟಿಯಿಂದ ಕೈಬಿಡಲಾಗಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಮತದಾರರನ್ನು ಅಳಿಸಿಹಾಕಲು ಸಾವುಗಳು, ವಲಸೆ, ಪತ್ತೆಹಚ್ಚಲಾಗದ ವಿಳಾಸಗಳು ಹಾಗೂ ನಕಲು ನಮೂದುಗಳು ಕಾರಣವೆಂದು ಹೇಳಿಕೊಂಡಿದೆ.

ಆದಾಗ್ಯೂ, ಚುನಾವಣಾ ಅಧಿಕಾರಿಗಳು ರಾಜ್ಯಾದ್ಯಂತ ಏಕರೂಪದ ಮಾನದಂಡಗಳನ್ನು ಅನುಸರಿಸಿದ್ದಾರೆ. ಎಲ್ಲ ಕ್ಷೇತ್ರಗಳಲ್ಲಿ ಮತದಾರರ ಅಳಿಸುವಿಕೆಗೆ ಒಂದೇ ನೀತಿಯನ್ನು ಅಳವಡಿಸಿಕೊಳ್ಳಲಾಗಿದೆಯೇ ಎಂಬ ಪ್ರಶ್ನೆಗಳು ಮುನ್ನೆಲೆ ಬಂದಿವೆ.

ಭಬಾನಿಪುರದಲ್ಲಿ 44 ಸಾವಿರ ಮತದಾರರನ್ನು ಅಳಿಸಲಾಗಿದೆ. ಅಂತೆಯೇ, ಹಲವು ಕ್ಷೇತ್ರಗಳಲ್ಲಿ ಇನ್ನೂ ಹೆಚ್ಚಿನ ಸಂಖ್ಯೆಯ ಮತದಾರರನ್ನು ಹೊರಗಿಡಲಾಗಿದೆ.

ಬಂಗಾಳದ 294 ವಿಧಾನಸಭಾ ಕ್ಷೇತ್ರಗಳ ಪೈಕಿ, ಟಿಎಂಸಿ ಶಾಸಕಿ ನಯನಾ ಬಂಡೋಪಾಧ್ಯಾಯ ಪ್ರತಿನಿಧಿಸುವ ಉತ್ತರ ಕೋಲ್ಕತ್ತಾದ ಚೌರಿಂಗೀಯಲ್ಲಿ ಅತಿ ಹೆಚ್ಚು, ಬರೋಬ್ಬರಿ 74,553 ಮತದಾರರನ್ನು ಪಟ್ಟಿಯಿಂದ ತೆಗೆದುಹಾಕಲಾಗಿದೆ.  ಈ ಕ್ಷೇತ್ರದಲ್ಲಿ ಸತತ ಮೂರು ಬಾರಿ ಶಾಸಕಿಯಾಗಿದ್ದ ನಯನಾ ಅವರು 2021ರಲ್ಲಿ 44,000ಕ್ಕೂ ಹೆಚ್ಚು ಮತಗಳ ಅಂತರದಿಂದ ಗೆದ್ದಿದ್ದರು. ಈಗ ಈ ಪ್ರಮಾಣದಲ್ಲಿ ಮತದಾರರನ್ನು ಹೊರಗಿಡುವಿಕೆಯು ಮುಂದಿನ ಚುನಾವಣೆಯಲ್ಲಿ ಅವರ ಭವಿಷ್ಯದ ಮೇಲೆ ತೀವ್ರ ಪರಿಣಾಮ ಬೀರಬಹುದು.

ಇನ್ನು, ಹಿರಿಯ ಸಚಿವ ಮೇಯರ್ ಫಿರ್ಹಾದ್ ಹಕೀಮ್ ಅವರ ಕೋಲ್ಕತ್ತಾ ಬಂದರು ಕ್ಷೇತ್ರದಲ್ಲಿ 63,730 ಮತದಾರರು ಪಟ್ಟಿಯಿಂದ ಹೊರಬಿದ್ದಿದ್ದಾರೆ. ಮೂರು ಬಾರಿ ಶಾಸಕರಾಗಿರುವ ಹಕೀಮ್ ಅವರು 2021ರ ಚುನಾವಣೆಯಲ್ಲಿ ಸುಮಾರು 70,000 ಮತಗಳ ಅಂತರದಿಂದ ಗೆದ್ದಿದ್ದರು.

ಅಂತೆಯೇ, ಸಚಿವ ಅರೂಪ್ ಬಿಸ್ವಾಸ್ ಅವರ ಟಾಲಿಗಂಜ್‌ನಲ್ಲಿ 35,309 ಹೆಸರುಗಳನ್ನು ಕೈಬಿಡಲಾಗಿದೆ. ನಾಲ್ಕು ಬಾರಿ ಶಾಸಕರಾಗಿರುವ ಬಿಸ್ವಾಸ್ ಅವರು 2021ರಲ್ಲಿ ಸುಮಾರು 50,000 ಮತಗಳ ಅಂತರದಿಂದ ಮರು ಆಯ್ಕೆಯಾಗಿದ್ದರು.

ಬಿಜೆಪಿ ಮಾಜಿ ಕೇಂದ್ರ ಸಚಿವ, ಟಿಎಂಸಿ ಶಾಸಕ ಬಾಬುಲ್ ಸುಪ್ರಿಯೋ ಪ್ರತಿನಿಧಿಸುವ ಬ್ಯಾಲಿಗುಂಗೆಯಲ್ಲಿ 65,171 ಮತದಾರರು, ಟಿಎಂಸಿ ಶಾಸಕ ಪಾರ್ಥ ಚಟರ್ಜಿ ಅವರ ಬೆಹಾಲಾ ಪಶ್ಚಿಮದಲ್ಲಿ 52,247, ರತ್ನ ಚಟರ್ಜಿ ಅವರ ಬೆಹಾಲಾ ಪೂರ್ವ ಕ್ಷೇತ್ರದಲ್ಲಿ 53,036 ಹಾಗೂ ಟಿಎಂಸಿ ಸಚಿವ ಸಚಿವ ಶಶಿ ಪಂಜಾ ಪ್ರತಿನಿಧಿಸುವ ಶ್ಯಾಂಪುಕುರ್‌ನಲ್ಲಿ 42,303 ಮತದಾರರನ್ನು ಪಟ್ಟಿಯಿಂದ ಹೊರಗಿಡಲಾಗಿದೆ.

ಆದಾಗ್ಯೂ, ಬಿಜೆಪಿಯ ಪ್ರಮುಖ ಶಾಸಕರು ಪ್ರತಿನಿಧಿಸುವ ಕ್ಷೇತ್ರಗಳಲ್ಲಿ ಅತೀ ಹೆಚ್ಚು ಮತದಾರರನ್ನು ಕೈಬಿಡಲಾಗಿಲ್ಲ ಎಂಬುದು ದತ್ತಾಂಶದಲ್ಲಿ ಗಮನಿಸಬೇಕಾದ ಮತ್ತೊಂದು ಸಂಗತಿ. ಬಿಜೆಪಿಗರು ಪ್ರತಿನಿಧಿಸುವ ಕ್ಷೇತ್ರಗಳ ಪೈಕಿ ಅತೀ ಹೆಚ್ಚು, ಅಂದರೆ, 39,202 ಮತಗಳನ್ನು ಅಳಿಸಲಾಗಿರುವ ಏಕೈಕ ಕ್ಷೇತ್ರ ಅಸನ್ಸೂಲ್ ದಕ್ಷಿಣ. ಈ ಕ್ಷೇತ್ರವನ್ನು ಅಗ್ನಿಮಿತ್ರ ಪಾಲ್ ಪ್ರತಿನಿಧಿಸುತ್ತಿದ್ದಾರೆ. ಅವರು ಕಳೆದ ಚುನಾವಣೆಯಲ್ಲಿ ತೀವ್ರ ಹೋರಾಟದ ಬಳಿಕ, 4,000 ಮತಗಳ ಅಂತರದಿಂದಷ್ಟೇ ಗೆದ್ದಿದ್ದರು.

ಇನ್ನು, ಜಿಲ್ಲಾ ಮಟ್ಟದ ದತ್ತಾಂಶಗಳಲ್ಲಿ ನೋಡುವುದಾದರೆ, ದಕ್ಷಿಣ 24 ಪರಗಣ ಜಿಲ್ಲೆಯಲ್ಲಿ ಒಟ್ಟು 8,16,047 ಮತದಾರರನ್ನು ಪಟ್ಟಿಯಿಂದ ಅಳಿಸಲಾಗಿದೆ. ಈ ಜಿಲ್ಲೆಯು ಡೈಮಂಡ್‌ ಜಾರ್ಬರ್‌ ಲೋಕಸಭಾ ಕ್ಷೇತ್ರದ ಭಾಗವಾಗಿದೆ. ಇದು ಟಿಎಂಸಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅಭಿಷೇಕ್ ಬ್ಯಾನರ್ಜಿ ಅವರ ಭದ್ರಕೋಟೆಯಾಗಿದ್ದು, ಕಳೆದ ಲೋಕಸಭಾ ಚುನಾವಣೆಯಲ್ಲಿ 7 ಲಕ್ಷಕ್ಕೂ ಹೆಚ್ಚು ಮತಗಳ ಅಂತರದಿಂದ ಅಭಿಷೇಕ್ ಗೆದ್ದಿದ್ದರು.

ಅತೀ ಕಡಿಮೆ ಹೆಸರುಗಳನ್ನು ಅಳಿಸಲಾದ ಜಿಲ್ಲೆ ಬಂಕುರಾದ ಕೋತುಲ್ಪುರ. ಇಲ್ಲಿ, ಕೇವಲ 5,678 ಹೆಸರುಗಳನ್ನು ಅಳಿಸಲಾಗಿದೆ. ಈ ಜಿಲ್ಲೆಯು ಬಿಷ್ಣುಪುರ್ (SC) ಲೋಕಸಭಾ ಕ್ಷೇತ್ರದ ಭಾಗವಾಗಿದೆ. ಈ ಕ್ಷೇತ್ರವನ್ನು ಬಿಜೆಪಿ ಸಂಸದೆ ಸೌಮಿತ್ರ ಖಾನ್ ಪ್ರತಿನಿಧಿಸುತ್ತಿದ್ದಾರೆ.

ಒಟ್ಟಾರೆಯಾಗಿ, SIR ಪ್ರಕ್ರಿಯೆಯ ಮೊದಲ ಹಂತದಲ್ಲಿ ಬಂಗಾಳದಲ್ಲಿ ಇಟ್ಟು 58 ಲಕ್ಷಕ್ಕೂ ಹೆಚ್ಚು ಹೆಸರುಗಳನ್ನು ಅಳಿಸಲಾಗಿದೆ. ಚುನಾವಣಾ ಆಯೋಗವು ಮಂಗಳವಾರ (ಡಿ.17) ಕರಡು ಮತದಾರರ ಪಟ್ಟಿಯನ್ನು ಪ್ರಕಟಿಸಲಿದೆ.

ಈ ಲೇಖನ ಓದಿದ್ದೀರಾ?: ವಂದೇ ಮಾತರಂ | ತಿರುಗುಬಾಣವಾದ ರಾಮಬಾಣ

ಆಯೋಗ ಬಿಡುಗಡೆ ಮಾಡಿರುವ ಅಂಕಿಅಂಶಗಳ ಕುರಿತು ಪ್ರತಿಕ್ರಿಯಿಸಿದ ಟಿಎಂಸಿ ವಕ್ತಾರ ಕ್ರಿಶಾನು ಮಿತ್ರ, ”ಟಿಎಂಸಿ ಡೇಟಾವನ್ನು ಸೂಕ್ಷ್ಮವಾಗಿ ಪರಿಶೀಲಿಸುತ್ತದೆ. ಮೃತ ಮತದಾರರು ಅಥವಾ ಸ್ಥಳಾಂತರಗೊಂಡ ಮತದಾರರನ್ನು ಕೈಬಿಟ್ಟಿದ್ದರೆ, ನಮಗೆ ಯಾವುದೇ ಸಮಸ್ಯೆ ಇಲ್ಲ. ಆದರೆ, ಕ್ಷೇತ್ರದಲ್ಲೇ ಇರುವ ನೈಜ ಮತದಾರರನ್ನು ಅಳಿಸಿದರೆ, ನಾವು ಈ ದುಷ್ಟ ಉದ್ದೇಶದ ವಿರುದ್ಧ ಪ್ರಜಾಸತ್ತಾತ್ಮಕವಾಗಿ ಹೋರಾಟ ನಡೆಸುತ್ತೇವೆ” ಎಂದು ಹೇಳಿದ್ದಾರೆ.

2021 ರ ವಿಧಾನಸಭಾ ಚುನಾವಣೆಯಲ್ಲಿ, ಸುವೇಂದು ಅಧಿಕಾರಿ ಅವರು ನಂದಿಗ್ರಾಮದಲ್ಲಿ ಬ್ಯಾನರ್ಜಿ ಅವರನ್ನು 1,956 ಮತಗಳಿಂದ ಸೋಲಿಸಿದ್ದರು. ಇದರಿಂದಾಗಿ ಮಮತಾ ಆರು ತಿಂಗಳುಗಳ ನಂತರ ಭಬಾನಿಪುರ ಉಪಚುನಾವಣೆಯಲ್ಲಿ ಸ್ಪರ್ಧಿಸಿ, ಗೆದ್ದು ವಿಧಾನಸಭೆಗೆ ಮರಳಿದರು, ಆ ಉಪಚುನಾವಣೆಯಲ್ಲಿ ಅವರು 58,832 ಮತಗಳಿಂದ ಗೆದ್ದರು.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ ರಾಷ್ಟ್ರೀಯವಾದ?

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ...

ಅಸ್ಸಾಂ ಚುನಾವಣೆ: ಕಾಂಗ್ರೆಸ್ ಸೇರಿದ ಮಾಜಿ ಸಚಿವೆ ನಂದಿತಾ ಗೋರ್ಲೋಸಾ ಯಾರು?

ಅಸ್ಸಾಂ ವಿಧಾನಸಭಾ ಚುನಾವಣೆಗೆ (ಏಪ್ರಿಲ್ 9 ರಂದು ಒಂದೇ ಹಂತದಲ್ಲಿ ಮತದಾನ)...

ಡಾಲರ್ V/s ಯುವಾನ್: ಕೊಲ್ಲಿ ಯುದ್ಧ ಕರೆನ್ಸಿ ಯುದ್ಧವಾಗಿ ಮಾರ್ಪಾಡಾಗುತ್ತಿದೆಯೇ?

ಅಕಸ್ಮಾತ್ ಈ ಯುದ್ಧ ಮುಂದುವರೆದರೆ, ಕೆಲವು ದೇಶಗಳು ಡಾಲರ್ ಬದಲಿಗೆ ಯುವಾನ್...

ರಾಜ್ಯಸಭೆಗೆ ಸದಾನಂದಗೌಡರ ಪರ ಬಿಎಸ್‌ವೈ ; ದೇವೇಗೌಡರ ಪರ ಹೆಚ್‌ಡಿಕೆ ಲಾಬಿ

ಕೇಂದ್ರ ಉಕ್ಕು ಮತ್ತು ಭಾರಿ ಕೈಗಾರಿಕೆ ಸಚಿವ ಹೆಚ್‌.ಡಿ ಕುಮಾರಸ್ವಾಮಿ ನವದೆಹಲಿಯಲ್ಲಿ...