ಅಕ್ರಮ ಬೆಟ್ಟಿಂಗ್ ಆ್ಯಪ್ ಪ್ರಚಾರ ಮತ್ತು ಅಕ್ರಮ ಹಣ ವರ್ಗಾವಣೆ ಕ್ರಮದಲ್ಲಿ ಕ್ರಿಕೆಟಿಗ ಯುವರಾಜ್ ಸಿಂಗ್ ಮತ್ತು ರಾಬಿನ್ ಉತ್ತಪ್ಪ, ನಟ ಸೋನು ಸೂದ್, ನಟಿ ಮಿಮಿ ಚಕ್ರವರ್ತಿ ಸೇರಿದಂತೆ ಹಲವರ ಆಸ್ತಿಯನ್ನು ಜಾರಿ ನಿರ್ದೇಶನಾಲಯ ಮುಟ್ಟುಗೋಲು ಹಾಕಿಕೊಂಡಿದೆ.
ಸುಮಾರು 1,000 ರೂ. ಅಕ್ರಮ ಹಣ ವರ್ಗಾವಣೆ ಪ್ರಕರಣ ಇದಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಹಲವಾರು ಕ್ರಿಕೆಟಿಗರು, ನಟ-ನಟಿಯರ ಒಟ್ಟು .73 ಕೋಟಿ ರೂ. ಮೌಲ್ಯದ ಆಸ್ತಿಯನ್ನು ಹಣ ವರ್ಗಾವಣೆ ತಡೆ ಕಾಯ್ದೆ (PMLA)-2002ರ ಅಡಿಯಲ್ಲಿ ಇಡಿ ಮುಟ್ಟುಗೋಲು ಹಾಕಿಕೊಂಡಿದೆ.
ಕ್ರಿಕೆಟಿಗ ಯುವರಾಜ್ ಸಿಂಗ್, ರಾಬಿನ್ ಉತ್ತಪ್ಪ, ಬಾಲಿವುಡ್ ನಟಿ ಊರ್ವಶಿ ರೌಟೇಲಾ, ರೌಟೇಲಾ ಅವರ ತಾಯಿ ಮೀರಾ ರೌಟೇಲಾ, ನಟ ಸೋನು ಸೂದ್, ಬಂಗಾಳಿ ನಟ ಅಂಕುಶ್ ಹಜ್ರಾ ಹಾಗೂ ಟಿಎಂಸಿ ಮಾಜಿ ಸಂಸದೆ, ನಟಿ ಮಿಮಿ ಚಕ್ರವರ್ತಿ ಅವರ ಆಸ್ತಿಗಳನ್ನು ಮುಟ್ಟುಹ ಸಹ ಮುಟ್ಟುಗೋಲು ಹಾಕಿಕೊಳ್ಳಲಾಗಿದೆ ಎಂದು ಇಡಿ ತಿಳಿಸಿದೆ.
ಮುಟ್ಟುಗೋಲು ಹಾಕಿಕೊಳ್ಳಲಾದ ಆಸ್ತಿಗಳಲ್ಲಿ ಯುವರಾಜ್ ಸಿಂಗ್ ಅವರ ಸುಮಾರು 2.5 ಕೋಟಿ ರೂ., ರಾಬಿನ್ ಉತ್ತಪ್ಪ ಅವರ 8.26 ಲಕ್ಷ ರೂ., ಸೋನು ಸೂದ್ ಅವರ 1 ಕೋಟಿ ರೂ., ಮಿಮಿ ಚಕ್ರವರ್ತಿ ಅವರ 59 ಲಕ್ಷ ರೂ., ಅಂಕುಶ್ ಹಜ್ರಾ ಅವರ 47 ಲಕ್ಷ ರೂ., ಮೀರಾ ರೌಟೇಲಾ ಅವರ 2.02 ಕೋಟಿ ರೂ. ಸೇರಿವೆ ಎಂದು ಇಡಿ ವಿವರಿಸಿದೆ.
ಈ ಲೇಖನ ಓದಿದ್ದೀರಾ?:ದಾರುಣವಾಗಿದೆ ಬಾಲ ನ್ಯಾಯ ವ್ಯವಸ್ಥೆ; ನ್ಯಾಯಕ್ಕಾಗಿ ಕಾಯುತ್ತಿದ್ದಾರೆ 50,000 ಬಾಲಾಪರಾಧಿಗಳು
ಕಡಲಾಚೆಯ ಅಕ್ರಮ ಆಫ್‌ಶೋರ್ ಬೆಟ್ಟಿಂಗ್ ವೇದಿಕೆ ‘1xBat, 1xBat ಸ್ಪೋರ್ಟಿಂಗ್ ಹಾಗೂ 1xBet’ನ ನಿರ್ವಾಹಕರ ವಿರುದ್ಧ ವಿವಿಧ ರಾಜ್ಯಗಳಲ್ಲಿ ದಾಖಲಾಗಿದ್ದ ಹಲವು ಎಫ್‌ಐಆರ್‌ಗಳ ಆಧಾರದ ಮೇಲೆ ಇಡಿ ತನಿಖೆ ಆರಂಭಿಸಿದೆ. ಈ ಬ್ರ್ಯಾಂಡ್‌ಗಳು ಭಾರತದಲ್ಲಿ ಅಕ್ರಮ ಆನ್‌ಲೈನ್ ಬೆಟ್ಟಿಂಗ್ ಮತ್ತು ಜೂಜಾಟ ಕಾರ್ಯಾಚರಣೆಯನ್ನು ನಡೆಸಿವೆ. ಇವುಗಳನ್ನು ಭಾರತೀಯ ಸೆಲೆಬ್ರಿಟಿಗಳು ಪ್ರಚಾರ ಮಾಡಿದ್ದಾರೆ. ಅದಕ್ಕಾಗಿ ವಿದೇಶಿ ಸಂಸ್ಥೆಗಳೊಂದಿಗೆ ಒಪ್ಪಂದ ಮಾಡಿಕೊಂಡಿದ್ದಾರೆ. ಪ್ರಚಾರಕ್ಕೆ ಹಣ ಪಡೆಯಲು ವಿದೇಶಿ ಮಧ್ಯವರ್ತಿಗಳ ಮೂಲಕ ಹಣ ವರ್ಗಾವಣೆ ಮಾಡಿ, ಅಕ್ರಮ ಬೆಟ್ಟಿಂಗ್ ವೇದಿಕೆಗಳ ಮೂಲವನ್ನು ಮರೆ ಮಾಡಲಾಗಿದೆ ಎಂದು ಇಡಿ ಆರೋಪಿಸಿದೆ.




