ಭಾರತ್ ಬಂದ್‌ | ಸಾರ್ವತ್ರಿಕ ಮುಷ್ಕರ ಎಂದರೇನು? ಇತಿಹಾಸದಲ್ಲಿ ಮುಷ್ಕರಗಳ ಮಹತ್ವವೇನು?

Date:

ಕೇಂದ್ರ ಸರ್ಕಾರದ ಕಾರ್ಮಿಕ ವಿರೋಧಿ, ರೈತ ವಿರೋಧಿ ಹಾಗೂ ಬಂಡವಾಳಶಾಹಿ ಪರವಾದ ಧೋರಣೆ ಮತ್ತು ನೀತಿಗಳ ವಿರುದ್ಧ ಕಾರ್ಮಿಕ ಮತ್ತು ರೈತ ಸಂಘಟನೆಗಳು ಸಿಡಿದೆದ್ದಿವೆ. ಇಂದು (ಜುಲೈ 9) 10ಕ್ಕೂ ಹೆಚ್ಚು ಕೇಂದ್ರ ರೈತ-ಕಾರ್ಮಿಕ ಸಂಘಟನೆಗಳ ಜಂಟಿ ವೇದಿಕೆ ‘ಭಾರತ್ ಬಂದ್’ – ‘ಸಾರ್ವತ್ರಿಕ ಮುಷ್ಕರ’ಕ್ಕೆ ಕರೆಕೊಟ್ಟಿವೆ. ದೇಶಾದ್ಯಂತ, ಬ್ಯಾಂಕಿಂಗ್, ಅಂಚೆ ಸೇವೆಗಳು, ಗಣಿಗಾರಿಕೆ, ನಿರ್ಮಾಣ ಹಾಗೂ ಸಾರಿಗೆ ಸೇರಿದಂತೆ ಸರ್ಕಾರಿ ವಲಯಗಳ 25 ಕೋಟಿಗೂ ಹೆಚ್ಚು ಕಾರ್ಮಿಕರು ಮುಷ್ಕರದಲ್ಲಿ ಭಾಗಿಯಾಗಿದ್ದಾರೆ. ಕೇಂದ್ರ ಸರ್ಕಾರವು ಕಾರ್ಮಿಕರ ಹಕ್ಕುಗಳನ್ನು ದುರ್ಬಲಗೊಳಿಸುವ, ಯುವಜನರನ್ನು ನಿರುದ್ಯೋಗಕ್ಕೆ ದೂಡುವ, ಆರ್ಥಿಕತೆಯನ್ನು ಹದಗೆಡಿಸುವ ಹಾಗೂ ಕಾರ್ಮಿಕರನ್ನು ದಮನಿಸುವ ನೀತಿಗಳನ್ನು ಹೇರುತ್ತಿದೆ ಎಂದು ಆರೋಪಿಸಿದ್ದಾರೆ.

ಬಂದ್‌ಗೆ ಹಲವಾರು ಸಂಘಟನೆಗಳು ಬೆಂಬಲ ಸೂಚಿಸಿವೆ. ದೇಶಾದ್ಯಂತ ಪ್ರತಿಭಟನಾ ಮೆರವಣಿಗೆಗಳು, ಬೃಹತ್ ಪ್ರತಿಭಟನೆಗಳು ನಡೆಯುತ್ತಿವೆ. ಸಾಮೂಹಿಕ ಚೌಕಾಸಿ ಮತ್ತು ಮುಷ್ಕರದ ಹಕ್ಕನ್ನು ಕಸಿದುಕೊಳ್ಳುವ ನಾಲ್ಕು ಕಾರ್ಮಿಕ ಸಂಹಿತೆಗಳನ್ನು ಸರ್ಕಾರ ಹಿಂಪಡೆಯಬೇಕು. ಹೆಚ್ಚಿನ ಉದ್ಯೋಗಗಳನ್ನು ಸೃಷ್ಟಿಸಬೇಕು. ಹೊಸ ನೇಮಕಾತಿಗಳೊಂದಿಗೆ ಸರ್ಕಾರಿ ಹುದ್ದೆಗಳನ್ನು ಭರ್ತಿ ಮಾಡಬೇಕು. ಮನರೇಗಾ ವೇತನವನ್ನು ಹೆಚ್ಚಿಸಬೇಕು, ನಗರ ಪ್ರದೇಶಗಳಿಗೂ ವಿಸ್ತರಿಸಬೇಕು. ಸಾರ್ವಜನಿಕ ಆರೋಗ್ಯ, ಶಿಕ್ಷಣ ಹಾಗೂ ನಾಗರಿಕ ಸೇವೆಗಳನ್ನು ಬಲಪಡಿಸಬೇಕು ಎಂದು ಆಗ್ರಹಿಸಿವೆ.

ಅಂದಹಾಗೆ, ಸಾರ್ವತ್ರಿಕ ಮುಷ್ಕರವನ್ನು ನಡೆಸುವುದು ಇಂದಿನ ದಿನಗಳಲ್ಲಿ ಸುಲಭವಲ್ಲ. ಆದರೆ, ಈ ಸಾರ್ವತ್ರಿಕ ಮುಷ್ಕರಕ್ಕೆ ಐತಿಹಾಸಿಕ ಹಿರಿಮೆ ಇದೆ. ಸಾರ್ವತ್ರಿಕ ಮುಷ್ಕರವು ಕಾರ್ಮಿಕ ಹೋರಾಟದ ಇತಿಹಾಸದೊಂದಿಗೆ ಬೆಸೆದುಕೊಂಡಿದೆ. ಕಾರ್ಮಿಕ ಸಂಘಗಳು, ರಾಜಕೀಯ ಸಂಘಟನೆಗಳು ಮತ್ತು ಸಾಮಾಜಿಕ ಸಂಘಟನೆಗಳು ಒಂದು ನಿರ್ದಿಷ್ಟ ಗುರಿಯನ್ನು ಸಾಧಿಸಲು ಮತ್ತು ಹಕ್ಕೊತ್ತಾಯದ ಈಡೇರಿಕೆಗಾಗಿ ಆರ್ಥಿಕ ಚಟುವಟಿಕೆಗಳನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಿ, ಹೋರಾಟಕ್ಕಿಳಿಯುವಂತೆ ಮಾಡುತ್ತದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಕಾರ್ಮಿಕರ ಹಕ್ಕುಗಳು, ಸುಧಾರಿತ ಕೆಲಸದ ವಾತಾವರಣ, ಸಂಬಳ ಹೆಚ್ಚಳಕ್ಕೆ ಆಗ್ರಹಿಸಿ ಹಾಗೂ ಕಾರ್ಮಿಕ ವಿರೋಧಿ, ಜನವಿರೋಧಿ ನೀತಿಗಳನ್ನು ಖಂಡಿಸಿ, ಸಾಮಾಜಿಕ ನೀತಿಗಳಿಗೆ ಆಗ್ರಹಿಸಿ ಸಾರ್ವತ್ರಿಕ ಮುಷ್ಕರಗಳು ನಡೆಯುತ್ತವೆ. ಕಾರ್ಮಿಕರು ತಮ್ಮ ಕೆಲಸವನ್ನು ನಿಲ್ಲಿಸಿ, ಪ್ರತಿಭಟನಾ ಮೆರವಣಿಗೆಗಳು, ಕೆಲಸದ ಬಹಿಷ್ಕಾರ, ತೆರಿಗೆ ತಡೆಗಳು, ಬೃಹತ್ ಹೋರಾಟಗಳ ಮೂಲಕ ಕಾರ್ಮಿಕರು ಹಾಗೂ ಇತರರು ಸಾಮೂಹಿಕವಾಗಿ ಮುಷ್ಕರದಲ್ಲಿ ಭಾಗಿಯಾಗುತ್ತಾರೆ. ಇಂತಹ ಮುಷ್ಕರಗಳು ಸರ್ಕಾರದೊಂದಿಗೆ ಚೌಕಾಶಿ ಸಾಮರ್ಥ್ಯವನ್ನು ಬಲಪಡಿಸುತ್ತದೆ. ಜೊತೆಗೆ, ಸಾಮಾಜಿಕ, ರಾಜಕೀಯ ಅಥವಾ ಆರ್ಥಿಕ ಬದಲಾವಣೆಗಳಿಗೆ ಒತ್ತಡ ಹೇರಲು ಸಾಧ್ಯವಾಗುತ್ತದೆ.

ಇತಿಹಾಸದ ಪ್ರಮುಖ ಸಾರ್ವತ್ರಿಕ ಮುಷ್ಕರಗಳು

ಸಾರ್ವತ್ರಿಕ ಮುಷ್ಕರ ಎಂಬ ಹೋರಾಟವು ರೂಪುಗೊಂಡಿದ್ದು 19ನೇ ಶತಮಾನಲ್ಲಿ, ಕೈಗಾರಿಕಾ ಕ್ರಾಂತಿಯ ಆರಂಭದೊಂದಿಗೆ. 1830ರ ದಶಕದಲ್ಲಿ ಯುರೋಪ್‌ನಲ್ಲಿ ವಿಶೇಷವಾಗಿ ಲಂಡನ್‌ನಲ್ಲಿ ಮೊದಲ ಬಾರಿಗೆ ಸಾರ್ವತ್ರಿಕ ಮುಷ್ಕರಗಳು ನಡೆದವು. ಆ ಸಮಯದಲ್ಲಿ, ಕಾರ್ಮಿಕರ ಶೋಷಣೆಯ ವಿರುದ್ಧ ‘ಚಾರ್ಟಿಸ್ಟ್ ಮೂವಮೆಂಟ್‌’ (ಚಾರ್ಟಿಸ್ಟ್‌ ಚಳವಳಿ) ರೀತಿಯ ಕಾರ್ಮಿಕ ಚಳವಳಿಗಳು ಆರಂಭವಾದವು. 1842ರಲ್ಲಿ ಇಂಗ್ಲೆಂಡ್‌ನಲ್ಲಿ ನಡೆದ ‘ಪ್ಲಗ್ ರಿಯಾಟ್ಸ್’ ಎಂಬ ಮುಷ್ಕರವು ಸಾರ್ವತ್ರಿಕ ಮುಷ್ಕರವು ಇಡೀ ದೇಶದ ಜನರನ್ನು ಒಗ್ಗೂಡಿಸಿತು. ಮುಷ್ಕರದಲ್ಲಿ ಭಾಗಿಯಾದ ಕಾರ್ಮಿಕರು ತಾವು ಕೆಲಸ ಮಾಡುತ್ತಿದ್ದ ಕಾರ್ಖಾನೆಗಳಿಗೆ ವಿದ್ಯುತ್ ಸರಬರಾಜು ಆಗದಂತೆ ಕಡಿತಗೊಳಿಸಿದ್ದರು. ಅದು ಜಗತ್ತಿನ ಗಮನ ಸೆಳೆದಿತ್ತು.

ಆ ನಂತರದಲ್ಲಿ, 1886ರಲ್ಲಿ ಮತ್ತೊಂದು ಬೃಹತ್ ಮುಷ್ಕರ ಅಮೆರಿಕದಲ್ಲಿ ನಡೆಯಿತು. ಅಮೆರಿಕದ ಚಿಕಾಗೋದಲ್ಲಿ, ದಿನಕ್ಕೆ 8 ಗಂಟೆ ಕೆಲಸದ ಸಮಯ ನಿಗದಿಗಾಗಿ ಬೃಹತ್ ಹೋರಾಟಗಳು ನಡೆದವು. ಈ ಘಟನೆಯು ಕಾರ್ಮಿಕ ಚಳವಳಿಗಳಿಗೆ ಜಾಗತಿಕ ಪ್ರೇರಣೆ ನೀಡಿತು. ಅಂದು ಮೇ ತಿಂಗಳಿನಲ್ಲಿ ನಡೆದ ಆ ಬೃಹತ್ ಮುಷ್ಕರ ಸ್ಮರಣಾರ್ಥವಾಗಿ, ‘ಮೇ 1’ಅನ್ನು (May Day) ಅಂತಾರಾಷ್ಟ್ರೀಯ ಕಾರ್ಮಿಕ ದಿನವನ್ನಾಗಿ ಆಚರಿಸಲಾಗುತ್ತಿದೆ.

ಈ ಲೇಖನ ಓದಿದ್ದೀರಾ?; ಬಿಹಾರ ಮತದಾರ ಪಟ್ಟಿ ಪರಿಷ್ಕರಣೆ: ಮೋದಿ ಮಸಲತ್ತು ಬಹಿರಂಗ?

ಚಿಕಾಗೋ ಮುಷ್ಕರದ ಬಳಿಕ ಸಾರ್ವತ್ರಿಕ ಮುಷ್ಕರ ಪರಿಕಲ್ಪನೆಯು ಜಗತ್ತಿನಾದ್ಯಂತ ಪಸರಿಸಿತು. 1919ರಲ್ಲಿ ಕೆನಡಾದ ವಿನ್ನಿಪೆಗ್‌ನಲ್ಲಿ ಬೃಹತ್ ಮುಷ್ಕರವೊಂದು ನಡೆಯಿತು. ಆರ್ಥಿಕ ಸುಧಾರಣೆಗಳಿಗಾಗಿ ಕಾರ್ಮಿಕ ಸಂಘಗಳ ನೇತೃತ್ವದಲ್ಲಿ ಸುಮಾರು 30,000 ಕಾರ್ಮಿಕರು ಆರು ವಾರಗಳ ಕಾಲ ಕೆಲಸವನ್ನು ಸ್ಥಗಿತಗೊಳಿಸಿ, ಹೋರಾಟ ನಡೆಸಿದರು.

ಇದರ ಬೆನ್ನಲ್ಲೇ, 1926ರಲ್ಲಿ ಇಂಗ್ಲೆಂಡ್‌ನಲ್ಲಿ ಕಲ್ಲಿದ್ದಲು ಗಣಿ ಕಾರ್ಮಿಕರ ಸಂಬಳ ಕಡಿತದ ವಿರುದ್ಧ ಒಂಬತ್ತು ದಿನಗಳ ಕಾಲ ಸಾರ್ವತ್ರಿಕ ಮುಷ್ಕರ ನಡೆಯಿತು. ಟ್ರೇಡ್ ಯೂನಿಯನ್ ಕಾಂಗ್ರೆಸ್ (TUC) ನೇತೃತ್ವದಲ್ಲಿ ನಡೆದ ಈ ಮುಷ್ಕರವು ಸರ್ಕಾರದ ದಬ್ಬಾಳಿಕೆಯಿಂದ ತನ್ನ ಗುರಿಯನ್ನು ಸಾಧಿಸಲು ಸಾಧ್ಯವಾಗಲಿಲ್ಲ. ಆದಾಗ್ಯೂ, ಇದು ಕಾರ್ಮಿಕರ ಐಕ್ಯತೆಯನ್ನು ಆಳುವವರಿಗೆ ತೋರಿಸಿತು.

1968ರಲ್ಲಿ ಫ್ರಾನ್ಸ್‌ನಲ್ಲಿ ವಿದ್ಯಾರ್ಥಿಗಳು ಮತ್ತು ಕಾರ್ಮಿಕರು ಒಗ್ಗೂಡಿ ಸಾಮಾಜಿಕ ಮತ್ತು ರಾಜಕೀಯ ಸುಧಾರಣೆಗಳಿಗಾಗಿ ಆಗ್ರಹಿಸಿ ಸರ್ಕಾರದ ವಿರುದ್ಧ ಸಾಮೂಹಿಕ ಮುಷ್ಕರ ನಡೆಸಿದ್ದರು.

ಭಾರತದಲ್ಲಿ ಮುಷ್ಕರಗಳು

ಭಾರತದಲ್ಲಿ ಸಾರ್ವತ್ರಿಕ ಮುಷ್ಕರಗಳು ಆರಂಭದಲ್ಲಿ ಸ್ವಾತಂತ್ರ್ಯ ಚಳವಳಿಯೊಂದಿಗೆ ಬೆಸೆದುಕೊಂಡಿವೆ. ಮಹಾತ್ಮ ಗಾಂಧಿಯವರು ಸತ್ಯಾಗ್ರಹದ ರೂಪದಲ್ಲಿ ಮುಷ್ಕರಗಳನ್ನು ನಡೆಸಿದ್ದಾರೆ. ಸ್ವಾತಂತ್ರ್ಯ ಸಂಗ್ರಾಮದಲ್ಲಿ ಸತ್ಯಾಗ್ರಹವು ಗಾಂಧಿ ಅವರ ಪ್ರಮುಖ ಅಸ್ತ್ರವಾಗಿತ್ತು. 1942ರ ಭಾರತ ಬಿಟ್ಟು ತೊಲಗಿ (Quit India) ಚಳವಳಿಯು ಸಾರ್ವತ್ರಿಕ ಮುಷ್ಕರದ ಭಾಗವಾಗಿತ್ತು. ಆ ಚಳವಳಿಯಲ್ಲಿ ಕಾರ್ಮಿಕರು, ವಿದ್ಯಾರ್ಥಿಗಳು ಹಾಗೂ ಜನಸಾಮಾನ್ಯರು ಒಟ್ಟಾಗಿ ಹೋರಾಟಕ್ಕಿಳಿದರು. ಕೆಲಸವನ್ನು ಸ್ಥಗಿತಗೊಳಿಸಿ ಬ್ರಿಟಿಷ್ ಆಡಳಿತದ ವಿರುದ್ಧ ಸಾಮೂಹಿಕ ಪ್ರತಿಭಟನೆಯಲ್ಲಿ ಭಾಗವಹಿಸಿದರು.

ಸ್ವಾಂತಂತ್ರ್ಯ ಚಳವಳಿಯ ನಂತರ ಭಾರತದಲ್ಲಿ ಹಲವಾರು ದಲಿತ, ರೈತ, ಕಾರ್ಮಿಕ ಹಾಗೂ ಮಹಿಳಾ ಹೋರಾಟಗಳು, ಚಳವಳಿಗಳು ನಡೆದಿವೆ. ಇತ್ತೀಚೆಗೆ, 2019-2020ರಲ್ಲಿ ಮೋದಿ ಸರ್ಕಾರವು ಜಾರಿಗೆ ತಂದ ಕಾರ್ಮಿಕ ವಿರೋಧಿ, ರೈತ ವಿರೋಧಿ ಕಾರ್ಮಿಕ ಮತ್ತು ಕೃಷಿ ಕಾನೂನುಗಳ ವಿರುದ್ಧ ರೈತ-ಕಾರ್ಮಿಕರು ಸಾರ್ವತ್ರಿಕ ಮುಷ್ಕರ ನಡೆಸಿದರು. 2021-22ರಲ್ಲಿ ದೆಹಲಿ ಗಡಿಯಲ್ಲಿ ದೇಶದ ರೈತರು ಬರೋಬ್ಬರಿ ಒಂದು ವರ್ಷಗಳ ಕಾಲ ದೀರ್ಘಕಾಲದ ಪ್ರತಿಭಟನೆಯನ್ನು ನಡೆಸಿದರು.

ಸಾರ್ವತ್ರಿಕ ಮುಷ್ಕರದ ಮಹತ್ವ

  • ಕಾರ್ಮಿಕರ ಐಕ್ಯತೆ: ಸಾರ್ವತ್ರಿಕ ಮುಷ್ಕರವು ಕಾರ್ಮಿಕರ ಒಗ್ಗಟ್ಟಿನ ಶಕ್ತಿಯನ್ನು ತೋರಿಸುತ್ತದೆ. ಇದು ಒಂದು ಉದ್ದೇಶಕ್ಕಾಗಿ ವಿವಿಧ ವರ್ಗದ ಕಾರ್ಮಿಕರನ್ನು ಒಗ್ಗೂಡಿಸುತ್ತದೆ.
  • ರಾಜಕೀಯ ಒತ್ತಡ: ಸರ್ಕಾರಗಳು ಮತ್ತು ಉದ್ಯಮಿಗಳ ಮೇಲೆ ರೈತ-ಕಾರ್ಮಿಕರು ಒತ್ತಡ ಹೇರಲು ಪರಿಣಾಮಕಾರಿ ಮಾರ್ಗವಾಗಿದೆ.
  • ಸಾಮಾಜಿಕ ಬದಲಾವಣೆ: ಸಾರ್ವತ್ರಿಕ ಮುಷ್ಕರಗಳು ಕೆಲಸದಲ್ಲಿನ ಸುಧಾರಣೆ, ಸಂಬಳ ಹೆಚ್ಚಳ, ಮತ್ತು ಸಾಮಾಜಿಕ ನ್ಯಾಯದ ಅನುಷ್ಠಾನಕ್ಕೆ ಕಾರಣವಾಗುತ್ತವೆ.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಪ್ರಧಾನಿ ಮೋದಿ ಅಮೆರಿಕಕ್ಕೆ 100% ಶರಣಾಗಿದ್ದಾರೆ: ರಾಹುಲ್ ಗಾಂಧಿ

ಪಶ್ಚಿಮ ಏಷ್ಯಾದಲ್ಲಿನ ಯುದ್ಧದ ಪರಿಸ್ಥಿತಿ ಮತ್ತು ದೇಶದ ಆರ್ಥಿಕ ನೀತಿಗಳ ಕುರಿತು...

‘ಟ್ರಂಪ್ ನಿಯಂತ್ರಣದಲ್ಲಿ ಮೋದಿ’: ಲೋಕಸಭೆಯ ಭಾಷಣದಲ್ಲಿ ಅಮೆರಿಕದ ಬಗ್ಗೆ ಮೌನಕ್ಕೆ ರಾಹುಲ್ ವಾಗ್ದಾಳಿ

ಮಧ್ಯಪ್ರಾಚ್ಯ ಬಿಕ್ಕಟ್ಟಿನ ಕುರಿತು ಭಾರತದ ನಿಲುವಿನ ಬಗ್ಗೆ ರಾಜಕೀಯ ವಾಗ್ದಾಳಿ ಸೋಮವಾರ...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ ರಾಷ್ಟ್ರೀಯವಾದ?

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ...

18 ಸಾವಿರ ಕೋಟಿ ರೂ. ದಾಟಿದ ದೇಶದ ಕ್ರೀಡಾ ಅರ್ಥವ್ಯವಸ್ಥೆ; ಕ್ರಿಕೆಟ್ ದರ್ಬಾರಿನಲ್ಲಿ ಸೊರಗಿದ ಇತರ ಆಟಗಳು

ಐಪಿಎಲ್‌ನಲ್ಲಿ ಕೇವಲ ಬೆಂಚ್ ಕಾಯುವ ಸಾಮಾನ್ಯ ಕ್ರಿಕೆಟ್ ಆಟಗಾರನೊಬ್ಬ ಕೋಟ್ಯಾಧಿಪತಿಯಾಗಿ ಐಷಾರಾಮಿ...