ಭಾರತ 5 ಸಾವಿರ ವರ್ಷಗಳಿಂದ ಜಾತ್ಯತೀತ ರಾಷ್ಟ್ರ: ಆರ್‌ಎಸ್ಎಸ್ ಮುಖ್ಯಸ್ಥ ಭಾಗವತ್

Date:

ಭಾರತವು 5 ಸಾವಿರ ವರ್ಷಗಳಿಂದ ಜಾತ್ಯತೀತ ರಾಷ್ಟ್ರವಾಗಿದೆ. ಜನರು ಒಗ್ಗಟ್ಟಾಗಿ ವಿಶ್ವದ ಮುಂದೆ ಉತ್ತಮ ಮಾನವ ನಡವಳಿಕೆಯ ಅತ್ಯುತ್ತಮ ಉದಾಹರಣೆಯನ್ನು ಪ್ರಸ್ತುತಪಡಿಸಬೇಕೆಂದು ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗವತ್ ಕರೆ ನೀಡಿದರು.

ಆರ್‌ಎಸ್‌ಎಸ್‌ನ ಹಿರಿಯ ಪದಾಧಿಕಾರಿ ರಂಗಾ ಹರಿ ಅವರು ಬರೆದಿರುವ ‘ಪೃಥ್ವಿ ಸೂಕ್ತ – ಆನ್‌ ಓಡ್‌ ಟು ಮದರ್‌ ಅರ್ಥ್‌’ ಪುಸ್ತಕ ಬಿಡುಗಡೆ ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದ ಭಾಗವತ್‌, ಜನರು ತಮ್ಮ ತಾಯ್ನಾಡಿನ ಬಗ್ಗೆ ಭಕ್ತಿ, ಪ್ರೀತಿ ಮತ್ತು ಸಮರ್ಪಣಾ ಮನೋಭಾವವನ್ನು ಹೊಂದಿರಬೇಕು. ನಾವು ನಮ್ಮ ಮಾತೃಭೂಮಿಯನ್ನು ರಾಷ್ಟ್ರೀಯ ಏಕತೆಯ ಅತ್ಯಗತ್ಯ ಭಾಗ ಎಂದು ಪರಿಗಣಿಸಬೇಕು ಎಂದು ಮೋಹನ್ ಭಾಗವತ್ ಮನವಿ ಮಾಡಿದರು.

“ನಮ್ಮದು 5 ಸಾವಿರ ವರ್ಷಗಳ ಹಿಂದಿನ ಜಾತ್ಯತೀತ ಸಂಸ್ಕೃತಿಯಾಗಿದೆ. ಇಡೀ ಪ್ರಪಂಚವು ಒಂದು ಕುಟುಂಬ. ಇದು ನಮ್ಮ ಭಾವನೆ. ಇದು ಸಿದ್ಧಾಂತವಲ್ಲ. ಅದನ್ನು ತಿಳಿದುಕೊಂಡು ಅದರಂತೆ ನಡೆದುಕೊಳ್ಳಿ” ಎಂದು ಆರ್‌ಎಸ್‌ಎಸ್ ಮುಖ್ಯಸ್ಥ ಹೇಳಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಈ ಸುದ್ದಿ ಓದಿದ್ದೀರಾ? ಜಮ್ಮುವಿನಲ್ಲಿನ ಹಿಂದೂಗಳಿಗೆ ಎಷ್ಟು ಹಣ ನೀಡಿದ್ದೀರಿ; ದಿ ಕಾಶ್ಮೀರ್ ಫೈಲ್ಸ್ ಚಿತ್ರತಂಡಕ್ಕೆ ನಟಿ ಆಶಾ ಪರೇಖ್ ಪ್ರಶ್ನೆ

“ದೇಶದಲ್ಲಿ ತುಂಬಾ ವೈವಿಧ್ಯತೆಯಿದೆ. ಪರಸ್ಪರ ಜಗಳವಾಡಬೇಡಿ. ನಾವು ಒಂದೇ ಎಂದು ಜಗತ್ತಿಗೆ ತಿಳಿಸಿ. ಇದು ಭಾರತದ ಅಸ್ತಿತ್ವದ ಏಕೈಕ ಉದ್ದೇಶವಾಗಿದೆ. ಲೋಕಕಲ್ಯಾಣಕ್ಕಾಗಿ ದಾರ್ಶನಿಕರು ‘ಭಾರತ’ವನ್ನು ಸೃಷ್ಟಿಸಿದ್ದಾರೆ. ಅವರು ತಮ್ಮ ಜ್ಞಾನವನ್ನು ದೇಶದ ಕಟ್ಟಕಡೆಯ ವ್ಯಕ್ತಿಗೂ ಹಸ್ತಾಂತರಿಸುವ ಸಮಾಜವನ್ನು ಸೃಷ್ಟಿಸಿದ್ದಾರೆ” ಎಂದರು.

“ಅವರು ಕೇವಲ ಸನ್ಯಾಸಿಗಳಾಗಿ ಇರಲಿಲ್ಲ. ಅವರು ತಮ್ಮ ಕುಟುಂಬಗಳೊಂದಿಗೆ ಅಲೆದಾಡುವ ಜೀವನವನ್ನು ನಡೆಸುತ್ತಿದ್ದರು. ಬ್ರಿಟಿಷರು ಕ್ರಿಮಿನಲ್ ಬುಡಕಟ್ಟುಗಳೆಂದು ಘೋಷಿಸಿದ ಈ ಎಲ್ಲಅಲೆಮಾರಿಗಳು ಈಗಲೂ ಇದ್ದಾರೆ. ಅವರು ತಮ್ಮ ಸಂಸ್ಕೃತಿಯನ್ನು ಪ್ರದರ್ಶಿಸುವುದನ್ನು ಹೆಚ್ಚಾಗಿ ಕಾಣಬಹುದು. ಅವರಲ್ಲಿ ಕೆಲವರು ಆಯುರ್ವೇದ ಜ್ಞಾನವನ್ನು ಹಂಚಿಕೊಳ್ಳುತ್ತಾರೆ” ಎಂದು ಅವರು ಹೇಳಿದರು.

“ನಮ್ಮ ಜನರು ಮೆಕ್ಸಿಕೋದಿಂದ ಸೈಬೀರಿಯಾದವರೆಗೆ ಜ್ಞಾನವನ್ನು ತೆಗೆದುಕೊಂಡು ಪ್ರಪಂಚದಾದ್ಯಂತ ಹೋದರು. ಭಾರತವು ಮುಖ್ಯವಾಗಿ ಆರ್ಥಿಕ ವಿಷಯಗಳ ಕುರಿತು ಚರ್ಚಿಸುವ ವೇದಿಕೆಯಾಗಿರುವ ಜಿ20 ಅನ್ನು ಮಾನವೀಯತೆಯ ಬಗ್ಗೆ ಯೋಚಿಸುವ ವೇದಿಕೆಯಾಗಿ ಪರಿವರ್ತಿಸುವುದರಲ್ಲಿ ಆಶ್ಚರ್ಯವಿಲ್ಲ. ವಸುದೈವ ಕುಟುಂಬಕಂ ಎಂಬ ಭಾವನೆಯನ್ನು ನೀಡುವ ಮೂಲಕ ನಾವು ಅದನ್ನು ಮಾಡಿದ್ದೇವೆ” ಎಂದರು.

ಕಾರ್ಯಕ್ರಮದಲ್ಲಿ ಕೇರಳ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ಸೇರಿದಂತೆ ಹಲವರು ಹಾಜರಿದ್ದರು.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ ರಾಷ್ಟ್ರೀಯವಾದ?

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ...

ಅಸ್ಸಾಂ ಚುನಾವಣೆ: ಕಾಂಗ್ರೆಸ್ ಸೇರಿದ ಮಾಜಿ ಸಚಿವೆ ನಂದಿತಾ ಗೋರ್ಲೋಸಾ ಯಾರು?

ಅಸ್ಸಾಂ ವಿಧಾನಸಭಾ ಚುನಾವಣೆಗೆ (ಏಪ್ರಿಲ್ 9 ರಂದು ಒಂದೇ ಹಂತದಲ್ಲಿ ಮತದಾನ)...

ಡಾಲರ್ V/s ಯುವಾನ್: ಕೊಲ್ಲಿ ಯುದ್ಧ ಕರೆನ್ಸಿ ಯುದ್ಧವಾಗಿ ಮಾರ್ಪಾಡಾಗುತ್ತಿದೆಯೇ?

ಅಕಸ್ಮಾತ್ ಈ ಯುದ್ಧ ಮುಂದುವರೆದರೆ, ಕೆಲವು ದೇಶಗಳು ಡಾಲರ್ ಬದಲಿಗೆ ಯುವಾನ್...

ರಾಜ್ಯಸಭೆಗೆ ಸದಾನಂದಗೌಡರ ಪರ ಬಿಎಸ್‌ವೈ ; ದೇವೇಗೌಡರ ಪರ ಹೆಚ್‌ಡಿಕೆ ಲಾಬಿ

ಕೇಂದ್ರ ಉಕ್ಕು ಮತ್ತು ಭಾರಿ ಕೈಗಾರಿಕೆ ಸಚಿವ ಹೆಚ್‌.ಡಿ ಕುಮಾರಸ್ವಾಮಿ ನವದೆಹಲಿಯಲ್ಲಿ...