ಕೇಂದ್ರ ಸರ್ಕಾರ ಮತ್ತೆ ಮೂವರಿಗೆ ಭಾರತ ರತ್ನ ಘೋಷಿಸಿದೆ. ಮಾಜಿ ಪ್ರಧಾನಿಗಳಾದ ಪಿ ವಿ ನರಸಿಂಹರಾವ್, ಚರಣ್ ಸಿಂಗ್ ಹಾಗೂ ಹಸಿರು ಕ್ರಾಂತಿಯ ಹರಿಕಾರ ಎಂ ಎಸ್ ಸ್ವಾಮಿನಾಥನ್ ಅವರಿಗೆ ಮರಣೋತ್ತರ ಭಾರತ ರತ್ನ ಪ್ರಶಸ್ತಿ ನೀಡಿದೆ.
ಕಳೆದ ವಾರ ಬಿಜೆಪಿ ನಾಯಕ ಎಲ್ ಕೆ ಅಡ್ವಾನಿ ಅವರಿಗೆ ಭಾರತ ರತ್ನ ಘೋಷಿಸಲಾಗಿತ್ತು. 15 ದಿನಗಳ ಹಿಂದೆ ಹಿಂದುಳಿದ ವರ್ಗಗಳ ನಾಯಕ, ಬಿಹಾರದ ಮಾಜಿ ಸಿಎಂ ಕರ್ಪೂರಿ ಠಾಕೂರ್ ಅವರಿಗೆ ಭಾರತದ ಅತ್ಯುನ್ನತ ಪ್ರಶಸ್ತಿ ಘೋಷಿಸಲಾಗಿತ್ತು.
ಪಿ ವಿ ನರಸಿಂಹರಾವ್ ಅವರಿಗೆ ಘೋಷಣೆಯಾಗಿರುವ ಬಗ್ಗೆ ಮೊಮ್ಮಗ ಎನ್ ವಿ ಸುಬ್ಬಯ್ಯ, ಟ್ವಿಟರ್‌ನಲ್ಲಿ ತಿಳಿಸಿದ್ದಾರೆ.
ಉತ್ತರ ಪ್ರದೇಶದವರಾದ ಚರಣ್ ಸಿಂಗ್ 1979 ಜುಲೈನಿಂದ ಜನವರಿ 1980ರ ಜನವರಿ 14ರವರೆಗೆ ಜನತಾ ಪಕ್ಷದ ಸರ್ಕಾರದಿಂದ ಭಾರತದ ಪ್ರಧಾನಿಯಾದ್ದರು. 1967 ಮತ್ತು 1970ರ ಅವಧಿಯಲ್ಲಿ ಉತ್ತರ ಪ್ರದೇಶದ ಮುಖ್ಯಮಂತ್ರಿ ಆಗಿಯು ಸೇವೆ ಸಲ್ಲಿಸಿದ್ದರು.
ಅವಿಭಜಿತ ಆಂಧ್ರ ಪ್ರದೇಶದ ಕರೀಮ್‌ನಗರದ ಪಿ ವಿ ನರಸಿಂಹರಾವ್ ಜೂನ್ 21 1991 ರಿಂದ ಮೇ 16 1996ರ ವರೆಗೆ ಕಾಂಗ್ರೆಸ್‌ನಿಂದ ಪ್ರಧಾನಿಯಾಗಿದ್ದರು. ಪ್ರಧಾನಿಯಾಗುವ ಮುನ್ನ 1970ರ ದಶಕದಲ್ಲಿ ಆಂಧ್ರ ಪ್ರದೇಶದ ಮುಖ್ಯಮಂತ್ರಿಯಾಗಿದ್ದರು.
ಭಾರತ ರತ್ನ ಘೋಷಣೆಯಾಗಿರುವ ಮತ್ತೋರ್ವ ಹಸಿರು ಕ್ರಾಂತಿಯ ಪಿತಾಮಹ ಎಂ ಎಸ್ ಸ್ವಾಮಿನಾಥನ್ ಅವರು ಆಗಸ್ಟ್ 7, 1925 ರಂದು ತಮಿಳುನಾಡಿನ ತಂಜಾವೂರು ಜಿಲ್ಲೆಯಲ್ಲಿ ಜನಿಸಿದ್ದರು. ಅವರು ಕೃಷಿ ವಿಜ್ಞಾನಿ, ಸಸ್ಯ ತಳಿಶಾಸ್ತ್ರಜ್ಞ, ಆಡಳಿತಗಾರ ಮತ್ತು ಮಾನವತಾವಾದಿಯಾಗಿದ್ದರು.
ಭಾರತದ ಕಡಿಮೆ ಆದಾಯದ ರೈತರು ಹೆಚ್ಚು ಉತ್ಪಾದಿಸಲು ಸಹಾಯ ಮಾಡುವ ಹೆಚ್ಚಿನ ಇಳುವರಿ ನೀಡುವ ಭತ್ತದ ತಳಿಗಳನ್ನು ಅಭಿವೃದ್ಧಿಪಡಿಸುವಲ್ಲಿ ನಿರ್ಣಾಯಕ ಪಾತ್ರ ವಹಿಸಿದ್ದಾರೆ. ಕಳೆದ ವರ್ಷ ಸೆ.28ರಂದು ತಮ್ಮ 98ನೇ ವಯಸ್ಸಿನಲ್ಲಿ ಮೃತಪಟ್ಟಿದ್ದರು.
ಕಳೆದ ಒಂದು ತಿಂಗಳಲ್ಲಿ ಕೇಂದ್ರ ಸರ್ಕಾರ ಐವರಿಗೆ ಭಾರತ ರತ್ನ ಪ್ರಶಸ್ತಿ ನೀಡಿದೆ.
ಈ ಸುದ್ದಿ ಓದಿದ್ದೀರಾ ? ಈ ದಿನ ಸಂಪಾದಕೀಯ | ಬೇಸಿಗೆ ಬೇಗ ಬಂದಿದೆ; ಜೀವಜಲಕ್ಕೆ ತತ್ವಾರ ತಂದಿದೆ
Breaking now: 3 more Bharat Ratnas: Chaudhary Charan Singh, Narasimha Rao and MS Swaminathan. That’s 5 Bharat Ratnas in a month, 4 of them to politicians, all before the general elections. One to a kisaan leader , one to a Mandal icon, one to a Hindutva hero, one to a markets…
— Rajdeep Sardesai (@sardesairajdeep) February 9, 2024





