ಬಿಹಾರ ಚುನಾವಣೆಯಲ್ಲಿ ಮೊದಲ ಹಂತದ ಮತದಾನಕ್ಕೆ (ನ.6) ಮೂರು ದಿನಗಳು ಬಾಕಿ ಇರುವಾಗ, ಸೋಮವಾರ ಮತ್ತೊಂದು ಸೇತುವೆ ಕುಸಿದು ಬಿದ್ದಿದೆ. ನಿರ್ಮಾಣಗೊಂಡ ಕೇವಲ 5 ವರ್ಷಗಳಲ್ಲಿ ಸೇತುವೆ ಕುಸಿದು ಬಿದ್ದಿದೆ. ಇದು ಚುನಾವಣೆಗೂ ಮುನ್ನ ಎನ್‌ಡಿಎ ಸರ್ಕಾರದ ಭ್ರಷ್ಟಾಚಾರಕ್ಕೆ ಕನ್ನಡಿ ಹಿಡಿದಿದೆ ಎಂದು ವಿಪಕ್ಷಗಳು ಮತ್ತು ನೆಟ್ಟಿಗರು ಆರೋಪಿಸಿದ್ದಾರೆ.
ಬಿಹಾರದ ಅರಾರಿಯಾ ಜಿಲ್ಲೆಯ ಕೆಲ್ವಾಶಿ ಗ್ರಾಮದ ಬಳಿ ಪರ್ಮೈನ್ ನದಿಗೆ ಅಡ್ಡಲಾಗಿ 2019ರಲ್ಲಿ 4 ಕೋಟಿ ರೂ. ವೆಚ್ಚದಲ್ಲಿ ಸೇತುವೆ ನಿರ್ಮಾಣ ಮಾಡಲಾಗಿತ್ತು. ಸೇತುವೆಯು ಪಟೇಗ್ನಾ ಮತ್ತು ಫೋರ್ಬ್ಸ್‌ಗಂಜ್ ಪ್ರದೇಶಗಳ ಸಂಪರ್ಕಕೊಂಡಿಯಾಗಿತ್ತು. ಇದೀಗ, ಸೇತುವೆ ಕುಸಿದಿದ್ದು, ಸೇತುವೆಯ ಭಾಗವು ನದಿಯಲ್ಲಿ ಮುಳುಗಿದೆ. ಫೋರ್ಬ್ಸ್‌ಗಂಜ್ ಮತ್ತು ಪಟೇಗ್ನಾ ನಡುವಿನ ಪ್ರಮುಖ ಸಂಪರ್ಕವನ್ನು ಮುರಿದಿದೆ.
ಸೇತುವೆ ಕುಸಿತ ವಿಚಾರವಾಗಿ ಆಡಳಿತಾರೂಢ ಬಿಜೆಪಿ-ಜೆಡಿಯು ನೇತೃತ್ವದ ಎನ್‌ಡಿಎ ಮೈತ್ರಿಕೂಟದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸುರಭಿ ಎಂಬವವರು, “ಈ ಸೇತುವೆಯನ್ನು 2022ರಲ್ಲಿ ಬಿಹಾರದ ಅರಾರಿಯಾದಲ್ಲಿ ನಿರ್ಮಿಸಲಾಗಿತ್ತು. ಈಗ ಈ ಸೇತುವೆ ಕುಸಿದಿದೆ. ಅಂತೆಯೇ, 2024ರ ಜೂನ್ 18 ಅರಾರಿಯಾ: ಪರಾರಿಯಾ ಗ್ರಾಮದಲ್ಲಿ ಬಕ್ರಾ ನದಿಗೆ ಹೊಸದಾಗಿ ನಿರ್ಮಿಸಲಾದ ಸೇತುವೆ ಕುಸಿಯಿತು. 2024ರ ಜೂನ್ 22 – ಸಿವಾನ್: ಗಂಡಕಿ ನದಿಯ ಮೇಲೆ ದಶಕಗಳಷ್ಟು ಹಳೆಯದಾದ ಸೇತುವೆ ಕುಸಿಯಿತು. 2024ರ ಜೂನ್ 23 – ಪೂರ್ವ ಚಂಪಾರಣ್: ಘೋಡಸಹನ್ ಬ್ಲಾಕ್‌ನಲ್ಲಿ ನಿರ್ಮಾಣ ಹಂತದಲ್ಲಿದ್ದ ಸೇತುವೆ ಕುಸಿಯಿತು 2024ರ ಜೂನ್ 27–30 – ಕಿಶನ್‌ಗಂಜ್: ಎರಡು ಸೇತುವೆಗಳು ಕುಸಿದವು. ಅವುಗಳಲ್ಲಿ, ಒಂದನ್ನು 2007–08 ರಲ್ಲಿ MPLAD ನಿಧಿಯಿಂದ ನಿರ್ಮಿಸಲಾಗಿತ್ತು, ಇನ್ನೊಂದು 2011 ರಲ್ಲಿ ನಿರ್ಮಾಣಗೊಂಡಿತ್ತು. ಅಲ್ಲದೆ, 2024ರ ಜೂನ್–ಜುಲೈ – ಕಿಶನ್‌ಗಂಜ್, ಅರಾರಿಯಾ, ಮಧುಬನಿ, ಸರನ್, ಸಿವಾನ್ ಜಿಲ್ಲೆಗಳಲ್ಲಿ ಹಲವು ಸೇತುವೆಗಳು ಕುಸಿದುಬಿದ್ದವು. ನೋಡಿ, ಬಿಹಾರದಲ್ಲಿನ ಭ್ರಷ್ಟಾಚಾರವನ್ನು ಊಹಿಸಿ” ಎಂದಿದ್ದಾರೆ.
The bridge built in Araria in 2022 has collapsed in 2025. 😡
— Amar Singh Chouhan (@amar_4inc) November 3, 2025
So much for the so-called “double engine development.”
Who pocketed the funds then?
Who will take responsibility now?
Bihar deserves roads and honesty — not photo ops and fake promises!#Bihar #BiharElections pic.twitter.com/3jhmdAjtZO
ಅಮರ್ ಸಿಂಗ್ ಚೌತಾನ್ ಎಂಬವರು, “2022ರಲ್ಲಿ ಅರಾರಿಯಾದಲ್ಲಿ ನಿರ್ಮಿಸಲಾದ ಸೇತುವೆ 2025ರಲ್ಲಿ ಕುಸಿದಿದೆ. ಡಬಲ್ ಎಂಜಿನ್ ಸರ್ಕಾರದ ಡಬಲ್ ಅಭಿವೃದ್ಧಿ ಎಂದರೆ ಇದೆಯೇ? ಆಗ ಹಣವನ್ನು ಯಾರು ಜೇಬಿಗೆ ಹಾಕಿಕೊಂಡರು? ಈಗ ಯಾರು ಜವಾಬ್ದಾರಿ ತೆಗೆದುಕೊಳ್ಳುತ್ತಾರೆ? ಬಿಹಾರಕ್ಕೆ ರಸ್ತೆಗಳು ಮತ್ತು ಪ್ರಾಮಾಣಿಕತೆ ಬೇಕು – ಫೋಟೋ ಶೂಟ್‌ಗಳು ಮತ್ತು ನಕಲಿ ಭರವಸೆಗಳಲ್ಲ!” ಎಂದು ಕಿಡಿಕಾರಿದ್ದಾರೆ.
ಈ ಲೇಖನ ಓದಿದ್ದೀರಾ?: ಬಿಹಾರ ಚುನಾವಣೆ | ಜಾತಿ ರಾಜಕೀಯಕ್ಕಿಲ್ಲ ನೆಲೆ; ಉದ್ಯೋಗಕ್ಕೆ ಮಾತ್ರವೇ ಬೆಲೆ!
ಸೇತುವೆಯ ವಿಡಿಯೋವನ್ನು ಹಂಚಿಕೊಂಡು ಎನ್‌ಡಿಎ ವಿರುದ್ಧ ಬಿಆರ್‌ಎಸ್ ಪಕ್ಷವು ವಾಗ್ದಾಳಿ ನಡೆಸಿದೆ. “ಬಿಹಾರದ ಅರಾರಿಯಾದಲ್ಲಿ 2022ರಲ್ಲಿ ನಿರ್ಮಿಸಲಾದ ಸೇತುವೆ 2025ರ ವೇಳೆಗೆ ಕುಸಿದಿದೆ. ಎನ್‌ಡಿಎಸ್‌ಎಯಂತಹ ಯಾವುದೇ ಕೇಂದ್ರ ಸಂಸ್ಥೆ ಎನ್‌ಡಿಎ ಆಡಳಿತವಿರುವ ರಾಜ್ಯಕ್ಕೆ ಭೇಟಿ ನೀಡುತ್ತದೆಯೇ ಅಥವಾ ವಿರೋಧ ಪಕ್ಷಗಳು ಬಿಜೆಪಿ ವಿರುದ್ಧ ಧ್ವನಿ ಎತ್ತಿದಾಗ ಮಾತ್ರ ಅದು ಕಾರ್ಯನಿರ್ವಹಿಸುತ್ತದೆಯೇ?” ಎಂದು ಕಿಡಿಕಾರಿದೆ.




