ಬಿಹಾರ ಚುನಾವಣೆಯ ಎರಡನೇ ಹಂತದ ಮತದಾನ ಮುಕ್ತಾಯಗೊಂಡಿದೆ. ಮೊದಲ ಹಂತದಂತೆಯೇ, ಎರಡನೇ ಹಂತದಲ್ಲಿಯೂ ದಾಖಲೆಯ ಮತದಾನವಾಗಿದೆ. ಮತದಾನ ನಡೆದ 122 ಕ್ಷೇತ್ರಗಳಲ್ಲಿ ಒಟ್ಟು 67.14%ರಷ್ಟು ಮತದಾನ ನಡೆದಿದೆ.
2ನೇ ಹಂತದಲ್ಲಿ ಒಟ್ಟು 1,302 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಅವರಲ್ಲಿ, 136 (10%) ಮಹಿಳೆಯರು. 122 ಕ್ಷೇತ್ರಗಳಲ್ಲಿ ಒಟ್ಟು 45,399 ಬೂತ್‌ಗಳಲ್ಲಿ ಮತದಾನ ನಡೆದಿದೆ. ಒಟ್ಟು 3.70 ಕೋಟಿ ಮತದಾರಿದ್ದರು. ಅವರಲ್ಲಿ 67.14% ಮತದಾರರು ತಮ್ಮ ಹಕ್ಕು ಚಲಾಯಿಸಿದ್ದಾರೆ.
ಇಂದಿನ ಮತದಾನದಲ್ಲಿ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ಸಂಪುಟದ ಸಚಿವರಾದ ಬಿಜೇಂದ್ರ ಪ್ರಸಾದ್ ಯಾದವ್ (ಸುಪಾಲ್), ಸುಮಿತ್ ಕುಮಾರ್ ಸಿಂಗ್ (ಚಾಕೈ), ಮೊಹಮ್ಮದ್ ಜಮಾ ಖಾನ್ (ಚೈನ್‌ಪುರ್), ಲೇಶಿ ಸಿಂಗ್ (ಧಮ್ದಾಹಾ), ಕೃಷ್ಣ ನಂದನ್ ಪಾಸ್ವಾನ್ (ಹರ್ಸಿಧಿ), ರೇಣು ದೇವಿ (ಬೆಟ್ಟಿಯಾ), ನೀರಜ್ ಕುಮಾರ್ ಬಬ್ಲು (ಗಯಾ), ಶೀಲಾ ಮಂಡಲ್ (ಫುಲ್ಪಾರಸ್), ವಿಜಯ್ ಮಂಡಲ್ (ಸಿಕ್ತಿ), ಮತ್ತು ಜಯಂತ್ ರಾಜ್ ಕುಶ್ವಾಹ (ಅಮರ್ಪುರ್) ಭವಿಷ್ಯವನ್ನು ಮತದಾರರು ನಿರ್ಧಸಿದ್ದಾರೆ.
ಈ ಲೇಖನ ಓದಿದ್ದೀರಾ?: ಬಿಜೆಪಿಗೆ ಗುಡ್‌ಬೈ? ರಾಜಕೀಯದ ʼಪ್ರಿಲಿಮಿನರಿʼ ಪರೀಕ್ಷೆಯಲ್ಲಿ ಸೋತರೇ IPS ಅಣ್ಣಾಮಲೈ!
ಅಂತೆಯೇ, ರಾಜ್ಯ ಕಾಂಗ್ರೆಸ್ ಮುಖ್ಯಸ್ಥ ರಾಜೇಶ್ ಕುಮಾರ್, ಮಾಜಿ ವಿಧಾನಸಭಾ ಸ್ಪೀಕರ್ ಉದಯ್ ನಾರಾಯಣ್ ಚೌಧರಿ (ಆರ್‌ಜೆಡಿ), ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಶಕೀಲ್ ಅಹ್ಮದ್ ಖಾನ್ ಹಾಗೂ ಸಿಪಿಐ-ಎಂಎಲ್ ಶಾಸಕಾಂಗ ಪಕ್ಷದ ನಾಯಕ ಮೆಹಬೂಬ್ ಆಲಂ ಅವರ ಗೆಲುವು-ಸೋಲಿಗೆ ಮತದಾರರು ತೀರ್ಪು ನೀಡಿದ್ದಾರೆ.
ಮೊಲದ ಹಂತದ ಮತದಾನವು ನವೆಂಬರ್ 6ರಂದು ನಡೆದಿತ್ತು. ಅಂದು, 121 ಕ್ಷೇತ್ರಗಳಿಗೆ ಮತದಾನವಾಗಿದ್ದು, ಒಟ್ಟು 65% ಮತದಾನ ನಡೆದಿತ್ತು. ಸ್ವಾತಂತ್ರ್ಯ ನಂತರದಲ್ಲಿ ಬಿಹಾರ ಚುನಾವಣಾ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ದಾಖಲೆಯ ಮತದಾನವಾಗಿತ್ತು. ಇಂದು (ನ.11) ಎರಡನೇ ಹಂತದ ಮತದಾನ ನಡೆದಿದೆ. ಫಲಿತಾಂಶವು ನವೆಂಬರ್ 14ರ ಶುಕ್ರವಾರ ಪ್ರಕಟವಾಗಲಿದೆ.




