ಭಾರತೀಯ ಜನತಾ ಪಕ್ಷ ಲೋಕಸಭೆ ಚುನಾವಣೆ 2024ರ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಶನಿವಾರ ಬಿಡುಗಡೆ ಮಾಡಿದೆ. ಈ ಪಟ್ಟಿಯಲ್ಲಿ 195 ಅಭ್ಯರ್ಥಿಗಳ ಹೆಸರನ್ನು ಪ್ರಕಟಿಸಲಾಗಿದೆ.
ಮೊದಲ ಪಟ್ಟಿಯಲ್ಲಿ 28 ಮಹಿಳೆಯರಿಗೆ ಅವಕಾಶ ನೀಡಲಾಗಿದೆ. ಹಿಂದುಳಿದ ವರ್ಗದ 57 ಅಭ್ಯರ್ಥಿಗಳಿಗೆ, ಎಸ್ಸಿ ಸಮುದಾಯದ 27 ಅಭ್ಯರ್ಥಿಗಳು, 18 ಎಸ್ಟಿ ಹಾಗೂ 50 ವರ್ಷದ ಕೆಳಗಿರುವ 47 ಯುವಕರಿಗೆ ಟಿಕೆಟ್ ಘೋಷಣೆ ಮಾಡಲಾಗಿದೆ. ಮೊದಲ ಪಟ್ಟಿಯಲ್ಲಿ ಮೋದಿ ಕ್ಯಾಬಿನೆಟ್ನಲ್ಲಿದ್ದ 34 ಕೇಂದ್ರ ಸಚಿವರಿಗೆ ಮತ್ತೆ ಟಿಕೆಟ್ ಖಚಿತವಾಗಿದೆ. ಇಬ್ಬರು ಮಾಜಿ ಸಿಎಂಗಳಿಗೂ ಟಿಕೆಟ್ ನೀಡಲಾಗಿದೆ.
ಈತನ್ಮಧ್ಯೆ, ಬಿಜೆಪಿ ಟಿಕೆಟ್ ನೀಡಿದ್ದರೂ ಸಹ ಪಶ್ಚಿಮ ಬಂಗಾಳದ ಗಾಯಕ, ನಟನೊಬ್ಬ ಚುನಾವಣೆಗೆ ಸ್ಪರ್ಧಿಸಲು ನಿರಾಕರಿಸಿದ್ದಾರೆ. ಭೋಜ್ಪುರಿ ಗಾಯಕ ಮತ್ತು ಬಿಜೆಪಿ ಅಭ್ಯರ್ಥಿ ಪವನ್ ಸಿಂಗ್ ಅವರು ಅಸನ್ಸೋಲ್ ಲೋಕಸಭಾ ಕ್ಷೇತ್ರದಿಂದ ಟಿಕೆಟ್ ನೀಡಲಾಗಿತ್ತು. ಅವರು ಚುನಾವಣೆಗೆ ಸ್ಪರ್ಧಿಸಲು ನಿರಾಕರಿಸಿರುವುದಾಗಿ ಪವನ್ ಸಿಂಗ್ ಅವರು ಟ್ವೀಟ್ ಮೂಲಕ ಈ ಮಾಹಿತಿ ನೀಡಿದ್ದಾರೆ.
भारतीय जनता पार्टी के शीर्ष नेतृत्व को दिल से आभार प्रकट करता हु।
पार्टी ने मुझ पर विश्वास करके आसनसोल का उम्मीदवार घोषित किया लेकिन किसी कारण वश में आसनसोल से चुनाव नहीं लड़ पाऊंगा…@JPNadda— Pawan Singh (@PawanSingh909) March 3, 2024
ಈ ಬಗ್ಗೆ ತಮ್ಮ ಟ್ವೀಟ್ನಲ್ಲಿ ಪವನ್ ಸಿಂಗ್, “ಭಾರತೀಯ ಜನತಾ ಪಕ್ಷದ ಉನ್ನತ ನಾಯಕತ್ವಕ್ಕೆ ನನ್ನ ಹೃತ್ಪೂರ್ವಕ ಕೃತಜ್ಞತೆಗಳನ್ನು ವ್ಯಕ್ತಪಡಿಸುತ್ತೇನೆ. ಪಕ್ಷವು ನನ್ನನ್ನು ನಂಬಿ ಅಸನ್ಸೋಲ್ ಅಭ್ಯರ್ಥಿ ಎಂದು ಘೋಷಿಸಿತು. ಆದರೆ ಕಾರಣಾಂತರಗಳಿಂದ ನಾನು ಅಸನ್ಸೋಲ್ನಿಂದ ಚುನಾವಣೆಗೆ ಸ್ಪರ್ಧಿಸಲು ಸಾಧ್ಯವಾಗುತ್ತಿಲ್ಲ” ಎಂದು ಟ್ವೀಟ್ ಮಾಡಿದ್ದಾರೆ. ನಿನ್ನೆ ಬಿಜೆಪಿ ಪ್ರಕಟಿಸಿದ 195 ಅಭ್ಯರ್ಥಿಗಳ ಪಟ್ಟಿಯಲ್ಲಿ ಪವನ್ ಸಿಂಗ್ ಹೆಸರೂ ಸೇರಿತ್ತು. ಕಾರಣ ಬಹಿರಂಗಗೊಳಿಸಿಲ್ಲ. ಟಿಕೆಟ್ ಘೋಷಣೆ ವೇಳೆ ಭಾರೀ ಸಂಭ್ರಮಾಚರಣೆ ಕೂಡ ಮಾಡಿದ್ದರು.
बीजेपी ने भोजपुरी स्टार पवन सिंह को पश्चिम बंगाल की आसनसोल सीट से अपना लोकसभा प्रत्याशी घोषित किया है। ऐसे में अपने नाम का ऐलान होते देख उत्साहित दिखे पवन सिंह, समर्थकों ने लगाए जय श्री राम के नारे।#PawanSingh #Bhojpuri #Asansol #Bihar pic.twitter.com/n6o81LWHvT
— Bihar Tak (@BiharTakChannel) March 2, 2024
ವಾಸ್ತವವಾಗಿ, ಅಸನ್ಸೋಲ್ ಸ್ಥಾನಕ್ಕೆ ಬಿಜೆಪಿ ಅಭ್ಯರ್ಥಿಯಾಗಿ ಪವನ್ ಸಿಂಗ್ ಹೆಸರನ್ನು ಘೋಷಿಸಿದ ತಕ್ಷಣ, ತೃಣಮೂಲ ಕಾಂಗ್ರೆಸ್ (ಟಿಎಂಸಿ) ಪವನ್ ಸಿಂಗ್ ತಮ್ಮ ಹಾಡಿನಲ್ಲಿ ಮಹಿಳೆಯರನ್ನು ಅವಹೇಳನಕಾರಿಯಾಗಿ ತೋರಿಸಿದ್ದನ್ನು ಬಹಿರಂಗಗೊಳಿಸಿತು.
ಪವನ್ ಸಿಂಗ್ ಅವರು ಬಂಗಾಳಿ ಮಹಿಳೆಯರ ಬಗ್ಗೆ ಹಾಡಿದ ಹಾಡುಗಳಿಗೆ ಟಿಎಂಸಿ ಅವರನ್ನು ಗುರಿಯಾಗಿಸಿದ್ದು, ಪವನ್ ಸಿಂಗ್ ಅವರ ಹಾಡುಗಳ ಪೋಸ್ಟರ್ಗಳನ್ನು ಹಂಚಿಕೊಳ್ಳುವಾಗ, ಟಿಎಂಸಿ ನಾಯಕರು ಬಂಗಾಳಿ ಹಾಡುಗಳು, ಸಂಸ್ಕೃತಿ ಮತ್ತು ಮಹಿಳೆಯರನ್ನು ಅವಮಾನಿಸಿದ ವ್ಯಕ್ತಿಯನ್ನು ಬಿಜೆಪಿ ತನ್ನ ಅಭ್ಯರ್ಥಿಯನ್ನಾಗಿ ಮಾಡಿದೆ ಎಂದು ಟೀಕಿಸಿದ್ದರು.
ಕೆಲವು ಟಿಎಂಸಿ ನಾಯಕರು ಭೋಜ್ಪುರಿ ಗಾಯಕನ ಕೆಲವು ಹಾಡುಗಳ ವಿಡಿಯೋಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ ಮತ್ತು ಇದರಲ್ಲಿ ಅವರು ಸ್ಪಷ್ಟವಾಗಿ ಮಹಿಳೆಯರನ್ನು ಅವಮಾನಿಸುತ್ತಿದ್ದಾರೆ ಎಂದು ಹೇಳಿದ್ದಾರೆ.
The INDOMITABLE SPIRIT AND POWER OF THE PEOPLE OF WEST BENGAL. 💪🏻#Jonogorjon https://t.co/UnF6MybwCF
— Abhishek Banerjee (@abhishekaitc) March 3, 2024
ಟಿಎಂಸಿ ಪ್ರಧಾನ ಕಾರ್ಯದರ್ಶಿ ಅಭಿಷೇಕ್ ಬ್ಯಾನರ್ಜಿ, ಪಕ್ಷದ ರಾಜ್ಯಸಭಾ ಸಂಸದ ಸಾಕೇತ್ ಗೋಖಲೆ ಸೇರಿದಂತೆ ಹಲವು ನಾಯಕರು ಪವನ್ ಸಿಂಗ್ ಅವರ ಆಯ್ಕೆಯ ಬಗ್ಗೆ ಪ್ರಶ್ನೆಗಳನ್ನು ಎತ್ತಿದ್ದರು.
ಪಶ್ಚಿಮ ಬಂಗಾಳದ 42 ಸ್ಥಾನಗಳ ಪೈಕಿ ಚುನಾವಣೆ ಘೋಷಣೆಯಾಗುವ ಮೊದಲೇ ಬಿಜೆಪಿ ಒಂದು ಸ್ಥಾನವನ್ನು ಬಿಟ್ಟುಕೊಟ್ಟಿದೆ ಎಂದು ಟಿಎಂಸಿ ನಾಯಕ ಹೇಳಿದ್ದಾರೆ.
ಇದನ್ನು ಓದಿದ್ದೀರಾ? ರಾಜಕೀಯ ಲಾಭಕ್ಕಾಗಿ ಬಿಜೆಪಿಯವರು ರಾಜ್ಯದ ಘನತೆ ಹಾಳು ಮಾಡುತ್ತಿದ್ದಾರೆ: ಡಿಸಿಎಂ ಡಿ.ಕೆ. ಶಿವಕುಮಾರ್
ಪವನ್ ಸಿಂಗ್ ಚುನಾವಣಾ ಕ್ಷೇತ್ರದಿಂದ ಹಿಂದೆ ಸರಿದಿರುವ ಕುರಿತು ಟಿಎಂಸಿ ಪ್ರಧಾನ ಕಾರ್ಯದರ್ಶಿ ಅಭಿಷೇಕ್ ಬ್ಯಾನರ್ಜಿ ಪ್ರತಿಕ್ರಿಯೆ ನೀಡಿದ್ದು, “ಪಶ್ಚಿಮ ಬಂಗಾಳದ ಜನರ ಅದಮ್ಯ ಚೇತನ ಮತ್ತು ಶಕ್ತಿ’ ಎಂದು ಹೇಳಿದರೆ, ಟಿಎಂಸಿ ರಾಜ್ಯಸಭಾ ಸದಸ್ಯ ಡೆರೆಕ್ ಒಬ್ರಿಯಾನ್, ‘ಬಿಜೆಪಿಯವರ ಆಟ ಪ್ರಾರಂಭವಾಗುವ ಮೊದಲೇ ಮುಗಿದಿದೆ’ ಎಂದು ಹೇಳುವ ಮೂಲಕ ವ್ಯಂಗ್ಯವಾಡಿದ್ದಾರೆ.





