ಬಿಎಂಸಿ ಚುನಾವಣೆ | ಮರಾಠಿ vs ಹಿಂದಿ ವಿವಾದದಲ್ಲಿ ನಟ ಅಮಿರ್ ಖಾನ್ ಸ್ಪಷ್ಟ ನಿಲುವು!

Date:

ಮುಂಬೈನಲ್ಲಿ ನಡೆಯುತ್ತಿರುವ ಬೃಹನ್‌ಮುಂಬೈ ಮಹಾನಗರ ಪಾಲಿಕೆ (ಬಿಎಂಸಿ) ಚುನಾಣೆಯಲ್ಲಿ ನಟ ಅಮಿರ್ ಖಾನ್ ಮತಚಲಾಯಿಸಿದ್ದಾರೆ. ಈ ವೇಳೆ, ಮರಾಠಿ ಮತ್ತು ಹಿಂದಿ ನಡುವಿನ ವಿವಾದದಲ್ಲಿ ಅವರು ತಮ್ಮ ಸ್ಪಷ್ಟ ನಿಲುವು ವ್ಯಕ್ತಪಡಿಸಿದ್ದಾರೆ.

ಮತದಾನ ಮಾಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಖಾನ್, ಮುಂಬೈ ಜನರಿಗೆ ಮತದಾನ ಮಾಡುವಂತೆ ಮರಾಠಿ ಭಾಷೆಯಲ್ಲಿ ಮನವಿ ಮಾಡಿದರು. ಅದೇ ಸಂದೇಶವನ್ನು ಹಿಂದಿಯಲ್ಲಿಯೂ ಹೇಳುವಂತೆ ಸುದ್ದಿಗಾರರು ಒತ್ತಾಯಿದ್ದಾರೆ.

ಸುದ್ದಿಗಾರರ ಒತ್ತಾಯಕ್ಕೆ ಪ್ರತಿಕ್ರಿಯಿಸಿದ ಖಾನ್, “ಹಿಂದಿಯಲ್ಲಿ? ಇದು ಮಹಾರಾಷ್ಟ್ರ ಭಾಯ್” ಎಂದು ಹೇಳಿದ್ದಾರೆ. ಖಾನ್ ಅವರನ್ನು ಚರ್ಚೆಗೆಳೆದ ಸುದ್ದಿಗಾರ, ‘ನೀವು ಹಿಂದಿಯಲ್ಲಿ ಸಂದೇಶ ನೀಡಿದರೆ ಅದು ದೆಹಲಿಗೂ ತಲುಪುತ್ತದೆ’ ಎಂದಿದ್ದಾರೆ. ಅವರ ಮಾತಿಗೆ ಉತ್ತರಿಸಿದ ಖಾನ್, “ಓಹ್, ಅದು ದೆಹಲಿಗೂ ಹೋಗುತ್ತದೆಯೇ? ಬಹಳ ಉತ್ತಮ ವ್ಯವಸ್ಥೆ ಮಾಡಲಾಗಿದೆ. ನಾನು ಎಲ್ಲರಿಗೂ ಮನವಿ ಮಾಡುತ್ತೇನೆ: ಬಂದು ನಿಮ್ಮ ಅಮೂಲ್ಯ ಮತವನ್ನು ಚಲಾಯಿಸಿ” ಎಂದು ಮರಾಠಿಯಲ್ಲಿಯೇ ಹೇಳಿ ನಡೆದಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಈ ಲೇಖನ ಓದಿದ್ದೀರಾ?: ಮಹಾರಾಷ್ಟ್ರ ಚುನಾವಣೆ | ಮುಂಬೈನಲ್ಲಿ ‘ಶಾಯಿ’ ತಿರುಚಿದ, ನಕಲಿ ಮತದಾನದ ಗಂಭೀರ ಆರೋಪ

ಮಹಾರಾಷ್ಟ್ರದಲ್ಲಿ ಮರಾಠಿ ಮತ್ತು ಹಿಂದಿ ನಡುವಿನ ವಿವಾದವು ಸೂಕ್ಷ್ಮ ವಿಷಯವಾಗಿದೆ. ಬಿಎಂಸಿ ಚುನಾವಣೆ ಪ್ರಚಾರದ ಸಮಯದಲ್ಲಿಯೂ ಮರಾಠಿ-ಹಿಂದಿ ವಿವಾದ ಮುನ್ನೆಲೆಯಲ್ಲಿತ್ತು. ಬಿಜೆಪಿ ನಾಯಕ ಕೃಪಾಶಂಕರ್ ಸಿಂಗ್ ಅವರು “ಹಿಂದಿ ಮಾತನಾಡುವವನು ಮುಂಬೈ ಮೇಯರ್ ಆಗುತ್ತಾನೆ” ಎಂದು ಹೇಳಿದ್ದರ ವಿರುದಧ ಠಾಕ್ರೆ ಸಹೋದರರಾದ ಉದ್ಧವ್ ಮತ್ತು ರಾಜ್‌ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು. 20 ವರ್ಷಗಳಿಂದ ದೂರ ಉಳಿದಿದ್ದ ಠಾಕ್ರೆ ಸಹೋದರರು ಮರಾಠಿ ಭಾಷೆಯ ವಿಚಾರವಾಗಿ ಒಗ್ಗೂಡಿದ್ದಾರೆ.

ಉದ್ಧವ್ ಮತ್ತು ರಾಜ್‌ ಠಾಕ್ರೆ ಅವರು ‘ಮರಾಠಿ ಮಾನೂಸ್’ (ಮರಾಠಿ ಮನುಷ್ಯರು) ಎಂಬ ವಾದವನ್ನು ಮುನ್ನೆಲೆ ತಂದಿದ್ದಾರೆ. ಭಾಷಾ ವಿಚಾರದಲ್ಲಿ ಎಲ್ಲರೂ ಒಂದಾಗಬೇಕು. ಚುನಾವಣೆಯಲ್ಲಿಯೂ ಮತಗಳು ವಿಭಜನೆಯಾಗಬಾರದು ಎಂದು ಹೇಳಿದ್ದಾರೆ. ಯಥಾಪ್ರಕಾರ ಬಿಜೆಪಿ ಹಿಂದಿ ಹೇರಿಕೆಗೆ ಗಂಟುಹಾಕಿಕೊಂಡಿದೆ.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ ರಾಷ್ಟ್ರೀಯವಾದ?

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ...

ಅಸ್ಸಾಂ ಚುನಾವಣೆ: ಕಾಂಗ್ರೆಸ್ ಸೇರಿದ ಮಾಜಿ ಸಚಿವೆ ನಂದಿತಾ ಗೋರ್ಲೋಸಾ ಯಾರು?

ಅಸ್ಸಾಂ ವಿಧಾನಸಭಾ ಚುನಾವಣೆಗೆ (ಏಪ್ರಿಲ್ 9 ರಂದು ಒಂದೇ ಹಂತದಲ್ಲಿ ಮತದಾನ)...

ಡಾಲರ್ V/s ಯುವಾನ್: ಕೊಲ್ಲಿ ಯುದ್ಧ ಕರೆನ್ಸಿ ಯುದ್ಧವಾಗಿ ಮಾರ್ಪಾಡಾಗುತ್ತಿದೆಯೇ?

ಅಕಸ್ಮಾತ್ ಈ ಯುದ್ಧ ಮುಂದುವರೆದರೆ, ಕೆಲವು ದೇಶಗಳು ಡಾಲರ್ ಬದಲಿಗೆ ಯುವಾನ್...

ರಾಜ್ಯಸಭೆಗೆ ಸದಾನಂದಗೌಡರ ಪರ ಬಿಎಸ್‌ವೈ ; ದೇವೇಗೌಡರ ಪರ ಹೆಚ್‌ಡಿಕೆ ಲಾಬಿ

ಕೇಂದ್ರ ಉಕ್ಕು ಮತ್ತು ಭಾರಿ ಕೈಗಾರಿಕೆ ಸಚಿವ ಹೆಚ್‌.ಡಿ ಕುಮಾರಸ್ವಾಮಿ ನವದೆಹಲಿಯಲ್ಲಿ...