ಉತ್ತರಾಖಂಡದ ಚೆನಾಗಡ್‌ನಲ್ಲಿ ಎರಡು ತಿಂಗಳ ಹಿಂದೆ ಸುರಿಯ ಭಾರೀ ಮಳೆ ಮತ್ತು ಪ್ರವಾಹದಲ್ಲಿ ಕೊಚ್ಚಿ ಹೋಗಿದ್ದ 7 ಮಂದಿಯ ಮೃತದೇಹ ಇದೀಗ ಪತ್ತೆಯಾಗಿವೆ ಎಂದು ರುದ್ರಪ್ರಯಾಗ್ ಜಿಲ್ಲಾಡಳಿತ ತಿಳಿಸಿದೆ.
ಆಗಸ್ಟ್ 28 ಮತ್ತು 29ರಂದು ಚೆನಾಗಡ್ ಪ್ರದೇಶದಲ್ಲಿ ಭಾರೀ ಮಳೆಯಾಗಿದ್ದರಿಂದ ಮೇಘಸ್ಪೋಟ, ಭೂಕುಸಿತ ಹಾಗೂ ಪ್ರವಾಹಗಳು ಸಂಭವಿಸಿದ್ದವು. ಪ್ರವಾಹದಲ್ಲಿ ಒಟ್ಟು 9 ಮಂದಿ ಕೊಚ್ಚಿ ಹೋಗಿ, ನಾಪತ್ತೆಯಾಗಿದ್ದರು. ಆಗ ನಡೆದ ರಕ್ಷಣಾ ಕಾರ್ಯಾಚರಣೆ ವೇಳೆ, ಅವರು ಪತ್ತೆಯಾಗಿರಲಿಲ್ಲ. ಇದೀಗ, ಮಳೆ ನಿಂತಿದ್ದರಿಂದ ಶೋಧ ಕಾರ್ಯಾಚರಣೆಗಳು ನಡೆಯುತ್ತಿವೆ. ಈ ಸಮಯದಲ್ಲಿ, 7 ಮಂದಿಯ ಮೃತದೇಹಗಳು ಪತ್ತೆಯಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮೃತರಲ್ಲಿ ಒಬ್ಬನನ್ನು ಗುಪ್ತಕಾಶಿ ಪ್ರದೇಶದ ಉಚ್ಚೋಲಾ ಗ್ರಾಮದ ಅರಣ್ಯ ನೌಕರ ಕುಲದೀಪ್ ಸಿಂಗ್ ನೇಗಿ (25) ಎಂದು ಗುರುತಿಸಲಾಗಿದೆ. ಉಳಿದ ಶವಗಳ ಗುರುತುಗಳನ್ನು ಪತ್ತೆ ಹೆಚ್ಚಲು ಪ್ರತ್ನಿಸುತ್ತಿದ್ದೇವೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಇನ್ನೂ ಪತ್ತೆಯಾಗದ ಇಬ್ಬರ ಸುಳಿವಿಗಾಗಿ ಹುಟುಕಾಟ ನಡೆಯುತ್ತಿದೆ ಎಂದು ಅವರು ಹೇಳಿದ್ದಾರೆ.




