ಸಾಮಾಜಿಕ ಅಡೆತಡೆಗಳನ್ನು ಮೆಟ್ಟಿ ವಿವಾಹವಾದ ಇಬ್ಬರು ಯುವತಿಯರು

Date:

ಪ್ರಪಂಚದ ಅತಿ ದೊಡ್ಡ ಮ್ಯಾಂಗ್ರೋವ್ ಕಾಡು ಪ್ರದೇಶವಾದ ಸುಂದರ್‌ಬನವು ಅಸಾಧಾರಣ ಪ್ರೇಮಕಥೆಗೆ ಸಾಕ್ಷಿಯಾಗಿದೆ. ಪಶ್ಚಿಮ ಬಂಗಾಳದ ಸುಂದರ್‌ಬನ ಅರಣ್ಯ ಪ್ರದೇಶದಲ್ಲಿರುವ ಮಂದಿರ್‌ ಬಜಾರ್‌ನಲ್ಲಿ ರಿಯಾ ಸರ್ದಾರ್ ಮತ್ತು ರಾಖಿ ನಸ್ಕರ್‌ ಅವರು ಪರಸ್ಪರ ಪ್ರೀತಿಸಿ ವಿವಾಹವಾಗಿದ್ದಾರೆ. ಸಾಮಾಜಿಕ ಅಡೆತಡೆಗಳನ್ನು ಮೆಟ್ಟಿ ಜೊತೆಯಾಗಿದ್ದಾರೆ.

ಮಂದಿರ್‌ಬಜಾರ್‌ನ ರಿಯಾ ಸರ್ದಾರ್ ಮತ್ತು ಬಕುಲ್ತಾಲಾದ ರಾಖಿ ನಸ್ಕರ್ ಇಬ್ಬರೂ ವೃತ್ತಿಪರ ನರ್ತಕಿಯರು. ರಿಯಾ ಚಿಕ್ಕ ವಯಸ್ಸಿನಲ್ಲಿಯೇ ತನ್ನ ಹೆತ್ತವರನ್ನು ಕಳೆದುಕೊಂಡಿದ್ದರು, ಅವರ ಚಿಕ್ಕಪ್ಪ ಮತ್ತು ಚಿಕ್ಕಮ್ಮನಒಂದಿಗೆ ಬೆಳೆದವರು. ರಾಖಿ ತನ್ನದೇ ಸ್ವಂತ ಕುಟುಂಬದಲ್ಲಿ ಬೆಳೆದವರು. ಈ ಇಬ್ಬರೂ ಸುಮಾರು ಎರಡು ವರ್ಷಗಳ ಹಿಂದೆ ಮೊಲದ ಬಾರಿಗೆ ಭೇಟಿ ಯಾಗಿದ್ದರು. ಅವರ ಸ್ನೇಹವು ಫೋನ್‌ ಕರೆಗಳು, ಆಗ್ಗಾಗಿನ ಭೇಟಿಯ ಜೊತೆಗೆ ಪ್ರೇಮವಾಗಿ ಬೆಳೆಯಿತು.

ತಮ್ಮ ಪ್ರೀತಿಯ ಕುರಿತು ರಿಯಾ ತನ್ನ ಪೋಷಕರಿಗೆ ತಿಳಿಸಿದಾಗ, ಆಕೆಯ ಕುಟುಂಬವು ಅವರ ಪ್ರೀತಿಯನ್ನು ಒಪ್ಪಿಕೊಳ್ಳಲು ನಿರಾಕರಿಸಿತು. ಬೇರೆ ದಾರಿಯಿಲ್ಲದೆ, ರಿಯಾ ತನ್ನ ಮನೆಯನ್ನು ತೊರೆಯಬೇಕಾಯಿತು. ಆದರೆ, ರಾಖಿ ಕುಟುಂಬಸ್ಥರು ಅವರು ಪ್ರೀತಿಯನ್ನು ಒಪ್ಪಿಕೊಂಡರು. ಪ್ರೇಮಿಗಳಿಗೆ ಬೆಂಬಲವಾಗಿ ನಿಂತರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಈ ನಡುವೆ, ನೆರೆಹೊರೆಯವರ ವಿರೋಧ, ವ್ಯಂಗ್ಯ, ಸಾಮಾಜಿಕ ರೂಢಿಗಳು ಹಾಗೂ ಪೂರ್ವಾಗ್ರಹಗಳು ಅವರ ಪ್ರೀತಿಗೆ ಅಡೆತಡೆಯಾಗಿ ಕಾಣಿಸಿಕೊಂಡಿದ್ದವು. ಆದರೂ, ಮಂಗಳವಾರ, ರಾಖಿ ಅವರ ಕುಟುಂಬಸ್ಥರ ಸಮ್ಮುಖದಲ್ಲಿ ಇಬ್ಬರೂ ಸ್ಥಳೀಯ ದೇವಾಲಯದಲ್ಲಿ ವಿವಾಹವಾಗಿದ್ದಾರೆ. ಇಬ್ಬರು ಯುವತಿಯರು ಹೂಮಾಲೆಗಳನ್ನು ಬದಲಾಯಿಸಿಕೊಂಡು, ದಾಂಪದ್ಯ ಜೀವನ ಆರಂಭಿಸಿದ್ದಾರೆ.

ತಮ್ಮ ಸಾಮಾಜಿಕ ಕಟ್ಟುಪಾಡುಗಳನ್ನು ಮೀರಿದ ಸಂಬಂಧದೊಂದಿಗೆ ರಿಯಾ ಮತ್ತು ರಾಖಿ ತಮ್ಮದೇ ಆದ ರೀತಿಯಲ್ಲಿ ಜೀವನವನ್ನು ನಡೆಸುವ ಧೈರ್ಯ ತೋರಿಸಿದ್ದಾರೆ. ಈ ಪ್ರೀತಿಯು ಹೊಸ ಪೀಳಿಗೆಗೆ ‘ಪ್ರೀತಿಗೆ ಲಿಂಗವಿಲ್ಲ, ಗಡಿಗಳಿಲ್ಲ’ ಎಂಬ ಸಂದೇಶವನ್ನು ರವಾನಿಸಿದೆ.

ಈ ಲೇಖನ ಓದಿದ್ದೀರಾ?: ಬಿಹಾರ ಚುನಾವಣೆ | ಸಾಧನೆಗಳೇ ಇಲ್ಲ; ವಿಪಕ್ಷ ನಾಯಕರ ವೈಯಕ್ತಿಕ ಟೀಕೆಗೆ ಜೋತು ಬಿದ್ದ ಬಿಜೆಪಿ

ತಮ್ಮ ವಿವಾಹದ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ರಿಯಾ, “ನಮ್ಮ ಪ್ರೀತಿಯ ಬಗ್ಗೆ ನಾನು ನನ್ನ ಕುಟುಂಬಕ್ಕೆ ಹೇಳಿದಾಗ ಯಾರೊಬ್ಬರೂ ಒಪ್ಪಿಕೊಳ್ಳಲಿಲ್ಲ. ಆದರೆ, ನಾನು ನನ್ನ ಪ್ರೀತಿಯನ್ನು ಕಳೆದುಕೊಳ್ಳಲು ಸಾಧ್ಯವಿಲ್ಲವೆಂದು ನಿರ್ಧರಿಸಿದೆ. ಮನೆ ಬಿಟ್ಟುಬಂದು, ರಾಖಿಯೊಂದಿಗೆ ನೆಲೆಸಿದೆ. ನಾವು ನಮ್ಮ ನಿಲುವುಗಳನ್ನು ಗೌರವಿಸಿದ್ದೇವೆ. ಪ್ರೀತಿ ನಿಜವಾಗಿಯೂ ಮುಖ್ಯ. ಒಬ್ಬ ಮಹಿಳೆ ಪುರುಷನನ್ನು ಮಾತ್ರ ಪ್ರೀತಿಸಬಹುದು ಅಥವಾ ಪುರುಷನು ಮಹಿಳೆಯನ್ನು ಮಾತ್ರ ಪ್ರೀತಿಸಬೇಕೆಂದು ನಿರ್ಧರಿಸಿದವರು ಯಾರು?” ಎಂದಿದ್ದಾರೆ.

ರಾಖಿ ಕೂಡ ಮಾತನಾಡಿದ್ದು, “ನಾವು ಎರಡು ವರ್ಷಗಳಿಂದ ಒಟ್ಟಿಗೆ ಇದ್ದೇವೆ. ಆದರೆ ಅನೇಕರು, ‘ಇಬ್ಬರು ಹುಡುಗಿಯರು ಸಂಬಂಧದಲ್ಲಿ ಇರಲು ಹೇಗೆ ಸಾಧ್ಯ?’ ಎಂದು ಕೇಳಿದರು. ಅಂತಹ ಮಾತುಗಳಿಂದ ಪ್ರಭಾವಿತರಾಗದೆ, ನಾವು ಜೀವನಪರ್ಯಂತ ಒಟ್ಟಿಗೆ ಇರಲು ನಿರ್ಧರಿಸಿದೆವು. ನನ್ನ ಕುಟುಂಬ ನಮ್ಮನ್ನು ಒಪ್ಪಿಕೊಂಡಿತು” ಎಂದು ಹೇಳಿದ್ದಾರೆ.

ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ಇದೇ ರೀತಿಯ ಘಟನೆ ಪಶ್ಚಿಮ ಬಂಗಾಳದ ದುಬ್ರಾಜ್‌ಪುರದಲ್ಲಿ ನಡೆದಿತ್ತು.ಖೈರಶೋಲ್‌ನ ಸುಶ್ಮಿತಾ ಚಟರ್ಜಿ ಮತ್ತು ನಮಿತಾ ದಾಸ್ ವಿವಾಹವಾಗಿದ್ದರು. ಆ ಇಬ್ಬರು ಪ್ರೇಮಿಗಳ ಸಂಬಂಧದ ಬಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ಭಾರೀ ಗದ್ದಲು ಉಂಟಾಗಿತ್ತು.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ ರಾಷ್ಟ್ರೀಯವಾದ?

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ...

ಅಸ್ಸಾಂ ಚುನಾವಣೆ: ಕಾಂಗ್ರೆಸ್ ಸೇರಿದ ಮಾಜಿ ಸಚಿವೆ ನಂದಿತಾ ಗೋರ್ಲೋಸಾ ಯಾರು?

ಅಸ್ಸಾಂ ವಿಧಾನಸಭಾ ಚುನಾವಣೆಗೆ (ಏಪ್ರಿಲ್ 9 ರಂದು ಒಂದೇ ಹಂತದಲ್ಲಿ ಮತದಾನ)...

ಡಾಲರ್ V/s ಯುವಾನ್: ಕೊಲ್ಲಿ ಯುದ್ಧ ಕರೆನ್ಸಿ ಯುದ್ಧವಾಗಿ ಮಾರ್ಪಾಡಾಗುತ್ತಿದೆಯೇ?

ಅಕಸ್ಮಾತ್ ಈ ಯುದ್ಧ ಮುಂದುವರೆದರೆ, ಕೆಲವು ದೇಶಗಳು ಡಾಲರ್ ಬದಲಿಗೆ ಯುವಾನ್...

ರಾಜ್ಯಸಭೆಗೆ ಸದಾನಂದಗೌಡರ ಪರ ಬಿಎಸ್‌ವೈ ; ದೇವೇಗೌಡರ ಪರ ಹೆಚ್‌ಡಿಕೆ ಲಾಬಿ

ಕೇಂದ್ರ ಉಕ್ಕು ಮತ್ತು ಭಾರಿ ಕೈಗಾರಿಕೆ ಸಚಿವ ಹೆಚ್‌.ಡಿ ಕುಮಾರಸ್ವಾಮಿ ನವದೆಹಲಿಯಲ್ಲಿ...