ಬಜೆಟ್‌ ವಿಶ್ಲೇಷಣೆ | ಗ್ರಾಮೀಣ ಸಂಕಟ ತೀವ್ರಗೊಂಡರೂ ಮನರೇಗ ಹಂಚಿಕೆ ಮೂಲೆಗುಂಪು

Date:

ಗ್ರಾಮೀಣ ಬಡ ಕುಟುಂಬಗಳ ಒಬ್ಬ ವ್ಯಕ್ತಿಗೆ ವರ್ಷದಲ್ಲಿ ನೂರು ದಿನ ಕೂಲಿ ಒದಗಿಸುವ ಮನರೇಗ, ವಿಶ್ವದ ಅತಿ ದೊಡ್ಡ ಉದ್ಯೋಗ ಯೋಜನೆ ಮನರೇಗ. ಮೋದಿ ಸರ್ಕಾರ ಕಳೆದ ಬಜೆಟ್ ನಲ್ಲಿ ಈ ಯೋಜನೆಗೆ 86 ಸಾವಿರ ಕೋಟಿ ರುಪಾಯಿ ಹಂಚಿಕೆ ಮಾಡಿತ್ತು. ಈ ಯೋಜನೆಗೆ ಭಾರೀ ಬೇಡಿಕೆ ಇದ್ದರೂ ಪರಿಷ್ಕೃತ ಅಂದಾಜಿನಲ್ಲಿ ಈ ಮೊತ್ತವನ್ನು ಹೆಚ್ಚಿಸಲಿಲ್ಲ. ವೆಚ್ಚ 86 ಸಾವಿರ ಕೋಟಿ ರುಪಾಯಿಯನ್ನು ಮೀರಲಿಲ್ಲ. ಈ ವರ್ಷವೂ ಈ ಮೊತ್ತವನ್ನು ಹೆಚ್ಚಿಸಿಲ್ಲ.

ಬಡವರು ನಿರ್ಗತಿಕರು ಕೃಷಿ ಕೂಲಿಗಳಿಗೆ ತುಸುವಾದರೂ ಆಸರೆಯಾಗಿದ್ದ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಯೋಜನೆಯನ್ನು (ಮನರೇಗ) ಬಜೆಟ್ ಮತ್ತಷ್ಟು ಮೂಲೆಗುಂಪು ಮಾಡಿದೆ. ಮೋದಿ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದಲೂ ಈ ಯೋಜನೆಯನ್ನು ಬೀಳುಗಳೆಯುತ್ತಲೇ ಬಂದಿದೆ. ಹಂಚಿಕೆಯ ಮೊತ್ತವನ್ನು ಖೋತಾ ಮಾಡುತ್ತಲೇ ಇದೆ. ಶನಿವಾರ ಮಂಡಿಸಿದ ಬಜೆಟ್‌ನಲ್ಲಿ ಈ ಯೋಜನೆಯ ಹೆಸರನ್ನು ಕೂಡ ಹೇಳಲಿಲ್ಲ ಅರ್ಥಮಂತ್ರಿ ನಿರ್ಮಲಾ ಸೀತಾರಾಮನ್.

ಗ್ರಾಮೀಣ ಬಡ ಕುಟುಂಬಗಳ ಒಬ್ಬ ವ್ಯಕ್ತಿಗೆ ವರ್ಷದಲ್ಲಿ ನೂರು ದಿನ ಕೂಲಿ ಒದಗಿಸುವ ಮನರೇಗ, ವಿಶ್ವದ ಅತಿ ದೊಡ್ಡ ಉದ್ಯೋಗ ಯೋಜನೆ. ಮೋದಿ ಸರ್ಕಾರ ಕಳೆದ ಬಜೆಟ್ ನಲ್ಲಿ ಈ ಯೋಜನೆಗೆ 86 ಸಾವಿರ ಕೋಟಿ ರುಪಾಯಿ ಹಂಚಿಕೆ ಮಾಡಿತ್ತು. ಈ ಯೋಜನೆಗೆ ಭಾರೀ ಬೇಡಿಕೆ ಇದ್ದರೂ ಪರಿಷ್ಕೃತ ಅಂದಾಜಿನಲ್ಲಿ ಈ ಮೊತ್ತವನ್ನು ಹೆಚ್ಚಿಸಲಿಲ್ಲ. ವೆಚ್ಚ 86 ಸಾವಿರ ಕೋಟಿ ರುಪಾಯಿಯನ್ನು ಮೀರಲಿಲ್ಲ. ಈ ವರ್ಷವೂ ಈ ಮೊತ್ತವನ್ನು ಹೆಚ್ಚಿಸಿಲ್ಲ.

ಈ 86 ಸಾವಿರ ಕೋಟಿ ರುಪಾಯಿಯ ಮೊತ್ತ ಇದೇ ಸರ್ಕಾರ 2023-24ರಲ್ಲಿ ಮಾಡಿದ್ದ ವೆಚ್ಚಕ್ಕಿಂತ ಕಡಿಮೆ. 2023-24ರಲ್ಲಿ 89,154 ಕೋಟಿ ರುಪಾಯಿಯನ್ನು ವಿನಿಯೋಗಿಸಲಾಗಿತ್ತು. ಗುಂಡಿ ತೋಡಿ ಗುಂಡಿ ಮುಚ್ಚುವ ಈ ನಿರುಪಯೋಗಿ ಯೋಜನೆಯನ್ನು ನಿಲ್ಲಿಸುವುದಾಗಿ ತಮ್ಮ ಸರ್ಕಾರ ಅಧಿಕಾರ ಹಿಡಿದ ಹೊಸತರಲ್ಲಿ ಕಠೋರ ನುಡಿಗಳನ್ನು ಬಳಸಿದ್ದರು ಮೋದಿ. “ಯುಪಿಎ ವೈಫಲ್ಯವನ್ನು ಬಿಂಬಿಸುವ ಜೀವಂತ ಸ್ಮಾರಕ ಮನರೇಗ” ಎಂದೆಲ್ಲ ಜರೆದಿದ್ದರು. ಆದರೆ ಯೋಜನೆಯನ್ನು ನಿಲ್ಲಿಸುವುದು ಅಸಾಧ್ಯವಾಗಿತ್ತು. ಹಂಚಿಕೆಯ ಮೊತ್ತವನ್ನು ಕಡಿತಗೊಳಿಸಿದರು. ಬೇಡಿಕೆಯಿದ್ದರೂ ಅದನ್ನು ಅವಗಣಿಸುತ್ತ ಬಂದಿದ್ದಾರೆ. ಗ್ರಾಮೀಣ ಬದುಕನ್ನು ಕಾಡಿರುವ ಸಂಕಟದ ಮೇಲೆ ಪರದೆ ಎಳೆದು ಮುಚ್ಚುವುದು ಅವರ ಸನ್ನಾಹ. ಕೋವಿಡ್ ನಂತರದ ಗ್ರಾಮೀಣ ನಿರುದ್ಯೋಗದ ತೀವ್ರ ಸಂಕಟದ ನಿವಾರಣೆಗೆ ತುಸು ಮಟ್ಟಿಗೆ ಉಪಯೋಗಕ್ಕೆ ಬಂದಿತ್ತು ಮನರೇಗ. 2020ರಲ್ಲಿ ಈ ಯೋಜನೆಯ ಮೊತ್ತವನ್ನು 1.11 ಲಕ್ಷ ಕೋಟಿ ರುಪಾಯಿಗಳಿಗೆ ಏರಿಸಲಾಗಿತ್ತು. ಕೋವಿಡ್ ನಂತರವೂ ಈ ಯೋಜನೆಗೆ ಭಾರೀ ಬೇಡಿಕೆ ಮುಂದುವರೆದಿತ್ತು. ಹೀಗಾಗಿ 2023-24ರಲ್ಲಿ 90,800 ಕೋಟಿ ರುಪಾಯಿಗಳನ್ನು ವಿನಿಯೋಗಿಸಲಾಗಿತ್ತು.

ಇದನ್ನೂ ಓದಿ ಬಜೆಟ್‌ 2025 | ಎಂದಿನಂತೆ ಶಾಲಾ ಶಿಕ್ಷಣಕ್ಕೆ ಆಯವ್ಯಯದಲ್ಲಿ ಅತ್ಯಲ್ಪ ಆದ್ಯತೆ!

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಸಾಮಾಜಿಕ ಭದ್ರತೆಯ ಯೋಜನೆಯಿದು ಎಂಬುದನ್ನು ಸಾಬೀತುಪಡಿಸಿತ್ತು. ಈ ಯೋಜನೆಗೆ ಹಂಚಿಕೆಯನ್ನು ಕಡಿತಗೊಳಿಸಿರುವುದು ನಿಗೂಢ ಅಚ್ಚರಿಯ ಸಂಗತಿ. ಈ ಕುರಿತು ಪುನರ್ ಪರಿಶೀಲನೆ ಮಾಡಬೇಕು ಎಂದು 2024ರ ಮನರೇಗ ಲೋಕಸಭಾ ಸ್ಥಾಯಿ ಸಮಿತಿ ತನ್ನ ವರದಿಯಲ್ಲಿ ಹೇಳಿತ್ತು. ಮನರೇಗ ಕೂಲಿ ಪಾವತಿಯನ್ನು ಆಧಾರ್ ಜೊತೆ ಬೆಸೆದ ಕೇಂದ್ರ ಸರ್ಕಾರದ ಕ್ರಮ ಬಹುದೊಡ್ಡ ಸಂಖ್ಯೆಯ ಮನರೇಗ ಫಲಾನುಭವಿಗಳನ್ನು ಕಷ್ಟಕ್ಕೆ ಗುರಿ ಮಾಡಿದ್ದಲ್ಲದೆ, ಅವರನ್ನು ಈ ಯೋಜನೆಯಿಂದಲೇ ಹೊರಗಿರಿಸಲು ಕಾರಣ ಆಗಿರುವುದೂ ಹೌದು. ಆಧಾರ್ ಆಧರಿತ ಕೂಲಿ ಪಾವತಿಯನ್ನು ಕಡ್ಡಾಯ ಮಾಡಕೂಡದು ಎಂಬುದು ಮನರೇಗ ಫಲಾನುಭವಿಗಳ ತೀವ್ರತರ ಬೇಡಿಕೆ. ಈ ಯೋಜನೆಯ ಕೂಲಿಯನ್ನು ದಿನಕ್ಕೆ 400 ರುಪಾಯಿಗೂ, ಕೂಲಿ ನೀಡಿಕೆಯ ದಿನಗಳನ್ನು ವರ್ಷಕ್ಕೆ 100 ರಿಂದ 140ಕ್ಕೆ ಹೆಚ್ಚಿಸಬೇಕೆಂಬ ಕೂಗಿಗೂ ಕೇಂದ್ರ ಸರ್ಕಾರ ಕಿವಿಗೊಟ್ಟಿಲ್ಲ. ಈ ಯೋಜನೆಗೆ ದೇಶದ ಜಿಡಿಪಿಯ ಶೇ.1.7ರಷ್ಟನ್ನಾದರೂ ಮೀಸಲಿಡಬೇಕು ಎಂಬುದು ವಿಶ್ವಬ್ಯಾಂಕಿನ ಶಿಫಾರಸಾಗಿತ್ತು. ಆದರೆ ಈ ಹಂಚಿಕೆಯನ್ನು ಕೇವಲ ಶೇ.0.26ಕ್ಕೆ ಸೀಮಿತಗೊಳಿಸಲಾಗಿದೆ.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಪ್ರಧಾನಿ ಮೋದಿ ಅಮೆರಿಕಕ್ಕೆ 100% ಶರಣಾಗಿದ್ದಾರೆ: ರಾಹುಲ್ ಗಾಂಧಿ

ಪಶ್ಚಿಮ ಏಷ್ಯಾದಲ್ಲಿನ ಯುದ್ಧದ ಪರಿಸ್ಥಿತಿ ಮತ್ತು ದೇಶದ ಆರ್ಥಿಕ ನೀತಿಗಳ ಕುರಿತು...

‘ಟ್ರಂಪ್ ನಿಯಂತ್ರಣದಲ್ಲಿ ಮೋದಿ’: ಲೋಕಸಭೆಯ ಭಾಷಣದಲ್ಲಿ ಅಮೆರಿಕದ ಬಗ್ಗೆ ಮೌನಕ್ಕೆ ರಾಹುಲ್ ವಾಗ್ದಾಳಿ

ಮಧ್ಯಪ್ರಾಚ್ಯ ಬಿಕ್ಕಟ್ಟಿನ ಕುರಿತು ಭಾರತದ ನಿಲುವಿನ ಬಗ್ಗೆ ರಾಜಕೀಯ ವಾಗ್ದಾಳಿ ಸೋಮವಾರ...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ ರಾಷ್ಟ್ರೀಯವಾದ?

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ...

18 ಸಾವಿರ ಕೋಟಿ ರೂ. ದಾಟಿದ ದೇಶದ ಕ್ರೀಡಾ ಅರ್ಥವ್ಯವಸ್ಥೆ; ಕ್ರಿಕೆಟ್ ದರ್ಬಾರಿನಲ್ಲಿ ಸೊರಗಿದ ಇತರ ಆಟಗಳು

ಐಪಿಎಲ್‌ನಲ್ಲಿ ಕೇವಲ ಬೆಂಚ್ ಕಾಯುವ ಸಾಮಾನ್ಯ ಕ್ರಿಕೆಟ್ ಆಟಗಾರನೊಬ್ಬ ಕೋಟ್ಯಾಧಿಪತಿಯಾಗಿ ಐಷಾರಾಮಿ...