ಹಿಂದೂ ಪತಿಯ ಕ್ಷೇಮಕ್ಕಾಗಿ 170 ಕಿಮೀ ಕಾಲ್ನಡಿಗೆ: ಗಂಗಾಜಲ‌ದಿಂದ ಶಿವನಿಗೆ ಅಭಿಷೇಕ ಮಾಡಿದ ಮುಸ್ಲಿಂ ಮಹಿಳೆ

Date:

ತನ್ನ ಹಿಂದೂ ಪತಿಯ ಯೋಗಕ್ಷೇಮಕ್ಕಾಗಿ ಉತ್ತರ ಪ್ರದೇಶದ ಮುಸ್ಲಿಂ ಮಹಿಳೆಯೊಬ್ಬರು 170 ಕಿ.ಮೀ. ಕಾಲ್ನಡಿಗೆ ಮೂಲಕ ಕನ್ವರ್ ಯಾತ್ರೆ ಸಾಗಿದ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಬುರ್ಖಾ ಧರಿಸಿದ ಮುಸ್ಲಿಮ್ ಮಹಿಳೆ ಕನ್ವರ್ ಯಾತ್ರೆ ಸಾಗಿ ಹರಿದ್ವಾರದಲ್ಲಿರುವ ತಮ್ಮ ಮನೆಗೆ ಗಂಗಾಜಲದೊಂದಿಗೆ ಮರಳಿ, ಶಿವನಿಗೆ ಅಭಿಷೇಕ ಮಾಡಿಸಿದ್ದಾರೆ.

ಸುಮಾರು ಮೂರು ವರ್ಷಗಳ ಹಿಂದೆ ಕೈಗೊಂಡ ಪ್ರತಿಜ್ಞೆಯನ್ನು ಪೂರೈಸಲು ಮುಸ್ಲಿಂ ಮಹಿಳೆಯನ್ನು ಹರ್ ಹರ್ ಮಹಾದೇವ ಎನ್ನುತ್ತಾ ಗ್ರಾಮಸ್ಥರು ಸ್ವಾಗತಿಸಿದ್ದಾರೆ. ಭಾನುವಾರ ಮಹಾಶಿವರಾತ್ರಿಯಂದು, ಬುರ್ಖಾ ಧರಿಸಿದ ತಮನ್ನಾ ಮಲಿಕ್ ಸಂಭಾಲ್‌ನ ಕ್ಷೇಮ್ ನಾಥ್ ದೇವಾಲಯದಲ್ಲಿ ಶಿವನಿಗೆ ಗಂಗಾಜವನ್ನು ಅಭಿಷೇಕ ಮಾಡಿದ್ದಾರೆ.

ಇದನ್ನು ಓದಿದ್ದೀರಾ? ಉತ್ತರ ಪ್ರದೇಶ | ಕನ್ವರ್ ಯಾತ್ರೆ: ಮಾಂಸಾಹಾರಿ ರೆಸ್ಟೋರೆಂಟ್‌ಗಳ ಮುಚ್ಚಿಸಿದ ಹಿಂದೂ ಸಂಘಟನೆ, ಆಹಾರ ಹೇರಿಕೆ ವಿರುದ್ಧ ಆಕ್ರೋಶ

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಬದನ್‌ಪುರ್ ಬಸಾಯಿ ಗ್ರಾಮದ ನಿವಾಸಿ ಮೂರುವರೆ ವರ್ಷಗಳ ಹಿಂದೆ ಅದೇ ಗ್ರಾಮದ ಹಿಂದೂ ಯುವಕ ಅಮನ್ ತ್ಯಾಗಿ ಅವರನ್ನು ವಿವಾಹವಾಗಿದ್ದು, ದಂಪತಿಗೆ ಆರ್ಯನ್ ಮತ್ತು ದಕ್ಷ ಎಂಬ ಇಬ್ಬರು ಗಂಡು ಮಕ್ಕಳಿದ್ದಾರೆ. ಈ ದಂಪತಿ ಗ್ರಾಮದಿಂದ ಬೇರೆಡೆ ಹೋಗಿ ವಿವಾಹವಾಗಿದ್ದು, ಒಂದು ವರ್ಷದ ಹಿಂದೆ ಹಿಂತಿರುಗಿದ್ದರು.

ಅಂತರ್ಧರ್ಮೀಯ ವಿವಾಹಕ್ಕೆ ಅಡೆತಡೆಗಳು ಉಂಟಾದಾಗ ತ್ಯಾಗಿಯನ್ನು ವಿವಾಹವಾದರೆ ‘ಜಲಾಭಿಷೇಕ’ ಮಾಡುವುದಾಗಿ ಮಲಿಕ್ ಪ್ರತಿಜ್ಞೆ ಮಾಡಿದ್ದರು. ಹಾಗೆಯೇ ಇದೀಗ ಹಿಂದೂ ಪತಿಯ ಕ್ಷೇಮಕ್ಕಾಗಿ 170 ಕಿ.ಮೀ. ಕಾಲ್ನಡಿಗೆ ಸಾಗಿದ್ದಾರೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಆದರೆ ಮುಸ್ಲಿಂ ಧರ್ಮಗಳು ಮತ್ತು ಸಂಪ್ರದಾಯವಾದಿಗಳು ಪ್ರತಿಭಟನೆ ನಡೆಸಲು ಆರಂಭಿಸಿದೆ.

ಈ ಬಗ್ಗೆ ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ ಮಲಿಕ್, “ನನ್ನ ಪತಿ ನನಗೆ ಸಂಪೂರ್ಣ ಬೆಂಬಲ ನೀಡಿದ್ದಾರೆ. ಜನರು ಅನೇಕ ಸ್ಥಳಗಳಲ್ಲಿ ಹೂವುಗಳ ಸುರಿಮಳೆಯೊಂದಿಗೆ ನನ್ನನ್ನು ಸ್ವಾಗತಿಸಿದ್ದಾರೆ. ಹಿಂದೂ ಧರ್ಮದ ಜನರು ನಮ್ಮನ್ನು ಅನೇಕ ಸ್ಥಳಗಳಲ್ಲಿ ಸ್ವಾಗತಿಸಿದರು. ಪ್ರತಿಭಟನೆ ನಡೆಸುತ್ತಿರುವವರು ಅಜ್ಞಾನಿಗಳು. ನಾವು ಅವರ ಬಗ್ಗೆ ಏಕೆ ಗಮನ ಹರಿಸಬೇಕು” ಎಂದು ಹೇಳಿದ್ದಾರೆ.

ಇನ್ನು ತಾನು ಬುರ್ಖಾ ಧರಿಸಿ ಕನ್ವರ್ ಯಾತ್ರೆ ತೆರಳಿದ ಬಗ್ಗೆ ಮಾತನಾಡಿದ ಮಲಿಕ್, “ನಾನು ಈ ಹಿಂದೆಯೂ ಬುರ್ಖಾ ಧರಿಸುತ್ತಿದ್ದೆ, ಅದರಲ್ಲಿ ಯಾರಿಗಾದರೂ ಏನಾದರೂ ಸಮಸ್ಯೆ ಏಕೆ” ಎಂದು ಪ್ರಶ್ನಿಸಿದ್ದಾರೆ. ಮಲಿಕ್ ಫೆಬ್ರವರಿ 10ರಂದು ತನ್ನ ಪತಿಯೊಂದಿಗೆ ಹರಿದ್ವಾರಕ್ಕೆ ತೆರಳಿದ್ದು ಮರುದಿನ ತನ್ನ ಗ್ರಾಮಕ್ಕೆ ಮರಳಿದ್ದಾರೆ.

WhatsApp Image 2025 11 17 at 3.21.17 PM
ಈ ದಿನ ಡೆಸ್ಕ್
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

‘ಟ್ರಂಪ್ ನಿಯಂತ್ರಣದಲ್ಲಿ ಮೋದಿ’: ಲೋಕಸಭೆಯ ಭಾಷಣದಲ್ಲಿ ಅಮೆರಿಕದ ಬಗ್ಗೆ ಮೌನಕ್ಕೆ ರಾಹುಲ್ ವಾಗ್ದಾಳಿ

ಮಧ್ಯಪ್ರಾಚ್ಯ ಬಿಕ್ಕಟ್ಟಿನ ಕುರಿತು ಭಾರತದ ನಿಲುವಿನ ಬಗ್ಗೆ ರಾಜಕೀಯ ವಾಗ್ದಾಳಿ ಸೋಮವಾರ...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ ರಾಷ್ಟ್ರೀಯವಾದ?

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ...

ಅಸ್ಸಾಂ ಚುನಾವಣೆ: ಕಾಂಗ್ರೆಸ್ ಸೇರಿದ ಮಾಜಿ ಸಚಿವೆ ನಂದಿತಾ ಗೋರ್ಲೋಸಾ ಯಾರು?

ಅಸ್ಸಾಂ ವಿಧಾನಸಭಾ ಚುನಾವಣೆಗೆ (ಏಪ್ರಿಲ್ 9 ರಂದು ಒಂದೇ ಹಂತದಲ್ಲಿ ಮತದಾನ)...