LGBTQI ವ್ಯಕ್ತಿಗಳು ರಕ್ತದಾನ ಮಾಡಬಹುದೇ?; ಅರ್ಜಿ ಕೈಗೆತ್ತಿಕೊಂಡ ಸುಪ್ರೀಂ

Date:

LGBTQI (ಲೆಸ್ಬಿಯನ್, ಗೇಯ್, ಬೈಸೆಕ್ಸುವಲ್, ಟ್ರಾನ್ಸ್‌ಜೆಂಡರ್, ಕ್ವೀರ್, ಇಂಟರ್‌ಸೆಕ್ಸ್‌) ವ್ಯಕ್ತಿಗಳಿಗೆ ರಕ್ತದಾನ  ಮಾಡುವ ಹಕ್ಕು ನೀಡಬೇಕು ಎಂದು ಒತ್ತಾಯಿಸಿ ಹಾಗೂ ‘2017ರ ರಕ್ತದಾನಿಗಳ ನಿಯಮ’ಗಳನ್ನು ಪ್ರಶ್ನಿಸಿ ದೆಹಲಿ ಮೂಲದ ಸಲಿಂಗಿಯೊಬ್ಬರು ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್‌ ಮಂಗಳವಾರ ವಿಚಾರಣೆ ನಡೆಸಲಿದೆ.

‘ರೈನ್‌ಬೋ ಲಿಟರೇಚರ್ ಫೆಸ್ಟಿವಲ್‌’ನ ನಿರ್ದೇಶಕ ಷರೀಫ್ ಡಿ ರಂಗನೇಕರ್ ಅವರು ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್‌) ಸಲ್ಲಿಸಿದ್ದಾರೆ. ರಕ್ತದಾನಿಗಳ ನಿಯಮಗಳನ್ನು ರಾಷ್ಟ್ರೀಯ ರಕ್ತ ವರ್ಗಾವಣೆ ಮಂಡಳಿ (NBTC) ಮತ್ತು ರಾಷ್ಟ್ರೀಯ ಏಡ್ಸ್ ನಿಯಂತ್ರಣ ಸಂಸ್ಥೆ (NACO) ಹಾಗೂ ಇತರರು ರೂಪಿಸಿದ್ದಾರೆ. ಆದರೆ, ಈ ನಿಯಮಗಳು ಟ್ರಾನ್ಸ್‌ಜೆಂಡರ್‌ಗಳು, ಮಹಿಳಾ ಲೈಂಗಿಕ ಕಾರ್ಯಕರ್ತರು ಮತ್ತು LGBTQI ವ್ಯಕ್ತಿಗಳು ರಕ್ತದಾನ ಮಾಡದಂತೆ ನಿರ್ಬಂಧಗಳನ್ನು ಹೇರಿವೆ ಎಂದು ಅರ್ಜಿಯಲ್ಲಿ ಗಮನ ಸೆಳೆದಿದ್ದಾರೆ.

“1980ರ ದಶಕದಲ್ಲಿ ಅಮೆರಿಕದಲ್ಲಿ ತೆಗೆದುಕೊಂಡ ಅತ್ಯಂತ ಪೂರ್ವಾಗ್ರಹ ಪೀಡಿತ ಮತ್ತು ಊಹಾತ್ಮಕ ದೃಷ್ಟಿಕೋನವು ಜಗತ್ತನ್ನು ಆವರಿಸಿಕೊಂಡಿದೆ. ಅದೇ ಪೂರ್ವಾಗ್ರಹ ಪೀಡಿತ ದೃಷ್ಟಿಕೋನದ ಆಧಾರದ ಮೇಲೆಯೇ ಭಾರತದಲ್ಲಿಯೂ ನಿಮಯಗಳನ್ನು ರೂಪಿಸಲಾಗಿದೆ” ಎಂದು ಷರೀಫ್ ಅರ್ಜಿಯಲ್ಲಿ ವಿವರಿಸಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

“ಅದಗ್ಯೂ – ಇಂಗ್ಲೆಂಡ್, ಕೆನಡಾ, ಇಸ್ರೇಲ್ ಮತ್ತು ಇತರ ಹಲವು ದೇಶಗಳು ತಮ್ಮ ನಿಮಯಗಳನ್ನು ಮರುಪರಿಶೀಲನೆ ಮಾಡಿವೆ. ಎಲ್‌ಜಿಬಿಟಿಕ್ಯೂಐ ವ್ಯಕ್ತಿಗಳು ರಕ್ತದಾನ ಮಾಡಬಹುದು. ರಕ್ತದಾನಕ್ಕೆ ಯಾವುದೇ ನಿರ್ಬಂಧವಿಲ್ಲ ಎಂಬ ಹೊಸ ಮಾರ್ಗಸೂಚಿಗಳನ್ನು ಹೊರಡಿಸಿವೆ” ಎಂದು ಅವರು ಗಮನ ಸೆಳೆದಿದ್ದಾರೆ.

“ಒಂದು ನಿರ್ದಿಷ್ಟ ಗುಂಪಿನ ವ್ಯಕ್ತಿಗಳು ಲೈಂಗಿಕವಾಗಿ ಹರಡುವ ರೋಗಗಳಿಂದ ಬಳಲುತ್ತಿದ್ದಾರೆ ಎಂದು ಪೂರ್ವಾಗ್ರಹವಿದೆ. ವೈದ್ಯಕೀಯ ತಂತ್ರಜ್ಞಾನ, ಶಿಕ್ಷಣ, ವಿಶೇಷವಾಗಿ ಹೆಮಟಾಲಜಿ ಕ್ಷೇತ್ರದಲ್ಲಿ ಮಹತ್ತರವಾಗಿ ಪ್ರಗತಿ ಸಾಧಿಸಲಾಗಿದ್ದು, ರಕ್ತ ವರ್ಗಾವಣೆಯ ಮೊದಲು ಪ್ರತಿ ದಾನಿಗಳ ರಸ್ತವನ್ನು ‘ಸ್ಕ್ರೀನಿಂಗ್’ ನಡೆಸಲಾಗುತ್ತದೆ. ಹೀಗಾಗಿ, ಒಂದು ಗುಂಪನ್ನು ರಕ್ತದಾನದಿಂದ ಹೊರಗಿಡುವುದು ಸರಿಯಲ್ಲ” ಎಂದು ಅವರು ಪಿಐಎಲ್‌ನಲ್ಲಿ ವಾದಿಸಿದ್ದಾರೆ.

ಈ ವರದಿ ಓದಿದ್ದೀರಾ?: ಸಲಿಂಗ ವಿವಾಹ | ಅರ್ಜಿ ವಿಚಾರಣೆಯಿಂದ ಹಿಂದೆ ಸರಿದ ನ್ಯಾಯಮೂರ್ತಿ ಸಂಜೀವ್ ಖನ್ನಾ

“ರಕ್ತದಾನಿಗಳ ನಿಮಯಗಳ 12 ಮತ್ತು 51ನೇ ಷರತ್ತುಗಳು ತಾರತಮ್ಯದಿಂದ ಕೂಡಿದ್ದು, ಅಸಾಂವಿಧಾನಿಕವಾಗಿವೆ. ಎಲ್‌ಜಿಬಿಟಿಕ್ಯೂಐ ಸಮುದಾಯವನ್ನು ರಕ್ತದಾನದಿಂದ ಹೊರಗಿಡುವುದು ಸಂವಿಧಾನದ 14, 15, 17 ಹಾಗೂ 21ನೇ ವಿಧಿಗಳ ಅಡಿಯಲ್ಲಿ ಒದಗಿಸಲಾಗಿರುವ ಸಮಾನತೆ, ಘನತೆ ಮತ್ತು ಜೀವನದ ಹಕ್ಕಿನ ಉಲ್ಲಂಘನೆಯಾಗಿದೆ. ರಕ್ತದಾನ ನಿಷೇಧವು ಎಲ್‌ಜಿಬಿಟಿಕ್ಯೂಐ ಸಮುದಾಯವನ್ನು 2ನೇ ದರ್ಜೆ ಪ್ರಜೆಯಾಗಿ ಷೋಷಿಸುತ್ತದೆ” ಎಂದು ಅವರು ವಾದಿಸಿದ್ದಾರೆ.

“ಎಲ್‌ಜಿಬಿಟಿಕ್ಯೂಐ ಸಮುದಾಯದ ವ್ಯಕ್ತಿಗಳು ರಕ್ತದಾನ ಮಾಡಲು ಅನುಮತಿಸುವ ಮಾರ್ಗಸೂಚಿಗಳನ್ನು ರೂಪಿಸಲು ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡಬೇಕು” ಎಂದು ಷರೀಪ್ ನ್ಯಾಯಾಲಯವನ್ನು ಕೋರಿದ್ದಾರೆ.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ ರಾಷ್ಟ್ರೀಯವಾದ?

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ...

ಅಸ್ಸಾಂ ಚುನಾವಣೆ: ಕಾಂಗ್ರೆಸ್ ಸೇರಿದ ಮಾಜಿ ಸಚಿವೆ ನಂದಿತಾ ಗೋರ್ಲೋಸಾ ಯಾರು?

ಅಸ್ಸಾಂ ವಿಧಾನಸಭಾ ಚುನಾವಣೆಗೆ (ಏಪ್ರಿಲ್ 9 ರಂದು ಒಂದೇ ಹಂತದಲ್ಲಿ ಮತದಾನ)...

ಡಾಲರ್ V/s ಯುವಾನ್: ಕೊಲ್ಲಿ ಯುದ್ಧ ಕರೆನ್ಸಿ ಯುದ್ಧವಾಗಿ ಮಾರ್ಪಾಡಾಗುತ್ತಿದೆಯೇ?

ಅಕಸ್ಮಾತ್ ಈ ಯುದ್ಧ ಮುಂದುವರೆದರೆ, ಕೆಲವು ದೇಶಗಳು ಡಾಲರ್ ಬದಲಿಗೆ ಯುವಾನ್...

ರಾಜ್ಯಸಭೆಗೆ ಸದಾನಂದಗೌಡರ ಪರ ಬಿಎಸ್‌ವೈ ; ದೇವೇಗೌಡರ ಪರ ಹೆಚ್‌ಡಿಕೆ ಲಾಬಿ

ಕೇಂದ್ರ ಉಕ್ಕು ಮತ್ತು ಭಾರಿ ಕೈಗಾರಿಕೆ ಸಚಿವ ಹೆಚ್‌.ಡಿ ಕುಮಾರಸ್ವಾಮಿ ನವದೆಹಲಿಯಲ್ಲಿ...