ಜಾತಿ ತಾರತಮ್ಯ – ಕಿರುಕುಳ: ಕೇರಳದ ದಲಿತ ಅರ್ಚಕ ರಾಜೀನಾಮೆ

Date:

ಕೇರಳದ ಎರ್ನಾಕುಲಂ ಜಿಲ್ಲೆಯ ಆಲಂಗಾಡ್  ಪ್ರದೇಶದಲ್ಲಿನ ದೇವಾಲಯದಲ್ಲಿ ಅರ್ಚಕನಾಗಿದ್ದ ದಲಿತ ಸಮುದಾಯದ ಯುವ ಅರ್ಚಕ ಪಿ.ಆರ್. ವಿಷ್ಣು ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ. ಇದು ತೀವ್ರ ಜಾತಿ ದೌರ್ಜನ್ಯ ಮತ್ತು ನಿರಂತಕ ಜಾತಿ ತಾರತಮ್ಯಗಳಿಂದ ಬೇಸತ್ತು ರಾಜೀನಾಮೆ ನೀಡಿರುವುದಾಗಿ ಅವರು ಹೇಳಿಕೊಂಡಿದ್ದಾರೆ. ಅವರ ರಾಜೀನಾಮೆಯು ಕೇರಳದ ‘ದೇವಸ್ವಂ ಬೋರ್ಡ್‌’ನಲ್ಲಿ ದಲಿತ ಅರ್ಚಕರ ನೇಮಕಾತಿ ನಡೆದರೂ, ಅವರು ಎದುರಿಸುವ ಸಾಮಾಜಿಕ ಸಮಸ್ಯೆಗಳನ್ನು ಮತ್ತೊಮ್ಮೆ ಬೆಳಕಿಗೆ ತಂದಿದೆ.

ವಿಷ್ಣು ಅವರು ‘ತಿರುವಿತಾಂಕೂರ್ ದೇವಸ್ವಂ ಬೋರ್ಡ್’ ಅಡಿಯಲ್ಲಿ ನಡೆದ ಮುಕ್ತ ನೇಮಕಾತಿ ಪ್ರಕ್ರಿಯೆಯಲ್ಲಿ ಲಿಖಿತ ಪರೀಕ್ಷೆ ಮತ್ತು ಸಂದರ್ಶನವನ್ನು ಪಾಸು ಮಾಡಿ, ಅರ್ಚಕರಾಗಿ ಆಯ್ಕೆಯಾಗಿದ್ದರು. ನಾಲ್ಕು ತಿಂಗಳ ಹಿಂದೆ, (2025ರ ಅಕ್ಟೋಬರ್‌/ನವೆಂಬರ್‌) ಅವರನ್ನು ಪರವೂರ್ ಗ್ರೂಪ್‌ನತಿರುವಲ್ಲೂರ್ ವಿಭಾಗದ ವ್ಯಾಪ್ತಿಯಲ್ಲಿರುವ ‘ಮಾಳಿಕಂಪೀಡಿಕ ವಾತುರಕ್ಕಾವು ಭಗವತಿ’ ದೇವಸ್ಥಾನದಲ್ಲಿ ಪಾರ್ಟ್-ಟೈಮ್ ಅರ್ಚಕರಾಗಿ ನಿಯೋಜಿಸಲಾಗಿತ್ತು.

ಆದರೆ, ನೇಮಕಾತಿಯ ನಂತರ ವಿಷ್ಣು ಅವರ ಮೇಲೆ ತೀವ್ರ ಜಾತಿ ದಬ್ಬಾಳಿಕೆಗಳು ಆರಂಭವಾದವು. ’ದೇವಸ್ವಂ ಎಂಪ್ಲಾಯೀಸ್ ಕಾನ್ಫೆಡರೇಷನ್’ನ ಸದಸ್ಯರು ಮತ್ತು ಕೆಲವು ಅಧಿಕಾರಿಗಳು ತಮ್ಮ ಮೇಲೆ ಜಾತಿ ತಾರತಮ್ಯ, ಜಾತಿ ಆಧಾರಿತ ‍ಶೋಷಣೆ ನಡೆಸಲಾರಂಭಿಸಿದರು ಎಂದು ವಿಷ್ಣು ಆರೋಪಿಸಿದ್ದಾರೆ. ಈ ಹಿಂದೆ, ತಾವು 2024ರ ನವೆಂಬರ್‌ನಲ್ಲಿ ತತ್ತಪ್ಪಿಳ್ಳಿ ಶ್ರೀದುರ್ಗಾ ದೇವಿ ದೇವಸ್ಥಾನದಲ್ಲಿ ಅರ್ಚಕರಾಗಿದ್ದಲೂ ಜಾತಿ ತಾರತಮ್ಯಗಳನ್ನು ಎದುರಿಸಿದ್ದೇನೆ ಎಂದು ಅವರು ಹೇಳಿಕೊಂಡಿದ್ದಾರೆ. ಆ ಸಂದರ್ಭದಲ್ಲಿ, ವಿಷ್ಣು ಅವರ ಮೇಲೆ ಜಾತಿ ದೌರ್ಜನ್ಯ ಎಸಗಿದ್ದ ಕೆ.ಎಸ್. ಜಯೇಶ್ ಎಂಬಾತನನ್ನು ಪೊಲೀಸರು ಬಂಧಿಸಿದ್ದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಈ ಲೇಖನ ಓದಿದ್ದೀರಾ?: ಚಾಲುಕ್ಯರ ಆಳ್ವಿಕೆಯ ಇತಿಹಾಸದ ಸುವರ್ಣ ಪುಟಗಳನ್ನು ಕಲ್ಲಿನಲ್ಲಿ ಕಾಣುವ ಅದ್ಭುತ ಸ್ಥಳ ಬಾದಾಮಿ

ಇದೀಗ, ವಾತುರಕ್ಕಾವು ಭಗವತಿ ದೇವಸ್ಥಾನದಲ್ಲಿಯೂ ವಿಷ್ಣು ಅವರು ಜಾತಿ ಆಧಾರಿತ ಶೋಷಣೆಗೆ ತುತ್ತಾಗಿದ್ದಾರೆ. ’ದೇವಸ್ವಂ ಎಂಪ್ಲಾಯೀಸ್ ಕಾನ್ಫೆಡರೇಷನ್’ನ ನಾಯಕರು ಮತ್ತು ಅಧಿಕಾರಿಗಳು ‘ಕಾನ್ಫೆಡರೇಷನ್‌ ಸೇರದಿದ್ದರೆ, ಶಾಂತಿಯಿಂದ ಕೆಲಸ ಮಾಡಲು ಬಿಡುವುದಿಲ್ಲ’ವೆಂದು ತಮಗೆ ಬೆದರಿಕೆ ಹಾಕಿದ್ದಾರೆ. ಈ ಆರೋಪಿಗಳನ್ನು ರಕ್ಷಿಸಲು ಪರವೂರ್ ಗ್ರೂಪ್ ಅಸಿಸ್ಟೆಂಟ್ ಕಮಿಷನರ್ ಕೂಡ ಪ್ರಯತ್ನಿಸಿದ್ದಾರೆ. ಇದರಿಂದ, ಕೆಲಸದ ಸ್ಥಳದಲ್ಲಿ ನಿರಂತರ ಭಯ ಮತ್ತು ಅಭದ್ರತೆ ಎದುರಿಸುವಂತಾಗಿದೆ ಎಂದು ವಿಷ್ಣು ಹೇಳಿಕೊಂಡಿದ್ದಾರೆ.

ಜಾತಿ ಶೋಷಣೆ ಮತ್ತು ಅಧಿಕಾರಿಗಳ ಬೆದರಿಕೆಯಿಂದಾಗಿ ಬೇರಾವುದೇ ದಾರಿ ಕಾಣದೆ ರಾಜೀನಾಮೆ ನೀಡಿರುವುದಾಗಿ ವಿಷ್ಣು ಹೇಳಿದ್ದಾರೆ. ಅಲ್ಲದೆ, ತಮಗೆ ಕಿರುಕುಳ ನೀಡಿದ ಅಧಿಕಾರಿಗಳ ವಿರುದ್ಧ ಆಲಂಗಾಡ್ ಪೊಲೀಸ್ ಠಾಣೆಯಲ್ಲಿ ದೂರನ್ನೂ ದಾಖಲಿಸಿದ್ದಾರೆ. ದಲಿತ ಅರ್ಚಕ ವಿಷ್ಣು ಪರವಾಗಿ ದಲಿತ ಸಂಘಟನೆಗಳು ಮತ್ತು ಸಾಮಾಜಿಕ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ.

ಸದ್ಯ, ಈ ಘಟನೆಯು ಕೇರಳದ ದೇವಾಲಯಗಳಲ್ಲಿ ದಲಿತ ಅರ್ಚಕರು ಎದುರಿಸುತ್ತಿರುವ ಜಾತಿ ತಾರತಮ್ಯದ ಸಮಸ್ಯೆಯನ್ನು ಎತ್ತಿ ತೋರಿಸಿದೆ. ದೇವಸ್ವಂ ಸಂಸ್ಥೆಗಳಲ್ಲಿ ಯೂನಿಯನ್ ರಾಜಕೀಯದ ಪ್ರಭಾವ, ಜಾತಿ ಅಸಮಾನತೆ ಸಮಸ್ಯೆಗಳು ಮತ್ತೆ ಮುನ್ನೆಲೆ ಬಂದಿವೆ.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ ರಾಷ್ಟ್ರೀಯವಾದ?

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ...

ಅಸ್ಸಾಂ ಚುನಾವಣೆ: ಕಾಂಗ್ರೆಸ್ ಸೇರಿದ ಮಾಜಿ ಸಚಿವೆ ನಂದಿತಾ ಗೋರ್ಲೋಸಾ ಯಾರು?

ಅಸ್ಸಾಂ ವಿಧಾನಸಭಾ ಚುನಾವಣೆಗೆ (ಏಪ್ರಿಲ್ 9 ರಂದು ಒಂದೇ ಹಂತದಲ್ಲಿ ಮತದಾನ)...

ಡಾಲರ್ V/s ಯುವಾನ್: ಕೊಲ್ಲಿ ಯುದ್ಧ ಕರೆನ್ಸಿ ಯುದ್ಧವಾಗಿ ಮಾರ್ಪಾಡಾಗುತ್ತಿದೆಯೇ?

ಅಕಸ್ಮಾತ್ ಈ ಯುದ್ಧ ಮುಂದುವರೆದರೆ, ಕೆಲವು ದೇಶಗಳು ಡಾಲರ್ ಬದಲಿಗೆ ಯುವಾನ್...

ರಾಜ್ಯಸಭೆಗೆ ಸದಾನಂದಗೌಡರ ಪರ ಬಿಎಸ್‌ವೈ ; ದೇವೇಗೌಡರ ಪರ ಹೆಚ್‌ಡಿಕೆ ಲಾಬಿ

ಕೇಂದ್ರ ಉಕ್ಕು ಮತ್ತು ಭಾರಿ ಕೈಗಾರಿಕೆ ಸಚಿವ ಹೆಚ್‌.ಡಿ ಕುಮಾರಸ್ವಾಮಿ ನವದೆಹಲಿಯಲ್ಲಿ...