ಎನ್‌ಸಿಎಲ್‌ಟಿಯಿಂದ ಅನುಕೂಲಕರ ತೀರ್ಪಿಗಾಗಿ ನ್ಯಾಯವಾದಿಗಳಿಂದ ಲಂಚಕ್ಕೆ ಬೇಡಿಕೆ: ಸಿಬಿಐನಿಂದ ತನಿಖೆ

Date:

ರಾಷ್ಟ್ರೀಯ ಕಂಪನಿ ಕಾನೂನು ನ್ಯಾಯಮಂಡಳಿಯಿಂದ (ಎನ್‌ಸಿಎಲ್‌ಟಿ) ಅನುಕೂಲಕರ ತೀರ್ಪು ದೊರಕಿಸಿಕೊಡುವುದಕ್ಕಾಗಿ ಲಂಚ ಕೇಳಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಡಳಿಯ ನಿವೃತ್ತ ಸದಸ್ಯರೊಬ್ಬರ ಮನೆಯಲ್ಲಿ ಸಿಬಿಐ ಈಚೆಗೆ ಶೋಧ ನಡೆಸಿದೆ.

ಪ್ರಕರಣದ ಎಫ್‌ಐಆರ್‌ ʼಬಾರ್‌ ಅಂಡ್‌ ಬೆಂಚ್‌ʼಗೆ ದೊರೆತಿದ್ದು ಭಾರೀ ಪ್ರಮಾಣದ ಲಂಚ ನೀಡಿದರೆ ಕಕ್ಷಿದಾರರಿಗೆ ಅನುಕೂಲಕರವಾದ ತೀರ್ಪನ್ನು ನ್ಯಾಯಮಂಡಳಿಯಿಂದ ಕೊಡಿಸುವುದಾಗಿ ವಕೀಲರೊಬ್ಬರ ವಿರುದ್ಧ ದೂರು ದಾಖಲಾಗಿದೆ.

ಜನವರಿ 27, 2025 ರಂದು ನೀಡಿದ ದೂರಿನ ಪ್ರಕಾರ, ಎಯು ಕಾರ್ಪೊರೇಟ್ ಅಡ್ವೈಸರಿ ಅಂಡ್‌ ಲೀಗಲ್‌ ಸರ್ವೀಸಸ್‌ ಜೊತೆ ನಂಟು ಹೊಂದಿರುವ ಮಹಿ ಭಟ್‌ ಎಂಬ ವ್ಯಕ್ತಿ ತಾನು ಮುಂಬೈನಲ್ಲಿರುವ ಎನ್‌ಸಿಎಲ್‌ಟಿ ಸದಸ್ಯ ರೀಟಾ ಕೊಹ್ಲಿ ಅವರೊಂದಿಗೆ ನಿಕಟ ಸಂಪರ್ಕವಿರುವುದಾಗಿ ಹೇಳಿಕೊಂಡು ತಮ್ಮನ್ನು ಸಂಪರ್ಕಿಸಿದ್ದಾರೆ ಎಂದು ನಿರ್ದೇಶಕ ಆರೋಪಿಸಿದ್ದರು. 1.5 ಕೋಟಿ ರೂ. ಲಂಚ ನೀಡಿದರೆ ದಿವಾಳಿತನ ಪ್ರಕರಣದಲ್ಲಿ ಅನುಕೂಲಕರ ತೀರ್ಪು ದೊರಕಿಸಿಕೊಡುವುದಾಗಿ ಮಹಿ ಅವರು ತಮಗೆ ಭರವಸೆ ನೀಡಿದ್ದರು. ಮಾತುಕತೆ ಬಳಿಕ ಲಂಚದ ಮೊತ್ತವನ್ನು ಮೊತ್ತವನ್ನು 1 ಕೋಟಿ ರೂ.ಗೆ ಇಳಿಸಲಾಗಿತ್ತು ಎಂದು ದೂರು ನೀಡಿರುವ ನಿರ್ದೇಶಕ ವಿವರಿಸಿದ್ದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಜನವರಿ 28, 29 , ಫೆಬ್ರವರಿ 3 ಹಾಗೂ 4ರಂದು ಸ್ವತಂತ್ರ ಸಾಕ್ಷಿಗಳ ಸಮ್ಮುಖದಲ್ಲಿ ಸಿಬಿಐ ಅಧಿಕಾರಿಗಳು ದೂರಿನ ತನಿಖೆ ನಡೆಸಿದ್ದರು. ದೂರುದಾರರ ಸಂಸ್ಥೆಯು ದಿವಾಳಿ ಮತ್ತು ದಿವಾಳಿತನ ಸಂಹಿತೆಯ (ಐಬಿಸಿ) ಸೆಕ್ಷನ್ 7ರ ಅಡಿಯಲ್ಲಿ ಎನ್‌ಸಿಎಲ್‌ಟಿ ಮುಂಬೈ ಮುಂದೆ ಮತ್ತೊಂದು ಕಂಪನಿಯ ವಿರುದ್ಧ ಅರ್ಜಿ ಸಲ್ಲಿಸಿದೆ ಎಂದು ತನಿಖೆಯಿಂದ ತಿಳಿದುಬಂದಿತ್ತು. ನ್ಯಾಯಮಂಡಳಿ ವಿಚಾರಣೆ ಪೂರ್ಣಗೊಳಿಸಿ ಆಗಸ್ಟ್ 29, 2024ರಂದು ಆದೇಶವನ್ನು ಕಾಯ್ದಿರಿಸಿತ್ತು. ಅದರ ತೀರ್ಪು ಇನ್ನಷ್ಟೇ ಪ್ರಕಟವಾಗಬೇಕಿದೆ.

ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಭಾರತಕ್ಕೆ ಬೇಕಿರುವುದು ಬಣ್ಣಗಳ ಸಂಗಮ, ಸಂಘರ್ಷದ ಸಂಭ್ರಮವಲ್ಲ!

ಮಹಿ ಅವರು, ಎಯು ಕಾರ್ಪೊರೇಟ್ ಅಡ್ವೈಸರಿ ಅಂಡ್ ಲೀಗಲ್ ಸರ್ವೀಸಸ್ ಮಾಲೀಕ ಅಕ್ಷತ್ ಖೇತಾನ್ ಅವರ ಸಹಯೋಗದೊಂದಿಗೆ “ಶುಲ್ಕ”ದ ನೆಪದಲ್ಲಿ ಲಂಚಕ್ಕೆ ಬೇಡಿಕೆ ಇಟ್ಟಿದ್ದಾರೆ ಎಂದು ತನಿಖೆಯಿಂದ ತಿಳಿದುಬಂದಿತ್ತು. ಮಹಿ ಕಂಪೆನಿಯ ವಕೀಲರಲ್ಲದಿದ್ದರೂ ನ್ಯಾಯಮಂಡಳಿಯ ಸದಸ್ಯರ ಮೇಲೆ ಭ್ರಷ್ಟ ವಿಧಾನಗಳ ಮೂಲಕ ಪ್ರಭಾವ ಬೀರಲು ಸಂಚು ರೂಪಿಸಿದ್ದರು ಎಂದು ಆರೋಪಿಸಲಾಗಿತ್ತು.

ಹೆಚ್ಚಿನ ವಿಚಾರಣೆಯಲ್ಲಿ ಮಹಿ ಆರಂಭದಲ್ಲಿ ಲಂಚದ ಶೇ 50ರಷ್ಟನ್ನು ಮುಂಗಡವಾಗಿ ಕೇಳಿದ್ದರು. ಆದರೆ ಮಾತುಕತೆಯ ನಂತರ 20 ಲಕ್ಷ ರೂ. ಮೊತ್ತದ ಶೇ 20ರಷ್ಟು ಲಂಚ ಪಡೆಯಲು ಒಪ್ಪಿಕೊಂಡರು ಎಂದು ತಿಳಿದುಬಂದಿದೆ. ಈ ಮೊತ್ತವನ್ನು ಫೆಬ್ರವರಿ 4, 2025 ರಂದು ಎಯು ಕಾರ್ಪೊರೇಟ್ ಅಡ್ವೈಸರಿ ಅಂಡ್ ಲೀಗಲ್ ಸರ್ವೀಸಸ್‌ಗೆ ಸೇರಿದ ಹೆಚ್‌ಡಿಎಫ್‌ಸಿ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗಿತ್ತು. ಉಳಿದ 80 ಲಕ್ಷ ರೂ. ಹಣವನ್ನು ಅಂತಿಮ ಆದೇಶದ ಘೋಷಣೆಯ ದಿನದಂದು ನಗದು ರೂಪದಲ್ಲಿ ಪಾವತಿಸಬೇಕಾಗಿತ್ತು. ಇದನ್ನು ಫೆಬ್ರವರಿ 14 2025ಕ್ಕಿಂತ ಮೊದಲು ನಿರೀಕ್ಷಿಸಲಾಗಿತ್ತು.

ಭಾರತೀಯ ನ್ಯಾಯ ಸಂಹಿತೆ (ಬಿಎನ್‌ಎಸ್) 2023ರ ಸೆಕ್ಷನ್ 61 (ಕ್ರಿಮಿನಲ್ ಪಿತೂರಿ) ಮತ್ತು 1988ರ ಭ್ರಷ್ಟಾಚಾರ ತಡೆ ಕಾಯಿದೆಯ ಸೆಕ್ಷನ್ 7-ಎ (ಭ್ರಷ್ಟ ಅಥವಾ ಕಾನೂನುಬಾಹಿರ ವಿಧಾನಗಳಿಂದ ಸಾರ್ವಜನಿಕ ಸೇವಕರ ಮೇಲೆ ಪ್ರಭಾವ ಬೀರಲು ಅನಗತ್ಯ ಲಾಭ ಪಡೆಯುವುದು) ಅಡಿಯಲ್ಲಿ ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್‌ನ ಹಿರಿಯ ವಕೀಲೆಯಾಗಿರುವ ರೀಟಾ ಕೊಹ್ಲಿ, ಪ್ರಸ್ತುತ ಜೈಪುರದಲ್ಲಿರುವ ಎನ್‌ಸಿಎಲ್‌ಟಿಯ ನ್ಯಾಯಾಂಗ ಸದಸ್ಯರಾಗಿದ್ದಾರೆ.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ ರಾಷ್ಟ್ರೀಯವಾದ?

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ...

ಅಸ್ಸಾಂ ಚುನಾವಣೆ: ಕಾಂಗ್ರೆಸ್ ಸೇರಿದ ಮಾಜಿ ಸಚಿವೆ ನಂದಿತಾ ಗೋರ್ಲೋಸಾ ಯಾರು?

ಅಸ್ಸಾಂ ವಿಧಾನಸಭಾ ಚುನಾವಣೆಗೆ (ಏಪ್ರಿಲ್ 9 ರಂದು ಒಂದೇ ಹಂತದಲ್ಲಿ ಮತದಾನ)...

ಡಾಲರ್ V/s ಯುವಾನ್: ಕೊಲ್ಲಿ ಯುದ್ಧ ಕರೆನ್ಸಿ ಯುದ್ಧವಾಗಿ ಮಾರ್ಪಾಡಾಗುತ್ತಿದೆಯೇ?

ಅಕಸ್ಮಾತ್ ಈ ಯುದ್ಧ ಮುಂದುವರೆದರೆ, ಕೆಲವು ದೇಶಗಳು ಡಾಲರ್ ಬದಲಿಗೆ ಯುವಾನ್...

ರಾಜ್ಯಸಭೆಗೆ ಸದಾನಂದಗೌಡರ ಪರ ಬಿಎಸ್‌ವೈ ; ದೇವೇಗೌಡರ ಪರ ಹೆಚ್‌ಡಿಕೆ ಲಾಬಿ

ಕೇಂದ್ರ ಉಕ್ಕು ಮತ್ತು ಭಾರಿ ಕೈಗಾರಿಕೆ ಸಚಿವ ಹೆಚ್‌.ಡಿ ಕುಮಾರಸ್ವಾಮಿ ನವದೆಹಲಿಯಲ್ಲಿ...