ತೆರಿಗೆ ಪಾಲು ಹಂಚಿದ ಕೇಂದ್ರ: ಉತ್ತರ ಪ್ರದೇಶಕ್ಕೆ ಹೆಚ್ಚು, ಕರ್ನಾಟಕಕ್ಕೆ ಸಿಕ್ಕಿದ್ದೆಷ್ಟು?

Date:

ಕೇಂದ್ರ ಸರ್ಕಾರವು ಕರ್ನಾಟಕ ಸರ್ಕಾರಕ್ಕೆ ತೆರಿಗೆ ಪಾಲಿನ ಕಂತಿನ ರೂಪದಲ್ಲಿ ₹6310.40 ಕೋಟಿಯನ್ನು ಶುಕ್ರವಾರ ಬಿಡುಗಡೆ ಮಾಡಿದೆ. ಕೇಂದ್ರವು 28 ರಾಜ್ಯಗಳಿಗೆ ಒಟ್ಟು ₹1,73,030 ಕೋಟಿ ಬಿಡುಗಡೆಗೊಳಿಸಿದೆ.

15ನೇ ಹಣಕಾಸು ಆಯೋಗದ ಶಿಫಾರಸಿನ ಪ್ರಕಾರ, ಆರ್ಥಿಕ ವರ್ಷದಲ್ಲಿ ಕೇಂದ್ರ ಸರ್ಕಾರ ಸಂಗ್ರಹಿಸುವ ತೆರಿಗೆಯಲ್ಲಿ ಶೇ 41 ಮೊತ್ತವನ್ನು ರಾಜ್ಯ ಸರ್ಕಾರಗಳಿಗೆ 14 ಕಂತುಗಳಲ್ಲಿ ಹಂಚಿಕೆ ಮಾಡಲಾಗುತ್ತದೆ. 2024ರ ಡಿಸೆಂಬರ್ ತಿಂಗಳ ಕಂತಿನಲ್ಲಿ ₹89,086 ಕೋಟಿ ಬಿಡುಗಡೆಗೊಳಿಸಿತ್ತು. ರಾಜ್ಯಗಳಿಗೆ ಅಭಿವೃದ್ಧಿ ಹಾಗೂ ಬಂಡವಾಳ ವೆಚ್ಚಕ್ಕೆ ಹೆಚ್ಚಿನ ಹಣ ತೊಡಗಿಸಲು ಅನುಕೂಲ ಮಾಡಲು ಈ ಕಂತು ಬಿಡುಗಡೆ ಮಾಡಲಾಗಿದೆ ಎಂದು ಕೇಂದ್ರ ಹಣಕಾಸು ಸಚಿವಾಲಯದ ಪ್ರಕಟಣೆ ತಿಳಿಸಿದೆ.

ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಅಧಿಕಾರದ ಹಗ್ಗ ಜಗ್ಗಾಟ, ಹಳಿ ತಪ್ಪುತ್ತಿರುವ ಆಡಳಿತ, ಭ್ರಮನಿರಸನಗೊಂಡ ಜನ

  1. ಆಂಧ್ರ ಪ್ರದೇಶ – ₹7,002.52 ಕೋಟಿ
  2. ಅರುಣಾಚಲ ಪ್ರದೇಶ– ₹3,040.14 ಕೋಟಿ
  3. ಅಸ್ಸಾಂ – ₹5,412.38 ಕೋಟಿ
  4. ಬಿಹಾರ– ₹17,403.36 ಕೋಟಿ
  5. ಛತ್ತೀಸಗಢ– ₹5,895.13 ಕೋಟಿ
  6. ಗೋವಾ– ₹667.91 ಕೋಟಿ
  7. ಗುಜರಾತ್– ₹6,017.99 ಕೋಟಿ
  8. ಹರಿಯಾಣ– ₹1,891.22 ಕೋಟಿ
  9. ಹಿಮಾಚಲ ಪ್ರದೇಶ– ₹1,436.16 ಕೋಟಿ
  10. ಜಾರ್ಖಂಡ್– ₹5,722.10 ಕೋಟಿ
  11. ಕರ್ನಾಟಕ– ₹6,310.40 ಕೋಟಿ
  12. ಕೇರಳ– ₹3,330.83 ಕೋಟಿ
  13. ಮಧ್ಯಪ್ರದೇಶ– ₹13,582.86 ಕೋಟಿ
  14. ಮಹಾರಾಷ್ಟ್ರ – ₹10,930.31 ಕೋಟಿ
  15. ಮಣಿಪುರ– ₹1,238.90 ಕೋಟಿ
  16. ಮೇಘಾಲಯ– ₹1,327.13 ಕೋಟಿ
  17. ಮೀಜೋರಾಂ – ₹865.15 ಕೋಟಿ
  18. ನಾಗಾಲ್ಯಾಂಡ್– ₹984.54 ಕೋಟಿ
  19. ಒಡಿಶಾ– ₹7,834.80 ಕೋಟಿ
  20. ಪಂಜಾಬ್– ₹3,126.65 ಕೋಟಿ
  21. ರಾಜಸ್ಥಾನ– ₹10,426.78 ಕೋಟಿ
  22. ಸಿಕ್ಕಿಂ – ₹671.35 ಕೋಟಿ
  23. ತಮಿಳುನಾಡು– ₹7,057.89 ಕೋಟಿ
  24. ತೆಲಂಗಾಣ– ₹3,637.09 ಕೋಟಿ
  25. ತ್ರಿಪುರಾ– ₹1,225.04 ಕೋಟಿ
  26. ಉತ್ತರಪ್ರದೇಶ– ₹31,039.84 ಕೋಟಿ
  27. ಉತ್ತರಾಖಂಡ– ₹1,934.47 ಕೋಟಿ
  28. ಪಶ್ಚಿಮ ಬಂಗಾಳ– ₹13,017.06 ಕೋಟಿ
WhatsApp Image 2025 11 17 at 3.21.17 PM
ಈ ದಿನ ಡೆಸ್ಕ್
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಪುದುಚೆರಿ ಚುನಾವಣೆ | ‘ಇಂಡಿಯಾ’ ಗೊಂದಲ ನಿವಾರಣೆ: ಕಾಂಗ್ರೆಸ್ 16, ಡಿಎಂಕೆ 14 ಕ್ಷೇತ್ರಗಳಲ್ಲಿ ಸ್ಪರ್ಧೆ

ಪುದುಚೆರಿಯ 'ಇಂಡಿಯಾ' ಮೈತ್ರಿಕೂಟದ ಪ್ರಮುಖ ಪಕ್ಷಗಳಾದ ಡಿಎಂಕೆ ಮತ್ತು ಕಾಂಗ್ರೆಸ್‌ ಪಕ್ಷಗಳ...

ತಮಿಳುನಾಡು ಚುನಾವಣೆ | ಎಐಎಡಿಎಂಕೆ 178, ಬಿಜೆಪಿ 27 ಕ್ಷೇತ್ರಗಳಲ್ಲಿ ಸ್ಪರ್ಧೆ

ಈ ಬಾರಿಯ ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಗೆದ್ದು ಅಧಿಕಾರಕ್ಕೇರಲೇ ಬೇಕೆಂದು ಪಣ...

ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಬ್ಯಾಲೆಟ್ ಪೇಪರ್ ಬಳಕೆ; ವಿಧಾನಸಭೆಯಲ್ಲಿ ಮಸೂದೆ ಅಂಗೀಕಾರ

ರಾಜ್ಯದ ಸ್ಥಳೀಯ ಸಂಸ್ಥೆಗಳ ಚುನಾವಣಾ ಪ್ರಕ್ರಿಯೆಯಲ್ಲಿ ಬದಲಾವಣೆ ತರಲು ರಾಜ್ಯ ಸರ್ಕಾರ...

ಪ್ರಧಾನಿ ಮೋದಿ ಅಮೆರಿಕಕ್ಕೆ 100% ಶರಣಾಗಿದ್ದಾರೆ: ರಾಹುಲ್ ಗಾಂಧಿ

ಪಶ್ಚಿಮ ಏಷ್ಯಾದಲ್ಲಿನ ಯುದ್ಧದ ಪರಿಸ್ಥಿತಿ ಮತ್ತು ದೇಶದ ಆರ್ಥಿಕ ನೀತಿಗಳ ಕುರಿತು...